45 ವರ್ಷಗಳ ಗರಿಷ್ಠ ನಿರುದ್ಯೋಗ ಇರುವಾಗ ಶೇ.7 GDP ಹೇಗೆ ಸಾಧ್ಯ ? ಚಿದು
Team Udayavani, Feb 1, 2019, 5:47 AM IST
ಹೊಸದಿಲ್ಲಿ : ದೇಶದಲ್ಲಿ ನಿರುದ್ಯೋಗವು ಕಳೆದ 45 ವರ್ಷಗಳಲ್ಲೇ ಗರಿಷ್ಠ ಪ್ರಮಾಣದಲ್ಲಿ ಇರುವಾಗ ದೇಶದ ಆರ್ಥಿಕತೆ (GDP) ಶೇ.7ರ ಮಟ್ಟದಲ್ಲಿ ಬೆಳೆಯಲು ಹೇಗೆ ಸಾಧ್ಯ ಎಂದು ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಪ್ರಶ್ನಿಸಿದ್ದಾರೆ.
ಸರಕಾರ ನಿನ್ನೆ ಗುರವಾರ ಪ್ರಕಟಿಸಿರುವ ಜಿಡಿಪಿ ಸಂಖ್ಯೆಯನ್ನು ಶಂಕಿಸಿರುವ ಚಿದಂಬರಂ, “ಸರಕಾರ ಜಿಡಿಪಿ ಸಂಖ್ಯೆಯನ್ನು ಪರಿಷ್ಕರಿಸುವಾಗ ನಿರುದ್ಯೋಗದ ಸಂಖ್ಯೆಯನ್ನು ಪರಿಷ್ಕರಿಸಲು ಮರೆತಿರುವಂತಿದೆ’ ಎಂದು ವ್ಯಂಗ್ಯವಾಡಿದರು.
ದೇಶದಲ್ಲಿನ ನಿರುದ್ಯೋಗವು 2017-18ರಲ್ಲಿ ಕಳೆದ 45 ವರ್ಷಗಳಲ್ಲೇ ಗರಿಷ್ಠ ಎನ್ನುವಂತೆ ಶೇ.6.1ರ ಪ್ರಮಾಣದಲ್ಲಿ ಇದೆ ಎನ್ನಲಾಗಿರುವ ನಡುವೆಯೇ ತಾನು ದೇಶದ ಕಾರ್ಮಿಕ ಶಕ್ತಿಯ ಸಮೀಕ್ಷೆಯನ್ನು ಅಂತಿಮಗೊಳಿಸಿಲ್ಲ ಎಂದು ಕೇಂದ್ರ ಸರಕಾರ ನಿನ್ನೆ ಜಿಡಿಪಿ ಸಂಖ್ಯೆಯನ್ನು ಪ್ರಕಟಿಸುವಾಗ ಹೇಳಿತ್ತು.
ಇಂದು ಶುಕ್ರವಾರ ಸಂಸತ್ತಿನಲ್ಲಿ ಕೇಂದ್ರ ಬಜೆಟ್ ಮಂಡನೆಗೆ ಮುನ್ನ ಚಿದಂಬರಂ ಅವರು ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುವ ರೀತಿಯಿಲ್ಲಿ ಶೇ.7ರ ಜಿಡಿಪಿ ಸಂಖ್ಯೆಯನ್ನು ಶಂಕಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ