ಭಾರತಕ್ಕೆ ಏರ್ಸ್ಪೇಸ್ ಬಂದ್; ಯೂ ಟರ್ನ್ ಹೊಡೆದ ಪಾಕಿಸ್ಥಾನ!
ಸದ್ಯ ಮಾತುಕತೆಯಷ್ಟೇ, ಬೇಕೆಂದಾಗ ನಿರ್ಧಾರ ಕೈಗೊಳ್ಳುತ್ತೇವೆ ಎಂದ ಪಾಕ್
Team Udayavani, Aug 29, 2019, 5:20 PM IST
ಇಸ್ಲಾಮಾಬಾದ್: ಭಾರತಕ್ಕೆ ವಾಯು ಮಾರ್ಗವನ್ನೂ ಬಂದ್ ಮಾಡುತ್ತೇವೆ ಎಂದು ಹೇಳಿಕೊಂಡು ಓಡಾಡುತ್ತಿದ್ದ ಪಾಕಿಸ್ಥಾನ ಸದ್ಯ ಉಲ್ಟಾ ಹೊಡೆಯುತ್ತಿದೆ. ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೆ ಬೇಕೆಂದಾದಲ್ಲಿ ನಾವು ವಾಯುಮಾರ್ಗ ಬಂದ್ ಮಾಡುತ್ತೇವೆ ಎಂದು ಅದು ಹೇಳಿದೆ.
ಪಾಕ್ನ ವಿದೇಶಾಂಗ ಇಲಾಖೆ ವಕ್ತಾರ ಮೊಹಮ್ಮದ್ ಫೈಸಲ್ ಈ ಬಗ್ಗೆ ಹೇಳಿಕೆ ನೀಡಿದ್ದು, ವಾಯು ಮಾರ್ಗ ಬಂದ್ ಮಾಡುವ ಬಗ್ಗೆ ಉನ್ನತ ಮಟ್ಟದ ಮಾತುಕತೆ ನಡೆಯುತ್ತಿದೆಯಷ್ಟೇ ಎಂದು ಹೇಳಿದ್ದಾರೆ. ಭಾರತದ ವಿರುದ್ಧ ಕೈಗೊಳ್ಳಬಹುದಾದ ಕ್ರಮಗಳಲ್ಲಿ ಇದೂ ಒಂದು ಎಂದು ಅವರು ಹೇಳಿದ್ದಾರೆ.
ಇದರಿಂದ ಸದ್ಯ ವಾಯುಮಾರ್ಗವನ್ನು ಅದು ಬಂದ್ ಮಾಡುವುದಿಲ್ಲ ಎಂದು ಹೇಳಲಾಗಿದೆ. ಕಾರಣ ಹೀಗೆ ಮಾಡಿದ್ದೇ ಆದಲ್ಲಿ ವಿಮಾನ ಹಾರಾಟದಿಂದ ಬರಬಹುದಾದ ಕೋಟ್ಯಂತರ ರೂ. ನಷ್ಟವಾಗುತ್ತದೆ. ಮೊದಲೇ ಆರ್ಥಿಕತೆ ಹಳ್ಳ ಹಿಡಿದಿರುವಾಗ, ವಾಯು ಮಾರ್ಗ ಬಂದ್ ಮಾಡಿದ್ದೇ ಆದಲ್ಲಿ ಮತ್ತಷ್ಟು ಹಣ ನಷ್ಟವಾಗುತ್ತದೆ ಎನ್ನುವುದೇ ಪಾಕ್ ಉಲ್ಟಾ ಹೊಡೆಯಲು ಕಾರಣ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ