530 ಗ್ರಾಮಗಳಿಗೆ ಜಲಧಾರೆ ಕುಡಿಯುವ ನೀರು

Team Udayavani, Feb 3, 2019, 7:20 AM IST

530jala.jpg

ಚನ್ನರಾಯಪಟ್ಟಣ: ತಾಲೂಕಿನಲ್ಲಿ ಕುಡಿಯುವ ನೀರನ ಸಮಸ್ಯೆ ಇರುವುದರಿಂದ 532 ಗ್ರಾಮಗಳಿಗೆ ಹೇಮಾವತಿ ಹೊಳೆಯಿಂದ ಜಲಧಾರೆ ಯೋಜನೆಯಲ್ಲಿ ನೀರು ಹರಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೃಷ್ಣಬೈರೇಗೌಡ ಭರವಸೆ ನೀಡಿದರು.

ಪಟ್ಟಣದ ಆದರ್ಶ ನಗರದಲ್ಲಿನ ಸ್ನೇಹಸೌಧಕ್ಕೆ ಭೇಟಿ ನೀಡಿ ಮಾತನಾಡಿದರು. ತಾಲೂಕಿನ ನೀರಿನ ಸಮಸ್ಯೆಯನ್ನು ಶಾಸಕ ಸಿ.ಎನ್‌. ಬಾಲಕೃಷ್ಣ ಗಮನಕ್ಕೆ ತಂದಿದ್ದಾರೆ ಶಾಶ್ವತವಾಗಿ ನೀರಿನ ಸಮಸ್ಯೆ ಬಗೆ ಹರಿಸುವ ದೃಷ್ಟಿಯಿಂದ ಜಲಧಾರೆ ಯೊಜನೆಗೆ ಒತ್ತು ನೀಡಲಾಗುವುದು ಎಂದರು ತಿಳಿಸಿದರು.

ಅನುದಾನ: ಈಗಾಗಲೆ ನೀರಿನ ಸಮಸ್ಯೆ ಬಗೆ ಹರಿಸಲು ಒಂದು ಕೋಟಿ ಹಣ ಬಿಡುಗಡೆ ಮಾಡ ಲಾಗಿದೆ. ಮುಂದಿನ ತಿಂಗಳಲ್ಲಿ ಒಂದು ಕೋಟಿ ಹಣ ನೀಡಲಾಗುವುದು, ಈ ಅನುದಾನದಿಂದ ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ ತಾತ್ಕಾಲಿಕ ಸಮಸ್ಯೆ ಬಗೆ ಹರಿಯಲಿದೆ, ಬಜೆಟ್‌ನಲ್ಲಿ ಶಾಶ್ವತ ಯೋಜನೆ ಜಲಧಾರೆಗೆ ಹಣ ಎತ್ತಿಡಲಾಗುವುದು ಎಂದು ಆಶ್ವಾಸನೆ ನೀಡಿದರು.

ಬಾಕಿ ಹಣ ಬಿಡುಗಡೆ ಮಾಡಿ: ಕೇಂದ್ರ ಸರ್ಕಾರ ಗಂಗಾ ಸ್ವಚ್ಛತಾ ಅಭಿಯಾನಕ್ಕೆ ಹಣ ವೆಚ್ಚ ಮಾಡುತ್ತಿದೆ ಆದರೆ ಯಾವುದೇ ಸುದಾರಣೆ ಆಗುತ್ತಿಲ್ಲ, ನರೇಗಾ ಯೋಜನೆಯ 2016ರಿಂದ ಈ ವರೆಗೆ ಸುಮಾರು 2 ಸಾವಿರ ಕೋಟಿ ಹಣವನ್ನು ಕೇಂದ್ರ ಬಿಡುಗಡೆ ಮಾಡದೆ ಇರುವುದರಿಂದ ಕೂಲಿ ಕಾರ್ಮಿಕರ ಹಣ ಬಾಕಿ ಇದೆ. ಕೇಂದ್ರ ಚುನಾವಣಾ ಬಜೆಟ್ ಮಾಡುವ ಬದಲಾಗಿ ಕೂಲಿ ಕಾರ್ಮಿಕರ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಗಿಡ ಮರ ಬೆಳಸಬೇಕು: ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಮಾಡುವಾಗ ಹಾಗೂ ರಾಜ್ಯ ಸರ್ಕಾರ ಮರ ಗಳನ್ನು ಕಡಿದು ರಸ್ತೆ ಅಗಲೀಕರಣ ಮಾಡುವ ಕಡೆ ಗಮನ ನೀಡುತ್ತಿವೆ. ಇದರಿಂದ ತಾಪಮಾನ ಹೆಚ್ಚುತ್ತಿದೆ. ರಸ್ತೆ ಕಾಮಗಾರಿ ಮಾಡುವಾಗ ಗಿಡ ಮರ ಬೆಳೆಸಲು ಮುಂದಾಗಬೇಕು, ರಸ್ತೆ ಅಭಿವೃದ್ಧಿ ಯೋಜನೆ ಬದಲಾಗಬೇಕಿದ್ದು ಗಿಡ ಮರ ಬೆಳೆಸಲು ತಗಲುವ ವೆಚ್ಚವನ್ನು ಯೋಜನೆಯಲ್ಲಿ ಸೇರಿಸಬೇಕು ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಮುಖ್ಯ ಕಾರ್ಯದರ್ಶಿ ಅತಿಕ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥ್‌, ಜಿಪಂ ಕಾರ್ಯರ್ನಿಹಣಾ ಧಿಕಾರಿ ವೆಂಕಟೇಶ್‌, ಚಂದ್ರಶೇಖರ್‌ ಇತರರಿದ್ದರು.

ನರೇಗಾ ಪ್ರಚಾರ ರಥಕ್ಕೆ ಚಾಲನೆ
ಚನ್ನರಾಯಪಟ್ಟಣ: ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮೂಲಕ ಗ್ರಾಮೀಣ ಭಾಗದ ಬಡ ರೈತರಿಗೆ ಆರ್ಥಿಕವಾಗಿ ಭದ್ರತೆ ಒದಗಿಸುತ್ತಿದೆ ಇದರ ಉಪಯೋಗ ಪಡೆದುಕೊಳ್ಳುವಂತೆ ಶಾಸಕ ಸಿ.ಎನ್‌.ಬಾಲಕೃಷ್ಣ ತಿಳಿಸಿದರು.

ತಾಲೂಕು ಕ್ರೀಡಾಂಗಣದಲ್ಲಿ ತಾಪಂನಿಂದ ಆಯೋಜಿಸಿದ್ದ ನರೇಗಾ ಯೋಜನೆಯ ಪ್ರಚಾರ ರಥಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಪಂ ಮೂಲಕ ಪ್ರತಿ ಗ್ರಾಮದ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡುವ ಸಲುವಾಗಿ ಹಾಗೂ ಆರ್ಥಿಕವಾಗಿ ಗ್ರಾಮೀಣ ಭಾಗದ ಬಡವರಿಗೆ ಅನುಕೂಲ ಆಗಲೆಂದು ಈ ಯೋಜನೆ ಜಾರಿತೆ ತಂದಿದ್ದು ಉತ್ತಮವಾಗಿದೆ ಎಂದರು.

ಮಹಿಳೆ ಮತ್ತು ಪುರುಷ ಎಂಬ ಭೇದವಿಲ್ಲದೆ 18 ವರ್ಷ ತುಂಬಿದ ಕೂಲಿ ಕೆಲಸ ಮಾಡುವ ಸರ್ವರೂ ಸಮಾನರು ಎಂಬ ಉದ್ದೇಶದಿಂದ ವಾರ್ಷಿಕ 150 ದಿವಸ ಉದ್ಯೋಗ ನೀಡುವ ಯೋಜನೆ ಇದಾಗಿದೆ. ಇದರಿಂದ ತಮ್ಮ ಕೃಷಿ ಭೂಮಿ ಅಭಿವೃದ್ಧಿ ಮಾಡಿಕೊಂಡರೆ ಎರಡು ಪ್ರಯೋಜನವಾಗಲಿದೆ. ತಮಗೆ ಹಣ ನೀಡುವುದಲ್ಲದೆ ತಮ್ಮದೇ ಕೃಷಿ ಭೂಮಿ ಅಭಿವೃದ್ಧಿಯಾಗಲಿದೆ ಎಂದು ನುಡಿದರು.

ಇನ್ನು ಗ್ರಾಮದಲ್ಲಿ ಚರಡಿ, ರಸ್ತೆ ಸೇರಿದಂತೆ ತಮ್ಮ ರಾಸುಗಳ ಅನುಕೂಲಕ್ಕಾಗಿ ಕೊಟ್ಟಿಗೆ ನಿರ್ಮಾಣ ಹಾಗೂ ಆಶ್ರಯ ಮನೆಗೂ ಇದರ ಲಾಭವನ್ನು ಪಡೆದುಕೊಳ್ಳಬಹುದು. ಪ್ರಚಾರ ರಥ ಒಂದು ಕಡೆ ನಿಲ್ಲದೆ ತಾಲೂಕಿನ 40 ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಸಂಚಾರ ಮಾಡುವ ಮೂಲಕ ಪ್ರತಿಯೋಬ್ಬರಿಗೂ ನರೇಗಾ ಯೋಜನೆ ಬಗ್ಗೆ ಮಾಹಿತಿ ನೀಡಬೇಕು ಎಂದು ಆದೇಶಿಸಿದರು.

ತಾಪಂ ಅಧ್ಯಕ್ಷ ರಂಜಿತಾ, ಜಿಪಂ ಸದಸ್ಯೆಯರಾದ ಮಂಜುಳಾ, ಶ್ವೇತಾ, ಮಮತಾ, ಸದಸ್ಯ ಸಿ.ಎನ್‌. ಪುಟ್ಟಸ್ವಾಮಿಗೌಡ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಶಿವಣ್ಣ, ತಹಶೀಲ್ದಾರ್‌ ಜೆ.ಬಿ.ಮಾರುತಿ, ತಾಪಂ ಇಒ ಚಂದ್ರಶೇಖರ್‌ ಇತರರಿದ್ದರು.

ಅರಸೀಕರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಹಾಗೂ ಶ್ರವಣಬೆಳಗೊಳ ಶಾಸಕ ಸಿ.ಎನ್‌. ಬಾಲಕೃಷ್ಣ ಮಾತನಾಡಿ, ಶಾಸಕರು ಹಾಗೂ ಲೋಕಸಭಾ ಸದಸ್ಯರ ಅನುದಾನ ಕೇಳುವವರಿಲದಂತಾಗಿದೆ, ಅನುದಾನ ನೀಡಿದರೆ ಹಣ ಬಿಡುಗಡೆ ಮಾಡಿಸಲು ಬೆಂಗಳೂರಿನ ಮುಖ್ಯ ಆಭಿಯಂತರರ ಕಚೇರಿಗೆ ಅಲೆಯಬೇಕು ಹಾಗೂ ಅಧಿಕಾರಿಗೆ ಶೇ.1 ರಷ್ಟು ಹಣ ನೀಡಬೇಕಿರುವು ದರಿಂದ ಗ್ರಾಮಗಳ

ಸಮುದಾಯ ಭವನ ಹಾಗೂ ಇತರೆ ಕಾಮಗಾರಿ ಮಾಡುವ ಗುತ್ತಿಗೆದಾರ ಎಂಎಲ್‌ಎ ಮತ್ತು ಎಂಪಿ ಅನುದಾನ ಕೊಡುತ್ತೇವೆಂದರು ಬೇಡ ಎನ್ನುತ್ತಾರೆ ಕೆಲವು ಮಾರ್ಪಾಡು ಮಾಡಿ, 5 ಲಕ್ಷ ರೂ. ವರೆಗೆ ನೀಡುವ ಅನುದಾನಕ್ಕೆ ಮುಖ್ಯ ಅಭಿಯಂತರು ಕಾಮಗಾರಿಗೆ ಮಾಡಲು ಅನುಮತಿ ಕೊಡಿಸಬೇಕು. ಈ ಬಗ್ಗೆ ಗಮನ ಹರಿಸುವಂತೆ ಮಂತ್ರಿಗಳಿಗೆ ಮನವಿ ಮಾಡಿದರು. ಶಾಸಕರಿಬ್ಬರ ಮಾತು ಆಸಲಿದ ಮಂತ್ರಿಗಳು ಇದಕ್ಕೆ ಒಪ್ಪಿಗೆ ಸೂಚಿಸಿದರು.

ಎಂಎಲ್‌ಎ, ಎಂಪಿ ಅನುದಾನ ಕೇಳುವವರಿಲ್ಲ: ಅರಸೀಕರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಹಾಗೂ ಶ್ರವಣಬೆಳಗೊಳ ಶಾಸಕ ಸಿ.ಎನ್‌. ಬಾಲಕೃಷ್ಣ ಮಾತನಾಡಿ, ಶಾಸಕರು ಹಾಗೂ ಲೋಕಸಭಾ ಸದಸ್ಯರ ಅನುದಾನ ಕೇಳುವವರಿಲದಂತಾಗಿದೆ, ಅನುದಾನ ನೀಡಿದರೆ ಹಣ ಬಿಡುಗಡೆ ಮಾಡಿಸಲು ಬೆಂಗಳೂರಿನ ಮುಖ್ಯ ಆಭಿಯಂತರರ ಕಚೇರಿಗೆ ಅಲೆಯಬೇಕು ಹಾಗೂ ಅಧಿಕಾರಿಗೆ ಶೇ.1 ರಷ್ಟು

ಹಣ ನೀಡಬೇಕಿರುವುದರಿಂದ ಗ್ರಾಮಗಳ ಸಮುದಾಯ ಭವನ ಹಾಗೂ ಇತರೆ ಕಾಮಗಾರಿ ಮಾಡುವ ಗುತ್ತಿಗೆದಾರ ಎಂಎಲ್‌ಎ ಮತ್ತು ಎಂಪಿ ಅನುದಾನ ಕೊಡುತ್ತೇವೆಂದರು ಬೇಡ ಎನ್ನುತ್ತಾರೆ ಕೆಲವು ಮಾರ್ಪಾಡು ಮಾಡಿ, 5 ಲಕ್ಷ ರೂ. ವರೆಗೆ ನೀಡುವ ಅನುದಾನಕ್ಕೆ ಮುಖ್ಯ ಅಭಿಯಂತರು ಕಾಮಗಾರಿಗೆ ಮಾಡಲು ಅನುಮತಿ ಕೊಡಿಸಬೇಕು. ಈ ಬಗ್ಗೆ ಗಮನ ಹರಿಸುವಂತೆ ಮಂತ್ರಿಗಳಿಗೆ ಮನವಿ ಮಾಡಿದರು. ಶಾಸಕರಿಬ್ಬರ ಮಾತು ಆಸಲಿದ ಮಂತ್ರಿಗಳು ಇದಕ್ಕೆ ಒಪ್ಪಿಗೆ ಸೂಚಿಸಿದರು.

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.