ಪ್ರವಾಸಿಗರಿಗೆ ವಲಯ ವನ್ಯಜೀವಿ ವಿಭಾಗದಿಂದ ಅಡ್ಡಿ

ಕಬ್ಬಿನಾಲೆಗೆ ಜಲಪಾತಗಳನ್ನು ನೋಡಲು ಬಂದಿದ್ದ ಹಲವು ಮಂದಿ

Team Udayavani, Jul 30, 2019, 5:25 AM IST

2907HBRE6

ಹೆಬ್ರಿ: ಕಬ್ಬಿನಾಲೆ ಸುತ್ತಮುತ್ತ ಪ್ರದೇಶ ಗಳಲ್ಲಿರುವ ಕಿರು ಜಲಪಾತಗಳನ್ನು ನೋಡಲು ಬಂದ ಪ್ರವಾಸಿಗರಿಗೆ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದವರು ಅಡ್ಡಿ ಪಡಿಸಿದ ಘಟನೆ ಜು. 28ರಂದು ನಡೆದಿದೆ.

ರವಿವಾರ ಹೆಚ್ಚಿನ ಸಂಖ್ಯೆಯಲ್ಲಿ ಈ ಭಾಗಕ್ಕೆ ಪ್ರವಾಸಿಗರು ಆಗಮಿಸಿದ್ದರು. ಆದರೆ ಹೊನ್ನೆಗುಂಡಿ ಜಲಪಾತದ ಬಳಿ ಇಲಾಖೆಯ ಅಧಿಕಾರಿಗಳು ನಿಂತು ಜಲಪಾತವನ್ನು ನೋಡಲು ಬಂದ ಪ್ರವಾಸಿಗರಿಗೆ ಕೆಳಗೆ ಇಳಿಯಲು ಬಿಡದೇ ಹಿಂದೆ ಕಳುಹಿಸಿದ್ದು ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಜಲಪಾತದ ಪ್ರದೇಶದಲ್ಲಿ ಪ್ರವಾಸಿಗರು ಅಲ್ಲಲ್ಲಿ ಪ್ಲಾಸ್ಟಿಕ್‌, ಬಿಯರ್‌ ಬಾಟಲ್‌ಗ‌ಳನ್ನು ಎಸೆದು ಪರಿಸರ ಹಾನಿ ಮಾಡುತ್ತಾರೆ. ಅಲ್ಲದೆ ಈ ಭಾಗದಲ್ಲಿ ಶನಿವಾರ ಮತ್ತು ರವಿವಾರದ ದಿನಗಳಲ್ಲಿ ಯುವಕ ಯುವತಿಯರು ಹೆಚ್ಚಾಗಿ ಬರುತ್ತಿದ್ದು ಕುಡಿತ ಅನೈತಿಕ ಚಟುವಟಿಕೆಗಳು ನಡೆದು ನಾಳೆ ಏನಾದರೂ ಅನಾಹುತ ಸಂಭವಿಸಿದಲ್ಲಿ ಯಾರು ಹೊಣೆ? ಈ ಕುರಿತು ನಮಗೆ ಮೇಲಾಧಿಕಾರಿಯ ಆದೇಶವಿರುವ ಕಾರಣ ಅಡ್ಡಿಪಡಿಸುತ್ತಿದ್ದೇವೆ ಎಂದು ಪ್ರವಾಸಿಗರಿಗೆ ಅಡ್ಡಪಡಿಸುತ್ತಿದ್ದ ಇಲಾಖೆಯ ಸಿಬಂದಿ ತಿಳಿಸಿದ್ದಾರೆ.

ಪ್ರಕೃತಿಕವಾಗಿರುವ ಜಲಪಾತಗಳನ್ನು ನೋಡಲು ವಲಯ ಅರಣ್ಯ ವನ್ಯಜೀವಿ ವಿಭಾಗ ಅಡ್ಡಿ ಪಡಿಸುವುದು ತಪ್ಪು. ರಾಜ್ಯದ ಪ್ರಸಿದ್ಧ ಜಲಪಾತಗಳನ್ನು ನೋಡಲು ಪ್ರವಾಸಿಗರು ಹೋಗುತ್ತಾರೆ. ಅಲ್ಲಿ ಕೂಡ ಪರಿಸರ ಹಾನಿಯಾಗುತ್ತದೆ ಎಂದು ನೋಡಲು ವಿರೋಧ ವಿದೆಯೇ. ಈ ಕಾನೂಕು ಕಬ್ಬಿನಾಲೆ ಮಾತ್ರ ಯಾಕೆ. ಇಂತಹ ಪ್ರದೇಶಗಳಲ್ಲಿ ಪರಿಸರ ಸ್ವಚ್ಚತೆ ಕಾಪಾಡಿ ಎಂಬ ಫಲಕಹಾಕಿ ಎಚ್ಚರವಹಿಸುವುದು ಬಿಟ್ಟು ತಡೆಯೊಡ್ಡು ವುದನ್ನು ಗ್ರಾಮಸ್ಥರು ವಿರೋಧಿಸುತ್ತಾರೆ. ಪ್ರವಾಸಿಗರು ಹಿಂತಿರುಗುವುತ್ತಿರುವುದು ಬೇಸರ ತರುತ್ತಿದೆ. ಇದು ಮುಂದುವರಿದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಶ್ರೀಕರ್‌ ಭಾರಧ್ವಜ್‌ ಕಬ್ಬಿನಾಲೆ ಎಚ್ಚರಿಸಿದ್ದಾರೆ.

ಪ್ರವಾಸಿಗರಿಗೆ ನಿರಾಸೆ
ಜಲಪಾತದ ಸಮೀಪ ಹೋಗಲು ಸರಿಯಾದ ದಾರಿಯಿಲ್ಲ.ರಸ್ತೆಯಲ್ಲಿಯೇ ನಿಂತು ನೋಡಿ ಹೋಗಬೇಕಾಗುತ್ತದೆ. ಇಂತಹ ಪ್ರವಾಸಿತಾಣಗಳನ್ನು ಸಂಬಂಧ ಪಟ್ಟ ಇಲಾಖೆ ಅಭಿವೃದ್ಧಿಗೆ ಇಲಾಖೆ ಮುಂದಾಗಿಲ್ಲ. ಈಗ ಪ್ರವಾಸಿಗರಿಗೆ ಕೂಡ ನಿರ್ಬಂಧ ವಿಧಿಸಲಾಗುತ್ತಿರುವುದರಿಂದ ದೂರದೂರುಗಳಿಂದ ಬರುವ ಪ್ರವಾಸಿಗರಿಗೆ ನಿರಾಸೆಯಾಗುತ್ತಿದೆ.
-ಸುಕೇಶ್‌ ಪೆರ್ಡೂರು, ಪ್ರವಾಸಿಗ

ಪರಿಶೀಲನೆ
ಈ ಪ್ರದೇಶ ಕಾರ್ಕಳ ವ್ಯಾಪ್ತಿಯ ಅಧಿಕಾರಿಗಳಿಗೆ ಬರುವುದರಿಂದ ಕೇವಲ ನಾಲ್ಕು ದಿನಗಳ ವರೆಗೆ ಮಾತ್ರ ನನಗೆ ಚಾರ್ಜ್‌ ಇದೆ . ಸಮಸ್ಯೆ ಬಗ್ಗೆ ಪರಿಶೀಲನೆ ಮಾಡಲಾಗುವುದು.
-ವಾಣಿಶ್ರೀ,
ವಲಯಾರಣ್ಯಾಧಿಕಾರಿ ,ವನ್ಯ ಜೀವಿ ವಿಭಾಗ

ಟಾಪ್ ನ್ಯೂಸ್

Revanna 2

Extended;ಎಚ್.ಡಿ.ರೇವಣ್ಣ ಅವರ ನ್ಯಾಯಾಂಗ ಬಂಧನ ಮೇ 14ರವರೆಗೆ ವಿಸ್ತರಣೆ

Bhupal: ʼಭೂಪೇಂದ್ರ ಜೋಗಿʼ ರೀಲ್ಸ್‌ ಖ್ಯಾತಿಯ ವ್ಯಕ್ತಿಗೆ ಅಪರಿಚಿತರಿಂದ ಚಾಕುವಿನಿಂದ ಹಲ್ಲೆ

Bhupal: ʼಭೂಪೇಂದ್ರ ಜೋಗಿʼ ರೀಲ್ಸ್‌ ಖ್ಯಾತಿಯ ವ್ಯಕ್ತಿಗೆ ಅಪರಿಚಿತರಿಂದ ಚಾಕುವಿನಿಂದ ಹಲ್ಲೆ

1-wwewewqe

Haryana ಬಿಜೆಪಿ ಸರಕಾರಕ್ಕೆ ಶಾಕ್: ಕೈಗೆ ಬೆಂಬಲ ನೀಡಿದ 3 ಪಕ್ಷೇತರರು

ವರದಿ ಮಾಡಲು ಹೋದವರ ಮೇಲೆ ಕಾಡಾನೆ ದಾಳಿ… ಕ್ಯಾಮೆರಾಮೆನ್ ಮೃತ್ಯು, ವರದಿಗಾರ, ಚಾಲಕ ಪಾರು

ವರದಿ ಮಾಡಲು ಹೋದವರ ಮೇಲೆ ಕಾಡಾನೆ ದಾಳಿ… ಕ್ಯಾಮೆರಾಮೆನ್ ಮೃತ್ಯು, ವರದಿಗಾರ, ಚಾಲಕ ಪಾರು

1-wqe-wq-ewqeqq

Sirsi; ಶಾಸಕ ಭೀಮಣ್ಣ ನಾಯ್ಕ ಸೇರಿ ಮೂವರ ಮೇಲೆ ಜೇನು ನೊಣಗಳ ದಾಳಿ

11

Politics: ಪ್ರಜ್ವಲ್‌ ರೇವಣ್ಣ ಪ್ರಕರಣಕ್ಕೆ ಡಿಕೆಶಿಯೇ ಮಾಸ್ಟರ್ ಮೈಂಡ್; ಸಿ.ಪಿ.ಯೋಗೇಶ್ವರ್

prahlad-joshi

2025 ರಿಂದ ಕಲ್ಲಿದ್ದಲು ಆಮದು ಸಂಪೂರ್ಣವಾಗಿ ಬಂದ್: ಪ್ರಹ್ಲಾದ್ ಜೋಶಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-

Udupi: ಸಾಲ ಪ್ರಕರಣ: ಆರೋಪಿಗಳು ದೋಷಮುಕ್ತ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

6-KAUP

Kaup: ಪಾಂಗಾಳದಲ್ಲಿ ಆಕಸ್ಮಿಕ ಬೆಂಕಿ: ಬೆಂಕಿ ನಂದಿಸಲು ನೆರವಾದ ತಹಶೀಲ್ದಾರ್

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Karkala ಪರಶುರಾಮ ಥೀಂ ಪಾರ್ಕ್‌ ಸಮಾಜದ್ದು: ಸುನಿಲ್‌ ಕುಮಾರ್‌

Karkala ಪರಶುರಾಮ ಥೀಂ ಪಾರ್ಕ್‌ ಸಮಾಜದ್ದು: ಸುನಿಲ್‌ ಕುಮಾರ್‌

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Revanna 2

Extended;ಎಚ್.ಡಿ.ರೇವಣ್ಣ ಅವರ ನ್ಯಾಯಾಂಗ ಬಂಧನ ಮೇ 14ರವರೆಗೆ ವಿಸ್ತರಣೆ

Bhupal: ʼಭೂಪೇಂದ್ರ ಜೋಗಿʼ ರೀಲ್ಸ್‌ ಖ್ಯಾತಿಯ ವ್ಯಕ್ತಿಗೆ ಅಪರಿಚಿತರಿಂದ ಚಾಕುವಿನಿಂದ ಹಲ್ಲೆ

Bhupal: ʼಭೂಪೇಂದ್ರ ಜೋಗಿʼ ರೀಲ್ಸ್‌ ಖ್ಯಾತಿಯ ವ್ಯಕ್ತಿಗೆ ಅಪರಿಚಿತರಿಂದ ಚಾಕುವಿನಿಂದ ಹಲ್ಲೆ

1-wwewewqe

Haryana ಬಿಜೆಪಿ ಸರಕಾರಕ್ಕೆ ಶಾಕ್: ಕೈಗೆ ಬೆಂಬಲ ನೀಡಿದ 3 ಪಕ್ಷೇತರರು

ವರದಿ ಮಾಡಲು ಹೋದವರ ಮೇಲೆ ಕಾಡಾನೆ ದಾಳಿ… ಕ್ಯಾಮೆರಾಮೆನ್ ಮೃತ್ಯು, ವರದಿಗಾರ, ಚಾಲಕ ಪಾರು

ವರದಿ ಮಾಡಲು ಹೋದವರ ಮೇಲೆ ಕಾಡಾನೆ ದಾಳಿ… ಕ್ಯಾಮೆರಾಮೆನ್ ಮೃತ್ಯು, ವರದಿಗಾರ, ಚಾಲಕ ಪಾರು

1-wqe-wq-ewqeqq

Sirsi; ಶಾಸಕ ಭೀಮಣ್ಣ ನಾಯ್ಕ ಸೇರಿ ಮೂವರ ಮೇಲೆ ಜೇನು ನೊಣಗಳ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.