ಕೆಆರ್‌ಎಸ್‌ಗೆ ಮುತ್ತಿಗೆ, ಸಾವಿರಾರು ರೈತರ ಬಂಧನ

Team Udayavani, Jun 29, 2019, 3:08 AM IST

krs-mu

ಶ್ರೀರಂಗಪಟ್ಟಣ: ಒಣಗುತ್ತಿರುವ ಬೆಳೆಗಳ ರಕ್ಷಣೆಗಾಗಿ ಕೆಆರ್‌ಎಸ್‌ ಹಾಗೂ ಹೇಮಾವತಿ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಸಾವಿರಾರು ಸಂಖ್ಯೆಯಲ್ಲಿ ರೈತರು ಶುಕ್ರವಾರ ಕೆಆರ್‌ಎಸ್‌ಗೆ ಮುತ್ತಿಗೆ ಹಾಕಿದರು.

ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ರೈತ ಮುಖಂಡ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಆಗಮಿಸಿದ ರೈತ ಸಂಘದ ಕಾರ್ಯಕರ್ತರು, ಕೆಆರ್‌ಎಸ್‌ ಪ್ರವೇಶದ್ವಾರದ ಬಳಿ ಕುಳಿತು ಪ್ರತಿಭಟನೆ ನಡೆಸಿದರು. ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಕಳೆದೊಂದು ವಾರದಿಂದ ರೈತ ಮುಖಂಡ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಮಂಡ್ಯದ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ರೈತಸಂಘದ ಕಾರ್ಯಕರ್ತರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

ಆದರೂ ರೈತರ ಮನವಿಗೆ ಸ್ಪಂದಿಸದ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು ಹಾಗೂ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಕೃಷ್ಣರಾಜಸಾಗರ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಮಕೃಷ್ಣ ಅವರು ಸ್ಥಳಕ್ಕೆ ಆಗಮಿಸಿ, ರೈತ ಮುಖಂಡರು ಹಾಗೂ ಕಾರ್ಯಕರ್ತರ ಮನವೊಲಿಸುವ ಪ್ರಯತ್ನ ನಡೆಸಿದರೂ ಸಫ‌ಲವಾಗಲಿಲ್ಲ.

ರಾಜ್ಯ ಸರ್ಕಾರದ ಆದೇಶವಿಲ್ಲದೆ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಖಡಕ್ಕಾಗಿ ಅಧಿಕಾರಿಗಳು ತಿಳಿಸಿದ್ದರಿಂದ ರೊಚ್ಚಿಗೆದ್ದ ರೈತರು ಅಣೆಕಟ್ಟೆಯೊಳಗೆ ನುಗ್ಗಲು ಯತ್ನಿಸಿದರು. ಸ್ಥಳದಲ್ಲಿದ್ದ ಪೊಲೀಸರು ಅವರನ್ನು ಬಂಧಿಸಿ, ಅಲ್ಲಿಂದ ಕರೆದೊಯ್ದರು. ಕೆಆರ್‌ಎಸ್‌ಗೆ ಮುತ್ತಿಗೆ ಹಿನ್ನೆಲೆಯಲ್ಲಿ ಅಣೆಕಟ್ಟೆ ಬಳಿ ಬಿಗಿ ಪೊಲೀಸ್‌ ಬಂದೋಬಸ್ತ್ ನಿಯೋಜನೆ ಮಾಡಲಾಗಿತ್ತು.

ನೀರು ಕೊಡದೆ ಏನಾದರೂ ರೈತರು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಜಿಲ್ಲೆಯ ಶಾಸಕರು, ಸಿಎಂ ಅವರೇ ಹೊಣೆಗಾರರು. ನೀರು ಕೊಡದಿದ್ದರೆ ಸಿಎಂ ಮಂಡ್ಯದಲ್ಲಿ ಹೇಗೆ ಓಡಾಡುತ್ತಾರೆ ಎಂಬುದನ್ನು ನೋಡುತ್ತೇವೆ.
-ಬಡಗಲಪುರ ನಾಗೇಂದ್ರ, ರಾಜ್ಯ ರೈತಸಂಘದ ಅಧ್ಯಕ್ಷ.

ರೈತರ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಸಾಲ ಮಾಡಿ ಬೆಳೆ ಬೆಳೆದಿರುವ ರೈತರು ನಷ್ಟದ ಆತಂಕ ಎದುರಿಸುತ್ತಿದ್ದಾರೆ. ನೀರಿಗಾಗಿ ಒಂದು ವಾರದಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಯಾರೊಬ್ಬರೂ ಸಮಸ್ಯೆ ಆಲಿಸುತ್ತಿಲ್ಲ.
-ದರ್ಶನ್‌ ಪುಟ್ಟಣ್ಣಯ್ಯ, ರೈತ ಮುಖಂಡ

ಟಾಪ್ ನ್ಯೂಸ್

Byndoor  ಶಿರೂರು: ಕಡಿದು ಬಿದ್ದಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ ಮೀನುಗಾರ ಮೃತ್ಯು

Byndoor ಶಿರೂರು: ಕಡಿದು ಬಿದ್ದಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ ಮೀನುಗಾರ ಮೃತ್ಯು

Surathkal; ಉದ್ಯಮಿಯ ಮೇಲೆ ಪತ್ನಿ, ಸಂಬಂಧಿಕರಿಂದ ಹಲ್ಲೆ, ಗೃಹಬಂಧನ

Surathkal; ಉದ್ಯಮಿಯ ಮೇಲೆ ಪತ್ನಿ, ಸಂಬಂಧಿಕರಿಂದ ಹಲ್ಲೆ, ಗೃಹಬಂಧನ

Moodabidri ಹೊಸಬೆಟ್ಟು: ಈಜುಕೊಳಕ್ಕೆ ಧುಮುಕಿದ ಯುವಕ ಸಾವು

Moodabidri ಹೊಸಬೆಟ್ಟು: ಈಜುಕೊಳಕ್ಕೆ ಧುಮುಕಿದ ಯುವಕ ಸಾವು

belBelthangady: ಅಕ್ರಮ ಕಲ್ಲು ಗಣಿಗಾರಿಕೆ ಆರೋಪ; ಇಬ್ಬರ ವಿರುದ್ಧ ಪ್ರಕರಣ, ಓರ್ವನ ಬಂಧನ

Belthangady: ಅಕ್ರಮ ಕಲ್ಲು ಗಣಿಗಾರಿಕೆ ಆರೋಪ; ಇಬ್ಬರ ವಿರುದ್ಧ ಪ್ರಕರಣ, ಓರ್ವನ ಬಂಧನ

State Govt ದೇವೇಗೌಡರ ಬಲಿ ಪಡೆಯಲು ಸಂಚು: ಜೆಡಿಎಸ್‌ ಆರೋಪ

State Govt ದೇವೇಗೌಡರ ಬಲಿ ಪಡೆಯಲು ಸಂಚು: ಜೆಡಿಎಸ್‌ ಆರೋಪ

Prajwal Revanna Case; ಸಿಬಿಐಗೆ ವಹಿಸಿದರೆ ಸರಕಾರದಲ್ಲಿ ಇರುವವರು ಜೈಲಿಗೆ

Prajwal Revanna Case; ಸಿಬಿಐಗೆ ವಹಿಸಿದರೆ ಸರಕಾರದಲ್ಲಿ ಇರುವವರು ಜೈಲಿಗೆ

ಕಚೇರಿಗಳಲ್ಲಿ ಇ-ಆಫೀಸ್‌ ತಂತ್ರಾಂಶ ಕಡ್ಡಾಯಕ್ಕೆ ಆದೇಶ

Govt ಕಚೇರಿಗಳಲ್ಲಿ ಇ-ಆಫೀಸ್‌ ತಂತ್ರಾಂಶ ಕಡ್ಡಾಯಕ್ಕೆ ಆದೇಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

State Govt ದೇವೇಗೌಡರ ಬಲಿ ಪಡೆಯಲು ಸಂಚು: ಜೆಡಿಎಸ್‌ ಆರೋಪ

State Govt ದೇವೇಗೌಡರ ಬಲಿ ಪಡೆಯಲು ಸಂಚು: ಜೆಡಿಎಸ್‌ ಆರೋಪ

Prajwal Revanna Case; ಸಿಬಿಐಗೆ ವಹಿಸಿದರೆ ಸರಕಾರದಲ್ಲಿ ಇರುವವರು ಜೈಲಿಗೆ

Prajwal Revanna Case; ಸಿಬಿಐಗೆ ವಹಿಸಿದರೆ ಸರಕಾರದಲ್ಲಿ ಇರುವವರು ಜೈಲಿಗೆ

ಕಚೇರಿಗಳಲ್ಲಿ ಇ-ಆಫೀಸ್‌ ತಂತ್ರಾಂಶ ಕಡ್ಡಾಯಕ್ಕೆ ಆದೇಶ

Govt ಕಚೇರಿಗಳಲ್ಲಿ ಇ-ಆಫೀಸ್‌ ತಂತ್ರಾಂಶ ಕಡ್ಡಾಯಕ್ಕೆ ಆದೇಶ

Devarajegowda ವಿರುದ್ಧ ಮಾನನಷ್ಟ ಕೇಸ್‌: ಶಿವರಾಮೇಗೌಡ

Devarajegowda ವಿರುದ್ಧ ಮಾನನಷ್ಟ ಕೇಸ್‌: ಶಿವರಾಮೇಗೌಡ

ರಾಜ್ಯ ಸರಕಾರಕ್ಕೆ ವರ್ಷ: ಸುರ್ಜೇವಾಲ ಹರ್ಷ

Congress ರಾಜ್ಯ ಸರಕಾರಕ್ಕೆ ವರ್ಷ: ಸುರ್ಜೇವಾಲ ಹರ್ಷ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Byndoor  ಶಿರೂರು: ಕಡಿದು ಬಿದ್ದಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ ಮೀನುಗಾರ ಮೃತ್ಯು

Byndoor ಶಿರೂರು: ಕಡಿದು ಬಿದ್ದಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ ಮೀನುಗಾರ ಮೃತ್ಯು

online

Online Fraud; ಬಳ್ಳಾರಿ ಮಹಿಳೆಗೆ 17 ಲಕ್ಷ ರೂ.ವಂಚನೆ

Surathkal; ಉದ್ಯಮಿಯ ಮೇಲೆ ಪತ್ನಿ, ಸಂಬಂಧಿಕರಿಂದ ಹಲ್ಲೆ, ಗೃಹಬಂಧನ

Surathkal; ಉದ್ಯಮಿಯ ಮೇಲೆ ಪತ್ನಿ, ಸಂಬಂಧಿಕರಿಂದ ಹಲ್ಲೆ, ಗೃಹಬಂಧನ

Moodabidri ಹೊಸಬೆಟ್ಟು: ಈಜುಕೊಳಕ್ಕೆ ಧುಮುಕಿದ ಯುವಕ ಸಾವು

Moodabidri ಹೊಸಬೆಟ್ಟು: ಈಜುಕೊಳಕ್ಕೆ ಧುಮುಕಿದ ಯುವಕ ಸಾವು

belBelthangady: ಅಕ್ರಮ ಕಲ್ಲು ಗಣಿಗಾರಿಕೆ ಆರೋಪ; ಇಬ್ಬರ ವಿರುದ್ಧ ಪ್ರಕರಣ, ಓರ್ವನ ಬಂಧನ

Belthangady: ಅಕ್ರಮ ಕಲ್ಲು ಗಣಿಗಾರಿಕೆ ಆರೋಪ; ಇಬ್ಬರ ವಿರುದ್ಧ ಪ್ರಕರಣ, ಓರ್ವನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.