ನಾಲ್ಕೂ ಕ್ಷೇತ್ರಗಳಲ್ಲಿ ಅಂತಿಮ ದಿನದ ಬಿರುಸಿನ ಪ್ರಚಾರ

Team Udayavani, Apr 17, 2019, 3:00 AM IST

nalku-khsetra

ಬೆಂಗಳೂರು: ಮೊದಲ ಹಂತದಲ್ಲಿ ಮತದಾನ ನಡೆಯಲಿರುವ ಬೆಂಗಳೂರು ಉತ್ತರ, ದಕ್ಷಿಣ, ಕೇಂದ್ರ ಹಾಗೂ ಗ್ರಾಮಾಂತರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಹಾಗೂ ಬಿಜೆಪಿ ಅಭ್ಯರ್ಥಿಗಳು ಕೊನೇ ದಿನವಾದ ಮಂಗಳವಾರ ಇಡೀ ದಿನ ಬಿರುಸಿನ ಪ್ರಚಾರ ಮಾಡಿ ಮತಯಾಚನೆ ಮಾಡಿದರು.

ಬೆಂಗಳೂರು ದಕ್ಷಿಣ: ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್‌ ಪರ ಸಚಿವ ಡಿ.ಕೆ.ಶಿವಕುಮಾರ್‌ ಹಾಗೂ ರಾಜ್ಯಸಭೆ ಸದಸ್ಯರಾದ ಪ್ರೊ.ರಾಜೀವ್‌ಗೌಡ, ಕೆ.ಸಿ.ರಾಮಮೂರ್ತಿ ರೋಡ್‌ ಶೋ ನಡೆಸಿ ಮತ ನೀಡುವಂತೆ ಮನವಿ ಮಾಡಿದರು.

ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರು ಎಂಟು ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯ ಬಿಜೆಪಿ ಪಾಲಿಕೆ ಸದಸ್ಯರ ಜತೆ ರೋಡ್‌ ಶೋ ನಡೆಸಿ ಮತಯಾಚನೆ ಮಾಡಿದರು.

ಬೆಂಗಳೂರು ಗ್ರಾಮಾಂತರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಅಭ್ಯರ್ಥಿ ಡಿ.ಕೆ.ಸುರೇಶ್‌ ಅವರ ಪರ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ, ಆನೇಕಲ್‌ ಶಾಸಕ ಶಿವಣ್ಣ, ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ -ಜೆಡಿಎಸ್‌ ನಾಯಕರು ಬಿರುಸಿನ ಪ್ರಚಾರ ನಡೆಸಿದರು.

ಇದೇ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶ್ವಥ್‌ನಾರಾಯಣ ಪರ ಬೆಂಗಳೂರು ದಕ್ಷಿಣ ಶಾಸಕ ಎಂ.ಕೃಷ್ಣಪ್ಪ ಸೇರಿದಂತೆ ಬಿಜೆಪಿ ನಾಯಕರು ರಾಜರಾಜೇಶ್ವರಿನಗರ, ಆನೇಕಲ್‌, ಬೆಂಗಳೂರು ದಕ್ಷಿಣ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದರು.

ಬೆಂಗಳೂರು ಕೇಂದ್ರ: ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ ಪರ ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್‌ ಗಾಂಧಿನಗರ ಕ್ಷೇತ್ರದಲ್ಲಿ ರೋಡ್‌ ಶೋ ನಡೆಸಿ ಮತಯಾಚನೆ ಮಾಡಿದರು.

ಇದೇ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್‌ ಅವರು ಪಾಲಿಕೆ ಸದಸ್ಯರ ಜತೆಗೂಡಿ ಶಿವಾಜಿನಗರ, ಚಾಮರಾಜಪೇಟೆ, ಶಾಂತಿನಗರ, ಸರ್ವಜ್ಞನಗರದಲ್ಲಿ ಪಾದಯಾತ್ರೆ ನಡೆಸಿ ಪ್ರಧಾನಿ ನರೇಂದ್ರಮೋದಿಯವರನ್ನು ಮತ್ತೂಮ್ಮೆ ಪ್ರಧಾನಿ ಮಾಡಲು ಮತ ನೀಡುವಂತೆ ಮನವಿ ಮಾಡಿದರು.

ಬೆಂಗಳೂರು ಉತ್ತರ: ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ಕೃಷ್ಣ ಬೈರೇಗೌಡ ಅವರು ಕೆ.ಆರ್‌.ಪುರಂ ಶಾಸಕ ಬೈರತಿ ಬಸವರಾಜ್‌ ಜತೆಗೂಡಿ ರಾಮಮೂರ್ತಿ ನಗರ ವಾರ್ಡ್‌ನ ಕೌದೇನಹಳ್ಳಿ, ಶಾಂತಿ ಲೇಔಟ್‌, ಅಂಬೇಡ್ಕರ್‌ನಗರ, ಸರ್‌ ಎಂ.ವಿ ಬಡಾವಣೆ ಸೇರಿ ಹರಾಮಮೂರ್ತಿನಗರ ವಾರ್ಡ್‌ನ ಕೌದೇನಹಳ್ಳಿ, ಶಾಂತಿ ಲೇಔಟ್‌, ಅಂಬೇಡ್ಕರ್‌ನಗರ, ಸರ್‌ ಎಂ.ವಿ ಬಡಾವಣೆ ಸೇರಿ ಹಸುತ್ತಮುತ್ತಲ ಪ್ರದೇಶಗಳಲ್ಲಿ ಪಾದಯಾತ್ರೆ ಮೂಲಕ ಮತಯಾಚನೆ ಮಾಡಿದರು.

ಬೆಂಗಳೂರು ಉತ್ತರ ಕ್ಷೇತ್ರದ ಅಭಿವೃದ್ಧಿಗೆ ನನ್ನದೇ ಆದ ಕನಸು ಕಂಡಿದ್ದು, ಬೆಂಬಲ ನೀಡಿ ಎಂದು ಕೃಷ್ಣ ಬೈರೇಗೌಡರು ಮನವಿ ಮಾಡಿದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುನೇಗೌಡ, ಕೃಷ್ಣಮೂರ್ತಿ, ಇಟಾಚಿ ಮಂಜುನಾಥ್‌, ಕೆ.ಸಿ.ಬೀರಪ್ಪ ಜತೆಯಲ್ಲಿದ್ದರು.

ಇದೇ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡರು, ಯಶವಂತಪುರ, ಬ್ಯಾಟರಾಯನಪುರ ವಿಧಾನಸಭೆ ಕ್ಷೇತ್ರದ ಹಲವೆಡೆ ನಟ ಜಗ್ಗೇಶ್‌, ಸ್ಥಳೀಯ ಬಿಜೆಪಿ ಪಾಲಿಕೆ ಸದಸ್ಯರು ಹಾಗೂ ಮುಖಂಡರ ಜತೆಗೂಡಿ ರೋಡ್‌ ಶೋ ನಡೆಸಿ ಮತಯಾಚನೆ ಮಾಡಿದರು.

ಟಾಪ್ ನ್ಯೂಸ್

108 ಆ್ಯಂಬುಲೆನ್ಸ್‌ ಸಿಬಂದಿ ಮುಷ್ಕರ: ಇಂದು ನಿರ್ಧಾರ

108 ಆ್ಯಂಬುಲೆನ್ಸ್‌ ಸಿಬಂದಿ ಮುಷ್ಕರ: ಇಂದು ನಿರ್ಧಾರ

Sullia ಮೊಬೈಲ್‌ ರಿಚಾರ್ಜ್‌ಗೆ ಬಂದ ಯುವತಿಯ ಫೋಟೋ ತೆಗೆದ ಆರೋಪ: ದೂರು

Sullia ಮೊಬೈಲ್‌ ರಿಚಾರ್ಜ್‌ಗೆ ಬಂದ ಯುವತಿಯ ಫೋಟೋ ತೆಗೆದ ಆರೋಪ: ದೂರು

1—-wqwqeqwewqeq

India-born ಸುನೀತಾ ವಿಲಿಯಮ್ಸ್‌ ಇಂದು 3ನೇ ಬಾರಿ ನಭಕ್ಕೆ!: ಗಣೇಶನ ವಿಗ್ರಹ ಬಾಹ್ಯಾಕಾಶಕ್ಕೆ!

ಪ್ರಜ್ವಲ್‌ ವೀಡಿಯೋ ಪ್ರಕರಣಕ್ಕೆ ತಿರುವು ಡಿಕೆಶಿ ವಿರುದ್ಧ ಆಡಿಯೋ ಬಾಂಬ್‌

Prajwal Revanna ವೀಡಿಯೋ ಪ್ರಕರಣಕ್ಕೆ ತಿರುವು ಡಿಕೆಶಿ ವಿರುದ್ಧ ಆಡಿಯೋ ಬಾಂಬ್‌

1-wqewqeqwqweqwe

China; ಶಕ್ತಿಶಾಲಿ ನೌಕೆ ಕಾರ್ಯಾಚರಣೆ ಆರಂಭ: ವಿಶೇಷತೆಯೇನು?

Arvind Kejriwal ವಿರುದ್ಧ ಎನ್‌ಐಎ ತನಿಖೆಗೆ ಶಿಫಾರಸು

Arvind Kejriwal ವಿರುದ್ಧ ಎನ್‌ಐಎ ತನಿಖೆಗೆ ಶಿಫಾರಸು

ತಾಪಮಾನದಲ್ಲಿ ಏರಿಕೆ; ಮುಂಜಾಗ್ರತಾ ಕ್ರಮವಾಗಿ ವೆನ್ಲಾಕ್‌ ನಲ್ಲಿ 6 ಬೆಡ್‌ ಮೀಸಲು

D.K ತಾಪಮಾನದಲ್ಲಿ ಏರಿಕೆ; ಮುಂಜಾಗ್ರತಾ ಕ್ರಮವಾಗಿ ವೆನ್ಲಾಕ್‌ ನಲ್ಲಿ 6 ಬೆಡ್‌ ಮೀಸಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Majestic Underpass: ಅಸಹ್ಯ, ಭಯ ಹುಟ್ಟಿಸುತ್ತೆ ಮೆಜೆಸ್ಟಿಕ್‌ ಅಂಡರ್‌ಪಾಸ್‌

Majestic Underpass: ಅಸಹ್ಯ, ಭಯ ಹುಟ್ಟಿಸುತ್ತೆ ಮೆಜೆಸ್ಟಿಕ್‌ ಅಂಡರ್‌ಪಾಸ್‌

Vande Bharat: ಉಪನಗರಕ್ಕೂ ವಂದೇ ಭಾರತ ಮೆಟ್ರೋ ಬೋಗಿ?

Vande Bharat: ಉಪನಗರಕ್ಕೂ ವಂದೇ ಭಾರತ ಮೆಟ್ರೋ ಬೋಗಿ?

Cucumber price: ಬಿಸಿಲ ಬರೆ; 1ಕೆಜಿ ಸೌತೆಕಾಯಿ ಬೆಲೆ 62 ರೂ.!

Cucumber price: ಬಿಸಿಲ ಬರೆ; 1ಕೆಜಿ ಸೌತೆಕಾಯಿ ಬೆಲೆ 62 ರೂ.!

ನನಗೂ ಭೂ ವ್ಯವಹಾರಕ್ಕೂ ಸಂಬಂಧ ಇಲ್ಲ: ಬೆಂವಿವಿ ಪ್ರೊ.ಮೈಲಾರಪ್ಪ ಸ್ಪಷ್ಟನೆ 

ನನಗೂ ಭೂ ವ್ಯವಹಾರಕ್ಕೂ ಸಂಬಂಧ ಇಲ್ಲ: ಬೆಂವಿವಿ ಪ್ರೊ.ಮೈಲಾರಪ್ಪ ಸ್ಪಷ್ಟನೆ 

BESCOM: ಮಳೆ; ಬೆಸ್ಕಾಂಗೆ 1.2 ಕೋಟಿ ರೂ.ನಷ್ಟ

BESCOM: ಮಳೆ; ಬೆಸ್ಕಾಂಗೆ 1.2 ಕೋಟಿ ರೂ.ನಷ್ಟ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

108 ಆ್ಯಂಬುಲೆನ್ಸ್‌ ಸಿಬಂದಿ ಮುಷ್ಕರ: ಇಂದು ನಿರ್ಧಾರ

108 ಆ್ಯಂಬುಲೆನ್ಸ್‌ ಸಿಬಂದಿ ಮುಷ್ಕರ: ಇಂದು ನಿರ್ಧಾರ

Sullia ಮೊಬೈಲ್‌ ರಿಚಾರ್ಜ್‌ಗೆ ಬಂದ ಯುವತಿಯ ಫೋಟೋ ತೆಗೆದ ಆರೋಪ: ದೂರು

Sullia ಮೊಬೈಲ್‌ ರಿಚಾರ್ಜ್‌ಗೆ ಬಂದ ಯುವತಿಯ ಫೋಟೋ ತೆಗೆದ ಆರೋಪ: ದೂರು

1—-wqwqeqwewqeq

India-born ಸುನೀತಾ ವಿಲಿಯಮ್ಸ್‌ ಇಂದು 3ನೇ ಬಾರಿ ನಭಕ್ಕೆ!: ಗಣೇಶನ ವಿಗ್ರಹ ಬಾಹ್ಯಾಕಾಶಕ್ಕೆ!

ಪ್ರಜ್ವಲ್‌ ವೀಡಿಯೋ ಪ್ರಕರಣಕ್ಕೆ ತಿರುವು ಡಿಕೆಶಿ ವಿರುದ್ಧ ಆಡಿಯೋ ಬಾಂಬ್‌

Prajwal Revanna ವೀಡಿಯೋ ಪ್ರಕರಣಕ್ಕೆ ತಿರುವು ಡಿಕೆಶಿ ವಿರುದ್ಧ ಆಡಿಯೋ ಬಾಂಬ್‌

1-wqewqeqwqweqwe

China; ಶಕ್ತಿಶಾಲಿ ನೌಕೆ ಕಾರ್ಯಾಚರಣೆ ಆರಂಭ: ವಿಶೇಷತೆಯೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.