ರಸ್ತೆ ಅಪಘಾತದಲ್ಲಿ 11 ವಿದ್ಯಾರ್ಥಿಗಳ ಸಾವು
Team Udayavani, Jun 28, 2019, 5:12 AM IST
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಮುಘಲ್ ರಸ್ತೆಯಲ್ಲಿ ಮಿನಿ ಬಸ್ ಕಮರಿಗೆ ಉರುಳಿ 9 ಬಾಲಕಿಯರು ಸೇರಿ 11 ವಿದ್ಯಾರ್ಥಿಗಳು ಸಾವಿಗೀಡಾಗಿದ್ದಾರೆ. ಗಾಯಗೊಂಡ 7 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೂಂಛ…ನ ಕೋಚಿಂಗ್ ಕ್ಲಾಸ್ನಿಂದ ಅವರು ಈ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ರಾಜ್ಯಪಾಲ ಸತ್ಯಪಾಲ್ ಮಲಿಕ್ ಘಟನೆಗೆ ಶೋಕ ವ್ಯಕ್ತಪಡಿಸಿದ್ದಾರೆ.