ಮೈತ್ರಿ ಸರ್ಕಾರದಿಂದ ದ್ವೇಷ-ಕಣ್ಣೀರಿನ ನಾಟಕ

ಸರ್ಕಾರ ಬಹಳ ದಿನ ಉಳಿಯಲ್ಲ ; ಲೂಟಿ ಮಾಡುವುದೇ ಸಮ್ಮಿಶ್ರ ಸರ್ಕಾರದ ಧ್ಯೇಯ: ಮೋದಿ

Team Udayavani, Apr 19, 2019, 12:02 PM IST

190418kpnmodi9

ಬಾಗಲಕೋಟೆ/ಚಿಕ್ಕೋಡಿ: “ಅಭದ್ರ ಸರ್ಕಾರಕ್ಕಾಗಿ ಬೆಂಗಳೂರಿನತ್ತ ನೋಡಿ. ಸುಭದ್ರ ಸರ್ಕಾರಕ್ಕಾಗಿ ದೆಹಲಿ ನೋಡಿ. ರಾಜ್ಯದ ಅಭದ್ರ ಮೈತ್ರಿ ಸರ್ಕಾರ ದ್ವೇಷ, ಕಣ್ಣೀರು, ಭಾವನಾತ್ಮಕ ರಾಜಕೀಯ ನಾಟಕ ಮಾಡುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದರು.

ಬಾಗಲಕೋಟೆಯಲ್ಲಿ ಗುರುವಾರ ವಿಜಯಪುರ-ಬಾಗಲಕೋಟೆ ಲೋಕಸಭೆ ಕ್ಷೇತ್ರದ ಚುನಾವಣೆ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, “ರಾಜ್ಯದಲ್ಲಿ ಬರ ಪರಿಸ್ಥಿತಿಯಿದೆ. ಇದಕ್ಕಾಗಿ ಮೈತ್ರಿ ಸರ್ಕಾರ ಏನು ಮಾಡಿದೆ? ಕಬ್ಬು ಬೆಳೆಗಾರರ ಸಮಸ್ಯೆ, ರೈತರ ಸಾಲ ಮನ್ನಾ ಏನಾಯಿತು? ಇಂತಹ ಹಲವು ಸಮಸ್ಯೆಗಳಿಗೆ ಈ ಮೈತ್ರಿ ಸರ್ಕಾರ ಪರಿಹಾರ ಕೊಟ್ಟಿಲ್ಲ ಎಂದರು.

ರಾಜ್ಯದ ಮಜಬೂರ ಸರ್ಕಾರ ಬಹಳ ದಿನ ಉಳಿಯಲ್ಲ ಎಂದು ಇಲ್ಲಿನ ಮಜಬೂರ ಮುಖ್ಯಮಂತ್ರಿಗೂ ಗೊತ್ತಿದೆ. ಹೀಗಾಗಿ ಕಾಂಗ್ರೆಸ್‌ -ಜೆಡಿಎಸ್‌ನವರು ಅಧಿಕಾರದಲ್ಲಿ ಇರುವಷ್ಟು ದಿನ ಲೂಟಿ ಮಾಡುವುದರಲ್ಲಿ ತೊಡಗಿದ್ದಾರೆ. ಅದೇ ಲೂಟಿ ಮಾಡಿದ ಹಣವನ್ನು ಈಗ ಚುನಾವಣೆಗೆ ಖರ್ಚು ಮಾಡುತ್ತಿದ್ದಾರೆ. ದೇಶ ಮತ್ತು ರಾಜ್ಯಗಳಲ್ಲಿ ಮಜಬೂರ (ಅಭದ್ರ) ಸರ್ಕಾರ ಇರಬೇಕೆಂದು ಕಾಂಗ್ರೆಸ್‌ ಬಯಸುತ್ತದೆ. ಅಭದ್ರ ಮುಖ್ಯಮಂತ್ರಿ, ಪ್ರಧಾನಮಂತ್ರಿಯೂ ಇರಬೇಕೆಂದು ಕಾಂಗ್ರೆಸ್‌ನ ಆಶಯವಾಗಿದೆ. ಸರ್ಕಾರ ಬೀಳುತ್ತದೆ ಎಂದು ಗೊತ್ತಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದರು.

ದೇಶ ಒಡೆಯುವುದೇ ಉದ್ದೇಶ: ಚಿಕ್ಕೋಡಿಯಲ್ಲಿ ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಮೋದಿ, ದೇಶದ ರಕ್ಷಣೆಯ ಸೇನೆಯಲ್ಲಿ ಮಧ್ಯಮ ವರ್ಗ ಹಾಗೂ ಬಡವರ್ಗದವರೂ ಸಹಭಾಗಿಗಳಾಗಿದ್ದಾರೆ.

ಹೀಗಿರುವಾಗ ಕರ್ನಾಟಕದ ಮುಖ್ಯಮಂತ್ರಿಗಳು ಸೈನಿಕರು ದೇಶದ ಸೇವೆಗಿಂತ ಹೊಟ್ಟೆಪಾಡಿಗಾಗಿ ಸೈನ್ಯ ಸೇರಿಕೊಳ್ಳುತ್ತಾರೆಂದು ಅಪಮಾನ ಮಾಡಿದ್ದಾರೆ. ಇಂತಹ ಪರಿವಾರವನ್ನು ಸಾರ್ವಜನಿಕ ಜೀವನದಿಂದ ಶಾಶ್ವತವಾಗಿ ಕಿತ್ತೂಗೆಯಬೇಕು. ಇನ್ನೊಂದೆಡೆ ಅಪ್ಪಿತಪ್ಪಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸೈನಿಕರ ಸುಕ್ಷಾಕವಚವನೇ ತೆಗೆದು ಹಾಕುವುದರಲ್ಲಿ ಅನುಮಾನವಿಲ್ಲ. ಕಾಂಗ್ರೆಸ್‌ನವರ ಇರಾದೆ ದೇಶದ ಹಿತ ಕಾಪಾಡುವುದಲ್ಲ, ದೇಶ ಒಡೆಯುವುದೇ ಅವರ ಉದ್ದೇಶ. ದೇಶದ್ರೋಹಿಗಳ ಪರವಾಗಿ ನಿಂತಿರುವ ಇಂಥವರಿಗೆ ತಕ್ಕ ಪಾಠ ಕಲಿಸಬೇಕು ಎಂದರು.

ಕಾಂಗ್ರೆಸ್‌ ಹಾಗೂ ಕಳ್ಳರ ಮಹಾಘಟಬಂಧನ್‌ ಅವರವರ ಪರಿವಾರದ ವಿಕಾಸ, ದಲ್ಲಾಳಿಗಳ ವಿಕಾಸ ಹಾಗೂ ಬೆಲೆ ಏರಿಕೆಯ ವಿಕಾಸದ ಮೂರು ಗುರಿ ಹೊಂದಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ನಾಲ್ಕು ವಿಷಯಗಳಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ರಾಷ್ಟ್ರವಾದದ ವಿರುದಟಛಿ ಟೀಕೆ ಮಾಡುವುದು, ಮೋದಿಯನ್ನು ಬಯ್ಯುವುದು ಹಾಗೂ ವಂಶವನ್ನು ವೃದ್ಧಿಸುವುದೇ ಆಗಿದೆ.

ನವದೆಹಲಿಯ ಹವಾನಿಯಂತ್ರಣ ಕೊಠಡಿಯಲ್ಲಿ ಕುಳಿತು ಮಾತನಾಡುವವರು ಹಾಗೂ ನಮ್ಮನ್ನು ಸೋಲಿಸುವ ಕುರಿತು ಯೋಜನೆ ಮಾಡುತ್ತಿರುವವರು ಈ ಜನಸಾಗರವನ್ನು ಬಂದು
ನೋಡಬೇಕು ಎಂದರು.

ಕನ್ನಡದಲ್ಲಿ ಆರಂಭ-ಕನ್ನಡದಲ್ಲೇ ಮುಕ್ತಾಯ
ಲೋಕಸಭೆ ಚುನಾವಣೆ ಪ್ರಚಾರಾರ್ಥ ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಆಗಮಿಸಿದ ನರೇಂದ್ರ ಮೋದಿ, ಕನ್ನಡದಲ್ಲಿ ಭಾಷಣ ಆರಂಭಿಸಿ ನೆರೆದ ಲಕ್ಷಾಂತರ ಜನರಮನ ಸೆಳೆದರು. “ವಿಜಯಪುರ ಮತ್ತು ಬಾಗಲಕೋಟೆ ಕ್ಷೇತ್ರಗಳ ಆತ್ಮೀಯ ನಾಗರಿಕ ಬಂಧುಗಳೇ, ನಿಮಗೆಲ್ಲ ನಿಮ್ಮ ಚೌಕಿದಾರ್‌ ನರೇಂದ್ರ ಮೋದಿಯ ನಮಸ್ಕಾರಗಳು’ ಎಂದು ಹೇಳಿದಾಗ ನೆರೆದಿದ್ದ ಲಕ್ಷಾಂತರ ಜನರು ಮೋದಿ ಮೋದಿ ಎಂದು ಘೋಷಣೆ ಕೂಗಿದರು. ಮಧ್ಯಾಹ್ನ 2:46ಕ್ಕೆ ಹೆಲಿಕಾಪ್ಟರ್‌ ಮೂಲಕ ಸಮಾವೇಶದ ಸ್ಥಳಕ್ಕೆ ಆಗಮಿಸಿದ ಮೋದಿ, 3 ಗಂಟೆ 5 ನಿಮಿಷಕ್ಕೆ ವೇದಿಕೆ ಹತ್ತಿದರು. ಬಳಿಕ ಸಾರ್ವಜನಿಕರತ್ತ ಕೈಬೀಸಿ ಆಸೀನರಾದರು. ವಿಜಯಪುರ ಮತ್ತು ಬಾಗಲಕೋಟೆ ಬಿಜೆಪಿ ಜಿಲ್ಲಾ ಘಟಕದಿಂದ ಸನ್ಮಾನಿಸಲಾಯಿತು. ನಂತರ 3:06ಕ್ಕೆ ಭಾಷಣ ಆರಂಭಿಸಿ 3:48ಕ್ಕೆ ಭಾಷಣ ಮುಗಿಸಿದರು.

ಬೆಳ್ಳಿಯ ಬಿಲ್ಲು-ಸಿದ್ದೇಶ್ವರ ಶ್ರೀ ಫೋಟೋ ನೀಡಿ ಸನ್ಮಾನ
2014ರ ವೇಳೆ ಪ್ರಧಾನಿ ಅಭ್ಯರ್ಥಿಯಾಗಿ ಆಗಮಿಸಿದ್ದ ವೇಳೆ ಮೋದಿ ಅವರಿಗೆ ಜಿಲ್ಲೆಯಿಂದ ಬೆಳ್ಳಿಯ ಗದೆ ನೀಡಿ ಸನ್ಮಾನಿಸಲಾಗಿತ್ತು. ಈಗ ಪ್ರಧಾನಿಯಾಗಿ ಇದೇ ಸ್ಥಳದಲ್ಲಿ ಭಾಷಣ ಮಾಡಿದರು. ಅದಕ್ಕೂ ಮುಂಚೆ ಬಿಜೆಪಿ ಬಾಗಲಕೋಟೆ ಜಿಲ್ಲಾ ಘಟಕದಿಂದ ಬೆಳ್ಳಿಯ ಬಿಲ್ಲು-ಬಾಣ ನೀಡಿ ಸನ್ಮಾನಿಸಿದರೆ, ವಿಜಯಪುರ ಬಿಜೆಪಿ ಘಟಕದಿಂದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಭಾವಚಿತ್ರ, ಶಾಲು ಹೊದಿಸಿ ಸನ್ಮಾನಿಸಲಾಯಿತು.

ಟಾಪ್ ನ್ಯೂಸ್

Dharwad; ವಾರಂಟಿ ಇಲ್ಲದ ಕಾಂಗ್ರೆಸ್ ನ‌ ಗ್ಯಾರಂಟಿ ನಂಬಬೇಡಿ: ಅಣ್ಣಾಮಲೈ

Dharwad; ವಾರಂಟಿ ಇಲ್ಲದ ಕಾಂಗ್ರೆಸ್ ನ‌ ಗ್ಯಾರಂಟಿ ನಂಬಬೇಡಿ: ಅಣ್ಣಾಮಲೈ

Shobha Karandlaje; 60 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ಗೆ ಪ್ರಧಾನಿ ಅಭ್ಯರ್ಥಿ ಸಿಗ್ತಿಲ್ಲ

Shobha Karandlaje; 60 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ಗೆ ಪ್ರಧಾನಿ ಅಭ್ಯರ್ಥಿ ಸಿಗ್ತಿಲ್ಲ

1–dsdsadd

Honnavar; ಖಾಸಗಿ ಬಸ್‌ ಪಲ್ಟಿ: 2 ಸಾವು, 45ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

1-qewqeqweqw

CD ಮಾಡುವುದರಲ್ಲಿ ಡಿಕೆಶಿ ನುರಿತವರು: ಬಿಜೆಪಿ ಅಭ್ಯರ್ಥಿ ರಾಜುಗೌಡ ವ್ಯಂಗ್ಯ

1-assas-aa

Rae Bareli ರಣಕಣ; ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ: ಗೆಲುವು ಸುಲಭವೇ?

Water Supply

Water scarcity; ಮಂಗಳೂರು ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು

HDK (3)

Prajwal Case; ಮೊದಲು ರಾಹುಲ್ ಗಾಂಧಿಗೆ ನೋಟಿಸ್ ಕೊಡಬೇಕು: ಎಚ್ ಡಿಕೆ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dharwad; ವಾರಂಟಿ ಇಲ್ಲದ ಕಾಂಗ್ರೆಸ್ ನ‌ ಗ್ಯಾರಂಟಿ ನಂಬಬೇಡಿ: ಅಣ್ಣಾಮಲೈ

Dharwad; ವಾರಂಟಿ ಇಲ್ಲದ ಕಾಂಗ್ರೆಸ್ ನ‌ ಗ್ಯಾರಂಟಿ ನಂಬಬೇಡಿ: ಅಣ್ಣಾಮಲೈ

Shobha Karandlaje; 60 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ಗೆ ಪ್ರಧಾನಿ ಅಭ್ಯರ್ಥಿ ಸಿಗ್ತಿಲ್ಲ

Shobha Karandlaje; 60 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ಗೆ ಪ್ರಧಾನಿ ಅಭ್ಯರ್ಥಿ ಸಿಗ್ತಿಲ್ಲ

1–dsdsadd

Honnavar; ಖಾಸಗಿ ಬಸ್‌ ಪಲ್ಟಿ: 2 ಸಾವು, 45ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

accident

Yellapur: ಟಿಪ್ಪರ್ ಗೆ ಢಿಕ್ಕಿಯಾಗಿ ಬೈಕ್ ಸಹಸವಾರೆ ಬಾಲಕಿ ಮೃತ್ಯು

1-qewqeqweqw

CD ಮಾಡುವುದರಲ್ಲಿ ಡಿಕೆಶಿ ನುರಿತವರು: ಬಿಜೆಪಿ ಅಭ್ಯರ್ಥಿ ರಾಜುಗೌಡ ವ್ಯಂಗ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.