ಸಿದ್ಧರಾಮೇಶ್ವರ ಮನುಕುಲ ಆಸ್ತಿ


Team Udayavani, Feb 1, 2019, 10:30 AM IST

february-16.jpg

ಬೀಳಗಿ: ಹನ್ನೆರಡನೇ ಶತಮಾನದ ಕಲ್ಯಾಣ ಕ್ರಾಂತಿ ಕಾಲಘಟ್ಟದ ಶರಣ ಶಿವಯೋಗಿ ಸಿದ್ಧರಾಮೇಶ್ವರರು ಮನುಕುಲದ ಬಹುದೊಡ್ಡ ಆಸ್ತಿಯಾಗಿದ್ದಾರೆಂದು ವಿಧಾನ ಪರಿಷತ್‌ ಸದಸ್ಯ ಹನುಮಂತ ನಿರಾಣಿ ಹೇಳಿದರು. ತಾಲೂಕು ಆಡಳಿತ ಹಾಗೂ ತಾಪಂ ಸಹಯೋಗದಲ್ಲಿ ಮಿನಿ ವಿಧಾನಸೌಧ ಹೊರಾಂಗಣದಲ್ಲಿ ಗುರುವಾರ ಹಮ್ಮಿಕೊಂಡ ಶರಣ ಶಿವಯೋಗಿ ಸಿದ್ಧರಾಮೇಶ್ವರರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

ವಚನ ಸಾಹಿತ್ಯಕ್ಕೆ ಕೊಡುಗೆ: ಶಿವಯೋಗಿ ಸಿದ್ಧರಾಮೇಶ್ವರರು ಸುಮಾರು ಅರವತ್ತೆಂಟು ಸಾವಿರದಷ್ಟು ವಚನ ರಚಿಸುವ ಮೂಲಕ ವಚನ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸಮಾಜದ ಅಂಕು-ಡೊಂಕು ತಿದ್ದಲು ಈಗಲೂ ಸಿದ್ಧರಾಮೇಶ್ವರರ ವಚನ ಸಾಹಿತ್ಯ ದಾರಿದೀಪವಾಗಿದೆ. ಸಿದ್ಧರಾಮೇಶ್ವರರು ಸಮಾನತೆ ಹರಿಕಾರ ಹಾಗೂ ಶ್ರೇಷ್ಠ ಚಿಂತಕರಾಗಿದ್ದರು. ಹನ್ನೆರಡನೇ ಶತಮಾನದಲ್ಲಿಯೇ ಕೆರೆ-ಕಟ್ಟೆ, ಬಾವಿ ನಿರ್ಮಿಸುವುದಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಜೀವಜಲದ ಕುರಿತು ಜಾಗೃತಿ ಮೂಡಿಸಿದ ದೂರದೃಷ್ಟಿ ಅವರದು. ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸಾಮೂಹಿಕ ವಿವಾಹ ಹಾಗೂ ಅಂತರ್ಜಾತಿ ವಿವಾಹಕ್ಕೂ ಆದ್ಯತೆ ನೀಡುವ ಮೂಲಕ ಜಾತ್ಯತೀತ ವ್ಯವಸ್ಥೆಗೆ ಅಡಿಪಾಯ ಹಾಕಿದ್ದರು. ಇಂತಹ ಮಹನೀಯರ ಆದರ್ಶ ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನೇ ದೇಶದ ಆಸ್ತಿಯನ್ನಾಗಿ ರೂಪಿಸಬೇಕೆಂದು ಸಲಹೆ ನೀಡಿದರು.

ಸಾಹಿತಿ ಎಸ್‌.ಎಸ್‌. ಕರಿದುರ್ಗನ್ನವರ ಉಪನ್ಯಾಸ ನೀಡಿದರು. ನಂತರ ಬಡ ಮಕ್ಕಳಿಗೆ ನೋಟ್ಬುಕ್‌, ಪೆನ್‌ ವಿತರಿಸಲಾಯಿತು. ಚಿತ್ರದುರ್ಗದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಹುಚ್ಚಪ್ಪಯ್ಯನ ಮಠದ ಫಕ್ಕೀರಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಾಪಂ ಅಧ್ಯಕ್ಷ ಶ್ರೀಶೈಲ ಸೂಳಿಕೇರಿ, ಜಿಪಂ ಸದಸ್ಯ ಹನುಮಂತ ಕಾಖಂಡಕಿ, ಬಿಇಒ ಹನುಮಂತಗೌಡ ಮಿರ್ಜಿ, ಸಿಪಿಐ ರವಿಚಂದ್ರ ಡಿ.ಬಿ ಇದ್ದರು. ಗ್ರೇಡ್‌-2 ತಹಶೀಲ್ದಾರ್‌ ಸ್ವಾಗತಿಸಿದರು. ವಿಠ್ಠಲ ಹಿರೇನಿಂಗಪ್ಪನವರ ನಿರೂಪಿಸಿದರು. ಗುರುರಾಜ ಲೂತಿ ವಂದಿಸಿದರು.

ಭವ್ಯ ಮೆರವಣಿಗೆ 
ಹುಚ್ಚಪ್ಪಯ್ಯನ ಕಟ್ಟೆಯಿಂದ ಮಿನಿ ವಿಧಾನಸೌಧದ ಮುಖ್ಯ ವೇದಿಕೆವರೆಗೆ ನೂರಾರು ಸುಮಂಗಲೆಯರ ಕುಂಭಮೇಳ, ವಾದ್ಯ ವೈಭವಗಳೊಂದಿಗೆ ಸಾರೋಟದಲ್ಲಿ ಚಿತ್ರದುರ್ಗದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ನಗರದ ಹುಚ್ಚಪ್ಪಯ್ಯನ ಮಠದ ಫಕ್ಕೀರಯ್ಯ ಸ್ವಾಮೀಜಿ ಅವರ ಭವ್ಯ ಮೆರವಣಿಗೆ ಜರುಗಿತು.

ಟಾಪ್ ನ್ಯೂಸ್

10-ಉವ-ಉಸಿಒನ

Madhur Temple: ಏಕದಂತನ ಚಿತ್ರವೇ ಮೂರ್ತಿ ಆದ ಪರಿ

CSKvsRCB; ಹಲವು ದಾಖಲೆಗಳಿಗೆ ಸಾಕ್ಷಿಯಾದ ಬೆಂಗಳೂರು – ಚೆನ್ನೈ ಪಂದ್ಯ

CSKvsRCB; ಹಲವು ದಾಖಲೆಗಳಿಗೆ ಸಾಕ್ಷಿಯಾದ ಬೆಂಗಳೂರು – ಚೆನ್ನೈ ಪಂದ್ಯ

abh

Hubli; ಫಿನಾಯಿಲ್ ಸೇವಿಸಿದ ಅಂಜಲಿ ಅಂಬಿಗೇರ ಸಹೋದರಿ

9-pregnant

Pregnant: ಗರ್ಭಾವಸ್ಥೆ – ಬಾಣಂತನದ ಅವಧಿಯ ಮಾನಸಿಕ ಆರೋಗ್ಯ

8-Borderline-Personality-Disorder

Borderline Personality Disorder: ಬಾರ್ಡರ್‌ಲೈನ್‌ ಪರ್ಸನಾಲಿಟಿ ಡಿಸಾರ್ಡರ್‌

Election; ಮೋದಿ ನೇತೃತ್ವದ ‘ನವ ಭಾರತ’ಕ್ಕೆ ಮದರಸಾಗಳ ಅಗತ್ಯವಿಲ್ಲ: ಹಿಮಂತ ಬಿಸ್ವಾ ಶರ್ಮಾ

Election; ಮೋದಿ ನೇತೃತ್ವದ ‘ನವ ಭಾರತ’ಕ್ಕೆ ಮದರಸಾಗಳ ಅಗತ್ಯವಿಲ್ಲ: ಹಿಮಂತ ಬಿಸ್ವಾ ಶರ್ಮಾ

Air India Express ವಿಮಾನದ ಇಂಜಿನ್ ನಲ್ಲಿ ಬೆಂಕಿ; ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ

Air India Express ವಿಮಾನದ ಇಂಜಿನ್ ನಲ್ಲಿ ಬೆಂಕಿ; ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-rabakavi

Rabkavi Banhatti: ಶತಮಾನದ ಸೋಮವಾರಪೇಟೆ ಸಮಸ್ತ ದೈವ ಮಂಡಳಿಯ ಗರಡಿ ಮನೆ

3-mahalingapur

Mahalingpur: ತೆರಬಂಡಿ ಸ್ಪರ್ಧೆಯ ಹೋರಿ ದಾಖಲೆಯ 10.10 ಲಕ್ಷಕ್ಕೆ ಖರೀದಿಸಿದ ರೈತ

1-qweqwewqe

Rabkavi Banhatti: ಪ್ರಾಚೀನ ದೇವಸ್ಥಾನಕ್ಕೆ ಬೇಕಿದೆ ರಕ್ಷಣೆ

ಆನ್‌ಲೈನ್‌ ವಂಚನೆ: 6 ವರ್ಷದಲ್ಲಿ 4 ಕೋಟಿ ರೂ. ಕಳೆದುಕೊಂಡ ವಿದ್ಯಾವಂತರು!

ಆನ್‌ಲೈನ್‌ ವಂಚನೆ: 6 ವರ್ಷದಲ್ಲಿ 4 ಕೋಟಿ ರೂ. ಕಳೆದುಕೊಂಡ ವಿದ್ಯಾವಂತರು!

Online ವಂಚಕರಿದ್ದಾರೆ ಹುಷಾರ್‌..!”ಉದಯವಾಣಿ’ ಇಂದಿನಿಂದ ಸರಣಿ ವರದಿ ಆರಂಭಿಸಿದೆ

Online ವಂಚಕರಿದ್ದಾರೆ ಹುಷಾರ್‌..!”ಉದಯವಾಣಿ’ ಇಂದಿನಿಂದ ಸರಣಿ ವರದಿ ಆರಂಭಿಸಿದೆ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Hubli ಘಟನೆಗಳಿಗೆ ಪೋಲಿಸ್ ಇಲಾಖೆಯ ಭ್ರಷ್ಟಾಚಾರವೇ ಕಾರಣ: ಅರವಿಂದ ಬೆಲ್ಲದ್

Hubli ಘಟನೆಗಳಿಗೆ ಪೊಲೀಸ್ ಇಲಾಖೆಯ ಭ್ರಷ್ಟಾಚಾರವೇ ಕಾರಣ: ಅರವಿಂದ ಬೆಲ್ಲದ್

10-ಉವ-ಉಸಿಒನ

Madhur Temple: ಏಕದಂತನ ಚಿತ್ರವೇ ಮೂರ್ತಿ ಆದ ಪರಿ

CSKvsRCB; ಹಲವು ದಾಖಲೆಗಳಿಗೆ ಸಾಕ್ಷಿಯಾದ ಬೆಂಗಳೂರು – ಚೆನ್ನೈ ಪಂದ್ಯ

CSKvsRCB; ಹಲವು ದಾಖಲೆಗಳಿಗೆ ಸಾಕ್ಷಿಯಾದ ಬೆಂಗಳೂರು – ಚೆನ್ನೈ ಪಂದ್ಯ

abh

Hubli; ಫಿನಾಯಿಲ್ ಸೇವಿಸಿದ ಅಂಜಲಿ ಅಂಬಿಗೇರ ಸಹೋದರಿ

9-pregnant

Pregnant: ಗರ್ಭಾವಸ್ಥೆ – ಬಾಣಂತನದ ಅವಧಿಯ ಮಾನಸಿಕ ಆರೋಗ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.