ಮಹಾರಾಷ್ಟ್ರ : ಕಟ್ಟಡದ ಸ್ಲಾಬ್ನಿಂದ ಜಾರಿ ಬಿದ್ದು ಕಾರ್ಮಿಕನ ಸಾವು
Team Udayavani, Jul 2, 2019, 12:30 PM IST
ಅಕೋಲಾ : ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದರ ಕಾರ್ಮಿಕನೋರ್ವ ಸ್ಲಾಬ್ ನಿಂದ ಜಾರಿ ಕೆಳ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ.
ಮೃತ ವ್ಯಕ್ತಿಯನ್ನು ಶುಭಂ ಪೋಹರೆ ಎಂದು ಅಧಿಕಾರಿಯೋರ್ವರು ಗುರುತಿಸಿದ್ದಾರೆ.
ಈ ದಾರುಣ ಘಟನೆ ಇಂದು ಮಂಗಳವಾರ ಬೆಳಗ್ಗೆ 9.30ರ ಸುಮಾರಿಗೆ ನಗರದ ಪಾತೂರು ಪ್ರದೇಶದಲ್ಲಿ ನಡೆಯಿತೆಂದು ಪ್ರಕರಣದ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ.