ತೆರೆಮರೆಯಲ್ಲಿ ಪಿಒಪಿ ಗಣೇಶ ಮೂರ್ತಿ ಮಾರಾಟ

ಮಾರಾಟಗಾರರಿಂದ ಕದ್ದು ಮುಚ್ಚಿ ಬುಕ್ಕಿಂಗ್‌ • ಚೆಕ್‌ಪೋಸ್ಟ್‌ಗಳಲ್ಲಿ ಪರಿಶೀಲನೆಗೆ ಸೂಚನೆ

Team Udayavani, Aug 22, 2019, 4:32 PM IST

22-Agust-31

ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಮಂಡ್ಯದ ಒಳಾಂಗಣ ಕ್ರೀಡಾಂಗಣ ಪಕ್ಕ ವೈವಿಧ್ಯಮಯ ಗಣೇಶ ಮೂರ್ತಿಗಳನ್ನು ಮಾರಾಟಕ್ಕಿಟ್ಟಿರುವುದು.

ಮಂಡ್ಯ: ಪ್ಲಾಸ್ಟರ್‌ ಆಫ್ ಪ್ಯಾರೀಸ್‌(ಪಿಒಪಿ) ಗಣೇಶ ಮೂರ್ತಿಗಳನ್ನು ರಾಜ್ಯದಲ್ಲಿ ನಿಷೇಧ ಮಾಡಿದ್ದರೂ ಜಿಲ್ಲಾ ವ್ಯಾಪ್ತಿಯೊಳಗೆ ತೆರೆಮರೆಯಲ್ಲಿ ಮುಂಗಡ ಬುಕ್ಕಿಂಗ್‌ ಮಾಡಿಕೊಂಡು ಮಾರಾಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವುದು ಕಂಡುಬಂದಿದೆ.

ಪಿಒಪಿ ಗಣೇಶ ಮೂರ್ತಿಗಳನ್ನು ತಂದು ಅಡಗಿಸಿಟ್ಟಿರುವ ಕೆಲವು ಗಣಪತಿ ವಿಗ್ರಹ ಮಾರಾಟಗಾರರು ಮೇಲ್ನೋಟಕ್ಕೆ ಕಾಗದ ಹಾಗೂ ಮಣ್ಣಿನಿಂದ ತಯಾರಿಸಿದ ಮೂರ್ತಿಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಪಿಒಪಿ ಮೂರ್ತಿಗಳಿಗೆ ಬೇಡಿಕೆ ಬಂದವರಿಂದ ಮುಂಗಡವಾಗಿ ಹಣ ಪಡೆದುಕೊಂಡು ಬುಕ್ಕಿಂಗ್‌ ಮಾಡಿಕೊಳ್ಳುತ್ತಿದ್ದು, ಹಬ್ಬಕ್ಕೆ ಒಂದೆರಡು ದಿನಗಳಿರುವಾಗ ಆ ಮೂರ್ತಿಗಳನ್ನು ಕೊಡುವ ಭರವಸೆ ನೀಡಿ ಕಳುಹಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಮಣ್ಣಿನ ಮೂರ್ತಿಗಳೇ ಹೆಚ್ಚು: ಗೌರಿ-ಗಣೇಶ ಹಬ್ಬಕ್ಕೆ ಹತ್ತು ದಿನಗಳಿರುವಾಗಲೇ ಮಂಡ್ಯದ ಒಳಾಂಗಣ ಕ್ರೀಡಾಂಗಣದ ಪಕ್ಕ, ನೂರಡಿ ರಸ್ತೆ, ಪೇಟೆಬೀದಿ, ಬಂದೀಗೌಡ ಬಡಾವಣೆ ಸೇರಿದಂತೆ ವಿವಿಧೆಡೆ ವೈವಿಧ್ಯಮಯ ಗಣೇಶ ಮೂರ್ತಿಗಳು ಬಂದು ಠಿಕಾಣಿ ಹೂಡಿವೆ. ಎಲ್ಲೆಡೆ ಕಾಗದ ಹಾಗೂ ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನೇ ಮಾರಾಟಕ್ಕೆ ಇಡಲಾಗಿದೆ. ಪುಟ್ಟ ಗಣೇಶನಿಂದ ಹಿಡಿದು ಏಳರಿಂದ ಎಂಟು ಅಡಿ ಎತ್ತರದ ಮಣ್ಣಿನ ಗಣೇಶ ಮೂರ್ತಿಗಳು ಹಾಗೂ 12 ರಿಂದ 15 ಅಡಿ ಎತ್ತರದ ಕಾಗದದಿಂದ ತಯಾರಿಸಿದ ಗಣೇಶ ವಿಗ್ರಹಗಳು ವಿವಿಧ ಆಕೃತಿಯಲ್ಲಿ ಮೂಡಿದ್ದು ನೋಡುಗರನ್ನು ಆಕರ್ಷಿಸುತ್ತಿವೆ.

ಮುಂಗಡ ಹಣ: ಈಗಾಗಲೇ ಸುತ್ತಮುತ್ತಲ ಊರುಗಳಿಂದ ಯುವಕರು ಬಂದು ಗಣೇಶ ವಿಗ್ರಹಗಳನ್ನು ನೋಡಿ ಇಷ್ಟಪಟ್ಟು ಮುಂಗಡ ಹಣ ಕೊಟ್ಟು ಹೋಗುತ್ತಿದ್ದಾರೆ. ಕೆಲವು ಯುವಕರು ಪಿಒಪಿ ಗಣೇಶ ಮೂರ್ತಿಗಳನ್ನು ಎಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಪಡೆದು ವರ್ತಕರನ್ನು ಸಂಪರ್ಕಿಸುತ್ತಿದ್ದಾರೆ.

ಅವರ ಮೂಲಕ ಪಿಒಪಿ ಗಣೇಶ ಮೂರ್ತಿಗಳಿರುವ ಜಾಗಗಳಿಗೆ ತೆರಳಿ ಅಲ್ಲಿ ತಮಗಿಷ್ಟವಾದ ಮೂರ್ತಿಗಳನ್ನು ಆಯ್ಕೆ ಮಾಡಿ ಬುಕ್‌ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಕಾಗದದ ಗಣೇಶ ವಿಗ್ರಹ: ಪಿಒಪಿ ಗಣೇಶ ಮೂರ್ತಿಗಳಿಗೆ ನಿಷೇಧ ಹೇರಿರುವುರಿಂದ ಯಾರೂ ಅವುಗಳನ್ನು ಬಹಿರಂಗವಾಗಿ ಮಾರಾಟಕ್ಕಿಡುವ ಧೈರ್ಯ ಮಾಡಿಲ್ಲ. ಮಣ್ಣಿನ ಮೂರ್ತಿಗಳನ್ನು ಕೊಂಡೊಯ್ಯುವುದು ಕಷ್ಟ. ಅವುಗಳನ್ನು ಸಾಗಿಸುವ ಸಮಯದಲ್ಲಿ ಸ್ವಲ್ಪ ಜಾಗ್ರತೆ ತಪ್ಪಿದರೂ ಬಿರುಕು ಬಿಡುತ್ತವೆ. ಕಾಗದದಿಂದ ತಯಾರಿಸಿದ ವಿಗ್ರಹಗಳನ್ನು ರಕ್ಷಣೆ ಇನ್ನೂ ಕಷ್ಟವಾಗಿದ್ದು, ಮಳೆ ನೀರಿನಿಂದ ಸಂರಕ್ಷಣೆ ಮಾಡಲು ಸಾಧ್ಯವಿಲ್ಲವೆಂಬ ಕಾರಣಕ್ಕೆ ಯುವಕರು ಪಿಒಪಿ ಗಣೇಶಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ.

ಮಾರಾಟಗಾರರ ಬಳಿ ಪಿಒಪಿಗಳನ್ನೇ ಕೇಳುತ್ತಿದ್ದಾರೆಯಾದರೂ ಅವುಗಳು ಸುಲಭಕ್ಕೆ ಸಿಗುತ್ತಿಲ್ಲವಾಗಿವೆ. ಅದಕ್ಕಾಗಿ ಕೆಲವು ಯುವಕರು ವಿಧಿಯಿಲ್ಲದೆ ಮಣ್ಣು ಅಥವಾ ಕಾಗದದ ಗಣೇಶ ಮೂರ್ತಿಗಳ ಖರೀದಿಗೆ ಮೊರೆ ಹೋಗುತ್ತಿದ್ದಾರೆ.

ಸಾರ್ವಜನಿಕರು ಪ್ಲಾಸ್ಟರ್‌ ಆಫ್ ಪ್ಯಾರೀಸ್‌, ಬಣ್ಣ ಲೇಪಿತ ವಿಗ್ರಹಗಳನ್ನು ಕಡೆಗಣಿಸಬೇಕು. ಬಣ್ಣ ಹಚ್ಚಿಲ್ಲದ ಮಣ್ಣಿನಿಂದ ಮಾಡಿರುವ ಗಣಪತಿ ವಿಗ್ರಹಗಳನ್ನು ಖರೀದಿಸಿ ಹಬ್ಬ ಆಚರಿಸಬೇಕು. ಪಿಒಪಿ ಅಥವಾ ಬಣ್ಣ ಲೇಪಿತ ವಿಗ್ರಹಗಳನ್ನು ನಿಯ ಮಬಾಹೀರವಾಗಿ ನದಿ, ಕಾಲುವೆ, ಬಾವಿ, ಕೆರೆ ಸೇರಿದಂತೆ ಇನ್ನಿತರ ಜಲಮೂಲಗಳಿಗೆ ಬಿಡುವುದು ಕಂಡುಬಂದಲ್ಲಿ ಅಂತಹವರಿಗೆ ಜಲ ಮಾಲಿನ್ಯ ತಡೆ ಮತ್ತು ನಿಯಂ ತ್ರಣ ಕಾಯ್ದೆ 1974ರ ಕಲಂ 45-ಎ ಅನ್ವಯ 10 ಸಾವಿರ ರೂ.ವರೆಗೆ ದಂಡ ಮತ್ತು ಜೈಲು ಶಿಕ್ಷೆಗೆ ಗುರಿಯಾಗಬೇಕಾ ಗುತ್ತದೆ ಎಂಬ ಎಚ್ಚರಿಕೆ ಯನ್ನು ಜಿಲ್ಲಾಡಳಿತ ನೀಡಿದೆ.

ಟಾಪ್ ನ್ಯೂಸ್

Swati Maliwal Assault Case: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್ ಬಂಧನ

Swati Maliwal Assault Case: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್ ಬಂಧನ

Hubli; ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

Hubli; ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Agra: ಆಗ್ರಾದಲ್ಲಿ ತಲೆ ಎತ್ತಿದೆ ತಾಜ್‌ ಮಹಲ್‌ ಪ್ರತಿಸ್ಪರ್ಧಿ

Agra: ಆಗ್ರಾದಲ್ಲಿ ತಲೆ ಎತ್ತಿದೆ ತಾಜ್‌ ಮಹಲ್‌ ಪ್ರತಿಸ್ಪರ್ಧಿ

2

ಎಸ್‌ಎಸ್‌ಎಲ್‌ಸಿ ಗ್ರೇಸ್‌ ಮಾರ್ಕ್ಸ್ ರದ್ದು: ಪ್ರತಿಭಾವಂತರ ಶ್ರಮಕ್ಕೆ ಮನ್ನಣೆ 

ಕ್ಯಾಂಟರ್ ಅಡ್ಡಗಟ್ಟಿ 32 ಲಕ್ಷ ರೂ. ದರೋಡೆ: ಖಾರದ ಪುಡಿ ಎರಚಿ ಹಲ್ಲೆ, ಇಬ್ಬರಿಗೆ ಗಾಯ

ಕ್ಯಾಂಟರ್ ಅಡ್ಡಗಟ್ಟಿ 32 ಲಕ್ಷ ರೂ. ದರೋಡೆ: ಖಾರದ ಪುಡಿ ಎರಚಿ ಹಲ್ಲೆ, ಇಬ್ಬರಿಗೆ ಗಾಯ

Bengaluru ಎಷ್ಟೇ ಮಳೆ ಬಂದರೂ ಪಂದ್ಯ ನಡೆಸಬಹುದು; ಏನಿದು ಚಿನ್ನಸ್ವಾಮಿಯ ಸಬ್ ಏರ್ ಸಿಸ್ಟಂ?

Bengaluru ಎಷ್ಟೇ ಮಳೆ ಬಂದರೂ ಪಂದ್ಯ ನಡೆಸಬಹುದು; ಏನಿದು ಚಿನ್ನಸ್ವಾಮಿಯ ಸಬ್ ಏರ್ ಸಿಸ್ಟಂ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli; Government should have woken up after Neha case: Jayamrinthujaya Swamiji

Hubli; ನೇಹಾ ಪ್ರಕರಣದ ಬಳಿಕ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು: ಜಯಮೃಂತ್ಯುಜಯ ಸ್ವಾಮೀಜಿ

ಅಂಜಲಿ ಹತ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ

Belagavi; ಅಂಜಲಿ ಹತ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ

Hubli; ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

Hubli; ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

Hubli; ಅಂಜಲಿ ಅಂಬಿಗೇರ ಪ್ರಕರಣ ತನಿಖೆ ಸಿಐಡಿಗೆ ವಹಿಸಲಿ: ಸಂತೋಷ್ ಲಾಡ್

Hubli; ಅಂಜಲಿ ಅಂಬಿಗೇರ ಪ್ರಕರಣ ತನಿಖೆ ಸಿಐಡಿಗೆ ವಹಿಸಲಿ: ಸಂತೋಷ್ ಲಾಡ್

Crime: ಜಗಳ ವೇಳೆ ತಳ್ಳಿದಾಗ ವಿದ್ಯುತ್‌ ತಂತಿ ಮೇಲೆ ಬಿದ್ದ ಯುವಕ ಸಾವು: 2 ಆರೋಪಿಗಳ ಬಂಧನ

Crime: ಜಗಳ ವೇಳೆ ತಳ್ಳಿದಾಗ ವಿದ್ಯುತ್‌ ತಂತಿ ಮೇಲೆ ಬಿದ್ದ ಯುವಕ ಸಾವು: 2 ಆರೋಪಿಗಳ ಬಂಧನ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Biography of Mother Teresa in web series

Mother Teresa; ವೆಬ್‌ ಸೀರೀಸ್‌ನಲ್ಲಿ ಮದರ್‌ ತೆರೇಸಾ ಜೀವನ ಚರಿತ್ರೆ

Swati Maliwal Assault Case: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್ ಬಂಧನ

Swati Maliwal Assault Case: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್ ಬಂಧನ

1-panaji

Panaji: 55ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪೋಸ್ಟರ್ ಅನಾವರಣ

Hubli; Government should have woken up after Neha case: Jayamrinthujaya Swamiji

Hubli; ನೇಹಾ ಪ್ರಕರಣದ ಬಳಿಕ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು: ಜಯಮೃಂತ್ಯುಜಯ ಸ್ವಾಮೀಜಿ

ಅಂಜಲಿ ಹತ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ

Belagavi; ಅಂಜಲಿ ಹತ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.