ವರದಿ ಮಾಡಲು ಹೋದವರ ಮೇಲೆ ಕಾಡಾನೆ ದಾಳಿ… ಕ್ಯಾಮೆರಾಮೆನ್ ಮೃತ್ಯು, ವರದಿಗಾರ, ಚಾಲಕ ಪಾರು

Team Udayavani, May 8, 2024, 3:19 PM IST

ವರದಿ ಮಾಡಲು ಹೋದವರ ಮೇಲೆ ಕಾಡಾನೆ ದಾಳಿ… ಕ್ಯಾಮೆರಾಮೆನ್ ಮೃತ್ಯು, ವರದಿಗಾರ, ಚಾಲಕ ಪಾರು

ಪಾಲಕ್ಕಾಡ್: ಕೇರಳದ ಹಲವು ಕಡೆಗಳಲ್ಲಿ ಕಾಡಾನೆಗಳ ಹಾವಳಿ ಜೋರಾಗಿದ್ದು ಇದೀಗ ಕಾಡಾನೆ ದಾಳಿಯಿಂದ ಸುದ್ದಿ ವಾಹಿನಿಯ ಕ್ಯಾಮೆರಾಮೆನ್ ಒಬ್ಬರು ಮೃತಪಟ್ಟ ಘಟನೆ ಕೇರಳದಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಎ.ವಿ.ಮುಕೇಶ್ (34) ಎನ್ನಲಾಗಿದ್ದು ಮುಕೇಶ್ ಕೇರಳದ ಮಾತೃಭೂಮಿ ಸುದ್ದಿವಾಹಿನಿಯ ಕ್ಯಾಮೆರಾ ಮೆನ್ ಆಗಿದ್ದಾರೆ.

ಪಾಲಕ್ಕಾಡ್‌ನ ಕೊಟ್ಟೇಕಾಡ್‌ನಲ್ಲಿ ಕಾಡಾನೆಗಳ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಈ ಸ್ಥಳವು ಕಾಡು ಪ್ರಾಣಿಗಳ ದಾಳಿಗೆ ಹೆಸರುವಾಸಿಯಾಗಿದೆ.

ಮಾತೃಭೂಮಿ ನ್ಯೂಸ್‌ನಲ್ಲಿ ಕೆಲಸ ನಿರ್ವಹಿಸುತ್ತಿರುವ ಎವಿ ಮುಖೇಶ್ ಅವರು ವರದಿಗಾರರ ಜೊತೆ ಕೊಟ್ಟೇಕಾಡ್‌ ನಲ್ಲಿ ಕಾಡಾನೆ ಹಿಂಡಿನ ಚಲನವಲನದ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದಾಗ ಕಾಡಾನೆ ದಾಳಿ ಮಾಡಿದೆ ಕೂಡಲೇ ಮುಕೇಶ್ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ ಆದರೆ ದುರದೃಷ್ಟವಶಾತ್ ಆಯತಪ್ಪಿ ಬಿದ್ದಿದ್ದಾರೆ ಈ ವೇಳೆ ಆನೆ ಮುಕೇಶ್ ಮೇಲೆ ದಾಳಿ ನಡೆಸಿ ಗಂಭೀರವಾಗಿ ಘಾಸಿಗೊಳಿಸಿದೆ ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಕಾಡಾನೆ ದಾಳಿ ನಡೆಸಿದ ವೇಳೆ ಮುಕೇಶ್ ಜೊತೆಗಿದ್ದ ವರದಿಗಾರ ಹಾಗೂ ಚಾಲಕ ಆನೆ ದಾಳಿಯಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ.

ಮುಕೇಶ್ ಮಲಪ್ಪುರಂನ ಪರಪ್ಪನಂಗಡಿ ಚೆಟ್ಟಿಪಾಡಿ ನಿವಾಸಿಗಳಾದ ಉನ್ನಿ ಮತ್ತು ದೇವಿ ದಂಪತಿಯ ಪುತ್ರನಾಗಿದ್ದಾನೆ. ಮುಕೇಶ್ ಪತ್ನಿ ತಿಶಾ ಅವರನ್ನು ಅಗಲಿದ್ದಾರೆ.

ಸದ್ಯ ಮುಕೇಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪಾಲಕ್ಕಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ದೆಹಲಿ ಬ್ಯೂರೋದಲ್ಲಿ ಬಹಳ ವರ್ಷಗಳ ಕಾಲ ಕೆಲಸ ನಿರ್ವಹಿಸಿದ್ದ ಮುಕೇಶ್ ಕಳೆದ ವರ್ಷ ಪಾಲಕ್ಕಾಡ್ ಬ್ಯೂರೋಗೆ ವರ್ಗ ಹೊಂದಿದ್ದರು.

ಇದನ್ನೂ ಓದಿ:Politics: ಪ್ರಜ್ವಲ್‌ ರೇವಣ್ಣ ಪ್ರಕರಣಕ್ಕೆ ಡಿಕೆಶಿಯೇ ಮಾಸ್ಟರ್ ಮೈಂಡ್; ಸಿ.ಪಿ.ಯೋಗೇಶ್ವರ್

ಟಾಪ್ ನ್ಯೂಸ್

Legislative Council Polls; ಪದವೀಧರ ಮತದಾರರ ನಿರಾಸಕ್ತಿ!

Legislative Council Polls; ಪದವೀಧರ ಮತದಾರರ ನಿರಾಸಕ್ತಿ!

Rohini Sindhuri ವೇತನದಲ್ಲಿ 77 ಸಾವಿರ ರೂ. ಕಡಿತಕ್ಕೆ ಸರಕಾರದ ಕಾರ್ಯದರ್ಶಿಗೆ ಪತ್ರ

Rohini Sindhuri ವೇತನದಲ್ಲಿ 77 ಸಾವಿರ ರೂ. ಕಡಿತಕ್ಕೆ ಸರಕಾರದ ಕಾರ್ಯದರ್ಶಿಗೆ ಪತ್ರ

Manipal: ಕೆಎಂಸಿ ಆಸ್ಪತ್ರೆಗೆ ಮತ್ತೊಂದು ಮನ್ನಣೆ

Manipal: ಕೆಎಂಸಿ ಆಸ್ಪತ್ರೆಗೆ ಮತ್ತೊಂದು ಮನ್ನಣೆ

ಬೇಡಿಕೆಗಳ ಈಡೇರಿಕೆಗಾಗಿ ಪ್ರಾಮಾಣಿಕ, ಕ್ರಿಯಾಶೀಲವಾಗಿ ದುಡಿಯುವೆ: ರಘುಪತಿ ಭಟ್‌

ಬೇಡಿಕೆಗಳ ಈಡೇರಿಕೆಗಾಗಿ ಪ್ರಾಮಾಣಿಕ, ಕ್ರಿಯಾಶೀಲವಾಗಿ ದುಡಿಯುವೆ: ರಘುಪತಿ ಭಟ್‌

ಅಭಿವೃದ್ಧಿ ಕಾರ್ಯಗಳಿಗೆ ಕಾಂಗ್ರೆಸ್‌ ಅನುದಾನ ನೀಡಿಲ್ಲ; ಪ್ರತಾಪಸಿಂಹ ನಾಯಕ್‌

ಅಭಿವೃದ್ಧಿ ಕಾರ್ಯಗಳಿಗೆ ಕಾಂಗ್ರೆಸ್‌ ಅನುದಾನ ನೀಡಿಲ್ಲ; ಪ್ರತಾಪಸಿಂಹ ನಾಯಕ್‌

Road Mishap ಸುಳ್ಯ: ಬೊಲೆರೊ -ಕಾರು ಅಪಘಾತ; ಗಾಯ

Road Mishap ಸುಳ್ಯ: ಬೊಲೆರೊ -ಕಾರು ಅಪಘಾತ; ಗಾಯ

Missing Case ಹಲುವಳ್ಳಿ: ಮಹಿಳೆ ನಾಪತ್ತೆ

Missing Case ಹಲುವಳ್ಳಿ: ಮಹಿಳೆ ನಾಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mehbooba Mufti: ನೀತಿ ಸಂಹಿತೆ ಉಲ್ಲಂಘನೆ ಆರೋಪ… ಮೆಹಬೂಬಾ ಮುಫ್ತಿ ವಿರುದ್ಧ ಕೇಸು

Mehbooba Mufti: ನೀತಿ ಸಂಹಿತೆ ಉಲ್ಲಂಘನೆ ಆರೋಪ… ಮೆಹಬೂಬಾ ಮುಫ್ತಿ ವಿರುದ್ಧ ಕೇಸು

TDS ಹೊರೆ ತಪ್ಪಿಸಬೇಕಂದ್ರೆ ಮೇ. 31ರೊಳಗೆ ಪ್ಯಾನ್‌ – ಆಧಾರ್‌ ಲಿಂಕ್‌ ಮಾಡಿ

TDS ಹೊರೆ ತಪ್ಪಿಸಬೇಕಂದ್ರೆ ಮೇ. 31ರೊಳಗೆ ಪ್ಯಾನ್‌ – ಆಧಾರ್‌ ಲಿಂಕ್‌ ಮಾಡಿ

Panaji: ಜೂ. 4, 5ಕ್ಕೆ ಗೋವಾ ರಾಜ್ಯಕ್ಕೆ ಮುಂಗಾರು ಪ್ರವೇಶ!

Panaji: ಜೂ. 4, 5ಕ್ಕೆ ಗೋವಾ ರಾಜ್ಯಕ್ಕೆ ಮುಂಗಾರು ಪ್ರವೇಶ

school

School Reopen: ಈ ರಾಜ್ಯದಲ್ಲಿ ಲೋಕಸಭೆ ಚುನಾವಣಾ ಫಲಿತಾಂಶ ದಿನದಂದೇ ಶಾಲಾ ಕಾಲೇಜು ಆರಂಭ…

Panaji: ಗೆಳೆಯರ ಜೊತೆ ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಮೃತ್ಯು, ಇಬ್ಬರ ರಕ್ಷಣೆ

Panaji: ಗೆಳೆಯರ ಜೊತೆ ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಮೃತ್ಯು, ಇಬ್ಬರ ರಕ್ಷಣೆ

MUST WATCH

udayavani youtube

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕನ ಆತ್ಮಹ*ತ್ಯೆ ಪ್ರಕರಣ,ಅಧಿಕಾರಿಗಳ ಭೇಟಿ

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

ಹೊಸ ಸೇರ್ಪಡೆ

Legislative Council Polls; ಪದವೀಧರ ಮತದಾರರ ನಿರಾಸಕ್ತಿ!

Legislative Council Polls; ಪದವೀಧರ ಮತದಾರರ ನಿರಾಸಕ್ತಿ!

Manipal: ಕೆಎಂಸಿ ಆಸ್ಪತ್ರೆಗೆ ಮತ್ತೊಂದು ಮನ್ನಣೆ

Manipal: ಕೆಎಂಸಿ ಆಸ್ಪತ್ರೆಗೆ ಮತ್ತೊಂದು ಮನ್ನಣೆ

Rohini Sindhuri ವೇತನದಲ್ಲಿ 77 ಸಾವಿರ ರೂ. ಕಡಿತಕ್ಕೆ ಸರಕಾರದ ಕಾರ್ಯದರ್ಶಿಗೆ ಪತ್ರ

Rohini Sindhuri ವೇತನದಲ್ಲಿ 77 ಸಾವಿರ ರೂ. ಕಡಿತಕ್ಕೆ ಸರಕಾರದ ಕಾರ್ಯದರ್ಶಿಗೆ ಪತ್ರ

ಬೇಡಿಕೆಗಳ ಈಡೇರಿಕೆಗಾಗಿ ಪ್ರಾಮಾಣಿಕ, ಕ್ರಿಯಾಶೀಲವಾಗಿ ದುಡಿಯುವೆ: ರಘುಪತಿ ಭಟ್‌

ಬೇಡಿಕೆಗಳ ಈಡೇರಿಕೆಗಾಗಿ ಪ್ರಾಮಾಣಿಕ, ಕ್ರಿಯಾಶೀಲವಾಗಿ ದುಡಿಯುವೆ: ರಘುಪತಿ ಭಟ್‌

ಅಭಿವೃದ್ಧಿ ಕಾರ್ಯಗಳಿಗೆ ಕಾಂಗ್ರೆಸ್‌ ಅನುದಾನ ನೀಡಿಲ್ಲ; ಪ್ರತಾಪಸಿಂಹ ನಾಯಕ್‌

ಅಭಿವೃದ್ಧಿ ಕಾರ್ಯಗಳಿಗೆ ಕಾಂಗ್ರೆಸ್‌ ಅನುದಾನ ನೀಡಿಲ್ಲ; ಪ್ರತಾಪಸಿಂಹ ನಾಯಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.