ಮೂಲ ಸೌಕರ್ಯವಿಲ್ಲದ ಕುಮಟಾ ಹೊಸ ಬಸ್‌ ನಿಲ್ದಾಣ


Team Udayavani, May 3, 2019, 4:01 PM IST

uttar-kannada-2-tdy..

ಕುಮಟಾ: ದಿನನಿತ್ಯ ಸಾವಿರಾರು ಪ್ರಯಾಣಿಕರು ಬಂದು ಹೋಗುವ ಪಟ್ಟಣದ ಹೊಸ ಬಸ್‌ ನಿಲ್ದಾಣ ಸುಸಜ್ಜಿತವಾಗಿದ್ದರೂ, ಕೆಲ ಮೂಲ ಸೌಕರ್ಯ ಹಾಗೂ ಸ್ವಚ್ಛತೆಯಿಂದ ದೂರ ಉಳಿದಿದೆ.

ಕುಮಟಾ ಬಸ್‌ ನಿಲ್ದಾಣ ಸದಾ ಪ್ರಯಾಣಿಕರಿಂದ ಗಿಜಿಗುಡುತ್ತಿರುತ್ತದೆ. ಜಿಲ್ಲೆ ಹಾಗೂ ರಾಜ್ಯದ ಎಲ್ಲ ಭಾಗಗಳಿಗೆ ಸಾರಿಗೆ ಸಂಚಾರಕ್ಕೆ ಕುಮಟಾ ಕೇಂದ್ರ ಸ್ಥಾನವಾಗುವುದರಿಂದ ಹಾಗೂ ರೈಲು ನಿಲ್ದಾಣವೂ ಸನಿಹವೇ ಇರುವುದರಿಂದ ದೂರ ಸಂಚಾರದ ಪ್ರಯಾಣಿಕರ ಓಡಾಟ ಬಹಳ ಇರುತ್ತದೆ. ಕೆಲ ವರ್ಷದ ಹಿಂದೆ ತರಾತುರಿಯಲ್ಲಿ ಹೊಸ ಬಸ್‌ ನಿಲ್ದಾಣ ಕಾಮಗಾರಿ ಮುಗಿಸಿ ಉದ್ಘಾಟನೆ ಮಾಡಿದ ಸಂದರ್ಭದಲ್ಲಿ ನಿಲ್ದಾಣದಲ್ಲಿ ಹಾಕಲಾದ ಅಸಮರ್ಪಕ ಆಸನ ವ್ಯವಸ್ಥೆ ಬಗೆಗೆ ಜನರಿಂದ ಸಾಕಷ್ಟು ಅಸಮಾಧಾನ ವ್ಯಕ್ತವಾಗಿತ್ತು. ಅಷ್ಟೊಂದು ದೊಡ್ಡ ನಿಲ್ದಾಣದೊಳಗೆ ಕೇವಲ ಎರಡು ಸಾಲುಗಳಲ್ಲಿ ಕಿರಿದಾದ ಮತ್ತು 4-5 ಮಂದಿ ಕುಳಿತುಕೊಳ್ಳಬಹುದಾದ ಕಲ್ಲಿನ ಹಲಗೆಗಳನ್ನು ಬೇಂಚಿನ ಮಾದರಿಯಲ್ಲಿ ಹಾಕಲಾಗಿದೆ. ನಿಲ್ದಾಣದಲ್ಲಿ ಒಟ್ಟೂ 16 ಬೇಂಚುಗಳನ್ನು ಹಾಕಲಾಗಿದ್ದು 70-80 ಮಂದಿ ಮಾತ್ರ ಕೂರಬಹುದಾಗಿದೆ. ಮುಖ್ಯವಾಗಿ ಇಂಥ ಬೇಂಚುಗಳಲ್ಲಿ ಪುರುಷರು ಹಾಗೂ ಮಹಿಳೆಯರು ಒಟ್ಟಿಗೆ ಕುಳಿತುಕೊಳ್ಳುವುದಕ್ಕೆ ಮುಜುಗರ ಪಡುವಷ್ಟು ಕಿರಿದಾಗಿದೆ.

ಪ್ರಯಾಣಿಕರಿಗೆ ಅಗತ್ಯವಿರುವ ಶೌಚಾಲಯ ಹಾಗೂ ಶುದ್ಧ ಕುಡಿಯುವ ನೀರಿನ ಸಮಸ್ಯೆ ಇತ್ತೀಚಿಗೆ ಹೆಚ್ಚಾಗಿ ಕಾಡತೊಡಗಿದೆ. ಇರುವ ಕುಡಿಯುವ ನೀರಿನ ಘಟಕವೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ನಿಲ್ದಾಣದ ಸುತ್ತಲೂ ಕಸ ಹಾಗೂ ಪ್ಲಾಸ್ಟಿಕ್‌ಗಳು ತುಂಬಿ ಗಬ್ಬು ನಾರುತ್ತಿದೆ. ಶೌಚಾಲಯದ ನಿರ್ವಹಣೆ ಸರಿಯಾಗಿಲ್ಲದೇ ಕೆಲ ಶೌಚಾಲಯಗಳ ಬಾಗಿಲನ್ನು ಮುಚ್ಚಲಾಗಿದೆ. ಇನ್ನು ತೆರೆದ ಶೌಚಾಲಯವೂ ಸ್ವಚ್ಛತೆಯಿಲ್ಲದೆ, ಮೂತ್ರದ ವಾಸನೆ ಮೂಗಿಗೆ ರಾಚುವಂತಾಗಿದೆ. ಸಂಬಂಧಪಟ್ಟವರು ಯಾರೂ ಇಂಥ ದಿನನಿತ್ಯದ ಸಮಸ್ಯೆ ಬಗ್ಗೆ ಗಮನಕೊಟ್ಟಿಲ್ಲದಿರುವುದು ಎದ್ದು ಕಾಣುತ್ತಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲೇ ಹೊಸ ಬಸ್‌ ನಿಲ್ದಾಣ ಇರುವುದರಿಂದ ಹಾಗೂ ಬಸ್‌ಗಳ ಆಗಮನ ನಿರ್ಗಮನದ ದ್ವಾರ ಅವೈಜ್ಞಾನಿಕವಾಗಿರುವುದರಿಂದ ಹೆದ್ದಾರಿಯಲ್ಲಿ ಟ್ರಾಫಿಕ್‌ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಬಸ್‌ ನಿಲ್ದಾಣ ಹೆದ್ದಾರಿ ಪಕ್ಕದಲ್ಲಿ ಬಂದ ನಂತರ ಇಲ್ಲಿ ಬಹಳ ಸಮಸ್ಯೆಯುಂಟಾಗಿದೆ. ದಿನದ ಎಲ್ಲಾ ಸಮಯದಲ್ಲೂ ಇಲ್ಲಿ ಟ್ರಾಫಿಕ್‌ ಕಿರಿಕಿರಿಯಾಗುತ್ತಿದ್ದು ತುರ್ತಾಗಿ ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕಿದೆ. ಬಸ್‌ ಚಾಲಕರಿಗೂ ಇದು ಸೂಕ್ಷ್ಮ ಸ್ಥಳವೇ ಆಗಿದೆ. ಸ್ವಲ್ಪ ಗಮನ ತಪ್ಪಿದರೂ ಅಪಘಾತವಾಗುತ್ತದೆ. ಅನಾಹುತವಾಗುವ ಮುನ್ನ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳುವದು ಸಾರ್ವಜನಿಕರ ಹಿತದೃಷ್ಟಿಯಿಂದ ಒಳಿತು. – ರವೀಂದ್ರ ಭಟ್ಟ ಸೂರಿ. ಅಧ್ಯಕ್ಷರು, ಸರಕಾರಿ ನೌಕರರ ಸಂಘ. ಕುಮಟಾ
•ಕೆ. ದಿನೇಶ ಗಾಂವ್ಕರ

ಟಾಪ್ ನ್ಯೂಸ್

1-assas-aa

Rae Bareli ರಣಕಣ; ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ: ಗೆಲುವು ಸುಲಭವೇ?

Water Supply

Water scarcity; ಮಂಗಳೂರು ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು

HDK (3)

Prajwal Case; ಮೊದಲು ರಾಹುಲ್ ಗಾಂಧಿಗೆ ನೋಟಿಸ್ ಕೊಡಬೇಕು: ಎಚ್ ಡಿಕೆ ಆಗ್ರಹ

jameer

Pakistan ಜಿಂದಾಬಾದ್ ಅಂದವರನ್ನು ಡಿಶ್ಯುಂ ಡಿಶ್ಯುಂ ಎಂದು ಶೂಟ್ ಮಾಡಬೇಕು: ಜಮೀರ್

siddanna-2

Prajwal Revanna ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿದ್ದರಾಮಯ್ಯ ಕಿಡಿ

1-wddsa-das

Toxic: ಯಶ್ ಸಿನಿಮಾದಿಂದ ಹೊರಹೋದ ಕರೀನಾ ಕಪೂರ್?

kore

KLE ಸಂಸ್ಥೆ ಬೆಳೆದಿದ್ದು ದಾನಿಗಳಿಂದ, ಕಾಂಗ್ರೆಸ್‍ನಿಂದ ಅಲ್ಲ‌: ಪ್ರಭಾಕರ ಕೋರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwqewqe

Yallapur;ಚುನಾವಣ ಸಿಬಂದಿಗಳ ತರಬೇತಿಯಲ್ಲಿ ಗದ್ದಲದ ವಾತಾವರಣ

ರೈತರಿಗೆ ತಂತ್ರಜ್ಞಾನದ ಕೊಡುಗೆ ಕೊಟ್ಟರೆ ಪ್ರಗತಿ ಸಾಧ್ಯ: ಹಂದೆ

ರೈತರಿಗೆ ತಂತ್ರಜ್ಞಾನದ ಕೊಡುಗೆ ಕೊಟ್ಟರೆ ಪ್ರಗತಿ ಸಾಧ್ಯ: ಹಂದೆ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

1-sirsi

Modi ಬಂದಿದ್ದು ಕಾಂಗ್ರೆಸ್‌ಗೆ ಅಡ್ಡ ಪರಿಣಾಮ ಏನಿಲ್ಲ: ಭೀಮಣ್ಣ ನಾಯ್ಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-assas-aa

Rae Bareli ರಣಕಣ; ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ: ಗೆಲುವು ಸುಲಭವೇ?

Water Supply

Water scarcity; ಮಂಗಳೂರು ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು

HDK (3)

Prajwal Case; ಮೊದಲು ರಾಹುಲ್ ಗಾಂಧಿಗೆ ನೋಟಿಸ್ ಕೊಡಬೇಕು: ಎಚ್ ಡಿಕೆ ಆಗ್ರಹ

jameer

Pakistan ಜಿಂದಾಬಾದ್ ಅಂದವರನ್ನು ಡಿಶ್ಯುಂ ಡಿಶ್ಯುಂ ಎಂದು ಶೂಟ್ ಮಾಡಬೇಕು: ಜಮೀರ್

1-CKDY

Chikkodi:ಅಮಿತ್ ಶಾ ಸಮ್ಮುಖದಲ್ಲಿ ವಿವೇಕರಾವ್ ಪಾಟೀಲ ಬಿಜೆಪಿ ಸೇರ್ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.