ಶೂಟಿಂಗ್: ಒಲಿಂಪಿಕ್ ಕೋಟಾ ವಾಪಸ್
Team Udayavani, Mar 28, 2019, 6:13 AM IST
ಸಾಂದರ್ಭಿಕ ಚಿತ್ರ.
ಹೊಸದಿಲ್ಲಿ: ಪಾಕಿಸ್ಥಾನಿ ಶೂಟರ್ಗಳಿಗೆ ವೀಸಾ ನಿರಾಕರಿಸಿದ ಹಿನ್ನೆಲೆಯಲ್ಲಿ ಹೊಸದಿಲ್ಲಿಯಲ್ಲಿ ಇತ್ತೀಚೆಗೆ ನಡೆದ “ವಿಶ್ವಕಪ್ ಶೂಟಿಂಗ್’ ಸ್ಪರ್ಧೆಯ 2 ಒಲಿಂಪಿಕ್ ಕೋಟಾಗಳನ್ನು ಹಿಂದೆ ಪಡೆಯಲಾಗಿದೆ. 25 ಮೀ. ಏರ್ ಪಿಸ್ತೂಲ್ ಮತ್ತು 25 ಮೀ. ರ್ಯಾಪಿಡ್ ಫೈರ್ ವಿಭಾಗದಲ್ಲಿ ಈ ಕೋಟಾಗಳನ್ನು ಅಳವಡಿಸಲಾಗಿತ್ತು.
ಈ ಕೋಟಾಗಳನ್ನು ಮುಂದಿನ ಬೀಜಿಂಗ್ ವರ್ಲ್ಡ್ ಕಪ್ (ಎ. 21-18) ಮತ್ತು ಮ್ಯೂನಿಚ್ ಕೂಟದಲ್ಲಿ (ಮೇ 24ರಿಂದ 31) ನೀಡಲು ಅಂತಾರಾಷ್ಟ್ರೀಯ ಶೂಟಿಂಗ್ ನ್ಪೋರ್ಟ್ ಫೆಡರೇಶನ್ ನಿರ್ಧರಿಸಿದೆ.
ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಹೊಸದಿಲ್ಲಿ ಕೂಟದಲ್ಲಿ ಪಾಲ್ಗೊಳ್ಳಬೇಕಿದ್ದ ಪಾಕಿಸ್ಥಾನದ ಶೂಟರ್ಗಳಾದ ಜಿ.ಎಂ. ಬಶೀರ್ ಮತ್ತು ಖಲೀಲ್ ಅಹ್ಮದ್ ಅವರಿಗೆ ಭಾರತ ವೀಸಾ ನೀಡಿರಲಿಲ್ಲ.