ಕರ್ನಾಟಕದಲ್ಲಿ 70ಕ್ಕೂ ಹೆಚ್ಚು ಹುಲಿ ಹೆಚ್ಚಳ

4ನೇ ಹುಲಿಗಣತಿ ವರದಿ ಇಂದು ಬಿಡುಗಡೆ • ಈ ಬಾರಿಯೂ ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳ • ದೇಶಕ್ಕೆ ಕರ್ನಾಟಕ ನಂ.1?

Team Udayavani, Jul 29, 2019, 9:53 AM IST

mysuru-tdy-1

ಮೈಸೂರು: ವಿಶ್ವ ಹುಲಿ ದಿನದ ಅಂಗವಾಗಿ ಇಂದು 4ನೇ ಹುಲಿ ಗಣತಿ ವರದಿ ಬಿಡುಗಡೆಯಾಗಲಿದೆ. ಗಂಧದ ಬೀಡು, ವನ್ಯ ಜೀವಿಗಳ ತವರು ಎಂದೇ ಕರೆಸಿಕೊಳ್ಳುವ ಕರ್ನಾಟಕ ದೇಶದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ ಎಂಬ ಅಗ್ರಪಟ್ಟ ಮತ್ತೆ ರಾಜ್ಯದ ಮುಡಿಗೇರಲಿದೆ.

ಹೌದು, 2014ರ ಹುಲಿ ಗಣತಿ ಪ್ರಕಾರ ದೇಶದಲ್ಲಿ ಒಟ್ಟು 2226 ಹುಲಿಗಳಿದ್ದು, ಅದರಲ್ಲಿ 408 ಹುಲಿಗಳು ಕರ್ನಾಟಕ ದಲ್ಲಿದ್ದವು. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಅತಿ ಹೆಚ್ಚು ಹುಲಿಗಳಿರುವ ರಾಜ್ಯ ಎಂದು ಘೋಷಣೆ ಮಾಡಲಾಗಿತ್ತು. ಅದರಂತೆ ಈ ಬಾರಿಯೂ 4ನೇ ಹುಲಿ ಗಣತಿ ವರದಿಯನ್ನು ಪ್ರಧಾನಿ ನರೇಂದ್ರ ಮೋದಿ ವಿಶ್ವ ಹುಲಿಗಳ ದಿನದ ಅಂಗವಾಗಿ ಇಂದು (ಜು.29) ಬಿಡುಗಡೆ ಮಾಡಲಿದ್ದಾರೆ.

ಭಾರತವೇ ನಂ.1: ಇಡೀ ವಿಶ್ವದಲ್ಲಿ ಅತಿ ಹೆಚ್ಚು ಹುಲಿ ಗಳಿರುವ ರಾಷ್ಟ್ರವೆಂದರೆ ಅದು ಭಾರತ. ಕರ್ನಾಟಕ, ಉತ್ತರಾಖಂಡ, ಮಧ್ಯಪ್ರದೇಶ, ತಮಿಳುನಾಡು ಸೇರಿ ಹಲವು ರಾಜ್ಯಗಳಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿದೆ. 2018ರ ಗಣತಿಯಂತೆ ಜಗತ್ತಿನಲ್ಲಿ 3,980 ಹುಲಿಗಳಿದ್ದರೆ, 2,264 ಹುಲಿಗಳು ಭಾರತದಲ್ಲಿರುವುದು ಗಮನಾರ್ಹ. ಇವು ದೇಶದ 90,000 ಚದರ ಕಿ.ಮೀ. ಪ್ರದೇಶದಲ್ಲಿ ಹರಡಿಕೊಂಡಿವೆ. ಸುಮಾತ್ರಾ ದಲ್ಲಿ 400, ಥಾಯ್ಲೆಂಡ್‌ ಪ್ರದೇಶದಲ್ಲಿ 340, ರಷ್ಯಾ, ಚೀನಾ ಗಳಲ್ಲಿ ಸೈಬೀರಿಯಾದ ದೊಡ್ಡ ಜಾತಿಯ ಹುಲಿ 540 ಹಾಗೂ ಥಾಯ್ಲೆಂಡ್‌ ಮ್ಯನ್ಮಾರ್‌ ಗಡಿ ಪ್ರದೇಶದಲ್ಲಿ 250 ಹುಲಿಗಳು ಇರುವುದಾಗಿ ತಿಳಿದು ಬಂದಿದೆ.

ಗಮನಾರ್ಹ ಏರಿಕೆ: ಭಾರತದಲ್ಲಿ 2000ದ ಇಸವಿ ಯಲ್ಲಿ 3 ಸಾವಿರವಿದ್ದ ಹುಲಿಗಳು 2006ರ ವೇಳೆಗೆ ಸಂಪೂರ್ಣ ನಶಿಸಿ 1411ಕ್ಕೆ ಇಳಿದಿತ್ತು. ಭಾರತದಲ್ಲಿ ವನ್ಯಮೃಗಗಳ ಹತ್ಯೆ ಗಣನೀಯವಾಗಿ ಹೆಚ್ಚಿದ ಹಿನ್ನೆಲೆ ಹುಲಿಯಂತಹ ಪ್ರಾಣಿಗಳ ಸಂರಕ್ಷಣೆಗಾಗಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದರ ಪರಿಣಾಮ 2014ಕ್ಕೆ ಹುಲಿಗಳ ಸಂಖ್ಯೆ 2 ಸಾವಿರ ದಾಟಿರುವುದು ವಿಶೇಷ.

2400 ಗಡಿ ದಾಟಿದ ಸಂಖ್ಯೆ: ಇತ್ತೀಚಿನ ಗಣತಿ ಪ್ರಕಾರ ಭಾರತದಲ್ಲಿ ಪ್ರಸ್ತುತ ಹುಲಿಗಳ ಸಂಖ್ಯೆ 2400 ಗಡಿ ದಾಟಿದೆ. ದೇಶದಲ್ಲಿ ಹುಲಿಗಳ ಸಂಖ್ಯೆ ಕ್ಷೀಣಿಸು ತ್ತಿರುವುವುದನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಂಡಿದ್ದಲ್ಲದೆ, ಬೇಟೆಗಾರರು, ಕಳ್ಳ ಸಾಗಾಣಿಕೆ ಭೀತಿ ಸಮರ್ಥವಾಗಿ ಎದುರಿ ಸಿದ್ದರ ಪರಿಣಾಮ ಭಾರತದಲ್ಲಿ ಹುಲಿಗಳ ಸಂತತಿಯಲ್ಲಿ ಗಣನೀಯವಾಗಿ ಏರಿಕೆ ಯಾಗುವಂತೆ ನೋಡಿಕೊಳ್ಳಲಾಗಿದೆ.

2010ರ ಗಣತಿ ಪ್ರಕಾರ ಭಾರತದಲ್ಲಿ 1706 ಹುಲಿಗಳಿದ್ದರೆ, 2014ರಲ್ಲಿ 2,226ಕ್ಕೆ ಏರಿಕೆಯಾಗಿದ್ದವು. ಆದರೆ, 2006ರಲ್ಲಿ ಹುಲಿಗಳ ಸಂಖ್ಯೆ 1400ಕ್ಕೆ ಕುಸಿದು ಆತಂಕ ಮೂಡಿಸಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಹುಲಿಗಳ ಸಂಖ್ಯೆ ಗಣನೀಯ ವಾಗಿ ಏರಿಕೆ ಕಾಣುತ್ತಿದ್ದು, ಅರಣ್ಯ ಇಲಾಖೆ, ವನ್ಯಜೀವಿ ತಜ್ಞರು ಹಾಗೂ ಪರಿಸರ ಪ್ರೇಮಿಗಳಲ್ಲಿ ಮಂದಹಾಸ ಮೂಡಿಸಿದೆ. ಪ್ರಸ್ತುತ ದೇಶದಲ್ಲಿ 2400 ಹುಲಿಗಳಿದ್ದು, ಕರ್ನಾಟಕ ರಾಜ್ಯದಲ್ಲಿ 470ಕ್ಕೂ ಹೆಚ್ಚು ಹುಲಿ ಗಳಿರುವುದು, ಕಾಡಿನ ಗುಣಮಟ್ಟ ಹಾಗೂ ಅರಣ್ಯ ಇಲಾಖೆಯ ಕಾರ್ಯದಕ್ಷತೆ ತೋರಿಸುತ್ತದೆ.

ಏನಿದು ಹುಲಿ ಯೋಜನೆ? ಹುಲಿಗಳ ಬಗ್ಗೆ ಸಾರ್ವ ಜನಿಕರಲ್ಲಿ ಅರಿವು ಮೂಡಿಸಲು ಹಾಗೂ ಅವುಗಳ ಸಂರಕ್ಷಣೆ ಸಲುವಾಗಿ 1973ರಲ್ಲಿ ಹುಲಿಯೋಜನೆ ಜಾರಿಗೆ ತರಲಾಯಿತು. ದೇಶದಲ್ಲಿ ಒಟ್ಟು 25 ಹುಲಿ ಸಂರಕ್ಷಿತಾ ಪ್ರದೇಶಗಳನ್ನು ಗುರುತಿಸಲಾಗಿದೆ.

ಹುಲಿಗಳ ವಿವರ: ಕರ್ನಾಟಕದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಬಂಡೀ ಪುರ, ನಾಗರ ಹೊಳೆ ಅರಣ್ಯ ಪ್ರದೇಶವನ್ನು ಹುಲಿ ಕಾರಿಡಾರ್‌ ಎಂದು ಕರೆಯಲಾಗಿದೆ. ಅಂಕಿ ಅಂಶಗಳ ಪ್ರಕಾರ ಕರ್ನಾಟಕದಲ್ಲಿ 2006ರಲ್ಲಿ 290 ಹುಲಿ, 2010ರಲ್ಲಿ 300, 2014ರಲ್ಲಿ 406 ಹುಲಿಗಳಿದ್ದವು. ಅದರಲ್ಲಿ 2014ರಲ್ಲಿ ನಾಗರಹೊಳೆಯಲ್ಲಿ 93 ಹುಲಿ, ಬಂಡೀಪುರದಲ್ಲಿ 110 ಹುಲಿಗಳಿರುವುದು ವಿಶೇಷ. ನಾಗರಹೊಳೆ, ಬಂಡೀಪುರ ಅರಣ್ಯ ಪ್ರದೇಶಗಳು ಹುಲಿ ಸಂತತಿ ಹೆಚ್ಚಳಕ್ಕೆ ಅನುಕೂಲವಾದ ವಾತಾವರಣ ವಿದೆ. ಹುಲಿಗಳಿಗೆ ಅಗತ್ಯವಾದ ಪರಿಸರ ನಿರ್ಮಾಣವಾಗಿದೆ. ಇಲ್ಲಿ ಆಹಾರ ಸಮಸ್ಯೆ ಇಲ್ಲ. ಹೀಗಾಗಿ ಈ ಪ್ರದೇಶದಲ್ಲಿ ಪ್ರತಿ ವರ್ಷವೂ ಹುಲಿ ಸಂತತಿ ಹೆಚ್ಚಾಗು ತ್ತಿರುವುದಕ್ಕೆ ಕಾರಣವಾಗಿದೆ ಎನ್ನುತ್ತಾರೆ ವನ್ಯಜೀವಿ ತಜ್ಞರು.

ಗ್ರಾಮಗಳತ್ತ ಹುಲಿ: ಹುಲಿಗಳು ತಮ್ಮ ವ್ಯಾಪ್ತಿಗಾಗಿ ಪರಸ್ಪರ ಕಾದಾಡುವುದು ಜೊತೆಗೆ ವಯಸ್ಸಾದ ಹುಲಿಗಳು ಬೇಟೆ ಯಾಡಲಾರದೆ ಗ್ರಾಮಗಳ ಸಾಕು ಪ್ರಾಣಿ ಗಳ ಮೇಲೆ ದಾಳಿ ನಡೆಸುವುದು ಸಾಮಾನ್ಯವಾದ ಸಂಗತಿಯಾಗಿದೆ. ಇದರಂತೆ ಕಳೆದ 3 ವರ್ಷಗಳಿಂದ ಹಲವು ಗ್ರಾಮಗಳಲ್ಲಿ 12ಕ್ಕೂ ಹೆಚ್ಚು ಹುಲಿಗಳು ಕಾಡಂಚಿನ ಗ್ರಾಮಗಳತ್ತ ಬಂದು ಜನ, ಜಾನುವಾರಗಳ ಮೇಲೆ ದಾಳಿ ನಡೆಸಿರುವ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಹಾಗೆಯೇ ಕೆಲವೊಂದು ಸಂದರ್ಭಗಳಲ್ಲಿ ದಸರಾ ಆನೆಗಳ ಸಹಾಯದಿಂದ ಹುಲಿ ಕಾರ್ಯಾಚರಣೆಯನ್ನೂ ನಡೆಸಿದ್ದಾರೆ.

ಎಚ್.ಡಿ. ಕೋಟೆಯಲ್ಲಿ ಕಾಡಂಚಿನ ಗ್ರಾಮಗಳಲ್ಲಿ ಮೂರು ಜನರನ್ನು ಕೊಂದು ಹಾಕಿದ್ದು, ಇದರಲ್ಲಿ ಹತ್ತು ಹುಲಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಯ ಸಹಕಾರದೊಂದಿಗೆ ಸೆರೆ ಹಿಡಿದಿರುವುದನ್ನು ಗಮನಿಸಬಹುದು.

ಕಳೆದ ಬಾರಿ 408 ಹುಲಿ ಪತ್ತೆ: ಕರ್ನಾಟಕ ರಾಜ್ಯದ ಬಂಡೀಪುರ ಹುಲಿ ಮೀಸಲು, ರಾಜೀವ್‌ ಗಾಂಧಿ (ನಾಗರಹೊಳೆ) ಹುಲಿ ಮೀಸಲು, ಭದ್ರಾ ಹುಲಿ ಮೀಸಲು, ಅಣಶಿ- ದಾಂಡೇಲಿ ಹುಲಿ, ಬಿಆರ್‌ಟಿ ಮೀಸಲು ಪ್ರದೇಶಗಳಲ್ಲಿ ಕಳೆದ ಬಾರಿ ನಡೆಸಿದ ಹುಲಿ ಗಣತಿಯಲ್ಲಿ 408 ಹುಲಿಗಳು ಪತ್ತೆಯಾಗಿದ್ದವು. ಆದರೆ ಈ ಬಾರಿಯ ಗಣತಿಯಲ್ಲಿ 70ಕ್ಕೂ ಹೆಚ್ಚು ಹುಲಿಗಳು ಹೆಚ್ಚಾಗಿದ್ದು, ಒಟ್ಟು 470 ಹುಲಿಗಳನ್ನು ರಾಜ್ಯದಲ್ಲಿ ಗುರುತಿಸಲಾಗಿದೆ.

ಟಾಪ್ ನ್ಯೂಸ್

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.