ಬಿಸ್ಕತ್‌ ತಿಂದ ಮಗು ಅಸ್ವಸ್ಥ: ಬೇಕರಿ ಬಂದ್‌ಗೆ ಸೂಚನೆ


Team Udayavani, Apr 2, 2019, 5:00 AM IST

m1-bi

ಎಚ್‌.ಡಿ.ಕೋಟೆ: ಪಟ್ಟಣದ ಎಚ್‌.ಬಿ.ರಸ್ತೆಯ ಪುರಸಭೆ ಕಚೇರಿ ಮುಂಭಾಗ ಇರುವ ಫೇಮಸ್‌ ಬೇಕರಿಯಲ್ಲಿ ಭಾನುವಾರ ಪೋಷಕರೋರ್ವರು ಖರೀದಿ ಮಾಡಿದ್ದ ಬೆಣ್ಣೆ ಬಿಸ್ಕರ್‌ ತಿಂದು ಒಂದೂವರೆ ವರ್ಷದ ಮಗು ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ ಸೋಮವಾರ ಪುರಸಭೆ ಮುಖ್ಯಾಧಿಕಾರಿ ಡಿ.ಎನ್‌.ವಿಜಯ್‌ಕುಮಾರ್‌ ನೇತೃತ್ವದಲ್ಲಿ ತಾಲೂಕು ಆರೋಗ್ಯಾಧಿಕಾರಿ ಟಿ.ರವಿಕುಮಾರ್‌ ಭೇಟಿ ನೀಡಿ ಬೇಕರಿ ಮಾಲೀಕರಿಗೆ ತರಾಟೆ ತಗೆದುಕೊಂಡರು.

ಅಲ್ಲದೇ ಪ್ರಯೋಗಾಲಯಕ್ಕೆ ಕಳುಹಿಸಲು ಕೆಲ ತಿಂಡಿಗಳ ಸ್ಯಾಂಪಲ್‌ಗ‌ಳನ್ನು ಕೊಂಡೊಯ್ದರು. ಭಾನುವಾರ ಸಂಜೆ ಪಟ್ಟಣದ ಹೌಸಿಂಗ್‌ ಬೋರ್ಡ್‌ ಕಾಲೋನಿ ನಿವಾಸಿಯೋರ್ವರು ತಮ್ಮ ಮಗುವಿಗೆ 250 ಗ್ರಾಂ ಬೆಣ್ಣೆ ಬಿಸ್ಕತ್‌ ತೆಗೆದುಕೊಂಡು ಹೋಗಿದ್ದಾರೆ. ಈ ಬಿಸ್ಕತ್‌ ಅನ್ನು ಮಗುವಿಗೆ ತಿನ್ನಿಸಿದ ಮರು ಘಳಿಗೆಯಲ್ಲೇ ಮಗು ವಾಂತಿ ಭೇದಿ ಮಾಡಿಕೊಂಡು ಅಸ್ವಸ್ಥಗೊಂಡಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ: ಕೂಡಲೇ ಪೋಷಕರು ಮಗುವನ್ನು ಪಟ್ಟಣದ ಸಾರ್ವಜನಿಕ ಅಸ್ಪತ್ರೆಗೆ ಕರೆದೊಯ್ದುª ಚಿಕಿತ್ಸೆ ಕೋಡಿಸಿದ್ದಾರೆ. ಆ ಸಂದರ್ಭದಲ್ಲಿ ವೈದ್ಯರು ಮಗುವಿಗೆ ಫ‌ುಡ್‌ ಇನೆ#ಕ್ಷನ್‌ ಆಗಿದೆ ಎಂದು ಹೇಳಿದ್ದಾರೆ. ಆಗ ಮತ್ತೆ ಬಂದು ಬೇಕರಿಯಲ್ಲಿ ತಂದಿದ್ದ ಬಿಸ್ಕರ್‌ ಪರೀಕ್ಷಿಸಿದಾಗ ಬಿಸ್ಕರ್‌ ಅವಧಿ ಮಿರಿರುವುದು ಕಂಡು ಬಂದಿದೆ.

ಉಡಾಫೆ ವರ್ತನೆ: ತಕ್ಷಣ ಬೇಕರಿ ಮಾಲೀಕನನ್ನು ವಿಚಾರಿಸಿದಾಗ ಉಡಾಫೆಯಾಗಿ ವರ್ತಿಸಿದ್ದಾನೆ. ಇದನ್ನು ಕಂಡ ಸಾರ್ವಜನಿಕರು ಬೇಕರಿ ಮಾಲೀಕ ಮತ್ತು ಸಿಬ್ಬಂದಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತಗೆದುಕೊಂಡಿದ್ದಾರೆ. ತಕ್ಷಣ ಬೇಕರಿ ಮಾಲೀಕ ಕೆಲವರ ಮೇಲೆ ಠಾಣೆಗೆ ಹೋಗಿ ಗಲಾಟೆ ದೂರು ದಾಖಲಿಸಿದ್ದಾರೆ. ಠಾಣೆಗೆ ಬಂದ ಸಾರ್ವಜನಿಕರು ಮತ್ತು ಮಗುವಿನ ಪೋಷಕರು, ಬೇಕರಿ ತಿಂಡಿಯಿಂದಾಗಿರುವ ಘಟನೆಯನ್ನು ವಿವರಿಸಿ ದೂರು ನೀಡಿದ್ದಾರೆ.

ಮಾಲೀಕರಿಗೆ ತರಾಟೆ: ತಕ್ಷಣ ಎಚ್‌.ಡಿ.ಕೋಟೆ ಠಾಣೆ ಸಬ್‌ಇನ್ಸ್‌ಪೆಕ್ಟರ್‌ ಅನಂದ್‌ ಬೇಕರಿ ಮಾಲೀಕನನ್ನು ತರಾಟೆ ತಗೆದುಕೊಂಡು ನಿಮ್ಮ ಬೇಕರಿ ಮೇಲೆ ಸಾರ್ವಜನಿಕರಿಂದ ದೂರುಗಳು ಬಂದಿವೆ. ಮಗುವಿಗೆ ತೊಂದರೆಯಾಗಿರುವ ಬಿಸ್ಕತ್‌ ವರದಿ ಬರುವವರೆಗೆ ಬೇಕರಿಯನ್ನು ಬಂದ್‌ ಮಾಡಲು ಸೂಚಿಸಿ, ಪುರಸಭೆ ಮತ್ತು ತಾಲೂಕು ಆರೋಗ್ಯ ಇಲಾಖೆಗೆ ಪಟ್ಟಣ ಪೊಲೀಸರೇ ಪತ್ರ ಬರೆದಿದ್ದರು.

ಹೀಗಾಗಿ ಸೋಮವಾರ ತಾಲೂಕು ಆರೋಗ್ಯಾಧಿಕಾರಿಗಳು ಮತ್ತು ಪುರಸಭೆ ಅಧಿಕಾರಿಗಳ ತಂಡ ಬೇಕರಿಗೆ ಭೇಟಿ ನೀಡಿ, ತಿಂಡಿ ಪದಾರ್ಥಗಳನ್ನು ಪರಿಶೀಲಿಸಿ, ಬೇಕರಿ ಮಾಲೀಕ ನಜೀರ್‌ನನ್ನು° ತರಾಟೆ ತಗೆದುಕೊಂಡರು. ಕೆಲ ಪದಾರ್ಥಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲು ಬಿಲ್‌ ಸಹಿತ ಪಡೆದು ವರದಿ ಬರುವವರೆಗೆ ಬಾಗಿಲು ಹಾಕಿಸುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಬೇಕರಿಯಲ್ಲಿದ್ದ ಪ್ಲಾಸ್ಟಿಕ್‌ ಕವರ್‌, ಲೋಟಗಳನ್ನು ವಶಪಡಿಸಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಡಿ.ಎನ್‌.ವಿಜಯ್‌ಕುಮಾರ್‌, ಆರೋಗ್ಯಾಧಿಕಾರಿಗಳಾದ ಪುಷ್ಪಲತಾ, ಸಂತೋಷ್‌, ಸಹಾಯಕ ಆರೋಗ್ಯ ನಿರೀಕ್ಷಕ ನಾಗೇಂದ್ರ, ಪಟ್ಟಣದ ಮುಖಂಡರಾದ ಲಾರಿ ಪ್ರಕಾಶ್‌, ವಕೀಲ ಚೌಡಳ್ಳಿ ಜವರಯ್ಯ, ಸದಾಶೀವ, ದಸಂಸ ಮುಖಂಡರಾದ ದೊಡ್ಡಸಿದ್ದು, ಸಣ್ಣಕುಮಾರ್‌, ಚಾ.ಶಿವಕುಮಾರ್‌, ಚನ್ನಕೋಟೆ, ಹೋಟೆಲ್‌ ಪ್ರಸಾದ್‌ ಇತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.