ಅಮೆರಿಕ: ಗುಂಡಿನ ದಾಳಿಗೆ 30 ಬಲಿ
Team Udayavani, Aug 5, 2019, 5:24 AM IST
ವಾಷಿಂಗ್ಟನ್: ಅಮೆರಿಕದಲ್ಲಿ ಶನಿವಾರ ಮತ್ತು ರವಿವಾರ ನಡೆದ ಎರಡು ಗುಂಡಿನ ದಾಳಿಯಲ್ಲಿ ಒಟ್ಟು 30 ಜನರು ಸಾವನ್ನಪ್ಪಿ ದ್ದಾರೆ. 24 ಗಂಟೆಗಳ ಅವಧಿಯಲ್ಲಿ ಟೆಕ್ಸಾಸ್ ಮತ್ತು ಓಹಿಯೊದಲ್ಲಿ ಗುಂಡಿನ ದಾಳಿ ನಡೆದಿದೆ. ಟೆಕ್ಸಾಸ್ನಲ್ಲಿ ಶನಿವಾರ ರಾತ್ರಿ ದಾಳಿ ನಡೆದಿದ್ದು, 20 ಜನರು ಸಾವನ್ನಪ್ಪಿದ್ದಾರೆ. ಓಹಿಯೊದಲ್ಲಿ ರವಿವಾರ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿ ಹತ್ತು ಜನರ ಹತ್ಯಗೈದಿ ದ್ದಾನೆ. ನೈಟ್ಕ್ಲಬ್ಗಳು, ಬಾರ್ಗಳು, ಆರ್ಟ್ ಗ್ಯಾಲರಿ ಮತ್ತು ಅಂಗಡಿಗಳಿಗೆ ಹೆಸರಾದ ಓಹಿಯೋದಲ್ಲಿ ದಾಳಿ ನಡೆಸಿದ ವ್ಯಕ್ತಿಯನ್ನು ಸ್ಥಳದಲ್ಲೇ ಹತ್ಯೆಗೈಯಲಾಗಿದೆ ಎಂದು ಪೊಲೀ ಸರು ತಿಳಿಸಿದ್ದಾರೆ. ಟೆಕ್ಸಾಸ್ನ ಎಲ್ ಪಾಸೋ ಪಟ್ಟಣದ ವಾಲ್ಮಾರ್ಟ್ ಮಳಿಗೆಯಲ್ಲಿ ಸಶಸ್ತ್ರಧಾರಿ 21 ವರ್ಷದ ದುಷ್ಕರ್ಮಿಯೊಬ್ಬ ಒಳನುಗ್ಗಿ ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿದ್ದಾನೆ. ಇಲ್ಲಿ 20 ಜನರು ಸಾವನ್ನಪ್ಪಿದ್ದು, 26 ಜನರಿಗೆ ಗಾಯವಾಗಿದೆ.
ಜನಾಂಗೀಯ ದ್ವೇಷ ಕಾರಣ: ದಾಳಿ ನಡೆಸಿ ದಾತನನ್ನು ಪ್ಯಾಟ್ರಿಕ್ ಕ್ರೂಸಿಯಸ್ ಎಂದು ಗುರುತಿಸಲಾಗಿದ್ದು, ದಾಳಿ ಅನಂತರ ಆತ ಪೊಲೀಸರಿಗೆ ಶರಣಾಗಿದ್ದಾನೆ. ಈತ ಡಲ್ಲಾಸ್ ನಗರದವ ಎಂದು ಹೇಳಲಾಗಿದೆ. ಟೆಕ್ಸಾಸ್ನಲ್ಲಿ ಹಿಸ್ಪಾನಿಕ್ ಜನರ ವಿರುದ್ಧದ ದ್ವೇಷವೇ ಈ ದಾಳಿಗೆ ಕಾರಣ ಎಂದು ಶಂಕಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಇನ್ಸ್ಟಾ ಪ್ರೊಫೈಲ್ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..
NewsClick ಸ್ಥಾಪಕ ಪ್ರಬೀರ್ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!
T20 ವಿಶ್ವಕಪ್ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಪೋಷಕರಿಗೆ ಆತಂಕ