ಅಸ್ಸಾಂ: ಸ್ವಾತಂತ್ರ್ಯಹೋರಾಟಗಾರರ ಪಿಂಚಣಿ 1,000 ರೂ. ಏರಿಕೆ
Team Udayavani, Jan 19, 2019, 11:03 AM IST
ಗುವಾಹಟಿ : ಅಸ್ಸಾಂ ಸರಕಾರ ರಾಜ್ಯದಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿಯನ್ನು ಇದೇ ಜನವರಿಯಿಂದ ಅನ್ವಯವಾಗುವ ಹಾಗೆ 1,000 ರೂ. ಏರಿಸಿದೆ.
ಅಂದರೆ ಈ ವರೆಗೆ ತಿಂಗಳಿಗೆ 20,000 ರೂ. ಪಿಂಚಣಿ ಪಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರರು ಜನವರಿಯಿಂದಲೇ ಮಾಸಿಕ 21,000 ರೂ. ಪಿಂಚಣಿ ಪಡೆಯಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ರಾಜ್ಯ ಖಜಾನೆಯಿಂದ ಸ್ವಾತಂತ್ರ್ಯಹೋರಾಟಗಾರರ ಪಿಂಚಣಿ ಪಡೆಯುವ ಎಲ್ಲ ಪಿಂಚಣಿದಾರರಿಗೆ ಇದು ಅನ್ವಯವಾಗುತ್ತದೆ ಎಂದು ಪ್ರಕಟನೆ ಹೇಳಿದೆ.