ಪುಣ್ಯನದಿ ಕುಮಾರಧಾರಾ ಸ್ವಚ್ಛತೆಗೆ ಚಾಲನೆ

ಕುಕ್ಕೆ: ಯುವ ಬ್ರಿಗೇಡ್‌ ವತಿಯಿಂದ 'ಕುಮಾರ ಸಂಸ್ಕಾರ' ವಿಶೇಷ ಅಭಿಯಾನ

Team Udayavani, Apr 28, 2019, 5:50 AM IST

32

ಸುಬ್ರಹ್ಮಣ್ಯ: ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹರಿಯುವ ಎರಡು ಪ್ರಮುಖ ಪುಣ್ಯ ನದಿಗಳ ಸ್ವಚ್ಛತೆ ಕಾರ್ಯವನ್ನು ಯುವ ಬ್ರಿಗೇಡ್‌ ಕುಮಾರ ಸಂಸ್ಕಾರ ಕಾರ್ಯಕ್ರಮದ ಮೂಲಕ ಹಮ್ಮಿಕೊಂಡಿದ್ದು ನದಿ ಸ್ವಚ್ಛತೆ ಕಾರ್ಯಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಯವ ಬ್ರಿಗೇಡ್‌ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಅವರ ಸಾರಥ್ಯದಲ್ಲಿ 200ಕ್ಕೂ ಅಧಿಕ ಮಂದಿ ಯುವ ಬ್ರಿಗೇಡ್‌ ಕಾರ್ಯಕರ್ತರು ನದಿ ಸ್ವಚ್ಛತೆ ಕಾರ್ಯ ಆರಂಭಿಸಿದರು. ಆರಂಭದಲ್ಲಿ ದೇವಸ್ಥಾನ ಸಮೀಪದ ದರ್ಪಣ ತೀರ್ಥ ನದಿಯಲ್ಲಿ ಸ್ವಚ್ಛತೆ ಆರಂಭಗೊಂಡಿತು. ಕಾರ್ಯಕರ್ತರು ನದಿಯಲ್ಲಿನ ತ್ಯಾಜ್ಯವನ್ನು ಹೊರತೆಗೆದರು. ಈ ವೇಳೆ ಸುಮಾರು 5ರಿಂದ 6 ಟನ್‌ಗಳಷ್ಟು ತ್ಯಾಜ್ಯ ದೊರಕಿದೆ. ಬಳಿಕ ಕುಮಾರಧಾರಾ ನದಿಯ ಸ್ನಾನಘಟ್ಟ ಹಾಗೂ ಅದರ ಮೇಲ್ಭಾಗದಲ್ಲಿ ನದಿ ಸ್ವಚ್ಛಗೊಳಿಸಲಾಯಿತು. ಯಾತ್ರಾರ್ಥಿಗಳು ಪುಣ್ಯ ಸ್ನಾನದ ವೇಳೆ ನೀರಿನಲ್ಲಿ ಎಸೆದಿದ್ದ ಬಟ್ಟೆ, ಪ್ಲಾಸ್ಟಿಕ್‌ ಇತ್ಯಾದಿ ತ್ಯಾಜ್ಯಗಳನ್ನು ನದಿ ನೀರಿನಿಂದ ಹೊರತೆಗೆಯಾಯಿತು.

ಬೆಳಗ್ಗೆ ಆರಂಭಗೊಂಡ ತ್ಯಾಜ್ಯ ಹೆಕ್ಕುವ ಕಾರ್ಯದಲ್ಲಿ ಚಕ್ರವರ್ತಿ ಸೂಲಿಬೆಲೆ ಹಾಗೂ ರಾಜ್ಯ ಯುವ ಬ್ರಿಗೇಡ್‌ ಸ್ವಯಂ ಸೇವಕರು, ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಂಡರು. ಯುವ ಬ್ರಿಗೇಡ್‌ ಜತೆ ಸ್ವಚ್ಛತೆ ಕಾರ್ಯದಲ್ಲಿ ಸೋದರಿ ನಿವೇದಿತಾ ಪ್ರತಿಷ್ಠಾನದ ಮಹಿಳಾ ಕಾರ್ಯಕರ್ತರು ಕೈ ಜೋಡಿಸಿದರು. ನಮ್ಮ ಸುಬ್ರಹ್ಮಣ್ಯ ಯುವ ಘಟಕದ ಸದಸ್ಯರು ಇವರಿಗೆ ಪೂರ್ಣ ಸಹಕಾರ ನೀಡಿದರು.

ಸ್ವಚ್ಛತೆಯಲ್ಲಿ ತೊಡಗಿದ ಯುವ ಬ್ರಿಗೇಡ್‌ ಸ್ವಯಂ ಸೇವಕರಿಗೆ ಉಪಾಹಾರ ಹಾಗೂ ಭೋಜನದ ವ್ಯವಸ್ಥೆಯನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಮಾಡಲಾಗಿತ್ತು. ಸ್ಥಳಿಯ ಗ್ರಾ.ಪಂ. ಸಂಪೂರ್ಣ ಸಹಕಾರ ನೀಡಿದೆ. ಪಿಡಿಒ ಮುತ್ತಪ್ಪ ಹಾಗೂ ಪಂಚಾಯತ್‌ ಕಾರ್ಯದರ್ಶಿ ಮೋನಪ್ಪ ಡಿ. ದಿನವಿಡೀ ತಂಡದ ಜತೆಗಿದ್ದು, ಸಂಗ್ರಹಿಸಿದ ತ್ಯಾಜ್ಯ ವಿಲೇವಾರಿಗೆ ವ್ಯವಸ್ಥೆ ಮಾಡಿದರು. ಸಂಗ್ರಹಿಸಿದ ಟನ್‌ಗಟ್ಟಲೆ ತ್ಯಾಜ್ಯವನ್ನು ಪಂಚಾಯತಿನ ತ್ಯಾಜ್ಯ ಸಂಗ್ರಹ ಘಟಕಕ್ಕೆ ಒಯ್ದು ಶೇಖರಿಸಿಡಲಾಯಿತು.

ಕ್ಷೇತ್ರದಲ್ಲಿ ಪುಣ್ಯ ನದಿಗಳ ಸ್ಚಚ್ಛತೆ ಕಾರ್ಯಕ್ರಮವು ರವಿವಾರವೂ ನಡೆ ಯಲಿದೆ. ಎರಡನೆ ದಿನ ನಡೆಯುವ ಸ್ವಚ್ಛತೆ ಕಾರ್ಯದಲ್ಲಿ ಸಾವಿರಕ್ಕೂ ಅಧಿಕ ಸ್ವಯಂ ಸೇವಕರು, ಕಾರ್ಯಕರ್ತರು ಪಾಲ್ಗೊಳ್ಳಲಿ ದ್ದಾರೆ, ಯುವ ಬ್ರಿಗೇಡ್‌ ಇದುವರೆಗೆ ಕಾವೇರಿ, ಭೀಮ, ಧರ್ಮಸ್ಥಳದ ನೇತ್ರಾವತಿ ಸಹಿತ ಏಳು ಪ್ರಮುಖ ನದಿ ಹಾಗೂ 150ಕ್ಕೂ ಹೆಚ್ಚು ಕಲ್ಯಾಣಿಗಳ ಸ್ವಚ್ಛತೆತೆ ಕಾರ್ಯ ನಡೆಸಿದೆ. ಜತೆಗೆ ನದಿಗಳ ಸ್ವಚ್ಛತೆ ಕುರಿತು ಜನತೆಯಲ್ಲಿ ಜಾಗೃತಿ ಕೂಡ ನಡೆಸಲಾಗಿದೆ ಎಂದು ಯುವಬ್ರಿಗೇಡ್‌ ತಂಡದ ಮನೀಶ್‌ ಗೂನಡ್ಕ ಮಾಹಿತಿ ನೀಡಿದರು.

ಟಾಪ್ ನ್ಯೂಸ್

ಏಕಾಏಕಿ ಯು-ಟರ್ನ್ ತೆಗೆದ ಟ್ರಕ್ ಚಾಲಕ… ಕಾರು ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಮೃತ್ಯು

ಏಕಾಏಕಿ ಯು-ಟರ್ನ್ ತೆಗೆದ ಟ್ರಕ್ ಚಾಲಕ… ಕಾರು ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಮೃತ್ಯು

6-bantwala

Bantwala: ನೀರಿನ ಅಭಾವದಿಂದ ಕೃಷಿ ಹಾನಿ; ಮನನೊಂದು ಕೃಷಿಕ ಆತ್ಮಹತ್ಯೆ

Viral: 1 ಗಂಟೆಯಲ್ಲಿ 1,123 ಮರಗಳನ್ನು ಅಪ್ಪಿಕೊಂಡು ಗಿನ್ನೆಸ್​ ವಿಶ್ವ ದಾಖಲೆ ಬರೆದ ಯುವಕ

Viral: 1 ಗಂಟೆಯಲ್ಲಿ 1,123 ಮರಗಳನ್ನು ಅಪ್ಪಿಕೊಂಡು ಗಿನ್ನೆಸ್​ ವಿಶ್ವ ದಾಖಲೆ ಬರೆದ ಯುವಕ

3-kollegala

Kollegala: ಖಾಸಗಿ ಬಸ್ ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Revanna 2

Extended;ಎಚ್.ಡಿ.ರೇವಣ್ಣ ನ್ಯಾಯಾಂಗ ಬಂಧನ ಮೇ 14ರವರೆಗೆ ವಿಸ್ತರಣೆ

Bhupal: ʼಭೂಪೇಂದ್ರ ಜೋಗಿʼ ರೀಲ್ಸ್‌ ಖ್ಯಾತಿಯ ವ್ಯಕ್ತಿಗೆ ಅಪರಿಚಿತರಿಂದ ಚಾಕುವಿನಿಂದ ಹಲ್ಲೆ

Bhupal: ʼಭೂಪೇಂದ್ರ ಜೋಗಿʼ ರೀಲ್ಸ್‌ ಖ್ಯಾತಿಯ ವ್ಯಕ್ತಿಗೆ ಅಪರಿಚಿತರಿಂದ ಚಾಕುವಿನಿಂದ ಹಲ್ಲೆ

1-wwewewqe

Haryana ಬಿಜೆಪಿ ಸರಕಾರಕ್ಕೆ ಶಾಕ್: ಕೈಗೆ ಬೆಂಬಲ ನೀಡಿದ 3 ಪಕ್ಷೇತರರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-bantwala

Bantwala: ನೀರಿನ ಅಭಾವದಿಂದ ಕೃಷಿ ಹಾನಿ; ಮನನೊಂದು ಕೃಷಿಕ ಆತ್ಮಹತ್ಯೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Puttur ಜಾನಪದ ವಿದ್ವಾಂಸ ಡಾ| ಪಾಲ್ತಾಡಿ ಇನ್ನಿಲ್ಲ

Puttur ಜಾನಪದ ವಿದ್ವಾಂಸ ಡಾ| ಪಾಲ್ತಾಡಿ ಇನ್ನಿಲ್ಲ

18

Benjana Padavu: ನೇಣು ಬಿಗಿದು ಆತ್ಮಹತ್ಯೆ

17-

Bantwala: ರಾಂಗ್‌ಸೈಡಿನಲ್ಲಿ ಬಂದು ಎರಡು ಬೈಕ್‌ಗಳಿಗೆ  ಢಿಕ್ಕಿ ಹೊಡೆದ ಲಾರಿ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ಏಕಾಏಕಿ ಯು-ಟರ್ನ್ ತೆಗೆದ ಟ್ರಕ್ ಚಾಲಕ… ಕಾರು ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಮೃತ್ಯು

ಏಕಾಏಕಿ ಯು-ಟರ್ನ್ ತೆಗೆದ ಟ್ರಕ್ ಚಾಲಕ… ಕಾರು ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಮೃತ್ಯು

ಪ್ರಜ್ವಲ್‌ ಪ್ರಕರಣ ತನಿಖೆಯಲ್ಲಿದ್ದರೂ ಬಿಜೆಪಿಯಿಂದ ರಾಜಕೀಯ:ಸಚಿವ ಬಿ. ನಾಗೇಂದ್ರ

ಪ್ರಜ್ವಲ್‌ ಪ್ರಕರಣ ತನಿಖೆಯಲ್ಲಿದ್ದರೂ ಬಿಜೆಪಿಯಿಂದ ರಾಜಕೀಯ:ಸಚಿವ ಬಿ. ನಾಗೇಂದ್ರ

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಹಾಸಭೆ

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಹಾಸಭೆ

6-bantwala

Bantwala: ನೀರಿನ ಅಭಾವದಿಂದ ಕೃಷಿ ಹಾನಿ; ಮನನೊಂದು ಕೃಷಿಕ ಆತ್ಮಹತ್ಯೆ

Viral: 1 ಗಂಟೆಯಲ್ಲಿ 1,123 ಮರಗಳನ್ನು ಅಪ್ಪಿಕೊಂಡು ಗಿನ್ನೆಸ್​ ವಿಶ್ವ ದಾಖಲೆ ಬರೆದ ಯುವಕ

Viral: 1 ಗಂಟೆಯಲ್ಲಿ 1,123 ಮರಗಳನ್ನು ಅಪ್ಪಿಕೊಂಡು ಗಿನ್ನೆಸ್​ ವಿಶ್ವ ದಾಖಲೆ ಬರೆದ ಯುವಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.