ಶಿಕ್ಷಣ ಇಲಾಖೆಗೆ ನಬಾರ್ಡ್‌ ಅನುದಾನ ಬಳಕೆಗಾಗಿ ಚರ್ಚೆ

Team Udayavani, May 29, 2019, 6:00 AM IST

w-35

ಬೆಂಗಳೂರು: ಶಿಕ್ಷಣ ವಲಯದ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರದಿಂದ ಆರ್ಥಿಕ ಸಹಾಯ ಪಡೆಯಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದರ ಸಾಧ್ಯತೆಗಳ ಕುರಿತು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.

ರಾಷ್ಟ್ರೀಯ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಬ್ಯಾಂಕ್‌(ನಬಾರ್ಡ್‌) ಮೂಲಕ ಶಿಕ್ಷಣ ವಲಯಕ್ಕೆ 2 ಸಾವಿರ ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ನಿರೀಕ್ಷಿಸಿದ್ದು, ಇದರಲ್ಲಿ ಸುಮಾರು 1800 ಕೋಟಿ ರೂ.ಗಳನ್ನು ಉನ್ನತ ಶಿಕ್ಷಣಕ್ಕೆ ಉಪಯೋಗಿಸಲು ಬೇಕಾದ ಪ್ರಸ್ತಾವನೆಯನ್ನು ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಇಲಾಖೆಯ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ಹಾಗೆಯೇ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಗೆ ಹೆಚ್ಚುವರಿಯಾಗಿ 400 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸಿದ್ಧಪಡಿಸುವ ಬಗ್ಗೆಯೂ ಅಧಿಕಾರಿಗಳು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.

ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹಾಗೂ ನಬಾರ್ಡ್‌ನ ಅಧಿಕಾರಿಗಳು ಇದ್ದರು. ಸರ್ಕಾರಿ ಶಾಲಾ ಕಾಲೇಜಿನಲ್ಲಿ ಮೂಲ ಸೌಕರ್ಯ ಒದಗಿಸಲು ಕೇಂದ್ರದಿಂದ ಸುಮಾರು 2 ಸಾವಿರ ಕೋಟಿ ಬೇಡಿಕೆಗಾಗಿ ಸೂಕ್ತ ಪ್ರಸ್ತಾವನೆ ಸಿದ್ಧಪಡಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಸಕ್ತ ಸಾಲಿನಿಂದ ನಬಾರ್ಡ್‌ ಹಣವನ್ನು ಶಿಕ್ಷಣ ಇಲಾಖೆಯಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಬಳಸಿಕೊಳ್ಳಲು ಇಲಾಖೆ ಸಚಿವ ರೇವಣ್ಣ ಅವರು ಸಹಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ ಸೂಕ್ತ ಪ್ರಸ್ತಾವನೆ ನೀಡುವಂತೆಯೂ ರೇವಣ್ಣ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಮಾಹಿತಿ ನೀಡಿದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ನಬಾರ್ಡ್‌ನಿಂದ ನೇರವಾಗಿ ಉನ್ನತ ಶಿಕ್ಷಣ ಇಲಾಖೆಗೆ ಅನುದಾನ ನೀಡಲು ಅವಕಾಶಗಳಿಲ್ಲ. ಆದರೆ, ಪಾಲಿಟೆಕ್ನಿಕ್‌ ಕಾಲೇಜುಗಳಿಗೆ ಅನುದಾನ ನೀಡಬಹುದಾದ ಸಾಧ್ಯತೆ ಇದೆ ಎಂಬುದನ್ನು ನಬಾರ್ಡ್‌ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಸರ್ಕಾರಿ ಕಾಲೇಜು ಮತ್ತು ಪಾಲಿಟೆಕ್ನಿಕ್‌ ಅಭಿವೃದ್ಧಿಗೆ ವಿಸ್ತೃತ ವರದಿ ನೀಡಲು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.

ಹಾಗೆಯೇ 100 ಕರ್ನಾಟಕ ಪಬ್ಲಿಕ್‌ ಶಾಲೆಗಳಿಗೆ ತಲಾ 3 ಕೋಟಿಯನ್ನು ನಬಾರ್ಡ್‌ ಅನುದಾನದಲ್ಲಿ ಬಳಸುವ ಬಗ್ಗೆಯೂ ಚಿಂತನೆ ನಡೆದಿದೆ. ಇದರಲ್ಲಿ ಮೂಲಸೌಕರ್ಯ ಒದಗಿಸಲಾಗುತ್ತದೆ ಎಂದು ಹೇಳಿದರು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌.ಉಮಾಶಂಕರ್‌ ಮೊದಲಾದವರು ಸಭೆಯಲ್ಲಿದ್ದರು.

ಟಾಪ್ ನ್ಯೂಸ್

Vijayapura: ನಗರದಲ್ಲಿ ಮತಯಂತ್ರ ದೋಷ, ಆರಂಭವಾಗದ ಮತದಾನ

Vijayapura: ನಗರದಲ್ಲಿ ಮತಯಂತ್ರ ದೋಷ, ಆರಂಭವಾಗದ ಮತದಾನ

1

Daily Horoscope: ಶುಭಸೂಚನೆಗಳೊಂದಿಗೆ ದಿನಾರಂಭಗೊಳ್ಳಲಿದೆ

Mangaluru Airport; ನಾಲ್ಕು ತಿಂಗಳಲ್ಲಿ 4.45 ಕೋ.ರೂ. ಮೌಲ್ಯದ “ಚಿನ್ನ’ದ ಬೇಟೆ

Mangaluru Airport; ನಾಲ್ಕು ತಿಂಗಳಲ್ಲಿ 4.45 ಕೋ.ರೂ. ಮೌಲ್ಯದ “ಚಿನ್ನ’ದ ಬೇಟೆ

ಇಂದು ವಿಶ್ವ ಅಸ್ತಮಾ ದಿನ; ದೈಹಿಕ- ಮಾನಸಿಕವಾಗಿ ಕುಗ್ಗಿಸುವ “ಅಸ್ತಮಾ’

ಇಂದು ವಿಶ್ವ ಅಸ್ತಮಾ ದಿನ; ದೈಹಿಕ- ಮಾನಸಿಕವಾಗಿ ಕುಗ್ಗಿಸುವ “ಅಸ್ತಮಾ’

108 ಆ್ಯಂಬುಲೆನ್ಸ್‌ ಸಿಬಂದಿ ಮುಷ್ಕರ: ಇಂದು ನಿರ್ಧಾರ

108 ಆ್ಯಂಬುಲೆನ್ಸ್‌ ಸಿಬಂದಿ ಮುಷ್ಕರ: ಇಂದು ನಿರ್ಧಾರ

Sullia ಮೊಬೈಲ್‌ ರಿಚಾರ್ಜ್‌ಗೆ ಬಂದ ಯುವತಿಯ ಫೋಟೋ ತೆಗೆದ ಆರೋಪ: ದೂರು

Sullia ಮೊಬೈಲ್‌ ರಿಚಾರ್ಜ್‌ಗೆ ಬಂದ ಯುವತಿಯ ಫೋಟೋ ತೆಗೆದ ಆರೋಪ: ದೂರು

1—-wqwqeqwewqeq

India-born ಸುನೀತಾ ವಿಲಿಯಮ್ಸ್‌ ಇಂದು 3ನೇ ಬಾರಿ ನಭಕ್ಕೆ!: ಗಣೇಶನ ವಿಗ್ರಹ ಬಾಹ್ಯಾಕಾಶಕ್ಕೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

108 ಆ್ಯಂಬುಲೆನ್ಸ್‌ ಸಿಬಂದಿ ಮುಷ್ಕರ: ಇಂದು ನಿರ್ಧಾರ

108 ಆ್ಯಂಬುಲೆನ್ಸ್‌ ಸಿಬಂದಿ ಮುಷ್ಕರ: ಇಂದು ನಿರ್ಧಾರ

ಪ್ರಜ್ವಲ್‌ ವೀಡಿಯೋ ಪ್ರಕರಣಕ್ಕೆ ತಿರುವು ಡಿಕೆಶಿ ವಿರುದ್ಧ ಆಡಿಯೋ ಬಾಂಬ್‌

Prajwal Revanna ವೀಡಿಯೋ ಪ್ರಕರಣಕ್ಕೆ ತಿರುವು ಡಿಕೆಶಿ ವಿರುದ್ಧ ಆಡಿಯೋ ಬಾಂಬ್‌

D. K. Shivakumar ನನಗೂ ಪ್ರಕರಣಕ್ಕೂ ಸಂಬಂಧವೇ ಇಲ್ಲ

D. K. Shivakumar ನನಗೂ ಪ್ರಕರಣಕ್ಕೂ ಸಂಬಂಧವೇ ಇಲ್ಲ

ಹಂತ-2: ಇಂದು ಮತದಾನ; ಕಣದಲ್ಲಿ ಇಬ್ಬರು ಮಾಜಿ ಸಿಎಂ ಸೇರಿ 227 ಅಭ್ಯರ್ಥಿಗಳು

ಹಂತ-2: ಇಂದು ಮತದಾನ; ಕಣದಲ್ಲಿ ಇಬ್ಬರು ಮಾಜಿ ಸಿಎಂ ಸೇರಿ 227 ಅಭ್ಯರ್ಥಿಗಳು

Lok Sabha Election ಹಂತ 2: ಮತದಾನದ ಹಕ್ಕು ಚಲಾವಣೆಗೆ ಸಕಲ ಸಿದ್ಧತೆ

Lok Sabha Election ಹಂತ 2: ಮತದಾನದ ಹಕ್ಕು ಚಲಾವಣೆಗೆ ಸಕಲ ಸಿದ್ಧತೆ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

Vijayapura: ನಗರದಲ್ಲಿ ಮತಯಂತ್ರ ದೋಷ, ಆರಂಭವಾಗದ ಮತದಾನ

Vijayapura: ನಗರದಲ್ಲಿ ಮತಯಂತ್ರ ದೋಷ, ಆರಂಭವಾಗದ ಮತದಾನ

1

Daily Horoscope: ಶುಭಸೂಚನೆಗಳೊಂದಿಗೆ ದಿನಾರಂಭಗೊಳ್ಳಲಿದೆ

Mangaluru Airport; ನಾಲ್ಕು ತಿಂಗಳಲ್ಲಿ 4.45 ಕೋ.ರೂ. ಮೌಲ್ಯದ “ಚಿನ್ನ’ದ ಬೇಟೆ

Mangaluru Airport; ನಾಲ್ಕು ತಿಂಗಳಲ್ಲಿ 4.45 ಕೋ.ರೂ. ಮೌಲ್ಯದ “ಚಿನ್ನ’ದ ಬೇಟೆ

ಇಂದು ವಿಶ್ವ ಅಸ್ತಮಾ ದಿನ; ದೈಹಿಕ- ಮಾನಸಿಕವಾಗಿ ಕುಗ್ಗಿಸುವ “ಅಸ್ತಮಾ’

ಇಂದು ವಿಶ್ವ ಅಸ್ತಮಾ ದಿನ; ದೈಹಿಕ- ಮಾನಸಿಕವಾಗಿ ಕುಗ್ಗಿಸುವ “ಅಸ್ತಮಾ’

108 ಆ್ಯಂಬುಲೆನ್ಸ್‌ ಸಿಬಂದಿ ಮುಷ್ಕರ: ಇಂದು ನಿರ್ಧಾರ

108 ಆ್ಯಂಬುಲೆನ್ಸ್‌ ಸಿಬಂದಿ ಮುಷ್ಕರ: ಇಂದು ನಿರ್ಧಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.