ಇಂಗ್ಲಿಷ್‌ ಪಾಠ ರೆಡಿ; ಹಾಡು ಮಾತ್ರ ಬಾಕಿ!


Team Udayavani, Apr 18, 2019, 6:11 AM IST

1704MLR10

ಕೋಸ್ಟಲ್‌ವುಡ್‌ನ‌ ಸ್ಟಾರ್‌ ಡೈರೆಕ್ಟರ್‌ ಎಂಬ ಮಾನ್ಯತೆ ಪಡೆದ ಸೂರಜ್‌ ಶೆಟ್ಟಿ ನಿರ್ದೇಶನದ ಉದ್ಯಮಿ ಹರೀಶ್‌ ಶೇರಿಗಾರ್‌ ಮತ್ತು ಶರ್ಮಿಳಾ ಶೇರಿಗಾರ್‌ ನಿರ್ಮಾಣದ “ಇಂಗ್ಲಿಷ್‌’ ಸಿನೆಮಾದ ಬಹುತೇಕ ಶೂಟಿಂಗ್‌ ಪೂರ್ಣಗೊಂಡಿದೆ. ಸದ್ಯ ಎರಡು ಹಾಡುಗಳ ಶೂಟಿಂಗ್‌ ಮಾತ್ರ ಬಾಕಿ ಇದೆ. ಎಲ್ಲವೂ ಅಂದುಕೊಂಡಂತೆಯಾದರೆ ಆಗಸ್ಟ್‌ನಲ್ಲಿ “ಇಂಗ್ಲಿಷ್‌’ ತೆರೆಕಾಣಲಿದೆ. ವಾಮಂಜೂರು, ಉಡುಪಿ ಸೇರಿದಂತೆ ಮಂಗಳೂರು ಭಾಗದಲ್ಲಿ ಸುಮಾರು 34 ದಿನ ಶೂಟಿಂಗ್‌ ಕಂಡಿರುವ ಈ ಸಿನೆಮಾದ ಹಾಡುಗಳ ಶೂಟಿಂಗ್‌ ಇನ್ನಷ್ಟೇ ನಡೆಯಬೇಕಿದೆ. ಪೂರ್ಣ ಸಿನೆಮಾ ಕಾಮಿಡಿಯಾಗಿ ಮೂಡಿಬಂದಿದ್ದು ಹೊಸ ನಿರೀಕ್ಷೆ ಮೂಡಿಸಿದೆ.

ಬಹುಭಾಷಾ ನಟ ಅನಂತ್‌ನಾಗ್‌ ಈ ಚಿತ್ರ ದ ಮೂಲಕ ಕೋಸ್ಟಲ್‌ವುಡ್‌ಗೆ ಎಂಟ್ರಿ ಕೊಡುತ್ತಿರುವುದೇ ಚಿತ್ರದ ಪ್ರಮುಖ ಹೈಲೈಟ್‌.

ಹುಡುಗನೊಬ್ಬ ಮಾಲ್‌ ಒಂದರಲ್ಲಿ ಗೊಂಬೆ ವೇಷ ಹಾಕಿ ಕುಣಿಯುವ ಕೆಲಸ ಮಾಡುತ್ತಿರುತ್ತಾನೆ. ಅಲ್ಲಿಗೆ ಹುಡುಗಿಯೊಬ್ಬಳು ತನ್ನ ಗೆಳತಿ ಜತೆ ಬರುತ್ತಿರುತ್ತಾಳೆ. ಆ ಹುಡುಗನಿಗೆ ಹುಡುಗಿ ಮೇಲೆ ಇಷ್ಟವಾಗುತ್ತದೆ. ಒಂದು ದಿನ ಆ ಹುಡುಗ ಅಲ್ಲಿಗೆ ಬರುವ ಹುಡುಗಿಗೆ ತನ್ನ ಪ್ರೀತಿಯ ವಿಷಯ ತಿಳಿಸುತ್ತಾನೆ. ಹುಡುಗನಿಗೆ ಇಂಗ್ಲಿಷ್‌ ಬರುವುದಿಲ್ಲ ಎಂಬ ಕಾರಣಕ್ಕೆ ಆಕೆ ಆತನ ಪ್ರೀತಿ ನಿರಾಕರಿಸುತ್ತಾಳೆ. ನಾನು ಮದುವೆ ಆಗುವುದಾದೆ ಇಂಗ್ಲಿಷ್‌ ಗೊತ್ತಿದ್ದವನನ್ನು ಎಂದು ಹುಡುಗಿ ಹೇಳುತ್ತಾಳೆ. ಅಂದಿನಿಂದ ಆತ ತನ್ನ ಫ್ರೆಂಡ್ಸ್‌ ಜತೆ ಸೇರಿ ಇಂಗ್ಲಿಷ್‌ ಕಲಿಯಲು ಶುರು ಮಾಡುತ್ತಾನೆ. ಹುಡುಗ ಕಷ್ಟಪಟ್ಟು ಇಂಗ್ಲಿಷ್‌ ಕಲಿಯುವುದನ್ನು ನೋಡಿ ಆ ಹುಡುಗಿಗೆ ಆತನ ಮೇಲೆ ಇಷ್ಟವಾಗುತ್ತದೆ. ಇಬ್ಬರ ನಡುವೆ ಫ್ರೆಂಡ್‌ಶಿಪ್‌ ಶುರುವಾಗುತ್ತದೆ. ಇದು ಪ್ರೀತಿಗೆ ಬದಲಾಗುತ್ತದೆ. ಹುಡುಗಿ ತನ್ನ ಪ್ರೀತಿಯ ವಿಷಯ ಮನೆಯವರಲ್ಲಿ ತಿಳಿಸುತ್ತಾಳೆ. ಆದರೆ ಮನೆಯವರು ಆತನನ್ನು ಒಪ್ಪಿಕೊಳ್ಳುವುದಿಲ್ಲ. ಕೊನೆಗೆ ಹುಡುಗ ತನ್ನಂತೆಯೇ ಇತರರಿಗೂ ಇಂಗ್ಲಿಷ್‌ ಕಲಿಸಬೇಕು ಎನ್ನುವ ಉದ್ದೇಶದಿಂದ ಇಂಗ್ಲಿಷ್‌ ಸ್ಪಿಕಿಂಗ್‌ ಕ್ಲಾಸ್‌ ಪ್ರಾರಂಭಿಸುತ್ತಾನೆ.

ಈ ಸಾಧನೆಯನ್ನು ಕಂಡು ಹುಡುಗಿ ಮನೆಯವರಿಗೆ ಆತನ ಮೇಲೆ ಹೆಮ್ಮೆಯಾಗುತ್ತದೆ. ಬಳಿಕ ನಡೆಯುವ ಕಥೆಯೇ “ಇಂಗ್ಲಿಷ್‌’.

ಕೃಷ್ಣ ಸಾರಥಿ ಛಾಯಾಗ್ರಹಣ- ಸಂಕಲನ ಮನು ಶೇರಿಗಾರ್‌, ಸಂಗೀತ ಮಣಿಕಾಂತ್‌ ಕದ್ರಿ, ಸಾಹಿತ್ಯ ಶಶಿರಾಜ್‌ ಕಾವೂರು, ಅರ್ಜುನ್‌ ಲೂಯಿಸ್‌. ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಕೆ. ಸೂರಜ್‌ ಶೆಟ್ಟಿ ಅವರದ್ದು. ತಾರಾಗಣದಲ್ಲಿ ಪೃಥ್ವಿ ಅಂಬರ್‌, ನವ್ಯಾ ಪೂಜಾರಿ, ನವೀನ್‌ ಡಿ. ಪಡೀಲ್‌, ಅರವಿಂದ್‌ ಬೋಳಾರ್‌, ಭೋಜರಾಜ ವಾಮಂಜೂರು, ವಿಸ್ಮಯ ವಿನಾಯಕ್‌, ದೀಪಕ್‌ ರೈ ಪಾಣಾಜೆ, ಸಂದೀಪ್‌ ಶೆಟ್ಟಿ ಮಾಣಿಬೆಟ್ಟು, ಪ್ರಸನ್ನ ಬೈಲೂರು, ರವಿರಾಮ ಕುಂಜ ಬಣ್ಣಹಚ್ಚಿದ್ದಾರೆ.

 

ಟಾಪ್ ನ್ಯೂಸ್

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.