ಮಹಿಳೆಯರ ಸ್ವಯಂ ಸಂರಕ್ಷಣೆಗೆ ಪೊಲೀಸರ ತರಬೇತಿಯ ಸಾಥ್‌


Team Udayavani, Feb 27, 2019, 1:00 AM IST

mahileyara.jpg

ಕಾಸರಗೋಡು: ಮಹಿಳೆಯರಿಗೆ ಸ್ವಯಂ ರಕ್ಷಣೆಗಾಗಿ ದೈಹಿಕ ಕದನ ಕಲೆಗಳನ್ನು ನೀಡುವ ಮೂಲಕ ರಾಜ್ಯದ ಪೊಲೀಸ್‌ ಇಲಾಖೆ ಗಮನ ಸೆಳೆಯುತ್ತಿದೆ.

ರಾಜ್ಯ ಸರಕಾರ ಒಂದು ಸಾವಿರ ದಿನ ಪೂರೈಸಿದ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿರುವ ಸರಣಿ ಕಾರ್ಯಕ್ರಮಗಳ ಅಂಗವಾಗಿ ಈ ಕದನ ಕಲೆಗಳ ತರಬೇತಿ ನಡೆಸಲಾಗುತ್ತಿದೆ.

ಕಾಂಞಂಗಾಡ್‌ ಅಲಾಮಿಪಳ್ಳಿ ಬಸ್‌ ನಿಲ್ದಾಣ ಆವರಣದಲ್ಲಿ ಪ್ರತ್ಯೇಕ ಸಭಾಂಗಣ ದಲ್ಲಿ ಮಹಿಳೆಯರಿಗೆ ಶಾರೀರಿಕ ಯುದ್ಧ ಕಲೆ ಪೊಲೀಸ್‌ ಇಲಾಖೆ ವತಿ ಯಿಂದ ಕಲಿಸಲಾಗುತ್ತಿದೆ. ಅರ್ಧ ತಾಸಿನ ಈ ತರಬೇತಿ ಯಲ್ಲಿ ಸ್ವಯಂ ರಕ್ಷಣೆಗೆ ಮಹಿಳೆಯರು ಬಳಸಬಹುದಾದ ಕಸರತ್ತುಗಳನ್ನು ಕಲಿಸಿಕೊಡಲಾಗುತ್ತಿದೆ. ಪೊಲೀಸ್‌ ಮಹಿಳಾ ಘಟಕದ ಸಿಬಂದಿ ಪ್ರಸೀದಾ, ನೀಲೇಶ್ವರ ಠಾಣೆಯ ಸಿಬಂದಿ ಪಿ. ಆದಿರಾ, ರಾಜಪುರಂ ಠಾಣೆಯ ಸಿವಿಲ್‌ ಪೊಲೀಸ್‌ ಅಧಿ ಕಾರಿ ಸಿ.ಸಿ. ಸುಜಾತಾ ತರಬೇತಿಗೆ ನೇತೃತ್ವ ನೀಡುತ್ತಿದ್ದಾರೆ.

2015ರಿಂದ ಕೇರಳ ಪೊಲೀಸ್‌ ಇಲಾಖೆ ನೇತೃತ್ವದಲ್ಲಿ ಮಹಿಳೆಯರಿಗಾಗಿ ಸ್ವಯಂ ರಕ್ಷಣೆ ಸಂಬಂಧ ತರಬೇತಿ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಮಾತ್ರ 50 ಸಾವಿರಕ್ಕೂ ಅ ಧಿಕ ಮಂದಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಶಾಲೆ, ಕಾಲೇಜು ಮಟ್ಟದಲ್ಲೂ, ಕುಟುಂಬಶ್ರೀ ಸದಸ್ಯೆಯರಿಗೂ ತರಬೇತಿ ನೀಡುವ ಕಾಯಕ ನಡೆಯುತ್ತಿದೆ. ಮಹಿಳಾ ಸಬಲೀಕರಣ ಈ ಯೋಜನೆಯ ಪ್ರಧಾನ ಉದ್ದೇಶ. ಕೇರಳ ಪೊಲೀಸ್‌  ಇಲಾಖೆಯ ಮಾಹಿತಿ ಕೇಂದ್ರ ಪ್ರಕಟಿಸಿದ ಮಹಿಳೆಯರ ಸ್ವಯಂ ಸಂರಕ್ಷಣೆ ಸಂಬಂಧ ಪುಸ್ತಕವೂ ಇಲ್ಲಿ ಉಚಿತವಾಗಿ ವಿತರಿಸಲಾಗುತ್ತಿದೆ. ಪೊಲೀಸ್‌ ಇಲಾಖೆ ಜಿಲ್ಲೆಯಲ್ಲಿ ನಡೆಸಿದ ಅನೇಕ ಚಟುವಟಿಕೆಗಳ ಚಿತ್ರ ಪ್ರದರ್ಶನವೂ ಇಲ್ಲಿ ಜನರನ್ನು ಆಕರ್ಷಿಸುತ್ತಿದೆ. ಕೇರಳ ಪೊಲೀಸರು ಸಿದ್ಧಪಡಿಸಿದ “ಸ್ಟ್ರೇಂಜರ್‌’ ಎಂಬ ಕಿರುಚಿತ್ರ, ವಿವಿನ್‌ ಅನಘಾ ಎಂಬ ನಾಟಕ ಪ್ರದರ್ಶಿಸಲಾಗುತ್ತಿದೆ.
ಈಗ 25ಕ್ಕೂ ಅ ಧಿಕ ಮಂದಿಗೆ ಇಲ್ಲಿ ತರಬೇತಿ ನೀಡಲಾಗಿದೆ ಎಂದು ಸಂಬಂಧಪಟ್ಟವರು ತಿಳಿಸಿದರು. 

ಸಹಾಯವಾಣಿ
ಮಹಿಳೆ ಯರಿಗೆ ಪೊಲೀಸರ ಸಹಾಯ ಬೇಕಾದಲ್ಲಿ ಸಂಪಪರ್ಕಿ ಸಬೇಕಾದ ಸಹಾಯವಾಣಿ ಸಿದ್ಧ ವಾಗಿದೆ. ನಂಬ್ರ: 112, 1090. 1515, 1091.

ಟಾಪ್ ನ್ಯೂಸ್

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.