ಜೆಟ್ ಏರ್ವೇಸ್ಗೆ ಇಂಧನವಿಲ್ಲ
Team Udayavani, Apr 6, 2019, 6:00 AM IST
ಮುಂಬೈ: ನಷ್ಟದ ಸುಳಿಗೆ ಸಿಲುಕಿರುವ ಜೆಟ್ ಏರ್ವೇಸ್ಗೆ ಶುಕ್ರವಾರ ಇಂಧನದ ಸಮಸ್ಯೆಯೂ ತಲೆದೋರಿತ್ತು. ಇಂಧನದ ಬಿಲ್ ಪಾವತಿ ಮಾಡದಿರುವುದರಿಂದಾಗಿ ಇಂದನ ನೀಡುವುದಿಲ್ಲ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಶನ್ ಪಟ್ಟು ಹಿಡಿದಿತ್ತು. ಆದರೆ ನಂತರ ಜೆಟ್ ಏರ್ವೇಸ್ನ ಭರವಸೆಯ ನಂತರ ಇಂಧನ ಒದಗಿಸಲು ತೈಲ ಕಂಪನಿ ಅನುಮತಿ ನೀಡಿದೆ. ಇದರಿಂದಾಗಿ ಶುಕ್ರವಾರ ಮಧ್ಯಾಹ್ನ ಹಲವು ವಿಮಾನ ನಿಲ್ದಾಣಗಳಲ್ಲಿ ಜೆಟ್ ಏರ್ವೇಸ್ ವಿಮಾನ ಹಾರಾಟಕ್ಕೆ ಸಮಸ್ಯೆ ಉಂಟಾಗಿತ್ತು. ಈಗಾಗಲೇ 1500 ಕೋಟಿ ರೂ. ಮರು ಬಂಡವಾಳ ಒದಗಿಸಿ ವಿಮಾನಯಾನ ಸಂಸ್ಥೆಯನ್ನು ಪುನಶ್ಚೇತನಗೊಳಿಸಲು ಎಸ್ಬಿಐ ನೇತೃತ್ವದ ಸಾಲಗಾರ ಬ್ಯಾಂಕ್ಗಳ ನಿಯೋಗ ನಿರ್ಧರಿಸಿದೆ.