ಅತ್ಯಾಚಾರಕ್ಕೆ ಬಂದವನ ತಲೆಗೆ ಸುತ್ತಿಗೆ ಏಟು!
Team Udayavani, Jan 20, 2019, 12:30 AM IST
ಬೆಂಗಳೂರು:ರೇಪ್ ಮಾಡಲು ಯತ್ನಿಸಿದ ದುಷ್ಕರ್ಮಿ ವಿರುದ್ಧ ಸಿಡಿದೆದ್ದ ಯುವತಿಯೊಬ್ಬಳು ಆತನ ತಲೆಗೆ ಸುತ್ತಿಗೆಯಿಂದ ಹೊಡೆದು ಓಡಿಸಿ ಧೈರ್ಯ ಮೆರೆದಿದ್ದಾಳೆ. ಈ ಮೂಲಕ ತನ್ನನ್ನು ರಕ್ಷಣೆ ಮಾಡಿಕೊಳ್ಳುವಲ್ಲಿ ಸಫಲರಾಗಿದ್ದಾರೆ.
ರಾತ್ರಿ ವೇಳೆ ಮನೆಯ ಡೋರ್ಲಾಕ್ ಮುರಿದು ಒಳನುಗ್ಗಿ ಲೈಂಗಿಕ ಕ್ರಿಯೆಗೆ ಸಹಕರಿಸದಿದ್ದರೆ ಶೂಟ್ ಮಾಡುತ್ತೇನೆ ಎಂದು ಬೆದರಿಸಿದ್ದ ದುಷ್ಕರ್ಮಿಗೆ ಸುತ್ತಿಗೆ ಹೊಡೆತ ನೀಡಿ ತಲೆಯಲ್ಲಿ ರಕ್ತ ಸೋರಿಸಿಕೊಂಡು ಎರಡನೇ ಮಹಡಿಯಿಂದ ಜಿಗಿದು ಪರಾರಿಯಾಗಿದ್ದಾನೆ. ಶುಕ್ರವಾರ ರಾತ್ರಿ ಎಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ದುಷ್ಕರ್ಮಿ ವಿರುದ್ಧ ಯುವತಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಬಂಧನಕ್ಕೆ ಬಲೆಬೀಸಿದ್ದಾರೆ.
ಖಾಸಗಿ ಕಂಪೆನಿಯೊಂದರ ಉದ್ಯೋಗಿ ಆಗಿರುವ ಛತ್ತೀಸ್ಗಢ ಮೂಲದ ಯುವತಿ ಓಂ ಶಕ್ತಿ ನಿವಾಸ ಸಮೀಪದ ಮನೆಯೊಂದರ 2ನೇ ಮಹಡಿಯಲ್ಲಿ ಕಳೆದ ಎರಡು ವರ್ಷಗಳಿಂದ ಓರ್ವರೇ ವಾಸವಿದ್ದಾರೆ. ಜ.18ರಂದು ಮುಂಜಾವ 4.30ರ ಸುಮಾರಿಗೆ ಹೊರಗಡೆಯಿಂದ ಲಾಕ್ ಮುರಿದು ಒಳಪ್ರವೇಶಿಸಿರುವ ಅಪರಿಚಿತ ದುಷ್ಕರ್ಮಿಯೊಬ್ಬ ಬೆಡ್ಮೇಲೆ ಮಲಗಿದ್ದ ಯುವತಿಯ ಮೈ ಮುಟ್ಟಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಇದರಿಂದ ಎಚ್ಚೆತ್ತ ಯುವತಿ ಕಿರುಚಿಕೊಳ್ಳಲು ಆರಂಭಿಸುತ್ತಿದ್ದಂತೆ, ನನ್ನ ಬಳಿ ಗನ್ ಇದ್ದು ಶೂಟ್ ಮಾಡುತ್ತೇನೆ ಎಂದು ಜೀವಬೆದರಿಕೆ ಒಡ್ಡಿ ಅತ್ಯಾಚಾರಕ್ಕೆ ಯತ್ನಿಸಿದ್ದು ಆಕೆಯ ಕಪಾಳಕ್ಕೆ ಹೊಡೆದು ಹಲ್ಲೆ ನಡೆಸಿದ್ದಾನೆ. ಆತನ ಬಿಗಿಹಿಡಿತದಿಂದ ತಪ್ಪಿಸಿಕೊಂಡ ಯುವತಿ ಸೋಫಾ ಮೇಲಿಟ್ಟಿದ್ದ ಹ್ಯಾಮರ್ (ಸುತ್ತಿಗೆ) ತೆಗೆದುಕೊಂಡು ಆತನ ತಲೆಗೆ ಎರಡು ಮೂರು ಬಾರಿ ಹೊಡೆದಿದ್ದು, ಯಾರು ನೀನು ಎಂದು ಪ್ರಶ್ನಿಸಿದ್ದು ಸುತ್ತಿಗೆ ಹೊಡೆತ ಬಿದ್ದ ಕೂಡಲೇ ಕಂಗಾಲಾಗಿದ್ದ ಆತ ಅರುಣ್ ಎಂದು ತಿಳಿಸಿದ್ದಾನೆ.
ಘಟನೆ ನಡೆದ ದಿನ ನೆಲಮಹಡಿಯಲ್ಲಿ ವಾಸವಿದ್ದ ಕುಟುಂಬದವರು ನಿದ್ರೆಗೆ ಜಾರಿದ್ದು, ಯುವತಿ ಕಿರುಚಿಕೊಂಡ ಬಳಿಕವಷ್ಟೇ ಮಾಹಿತಿ ಗೊತ್ತಾಗಿದೆ ಎನ್ನುತ್ತಿದ್ದಾರೆ. ಜತೆಗೆ, ಸಂತ್ರಸ್ತೆಯ ಪಕ್ಕದ ಮನೆಯವರು ಆ ದಿನ ಊರಿಗೆ ತೆರಳಿದ್ದರು. ಈ ಸಮಯವನ್ನು ದುರುಪಯೋಗ ಪಡಿಸಿಕೊಂಡಿರುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ
Hassan Pen Drive Case: ಕಾಂಗ್ರೆಸ್ ಪ್ರತಿಭಟನಕಾರರ ವಿರುದ್ಧ ಜೆಡಿಎಸ್ ದೂರು
SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
MUST WATCH
ಹೊಸ ಸೇರ್ಪಡೆ
ಈ ಪೆನ್ಡ್ರೈವ್ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ