ಸಂಸದ ಗೋಪಾಲ್‌ ಶೆಟ್ಟಿ ಅವರಿಗೆ ಅಭಿನಂದನೆ

Team Udayavani, Feb 28, 2019, 4:11 PM IST

2702mum17.jpg

ಮುಂಬಯಿ: ಪ್ರಾಮಾಣಿಕ ಮತ್ತು ದಕ್ಷ ಸಮಾಜ ಸೇವೆಯ ಸಂತೃಪ್ತಿಯೇ ನನಗೆ ಸಚಿವ ಸ್ಥಾನವಾಗಿದೆ ಎಂದು ಮುಂಬಯಿ ನಗರ ಉತ್ತರ ಲೋಕಸಭಾ ಕ್ಷೇತ್ರದ ಸಂಸದ  ಗೋಪಾಲ್‌ ಸಿ. ಶೆಟ್ಟಿ ತಿಳಿಸಿದರು.

ಬೊರಿವಿಲಿ ಪಶ್ಚಿಮದ ಪೊಯಿಸರ್‌ನ ಸಂಸದರ ಕಚೇರಿಯಲ್ಲಿ ಫೆ. 26 ರಂದು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಗೋಪಾಲ್‌ ಶೆಟ್ಟಿ ಅವರು ತಾವು ಭಾವೀ ಕೇಂದ್ರ ಸಚಿವರು ಎಂದೇ ಬಿಂಬಿತರಾಗಿದ್ದರಲ್ಲಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಈ ವಿಶ್ವಾಸ ಮತ್ತು ಅಭಿಮಾನಕ್ಕೆ ನಾನು ಸದಾ ಋಣಿಯಾಗಿದ್ದೇನೆ. ಇದೆಲ್ಲಾ ನನ್ನ ಕ್ಷೇತ್ರದ ಮತದಾರ ಬಂಧುಗಳು ಮತ್ತು ಹಿತೈಷಿಗಳಿಗೆ ಸಲ್ಲಬೇಕಾದ ಗೌರವವಾಗಿದೆ. ನಾನು ಯಾವತ್ತೂ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಅಪೇಕ್ಷೆಯೂ ಇಲ್ಲ. ಕೇಂದ್ರದಲ್ಲಿ ನನಗಿಂತ ಹಿರಿಯ ಮತ್ತು ಅನುಭವಸ್ಥ ರಾಜಕೀಯ ಧುರೀಣರಿದ್ದಾರೆ. ನಾನೇನಿದ್ದರೂ ನನ್ನ ಕ್ಷೇತ್ರದ ಸರ್ವೋನ್ನತಿ ಮತ್ತು ಕ್ಷೇತ್ರದ ಜನತೆಯ ಸೇವೆಗೆ ಮೊದಲ ಆದ್ಯತೆ ನೀಡುವೆ. ರಾಷ್ಟ್ರ-ರಾಜ್ಯಗಳ ಸ್ಥಾನಕ್ಕಿಂತ ಕ್ಷೇತ್ರದ ಜನತೆಯ ಸ್ಥಾನಮಾನವೇ ನನ್ನ ಪಾಲಿಗೆ ಪ್ರಧಾನವಾಗಿದೆ. ನನ್ನ ಕ್ಷೇತ್ರದ ಮತದಾರರ ವಿಶ್ವಾಸವೇ ಇದಕ್ಕೆ ಕಾರಣ. ಮತದಾರರ ಆಶಯಕ್ಕಿಂತಲೂ ಮೀರಿ ಕ್ಷೇತ್ರದ ಜನತೆಗೆ ಗರಿಷ್ಠ ಸೇವೆಯನ್ನು ನೀಡಿದ ಭರವಸೆ ನನಗಿದೆ. ಪಕ್ಷವು ಮತ್ತೆ ನನ್ನನ್ನೇ ಕಣಕ್ಕಿಳಿಸಿದರೆ ಗತ ಸ್ಪರ್ಧೆಯ ಇತಿಹಾಸ ತಿದ್ದಿ ಹೊಸ ಅಧ್ಯಾಯ ನಿರ್ಮಿಸುವ ಹೊಣೆಯೂ ಕ್ಷೇತ್ರದ ಜನತೆಗೆ ಸೇರಿದ್ದು. ಪ್ರತಿಯೋರ್ವರಿಗೂ ಮಾತೃಭಾಷೆ, ಸ್ವಸಮಾಜ ಮತ್ತು ಹುಟ್ಟೂರ ಅಭಿಮಾನ ಇದ್ದೇ ಇರುತ್ತದೆ. ಅಂತೆಯೇ ಕರ್ಮಭೂಮಿ ಮುಂಬಯಿಯಲ್ಲಿ ನೆಲೆಯಾಗಿರುವ ಕರ್ನಾ

ಟಕ ಮೂಲದ ತುಳುಕನ್ನಡಿಗರಿಗೂ ಕರ್ನಾಟಕ ಭವನ ನಿರ್ಮಾಣದ ಉದ್ದೇಶ ಇದ್ದಿರ ಬಹುದು. ಆದರೆ  ತುಳುಕನ್ನಡಿಗರ ಲ್ಲಿನ ಬಹುತೇಕರು ಸ್ವಸಮುದಾಯ ಭವನಗಳನ್ನು ನಿರ್ಮಿಸಿ ಇತರರಿಗೆ ಮಾದರಿಯೂ ಮಾರ್ಗದರ್ಶಕರೂ ಆಗಿದ್ದಾರೆ. ಆದರೂ ಕರ್ನಾಟಕದ ಸಮಗ್ರ ಜನತೆಯ ಕರ್ನಾಟಕ ಭವನದ ಕನಸೊಂದಿದ್ದರೆ ಮನವಿಯನ್ನು ಪರಿಶೀಲಿಸಿ ಯೋಜನೆಯತ್ತ ಒಟ್ಟಾಗಿ ಗಮನ ಹರಿಸೋಣ ಎಂದು ನುಡಿದರು.

ಅಭಿನಂದನ ಸಮಾರಂಭದ ಪ್ರಧಾನ ಸಂಯೋಜಕ ಎರ್ಮಾಳ್‌ ಹರೀಶ್‌ ಶೆಟ್ಟಿ ಅವರು  ಮಾತನಾಡಿ,ಮಹಾರಾಷ್ಟ್ರ ರಾಜ್ಯ ದಲ್ಲಿನ ಏಕೈಕ ತುಳು-ಕನ್ನಡಿಗರ ಧ್ವನಿ, ಲೋಕಸಭಾ ಪ್ರತಿನಿಧಿಯಾಗಿದ್ದು ರಾಷ್ಟ್ರದ  ಸರ್ವೋತ್ಕೃಷ್ಟ  ಸಂಸದರಲ್ಲಿ ಓರ್ವರಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದಲೇ “ಸರ್ವೋತ್ಕೃಷ್ಟ ಸಂಸದ’ ಎಂದು ಗೌರವಿಸಲ್ಪಟ್ಟ ಗೋಪಾಲ್‌ ಸಿ. ಶೆಟ್ಟಿ ಅವರಿಗೆ ಮಾ. 2ರಂದು ಸಂಜೆ ಬೊರಿವಿಲಿ ಪಶ್ಚಿಮದ ಪುಷ್ಪಾಂಜಲಿ ಗಾರ್ಡನ್‌ನಲ್ಲಿ ಸಂಸದ ಶ್ರೀ ಗೋಪಾಲ್‌ ಶೆಟ್ಟಿ  ತುಳು-ಕನ್ನಡಿಗರ ಅಭಿಮಾನಿ ಬಳಗ ಆಯೋಜಿ ಸಿರುವ ಸಾರ್ವಜನಿಕ ಸಮಾವೇಶ ಮತ್ತು 
ಸಮ್ಮಾನ ಸಮಾರಂಭದ ಯಶಸ್ಸಿಗೆ ತುಳು-ಕನ್ನಡಿಗರ ಪ್ರೋತ್ಸಾಹ, ಸಹಕಾರ ಸದಾಯಿರಲಿ ಎಂದರು. ಈ ಸಂದರ್ಭದಲ್ಲಿ ಗೋಪಾಲ್‌ ಶೆಟ್ಟಿ ಅವರನ್ನು ಅವರ ಹಿತೈಷಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಪುಷ್ಪಗುತ್ಛವನ್ನಿತ್ತು ಅಭಿನಂದಿಸಿದರು.

ಮುಂಬಯಿ ನಗರ ಉತ್ತರ ಲೋಕಸಭಾ ಕ್ಷೇತ್ರ 1952ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು ಈ ಕೇತ್ರ ಆರಂಭದಿಂದಲೇ ಒಂದು ಪ್ರತಿಷ್ಠೆಯ ಕಣವಾಗಿದೆ. 1952ರಲ್ಲಿ ಕಮ್ಯೂನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ ಪಕ್ಷದಿಂದ ಹಲವಾರು ಮಂದಿ ಜಯ ಗಳಿಸಿದ್ದರು. 2014ರಲ್ಲಿ ಬಿಜೆಪಿಯಿಂದ ಗೋಪಾಲ್‌ ಸಿ. ಶೆಟ್ಟಿ ಸ್ಪರ್ಧಿಸಿ ತುಳು-ಕನ್ನಡಿಗರ ಸೇರಿದಂತೆ ಕ್ಷೇತ್ರದ ಬಹುಭಾಷಿಕರ ಹಿರಿಮೆಯ ಸಂಸದರಾಗಿ ಆಯ್ಕೆಯಾಗಿದ್ದರು. ಅದೂ ಈ ಕ್ಷೇತ್ರದಿಂದ ಬಿಜೆಪಿ (ಶಿವಸೇನೆ ಬೆಂಬಲಿತ), ಕಾಂಗ್ರೆಸ್‌ (ಐ), ಆಮ್‌ ಆದ್ಮಿ ಪಾರ್ಟಿ, ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಸೇರಿದಂತೆ  ಸುಮಾರು ಹನ್ನೆರಡು ಪಕ್ಷಗಳು ಮತ್ತು 8-ಪಕ್ಷೇತರರು ಸ್ಪರ್ಧಿಸಿ ಒಟ್ಟಾರೆ ಶೆಟ್ಟಿ ಅವರನ್ನು ಸೋಲಿಸಿಯೇ ಸಿದ್ಧ ಎಂದು ಪಣತೊಟ್ಟರೂ ಸಾಮರಸ್ಯದ ದ್ಯೋತಕರಾದ ಶಿಸ್ತಿನ ಶಿಪಾಯಿ ಗೋಪಾಲ ಶೆಟ್ಟಿ ಅವರನ್ನೇ ಕ್ಷೇತ್ರದ ಮತದಾರರು ಜನನಾಯಕರನ್ನಾಗಿಸಿ ತಮ್ಮ ಪ್ರತಿನಿಧಿಯನ್ನಾಗಿಸಿ ಲೋಕಸಭೆಗೆ ಕಳುಹಿಸಿದ್ದರು. ಓರ್ವ ಸಾಮಾನ್ಯ ನಗರ ಸೇವಕರಾಗಿ, ಶಾಸಕರಾಗಿ, ಸಂಸದಾಗಿ ಗೋಪಾಲ ಶೆಟ್ಟಿ ಮಾಡಿರುವ ಸೇವೆಯಿಂದಲೇ ತುಳು-ಕನ್ನಡಿಗರು ಹಾಗೂ ಅನ್ಯಭಾಷಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಶ್ರೇಷ್ಠ ಸಂಸದ್‌ ಪ್ರಶಸ್ತಿ ಪುರಸ್ಕೃತ ಸಂಸದ ಗೋಪಾಲ್‌ ಶೆಟ್ಟಿ ಅವರಿಗೆ ಅಭಿನಂದನೆ

  ಚಿತ್ರ-ವರದಿ: ರೋನ್ಸ್‌  ಬಂಟ್ವಾಳ್‌

ಟಾಪ್ ನ್ಯೂಸ್

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.