ವಿದ್ಯಾರ್ಥಿನಿಯ ಎಡವಟ್ಟಿಗೆ ನಗೆಗಡಲಲ್ಲಿ ತೇಲಿದ ಟ್ವಿಟರ್
Team Udayavani, Jan 26, 2019, 7:46 AM IST
21 ವರ್ಷ ವಯಸ್ಸಿನ ವಿದ್ಯಾರ್ಥಿನಿ ಮೈಕ್ರೋಸಾಫ್ಟ್ ನಲ್ಲಿ ಉದ್ಯೋಗ ಪಡೆದುಕೊಳ್ಳಲು ಎಷ್ಟರ ಮಟ್ಟಿಗೆ ಉತ್ಸುಕಳಾಗಿದ್ದಳು ಎಂಬುದನ್ನು ತೋರಿಸಿಕೊಡುವ ಟ್ವೀಟ್ ಒಂದು ವೈರಲ್ ಆಗಿದೆ. ಈ ಟ್ವೀಟನ್ನು ಸ್ವತಃ ವಿದ್ಯಾರ್ಥಿನಿ ಲಾರಾ ಮೆಕ್ಲೀನ್ ಮಾಡಿದ್ದಾರೆ. ಲಾರಾ ಬ್ರಿಟನ್ನಲ್ಲಿ ಮ್ಯಾನೇಜ್ ಮೆಂಟ್ ಆ್ಯಂಡ್ ಮಾರ್ಕೆಟಿಂಗ್ ವಿದ್ಯಾರ್ಥಿನಿ. ಅವರು ಸ್ಕೈಪ್ ಮೂಲಕ ಮೈಕ್ರೋಸಾಫ್ಟ್ನ ಸಂದರ್ಶನ ಎದುರಿಸಬೇಕಿತ್ತು. ಜ.18ರ ಬೆಳಗ್ಗೆಯಿಂದ ಮೈಕ್ರೋಸಾಫ್ಟ್ ಕರೆಗಾಗಿ ಕಾಯುತ್ತಿದ್ದಳು. ಕರೆ ಬರದೇ ಆತಂಕದಿಂದ ಮೈಕ್ರೋಸಾಫ್ಟ್ ನಿಂದ “ತಮಗೆ ಕರೆ ಬಂದಿಲ್ಲ’ ಎಂದು ಇ-ಮೇಲ್ ಮಾಡಿದಳು. ಇ-ಮೇಲ್ಗೆ ಪ್ರತಿಕ್ರಿಯಿಸಿದ ಮೈಕ್ರೋಸಾಫ್ಟ್ “ಸಂದರ್ಶನ ಫೆ.18ಕ್ಕೆ ನಿಗದಿಯಾಗಿದೆ’ ಎಂದು ತಿಳಿಸಿತು. ಆಗಲೂ ಲಾರಾಗೆ ತನ್ನ ದಡ್ಡತನದ ಅರಿವಾಗದೇ, “ಇಂದು ಫೆ.18 ಆದರೂ ಕರೆ ಬರಲಿಲ್ಲ’ ಎಂದು ಪುನಃ ಪ್ರತಿಕ್ರಿಯಿಸಿದರು. “ಇದು ಜ.18. ಫೆಬ್ರವರಿ ಮುಂದಿನ ತಿಂಗಳು’ ಎಂದು ಮೈಕ್ರೋಸಾಫ್ಟ್ ನಿಂದ ಮತ್ತೆ ಉತ್ತರ ಬಂತು. ಇದನ್ನು ಲಾರಾ ಟ್ವಿಟರ್ ನಲ್ಲಿ ಬರೆದಿದ್ದಾರೆ. ಮೈಕ್ರೋಸಾಫ್ಟ್ ಇದಕ್ಕೂ ಪ್ರತಿ ಟ್ವೀಟ್ ಮಾಡಿದೆ. “ಫೆ.18ರಂದು ಸಂದರ್ಶನ ಮಾಡುವಾಗ ನಮಗೆ ನಗು ತಡೆಯಲಾಗುವುದಿಲ್ಲ’ ಎಂದಿದೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ