ವಿಧಾನಸೌಧಕ್ಕೆ ಕಾರು ಸೇವೆ ಹೆಸರಲ್ಲಿ ವಂಚನೆ

Team Udayavani, Mar 18, 2019, 6:35 AM IST

vidhanasoudha.jpg

ಬೆಂಗಳೂರು: ವಿಧಾನಸೌಧ ಸಿಬ್ಬಂದಿಯ ಓಡಾಟಕ್ಕೆ ಕಾರುಗಳನ್ನು ನೀಡುವ ಟೆಂಡರ್‌ ಸಿಕ್ಕಿದೆ ಎಂದು ನಂಬಿಸಿ ಟ್ರಾವೆಲ್ಸ್‌ ಏಜೆನ್ಸಿ ಮಾಲೀಕನೊಬ್ಬ, ಹಲವು ಮಂದಿ ಕಾರು ಮಾಲೀಕರಿಂದ ಹಣ ಸಂಗ್ರಹಿಸಿ ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಈ ಕುರಿತು ವಂಚನೆಗೊಳಗಾದ ಗಜೇಂದ್ರ ಕುಮಾರ್‌ ಎಂಬುವವರು ನೀಡಿರುವ ದೂರಿನ ಅನ್ವಯ, ಹ್ಯಾಪಿ ಟು ಟ್ರಿಪ್‌ ಟ್ರಾವೆಲ್ಸ್‌ ಮಾಲೀಕ ಡಿ.ಡಿ. ಮಂಜುನಾಥ್‌ ಎಂಬಾತನ ವಿರುದ್ಧ ಎಫ್ಐಆರ್‌ ದಾಖಲಿಸಿಕೊಂಡಿರುವ ಬಾಗಲಕುಂಟೆ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿಧಾನಸೌಧ ಸೇವೆಗೆ ಕಾರುಗಳನ್ನು ಬಿಡುವುದಾಗಿ ನಂಬಿಸಿ 34 ಕಾರು ಮಾಲೀಕರಿಂದ ತಲಾ 30 ಸಾವಿರ ರೂ. ಪಡೆದಿದ್ದ ಆರೋಪಿ ಮಂಜುನಾಥ್‌, ಬಳಿಕ ಕೆಲಸವೂ ಕೊಡದೆ ಹಣವೂ ವಾಪಾಸ್‌ ಕೊಟ್ಟಿಲ್ಲ. ಒಟ್ಟು 10.20 ಲಕ್ಷ ರೂ. ಪಡೆದು ವಂಚಿಸಿದ್ದಾನೆ” ಎಂದು ಪೊಲೀಸರು ತಿಳಿಸಿದ್ದಾರೆ.

ಹೆಸರಘಟ್ಟ ಮುಖ್ಯರಸ್ತೆಯ ಕಿರ್ಲೋಸ್ಕರ್‌ ಲೇಔಟ್‌ನಲ್ಲಿ ಹ್ಯಾಪಿ ಟು ಟ್ರಿಪ್‌ ಟ್ರಾವೆಲ್ಸ್‌ ಏಜೆನ್ಸಿ ನಡೆಸುತ್ತಿದ್ದ ಮಂಜುನಾಥ್‌ಗೆ ಗಜೇಂದ್ರಕುಮಾರ್‌ ಪರಿಚಯವಾಗಿತ್ತು. 2017ರ ಸೆಪ್ಟೆಂಬರ್‌ನಲ್ಲಿ ಆರೋಪಿ ಮಂಜುನಾಥ್‌, ವಿಧಾನಸೌಧದಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಓಡಾಟಕ್ಕೆ ಕಾರುಗಳ ಸೇವೆ ಒದಗಿಸುವುದಕ್ಕೆ ಮೂರು ವರ್ಷಗಳ ಟೆಂಡರ್‌ ಏಜೆನ್ಸಿಗೆ ಸಿಕ್ಕಿದೆ.

ಇನೋವಾ ಕಾರಿಗೆ ತಿಂಗಳಿಗೆ 80 ಸಾವಿರ, ಸ್ವಿಫ್ಟ್ ಡಿಸೈರ್‌ಗೆ 71 ಸಾವಿರ ರೂ. ತಿಂಗಳ ಬಾಡಿಗೆ ಸಿಗಲಿದೆ. ಈ ಪ್ರಕ್ರಿಗೆ ಒಂದು ವಾಹನಕ್ಕೆ ಭದ್ರತಾ ಠೇವಣಿಯಾಗಿ 30 ಸಾವಿರ ರೂ.ಕಟ್ಟಬೇಕು ಎಂದು ನಂಬಿಸಿದ್ದು, ಆತನ ಬಳಿಯಿದ್ದ ಎರಡು ಕಾರುಗಳನ್ನು ಬಾಡಿಗೆಗೆ ಬಿಡುವಂತೆ ಕೇಳಿದ್ದಾನೆ.

ನಂಬಿದ ಗಜೇಂದ್ರ ತಮ್ಮ ಎರಡು ಕಾರುಗಳಿಗೆ ಭದ್ರತಾ ಠೇವಣಿಯಾಗಿ 60 ಸಾವಿರ ರೂ. ಕೊಟ್ಟಿದ್ದ. ಇದಾದ ಬಳಿಕ ಮಂಜುನಾಥ್‌ ಸೂಚನೆಯಂತೆ ಸ್ನೇಹಿತರಿಗೂ ವಿಷಯ ತಿಳಿಸಿ ಒಟ್ಟು 34 ಕಾರುಗಳಿಗೆ ತಲಾ 30 ಸಾವಿರ ರೂ.ಗಳನ್ನು ಕಟ್ಟಿಸಿದ್ದರು.

ಇದಾದ ಹಲವು ತಿಂಗಳು ಕಳೆದರೂ ಯಾವುದೇ ಕಾರುಗಳನ್ನು ಬಾಡಿಗೆಗೆ ಪಡೆಯದಿದ್ದಾಗ ಅನುಮಾನ ಬಂದು ಗಜೇಂದ್ರ ಸೇರಿದಂತೆ ಮತ್ತಿತರರು ವಿಧಾನಸೌಧಕ್ಕೆ ಬಂದು ವಿಚಾರಿಸಿದಾಗ ಸತ್ಯ ಹೊರಬಿದ್ದಿದೆ. ಈ ಕುರಿತು ಮಂಜುನಾಥ್‌ರನ್ನು ಪ್ರಶ್ನಿಸಿದಾಗ ಸಬೂಬು ಹೇಳಿದ್ದ. ಅಂತಿಮವಾಗಿ ದೂರುದಾಖಲಿಸಿದ್ದಾರೆ ಎಂದು ಪೊಲೀಸರು ಹೇಳಿದರು.

ಟಾಪ್ ನ್ಯೂಸ್

1-eewqewq

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

MOdi (3)

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ

mamata

Sandeshkhali ಪ್ರಕರಣ ಬಿಜೆಪಿಯದ್ದೇ ಪಿತೂರಿ: ಸಿಎಂ ಮಮತಾ ಆಕ್ರೋಶ

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಿನ್ನದ ನಾಡಿನ ಕಲಾವಿದೆ ವಿದ್ಯಾಶ್ರೀ ಪ್ರತಿಭೆ ಅನಾವರಣ-ನೃತ್ಯಗಂಗಾ ಪ್ರದರ್ಶನ

ಚಿನ್ನದ ನಾಡಿನ ಕಲಾವಿದೆ ವಿದ್ಯಾಶ್ರೀ ಪ್ರತಿಭೆ ಅನಾವರಣ-ನೃತ್ಯಗಂಗಾ ಪ್ರದರ್ಶನ

Theft Case: ನಕಲಿ ಕೀ ಬಳಸಿ ಬ್ಯೂಟಿಷಿಯನ್‌ ಮನೆಗೆ ಕನ್ನ

Theft Case: ನಕಲಿ ಕೀ ಬಳಸಿ ಬ್ಯೂಟಿಷಿಯನ್‌ ಮನೆಗೆ ಕನ್ನ

Arrested: ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ 9 ವರ್ಷ ಬಳಿಕ ಬಂಧನ

Arrested: ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ 9 ವರ್ಷ ಬಳಿಕ ಬಂಧನ

Crime: ರೌಡಿಶೀಟರ್‌ನಿಂದ ಆಟೋ ಚಾಲಕನ ಹತ್ಯೆ

Crime: ರೌಡಿಶೀಟರ್‌ನಿಂದ ಆಟೋ ಚಾಲಕನ ಹತ್ಯೆ

Theft Case: ಕೆಲಸಕ್ಕಿದ್ದ ಮನೆಯಲ್ಲೇ 34 ಲಕ್ಷ ಒಡವೆ ಕದ್ದ ಕಳ್ಳಿ

Theft Case: ಕೆಲಸಕ್ಕಿದ್ದ ಮನೆಯಲ್ಲೇ 34 ಲಕ್ಷ ಒಡವೆ ಕದ್ದ ಕಳ್ಳಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Onion

Onion ರಫ್ತು ನಿಷೇಧ ತೆರವು: ಕಳೆದ ವರ್ಷಕ್ಕಿಂತ ಕಡಿಮೆ ಉತ್ಪಾದನೆ ಸಾಧ್ಯತೆ

1-eewqewq

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

MOdi (3)

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ

mamata

Sandeshkhali ಪ್ರಕರಣ ಬಿಜೆಪಿಯದ್ದೇ ಪಿತೂರಿ: ಸಿಎಂ ಮಮತಾ ಆಕ್ರೋಶ

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.