ಲಾಟರಿ ವ್ಯಾಪಾರಿ ಆಸ್ತಿ 595 ಕೋಟಿ!
Team Udayavani, May 5, 2019, 6:25 AM IST
ಚೆನ್ನೈ: ಕೊಯಮತ್ತೂರು ಮೂಲದ ಲಾಟರಿ ವ್ಯಾಪಾರಿಯ ಮನೆ, ಕಚೇರಿ ಮತ್ತು ವಿವಿಧ ಸ್ಥಳಗಳಿಗೆ ದಾಳಿ ನಡೆಸಿರುವ ಆದಾಯ ತೆರಿಗೆ ಅಧಿಕಾರಿಗಳು 595 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ.
“ಲಾಟರಿ ಕಿಂಗ್’ ಎಂಬ ಕುಖ್ಯಾತಿ ಗಳಿಸಿರುವ ಮಾರ್ಟಿನ್ ಸ್ಯಾಂಟಿಗೊಗೆ ಸೇರಿದ ದೇಶಾದ್ಯಂತದ 70 ಕೇಂದ್ರಗಳಿಗೆ ಐಟಿ ಇಲಾಖೆ ಎ.30ರಂದು ದಾಳಿ ನಡೆಸಿದ್ದು, ಇದುವರೆಗಿನ ಲೆಕ್ಕಾಚಾರದಲ್ಲಿ 595 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. ಇವೆಲ್ಲವೂ ಕಪ್ಪು ಹಣ ಎಂದು ಸ್ವತಃ ಮಾರ್ಟಿನ್ ಒಪ್ಪಿಕೊಂಡಿರುವುದಾಗಿ ಐಟಿ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಪ್ರಮುಖ ಲಾಟರಿ ವ್ಯಾಪಾರಿಯಾಗಿದ್ದ ಈತ ಲಾಟರಿ ಫಲಿತಾಂಶವನ್ನು ತಿರುಚಿ ಬಹುಮಾನದ ಹಣವನ್ನು ತನ್ನಲ್ಲೇ ಉಳಿಸಿಕೊಳ್ಳುತ್ತಿದ್ದ. ಈ ಮೂಲಕ ಅಗಾಧ ಮೊತ್ತದ ಹಣ ಸಂಗ್ರಹಿಸಿದ್ದ. ಕೋಟ್ಯಂತರ ಮೌಲ್ಯದ ಆಸ್ತಿಪತ್ರಗಳು, 25 ಕೋಟಿ ರೂ. ಮೌಲ್ಯದ ವಜ್ರ ಸಹಿತ ಚಿನ್ನಾಭರಣ, 8.25 ಕೋಟಿ ನಗದನ್ನು ವಶ ಪಡಿಸಿಕೊಳ್ಳಲಾಗಿದೆ. ಕೆಲವೊಂದು ಆಸ್ತಿಯ ಮೌಲ್ಯವನ್ನು ಇನ್ನಷ್ಟೇ ಲೆಕ್ಕ ಹಾಕಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ