ಅಲೆಮಾರಿಗಳ ಅಡ್ಡಾದಿಡ್ಡಿ ಅಲೆದಾಟ

ಚಿತ್ರ ವಿಮರ್ಶೆ

Team Udayavani, May 4, 2019, 3:00 AM IST

LOFERS

ನಾಲ್ವರು ಹುಡುಗರು, ಮೂವರು ಹುಡುಗಿಯರು. ಅವರೆಲ್ಲ ಯಾರಿಗೂ ಬೇಡದದವರು..! ಇಷ್ಟು ಹೇಳಿದ ಮೇಲೆ ಇದು ಅನಾಥರ ಕಥೆ ಎಂಬ ಕಲ್ಪನೆ ಬರಬಹುದು. ಆದರೆ, ನಿರ್ದೇಶಕರ ಕಲ್ಪನೆಯೇ ಬೇರೆ. ಹೊಸದೇನನ್ನೋ ಹೇಳುವ ಮೂಲಕ ಪ್ರೇಕ್ಷಕರ ಮೊಗದಲ್ಲಿ ಮಂದಹಾಸ ಮೂಡಿಸಿಬಿಡುತ್ತಾರೆ ಎಂಬ ನಂಬಿಕೆಯೇನಾದರೂ ಇದ್ದರೆ ಅದನ್ನು ಮರೆತುಬಿಡಬೇಕು.

ಅನುಭವಿ ನಿರ್ದೇಶಕರ ಕೈಯಲ್ಲಿ “ಲೋಫ‌ರ್ಸ್‌’ ಸ್ಥಿತಿಗತಿಯನ್ನಂತೂ ಹೇಳತೀರದು! ಒಂದು ಚಿತ್ರದಲ್ಲಿ ಏನೆಲ್ಲಾ ಇರಬೇಕೋ ಅದೆಲ್ಲವೂ ಈ ಚಿತ್ರದಲ್ಲಿದೆ. ಆದರೆ, ಅದ್ಯಾವುದೂ ಪರಿಣಾಮಕಾರಿಯಾಗಿಲ್ಲ ಅನ್ನೋದೇ ವಾಸ್ತವ ಸತ್ಯ. ಇಲ್ಲಿ ಕಥೆ ಹುಡುಕುವಂತಿಲ್ಲ. ಯಾಕೆಂದರೆ, ಹೇಳಿಕೊಳ್ಳುವಂತಹ ಕಥೆಯೂ ಇಲ್ಲಿಲ್ಲ.

ಕನ್ನಡದಲ್ಲೇ ಇಂತಹ ಕಥಾಹಂದರ ಇರುವ ಅನೇಕ ಸಿನಿಮಾಗಳು ಬಂದು ಹೋಗಿವೆ. ನಿರ್ದೇಶಕರಲ್ಲಿ ಕಾಮಿಡಿ ಸೆನ್ಸ್‌ ಹೆಚ್ಚು. ಹಾಗಾಗಿ, ತೆರೆಯ ಮೇಲೆ ಎಲ್ಲವೂ “ಕಾಮಿಡಿ ಪೀಸ್‌’ ಆಗಿಯೇ ಕಾಣುತ್ತದೆ. ಒಂದು ಸಿಂಪಲ್‌ ಕಥೆಗೆ ಇನ್ನಷ್ಟು ಒತ್ತು ಕೊಡುವ ಅಗತ್ಯವಿತ್ತು. ನಿರೂಪಣೆಯಲ್ಲೂ ಅವಸರ ಎದ್ದು ಕಾಣುತ್ತದೆ.

ಫೈಟು, ಸಾಂಗ್‌, ಒಂದಷ್ಟು ಗ್ಲಾಮರಸ್‌ ಪಾತ್ರಗಳು ಇದು ಒಂದು ಸಿನಿಮಾದ ಸಿದ್ಧಸೂತ್ರ. ಅದು ಇಲ್ಲೂ ಮುಂದುವರೆದಿದೆ. ಆದರೆ, ಅದ್ಯಾವುದೂ ಗಮನಸೆಳೆಯಲ್ಲ ಎಂಬುದೇ ಬೇಸರದ ಸಂಗತಿ. ಪ್ರೇಕ್ಷಕ ಈಗ ಬುದ್ಧಿವಂತ. ತೆರೆ ಮೇಲೆ ಮೂಡುವ ಕೆಲ ದೃಶ್ಯಗಳೇ ಸಾಕು, ಸಿನಿಮಾ ಯಾವ ಲೆವೆಲ್‌ಗೆ ಇದೆ ಅನ್ನುವುದನ್ನು ಅಳೆದುಬಿಡುತ್ತಾನೆ.

ಇಲ್ಲೂ ಕೂಡ “ಲೋಫ‌ರ್ಸ್‌’ ಲೆವೆಲ್‌ ಆರಂಭದಲ್ಲೇ ಗೊತ್ತಾಗುತ್ತದೆ. ನಿರ್ದೇಶಕರ ಕಲ್ಪನೆಯ ಪಾತ್ರಗಳಿಗೆ ಯಾವುದೇ ತಳ‌ಬುಡ ಇಲ್ಲ. ಕ್ಷಣಿಕ ಸುಖ-ಸಂತೋಷಕ್ಕೆ ಅಡ್ಡದಾರಿ ಹಿಡಿಯುವ ಏಳು ಮಂದಿಯ ಕಥೆಯಲ್ಲಿ ಯಾವುದೇ ಏರಿಳಿತಗಳಿಲ್ಲ. ಚಿತ್ರಕಥೆಯಲ್ಲಿ ಇನ್ನಷ್ಟು ಆಟವಾಡಿದ್ದರೆ “ಲೋಫ‌ರ್ಸ್‌’ಗಳನ್ನ ಮೆಚ್ಚಿಕೊಳ್ಳಬಹುದಿತ್ತು.

ಆದರೆ, ಧಾವಂತದಲ್ಲಿ ಎಲ್ಲವನ್ನೂ ಒಂದೇ ಸಲಕ್ಕೆ ಹೇಳಿ ಮುಗಿಸಿದ್ದರ ಪರಿಣಾಮ, ಇಲ್ಲಿ ಯಾವುದೇ ಹೊಸ ಬದಲಾವಣೆಯೂ ಇಲ್ಲ. ಪೋಲಿ ಮಾತುಗಳ ಜೊತೆ ಸಾಗುವ ಮೊದಲರ್ಧ ಏನಾಗುತ್ತಿದೆ ಎಂಬ ಗೊಂದಲದಲ್ಲೇ ಮುಗಿಯುತ್ತದೆ. ದ್ವಿತಿಯಾರ್ಧ ಲೋಫ‌ರ್ಸ್‌ಗಳು ಕುತೂಹಲ ಕೆರಳಿಸುತ್ತಾ ಹೋಗುತ್ತಾರೆ. ಇಲ್ಲಿ ಸೋಮಾರಿತನವಿದೆ,

ಮೋಜು, ಮಸ್ತಿ, ಪ್ರೀತಿ ಗೀತಿ ಇತ್ಯಾದಿ ಜೊತೆಗೊಂದು ವ್ಯಥೆ ಕೂಡ ಇದೆ. ಅದೊಂದೇ ಚಿತ್ರದ ಜೀವಾಳ. ಆ ವ್ಯಥೆ ಕೇಳಬೇಕೆಂಬ ಕುತೂಹಲವಿದ್ದರೆ, “ಲೋಫ‌ರ್ಸ್‌’ ಆಡುವ ಆಟಗಳನ್ನೆಲ್ಲಾ ನೋಡಿಬರಬಹುದು. ನಾಲ್ವರು ಹುಡುಗರು ಮತ್ತು ಮೂವರು ಹುಡುಗಿಯರದು ಅಡ್ಡದಾರಿ ಹಿಡಿಯುವ ಬದುಕು.

ಜೀವನವನ್ನು ಬೈದುಕೊಳ್ಳುತ್ತಾ, ಶ್ರಮಪಡದೆ, ತಪ್ಪು ಕೆಲಸಗಳನ್ನು ಮಾಡಿ, ರಾಯಲ್‌ ಲೈಫ್ ಕಾಣಬೇಕು ಎಂಬ ಮನಸ್ಥಿತಿ ಇರುವ ಗೆಳೆಯರು. ಆ ಪೈಕಿ ಒಬ್ಬ ಒಂದು ವಿಶಾಲವಾದ ಬಂಗಲೆಗೆ ಆಗಾಗ ಹೋಗಿ ಆತ್ಮಗಳ ಜೊತೆ ಮಾತಾಡಿ ಬರುತ್ತಿರುತ್ತಾನೆ. ಅದು ನಿಜಾನಾ, ಸುಳ್ಳೋ ಅನ್ನುವ ಗೊಂದಲದಲ್ಲಿರುವ ಅವನು, ಗೆಳೆಯರೊಂದಿಗೆ ನಡೆದ ವಿಷಯ ಹಂಚಿಕೊಳ್ಳುತ್ತಾನೆ.

ಎಲ್ಲರೂ ಆ ಬಂಗಲೆ ಕಡೆ ಹೊರಡಲು ನಿರ್ಧರಿಸುತ್ತಾರೆ. ಅಲ್ಲೊಂದಷ್ಟು ಆತ್ಮಗಳ ಕಾಟ ಶುರುವಾಗುತ್ತೆ. ಅಷ್ಟರಲ್ಲೇ ಅವರೆಲ್ಲರ ಲೈಫ‌ಲ್ಲಿ ಒಂದು ಕೆಟ್ಟ ಘಟನೆ ನಡೆಯುತ್ತದೆ. ಆ ಕೆಟ್ಟ ಘಟನೆ ಇಡೀ ಚಿತ್ರದ ತಿರುವು. ಹಾಗಾದರೆ, ಅವರೆಲ್ಲರೂ ಆ ಆತ್ಮಗಳ ಜೊತೆ ಸಂಘರ್ಷಕ್ಕಿಳಿಯುತ್ತಾರಾ, “ಲೋಫ‌ರ್ಸ್‌’ಗಳಲ್ಲಿ ಒಳ್ಳೇತನ ಅನ್ನುವುದಿಲ್ಲವೇ?

ಕೊನೆ ಘಳಿಗೆಯಲ್ಲಿ ಅವರು ಪಶ್ಚಾತ್ತಾಪ ಪಡುತ್ತಾರಾ? ಈ ಪ್ರಶ್ನೆಗಳಿಗೆ ಉತ್ತರ ಬೇಕಿದ್ದರೆ, ಸಿನಿಮಾ ನೋಡಬಹುದು. ಅರ್ಜುನ್‌ ಆರ್ಯ ಡ್ಯಾನ್ಸ್‌ ಮತ್ತು ಫೈಟ್ಸ್‌ನಲ್ಲಿ ಹಿಂದೆ ಉಳಿದಿಲ್ಲ. ನಟನೆಗೆ ಸಿಕ್ಕಿರುವ ಜಾಗವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಕೆಂಪೇಗೌಡ ಅವರ ಕಾಮಿಡಿ ತುಸು ಹೆಚ್ಚಾಯಿತೇ ಹೊರತು, ಅವರ ಹಾಸ್ಯಕ್ಕೆ ನಗುವೇ ಬರಲ್ಲ.

ಚೇತನ್‌, ಮನು ನಿರ್ದೇಶಕರ ಅಣತಿಯಂತೆ ಮಾಡಿದ್ದಾರೆ. ಸಾಕ್ಷಿ, ಶ್ರಾವ್ಯಾ, ಸುಷ್ಮಾ ಅವರಿಲ್ಲಿ ಗ್ಲಾಮರ್‌ಗಷ್ಟೇ ಸೀಮಿತ. ಟೆನ್ನಿಸ್‌ಕೃಷ್ಣ, ಉಮೇಶ್‌ ಪಾತ್ರಕ್ಕೆ ತಕ್ಕಂತೆ ಕಾಣಿಸಿಕೊಂಡಿದ್ದಾರೆ. ದಿನೇಶ್‌ ಕುಮಾರ್‌ ಸಂಗೀತಕ್ಕಿನ್ನೂ ಸ್ವಾದ ಇರಬೇಕಿತ್ತು. ಪ್ರಸಾದ್‌ ಬಾಬು ತಮ್ಮ ಕ್ಯಾಮೆರಾ ಕೈಚಳಕದಲ್ಲಿ “ಲೋಫ‌ರ್ಸ್‌’ಗಳನ್ನು ಅಂದಗಾಣಿಸಿದ್ದಾರೆ.

ಚಿತ್ರ: ಲೋಫ‌ರ್ಸ್‌
ನಿರ್ಮಾಣ: ಬಿ.ಎನ್‌. ಗಂಗಾಧರ್‌
ನಿರ್ದೇಶನ: ಎಸ್‌. ಮೋಹನ್‌
ತಾರಾಗಣ: ಅರ್ಜುನ್‌ ಆರ್ಯ, ಚೇತನ್‌, ಮನು, ಕೆಂಪೇಗೌಡ, ಸುಷ್ಮಾ, ಶ್ರಾವ್ಯಾ, ಸಾಕ್ಷಿ, ಟೆನ್ನಿಸ್‌ ಕೃಷ್ಣ, ಉಮೇಶ್‌, ಇತರರು.

* ವಿಭ

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.