ಮಂಗಳೂರಿನಲ್ಲಿ ನಟೋರಿಯಸ್ ರೌಡಿ ಶೀಟರ್ ಮೇಲೆ ಪೊಲೀಸ್ ಫೈರಿಂಗ್
Team Udayavani, May 10, 2019, 8:16 AM IST
ಮಂಗಳೂರು: ನಗರದ ಜಪ್ಪಿನಮೊಗರು ಬಳಿ ಗುರುವಾರ ತಡರಾತ್ರಿ ನಟೋರಿಯಸ್ ರೌಡಿ ಶೀಟರ್ ಮೇಲೆ ಸಿಸಿಬಿ ಪೊಲೀಸರು ಫೈರಿಂಗ್ ನಡೆಸಿದ್ದಾರೆ.
ನಟೋರಿಯಸ್ ರೌಡಿಶೀಟರ್ ಆಗಿರುವ ಗೌರೀಶ್ನನ್ನು ವಶಕ್ಕೆ ಪಡೆಯಲು ತೆರಳಿದ್ದ ವೇಳೆ ಪೊಲೀಸರ ಮೇಲೆ ದಾಳಿ ನಡೆಸಿದ್ದಾನೆ. ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಗೌರೀಶ್ ಕಾಲಿಗೆ ಗುಂಡು ಹಾರಿಸಿದ್ದಾರೆ.
ಗುಂಡು ತಗುಲಿ ಕುಸಿದು ಬಿದ್ದ ಆತನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗೌರೀಶ್ ವಿರುದ್ಧ 3 ಕೊಲೆ ಕೇಸ್ ಸೇರಿ ಹಲವು ಪ್ರಕರಣ ಗಳು ದಾಖಲಾಗಿವೆ. ಹಫ್ತಾ ವಸೂಲಿ, ಬೆದರಿಕೆ ಹಾಕಿದ ಪ್ರಕರಣಗಳೂ ದಾಖಲಾಗಿವೆ. ಭೂಗತ ಜಗತ್ತಿನೊಡನೆ ನಂಟು ಹೊಂದಿರುವುದು ಪೊಲೀಸರಿಗೆ ತಿಳಿದು ಬಂದಿದೆ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.