34 ಸಾವಿರದ ಗಡಿ ದಾಟಿದ ಚಿನ್ನದ ದರ
Team Udayavani, Jan 31, 2019, 12:30 AM IST
ಹೊಸದಿಲ್ಲಿ: ಸಾಗರೋತ್ತರ ಮಾರುಕಟ್ಟೆಯಲ್ಲಿನ ವಿದ್ಯಮಾನಗಳು ಹಳದಿ ಲೋಹದ ಮೇಲೆ ಭಾರೀ ಪ್ರಭಾವ ಬೀರುತ್ತಿದ್ದು, ಬುಧವಾರ ಒಂದೇ ದಿನ ಚಿನ್ನದ ದರ ಒಂದು ಗ್ರಾಂಗೆ 350 ರೂ. ಏರಿಕೆಯಾಗಿದೆ. ಮುಂಬಯಿ ಚಿನಿವಾರ ಪೇಟೆಯಲ್ಲಿ ಚಿನ್ನದ ದರ 10 ಗ್ರಾಂಗೆ 34,490 ರೂ. (22 ಕ್ಯಾರೆಟ್) ಆಗಿದೆ. ಶುದ್ಧ ಚಿನ್ನದ ದರ 10 ಗ್ರಾಂಗೆ 34,100 ರೂ. ಆಗಿದೆ. ಹೊಸದಿಲ್ಲಿಯಲ್ಲಿ ಗ್ರಾಂ.ಗೆ 320 ರೂ. ಏರಿಕೆ ಕಂಡು, 10 ಗ್ರಾಂ ಚಿನ್ನಕ್ಕೆ 34,070 ರೂ. ಆಗಿದೆ.
ಅಮೆರಿಕ ಮತ್ತು ಚೀನ ನಡುವಿನ ವ್ಯಾಪಾರ ಬಿಕ್ಕಟ್ಟು ಹಾಗೂ ಮಾತು ಕತೆಗೆ ಸಂಬಂಧಿ ಸಿದ ಅನಿಶ್ಚಿತತೆ, ಚೀನದ ದೂರ ಸಂಪರ್ಕ ದಿಗ್ಗಜ ಹುವಾಯಿ ವಿರುದ್ಧ ಕ್ರಿಮಿನಲ್ ವಿಚಾರಣೆಗೆ ಅಮೆ ರಿಕ ಆದೇಶಿ ಸಿರುವುದು ಸಹಿತ ಹಲವು ಬೆಳ ವಣಿಗೆ ಗಳು ಚಿನ್ನದ ದರ ಏರಿಕೆಗೆ ಕಾರಣ ವಾಗಿವೆ. ಹೀಗಾಗಿ 2 ದಿನಗಳಲ್ಲಿ ಚಿನ್ನದ ದರ ಗ್ರಾಂಗೆ ಒಟ್ಟು 450 ರೂ. ಏರಿಕೆ ಕಂಡಂತಾಗಿದೆ.
ಬೆಳ್ಳಿ ಕೂಡ ಇದೇ ಹಾದಿಯಲ್ಲಿ ಸಾಗಿದ್ದು, ಬುಧವಾರ 330 ರೂ. ಏರಿಕೆ ಕಂಡು, ಕೆ.ಜಿ.ಗೆ 41,330 ರೂ.ಗೆ ತಲುಪಿದೆ. ಜಾಗತಿಕ ಮಟ್ಟದಲ್ಲಿ ಚಿನ್ನದ ದರ ಔನ್ಸ್ಗೆ 1,314.76 ಡಾಲರ್ ಆಗಿದ್ದರೆ, ಬೆಳ್ಳಿ ದರ ಔನ್ಸ್ಗೆ 15.96 ಡಾಲರ್ಗೆ ತಲುಪಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ