ಭಜನೆ ಸಂಸ್ಕೃತಿ ಉಳಿವಿಗೆ ಟ್ರಸ್ಟ್‌ ಮಾದರಿ ಚಟುವಟಿಕೆ: ಆಸ್ರಣ್ಣ

ಕಾಟುಕುಕ್ಕೆ ಭಜನ ಚಾರಿಟೆಬಲ್ ಟ್ರಸ್ಟ್‌ ಪುತ್ತೂರು

Team Udayavani, Jul 19, 2019, 5:42 AM IST

18KSDE6

ಪೆರ್ಲ: ಹರಿದಾಸ ಸಾಹಿತ್ಯದ ಸಾರ-ಸಂದೇಶಗಳನ್ನು ಭಜನೆಯ ಮೂಲಕ ಮನೆಮನೆಯಲ್ಲಿ ಮತ್ತೆ ಅನುರಣಿಸುವಂತೆ ಮಾಡುವ ಮೂಲೋದ್ದೇಶದೊಂದಿಗೆ ಕಾಟುಕುಕ್ಕೆ ಭಜನಾ ಚಾರಿಟೇಬಲ್ ಟ್ರಸ್ಟ್‌ ಪುತ್ತೂರು ಅಸ್ತಿತ್ವಕ್ಕೆ ಬಂದಿದೆ.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ನಡೆದ ಸಮಾರಂಭ ದಲ್ಲಿ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರದ ಪ್ರಧಾನ ಅರ್ಚಕ ಕಮಲಾ ದೇವಿ ಪ್ರಸಾದ ಆಸ್ರಣ್ಣ ದೀಪಬೆಳಗಿಸಿ ಟ್ರಸ್ಟ್‌ ಉದ್ಘಾ ಟಿಸಿ ಭಜನೆಯ ಮೂಲಕ ಮಹಿಳಾ ಸಂಘ ಟನೆ ಹಾಗೂ ಮೌಲ್ಯಗಳ ಬಿತ್ತನೆಯಿಂದ ಸತ್ಸಮಾಜ, ಸಂಸ್ಕೃತಿ ರೂಪಿಸುವ ನಿಟ್ಟಿನಲ್ಲಿ ಟ್ರಸ್ಟ್‌ ರಚನೆಯಾಗಿರುವುದು ಶ್ಲಾಘನೀಯ. ರಾಮಕೃಷ್ಣ ಅವರು ತನ್ನ ಶಿಷ್ಯ ಬಳಗದ ನೂರು ಭಜನ ಮಂಡಳಿಗಳನ್ನು ಒಟ್ಟು ಮಾಡಿ ಟ್ರಸ್ಟ್‌ ರೂಪಿಸಿರುವುದು ಭಜನ ಕ್ರಾಂತಿಯ ಮಾದರಿ ಚಟುವಟಕೆ. ಇಂಥ ಸಮಾರಂಭದಲ್ಲಿ ಪಾಲ್ಗೊಳ್ಳುವುದೇ ಧನ್ಯತೆ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಸಂಸದ ನಳಿನ್‌ ಕುಮಾರ್‌ ಕಟೀಲ್ ಮಾತನಾಡಿ ಭಜನೆ ಎಂಬುದು ಒಂದು ಸಂಸ್ಕಾರ. ಅದು ಮನ, ಮನೆಯಲ್ಲಿ ಹಿಂದೆ ಇದ್ದು, ಈಗ ಇಲ್ಲವಾಗುತ್ತದೆ. ಪರಿಣಾಮ ನೈತಿಕ ಅಧಃಪತನದಿಂದ ಅನಾಗರಿಕ ಸಮಾಜ ನಿರ್ಮಾಣವಾಗುತ್ತಿದೆ. ಮನುಷ್ಯ ಬದುಕಿನ ಪರಿವರ್ತನೆಗೆ ಭಜನೆಯಿಂದ ಸಾಧ್ಯವಿದೆ. ಇದನ್ನರಿತು ರಾಮಕೃಷ್ಣ ಕಾಟುಕುಕ್ಕೆ ಅವರು ಭಜನೆಗಾಗಿ ಪ್ರಪ್ರಥಮ ಟ್ರಸ್ಟ್‌ ರೂಪಿಸಿರುವುದು ಕ್ರಾಂತಿಕಾರಕ ಕೆಲಸ. ಅವರು ಅಭಿನಂದನೀಯರು. ಕೇವಲ ಭಜನೆಯನ್ನು ಹಾಡುವುದಷ್ಟೇ ಅಲ್ಲದೇ, ದಾಸ ಸಾಹಿತ್ಯದ ಅರ್ಥ, ಸಂದೇಶಗಳನ್ನರಿತರೆ ಆತ್ಮವಿಕಾಸದ ಜತೆ ಜೀವನದ ಉನ್ನತಿಯೂ ಸಾಧ್ಯ. ವರ್ತಮಾನದ ಸಾಮಾಜಿಕ ಬದುಕಿನಲ್ಲಿ ಮೌಲ್ಯಗಳನ್ನು ಬಿತ್ತುವ ಇಂತಹ ಆಧ್ಯಾತ್ಮಿಕ ಚಟುವಟಿಕೆಗಳು ಅತ್ಯಗತ್ಯದ ಕಾಯಕ ಎಂದವರು ನುಡಿದರು.

ಹನುಮಗಿರಿ ಶ್ರೀ ರಾಮಾಂಜನೇಯ ದೇವಳದ ಅಧ್ಯಕ್ಷ ನನ್ಯ ಅಚ್ಯುತ ಮೂಡಿ ತ್ತಾಯ ಅಧ್ಯಕ್ಷತೆ ವಹಿಸಿದರು. ಕಾಟುಕುಕ್ಕೆ ಭಜನ ಚಾರಿಟೆಬಲ್ ಟ್ರಸ್ಟ್‌ ಅಧ್ಯಕ್ಷ ರಾಮ ಕೃಷ್ಣ ಕಾಟುಕುಕ್ಕೆ ಪ್ರಾಸ್ತಾವಿಕ ಮಾತನಾಡಿ ದರು. ದ.ಕ.ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ, ಪುತ್ತೂರು ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌, ನಾರಂಪಾಡಿ ಉಮಾಮಹೇಶ್ವರ ದೇವಳದ ಉಪಾಧ್ಯಕ್ಷ ಮಧುಕರ ರೈ ಕೊರೆಕ್ಕಾನ, ಮುಂಬೈ ಉದ್ಯಮಿ ಕುಕ್ಕಂದೂರು ಚಂದ್ರಶೇಖರ ಶೆಟ್ಟಿ, ಕ್ಯಾಂಪ್ಕೋ ನಿರ್ದೇಶಕ ಚನಿಲ ತಿಮ್ಮಪ್ಪ ಶೆಟ್ಟಿ ಅತಿಥಿಗಳಾಗಿ ಪಾಲ್ಗೊಂಡರು. ಶ್ರೀ ಕ್ಷೇತ್ರ ಧರ್ಮಸ್ಥಳ ಭಜನ ಪರಿಷತ್‌ ಕಾರ್ಯದರ್ಶಿ, ಟ್ರಸ್ಟ್‌ ಉಪಾಧ್ಯಕ್ಷ ಜಯರಾಮ ನೆಲ್ಲಿತ್ತಾಯ ಸ್ವಾಗತಿಸಿ, ಪತ್ರಕರ್ತ ಎಂ.ನಾ. ಚಂಬಲ್ತಿಮಾರ್‌ ಕಾರ್ಯಕ್ರಮ ನಿರೂಪಿಸಿದರು. ಉಷಾ ಶಿವರಾಂ ಭಟ್ ಕಾರಿಂಜ ವಂದಿಸಿದರು.

ಟ್ರಸ್ಟ್‌ ಉದ್ಘಾಟನೆ ಅಂಗವಾಗಿ ಬೆಳಗ್ಗೆ ಗಾಯಕ ಕಿಶೋರ್‌ ಪೆರ್ಲ ಅವರಿಂದ ದೇವರ ನಾಮಾವಳಿಗಳ ಸಂಕೀರ್ತನೆ ನಡೆಯಿತು.

ದೇಶದಲ್ಲೇ ಮೊದಲ ಭಜನ ಚಾರಿಟೆಬಲ್ ಟ್ರಸ್ಟ್‌
ಸಮಾರಂಭಕ್ಕೆ ಬೆಳಗ್ಗೆ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಶುಭನುಡಿ ಗಳನ್ನಾಡಿ ಚಾಲನೆ ಇತ್ತರು. ಬಳಿಕ ಒಂದೂ ವರೆ ಸಾವಿರಕ್ಕೂ ಮಿಕ್ಕಿದ ಭಜನಾರ್ಥಿ ಗಳೊಂದಿಗೆ ರಾಮಕೃಷ್ಣ ಕಾಟುಕುಕ್ಕೆ ಅವರು ಸಮೂಹ ದೇವರನಾಮ ಹಾಡಿ ದರು. ಬಳಿಕ ಭಜನಾಮೃತ ಭಾಗ-1, ಭಾಗ-2 ಕೃತಿ ಹಾಗೂ ವಿಜಯದಾಸರ ಪಂಚರತ್ನ ಸುಳಾದಿ ಕೃತಿ ಮತ್ತು ಟ್ರಸ್ಟ್‌ ರಶೀದಿಗಳನ್ನು ಅತಿಥಿಗಳು ಬಿಡುಗಡೆ ಮಾಡಿದರು. 2009ರಲ್ಲಿ ಸಾಂಪ್ರದಾಯಿಕ ಭಜನ ತರಬೇತಿಗೆಂದು ಹೊರಟ ರಾಮಕೃಷ್ಣ ಕಾಟುಕುಕ್ಕೆಯವರು ಕೇವಲ 10 ವರ್ಷಗಳಲ್ಲಿ ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ತಾಲೂಕು ಮತ್ತು ಕಾಸರಗೋಡು ಭಾಗದಲ್ಲಿ ನೂರಕ್ಕೂ ಅಧಿಕ ಭಜನ ಮಂಡಳಿಗಳನ್ನು ಹೊಂದಿ, ದೇಶದಲ್ಲೇ ಪ್ರಥಮವಾಗಿ ಭಜನೆಗೊಂದು ಚಾರಿಟೆಬಲ್ ಟ್ರಸ್ಟ್‌ ರೂಪಿಸಿ ಭಜನ ಕ್ಷೇತ್ರದಲ್ಲಿ ಕ್ರಿಯಾಶೀಲ ಚಟುವಟಿಕೆಗಳಿಗೆ ಮುಂದಡಿ ಇಟ್ಟಿರುವುದನ್ನು ಅತಿಥಿ ಗಳೆಲ್ಲರೂ ಪ್ರಶಂಸಿಸಿ, ಇವರ ಜತೆ ಕೈಜೋಡಿಸುವ ಭರವಸೆ ಇತ್ತರು.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.