ಕದ್ದು ಮುಚ್ಚಿ ಪಿಒಪಿ ಗಣೇಶ ಮೂರ್ತಿಗಳ ಮಾರಾಟ


Team Udayavani, Aug 31, 2019, 12:29 PM IST

hasan-tdy-1

ಹಾಸನದ ಮಹಾವೀರ ಸರ್ಕಲ್, ಕಸ್ತೂರಿಬಾ ರಸ್ತೆಯಲ್ಲಿ ಗಣೇಶಮೂರ್ತಿಗಳ ಮಾರಾಟ.

ಹಾಸನ: ಗೌರಿ-ಗಣೇಶ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಬಣ್ಣ – ಬಣ್ಣದ ಗಣೇಶ ಮೂರ್ತಿಗಳು ಈಗ ಮಾರುಕಟ್ಟೆಗೆ ಬಂದಿವೆ. ಪ್ಲಾಸ್ಟರ್‌ ಆಫ್ ಪ್ಯಾರೀಸ್‌ (ಪಿಒಪಿ) ಮತ್ತು ತೈಲ ವರ್ಣ( ಆಯಿಲ್ ಪೈಂಟ್) ಗಣೇಶ ಮೂರ್ತಿಗಳ ಬದಲು ಪರಿಸರಸ್ನೇಹಿ ಬಣ್ಣಗಳ ಗಣೇಶ ಮೂರ್ತಿ ಗಳನ್ನು ಪೂಜಿಸಿ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸ್ಥಳೀಯ ಸಂಸ್ಥೆಗಳು ಜಾಗೃತಿ ಮೂಡಿಸಿದರೂ ಅಲ್ಲಲ್ಲಿ ಪಿಒಪಿ ಗಣೇಶ ಮೂರ್ತಿಗಳ ಮಾರಾಟ ಕದ್ದುಮುಚ್ಚಿ ನಡೆಯುವುದು ಮಾತ್ರ ನಿಂತಿಲ್ಲ.

ಜಾಗೃತಿ ಮೂಡಿಸಿದರೂ ಪರಿಸರಕ್ಕೆ ಮಾರಕವಾದ ನಿಷೇಧಿತ ವರ್ಣಗಳ ಗಣೇಶ ಮೂರ್ತಿಗಳ ಮಾರಾಟದ ಸುಳಿವು ಪಡೆದಿರುವ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಪರಿಶೀಲನೆ ನಡೆಸುತ್ತಿದ್ದು ಪಿಒಪಿ ಮತ್ತು ತೈಲ ವರ್ಣದ ಗಣೇಶಮೂರ್ತೀಗಳ ಮಾರಾಟದ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.

ಜಲಚರಗಳಿಗೆ ಧಕ್ಕೆ: ಬಹುತೇಕ ವೃತಿಪರರು ಮಣ್ಣಿನ ಗಣೇಶಮೂರ್ತಿಗಳಿಗೆ ಜಲವರ್ಣ (ವಾಟರ್‌ ಪೈಂಟ್) ಮಾಡಿ ಮಾರಾಟ ಮಾಡುತ್ತಿದ್ದಾರೆ. ಇಂತಹ ಗಣೇಶ ಮೂರ್ತಿಗಳು ಮಾರಾಟವಾಗದೆ ಬಾಕಿ ಉಳಿದರೆ ಮುಂದಿನ ವರ್ಷದ ವೇಳೆಗೆ ಆ ಮೂರ್ತಿ ಗಳ ಬಣ್ಣ ಮಾಸುತ್ತವೆ. ಆದರೆ ಅಂತಹ ಮೂರ್ತಿ ಗಳಿಂದ ಪರಿಸರಕ್ಕೆ ಹಾನಿ ಇಲ್ಲ. ಆದರೆ ಆಕರ್ಷಕವಾಗಿ ಕಾಣಲೆಂದು ಗಣೇಶಮೂರ್ತಿಗಳಿಗೆ ತೈಲವರ್ಣ ಬಳಸಿದರೆ ಅದರಿಂದ ನೀರು ಕಲುಷಿತವಾಗಿ ಜಲಚರಗಳಿಗೆ ಧಕ್ಕೆಯಾಗುತ್ತದೆ. ಈ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಪರಸರಸ್ನೇಹಿ ಸಂಘಟನೆಗಳು, ಹಿಂದೂ ಜನಜಾಗೃತಿ ಸಮಿತಿ ಜನ ಜಾಗೃತಿ ಮೂಡಿಸಿದ ಪರಿಣಾಮ ಮಾರುಕಟ್ಟೆಗಳಲ್ಲಿ ಈಗ ಬಹುಪಾಲು ಜಲವರ್ಣದ ಗಣೇಶ ಮೂರ್ತಿ ಗಳು ಕಾಣುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಅಲ್ಲಲ್ಲಿ ತೈಲ ವರ್ಣ ಹಾಗೂ ಪಿಒಪಿ ಗಣೇಶಮೂರ್ತಿ ಪ್ರತಿಷ್ಠಾಪನೆಯಾಗುತ್ತಿವೆ ಎಂದು ವೃತಿಪರ ಗಣೇಶ ಮೂರ್ತಿಗಳ ಮಾರಾಟಗಾರರಿಂದ ಸಾಮಾನ್ಯವಾಗಿ ಕೇಳಿಬರುತ್ತಿದೆ.

ಈ ಹಿನ್ನಲೆಯಲ್ಲಿ ಕಳೆದೊಂದು ವಾರದಿಂದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಗಳು ದೂರು ಬಂದ ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ, ಇದುವರೆಗೂ ಪಿಒಪಿ ಗಣೇಶ ಮೂರ್ತಿಗಳ ಮಾರಾಟದ ಸುಳಿವು ಸಿಕ್ಕಿಲ್ಲ.

ಪಿಒಪಿ ಗಣೇಶಮೂರ್ತಿಗಳನ್ನೇಕೆ ಬಯಸುತ್ತಾರೆ?: ಗಣೇಶಮೂರ್ತಿಗಳ ವೃತ್ತಿಪರ ಮಾರಾಟಗಾರರು ಹೇಳುವುದೇನೆಂದರೆ, ಪಿಒಪಿ ಮೂರ್ತಿಗಳು ಗಣೇಶನ ವಿವಿಧ ಆಕೃತಿಗಳಲ್ಲಿ ಅಂದರೆ, ನಾಟ್ಯಭಂಗಿ, ಸೈನಿಕನ ಭಂಗಿ ಸೇರಿ ವಿವಿವಿಧ ರೂಪಗಳಲ್ಲಿ ಆಕರ್ಷಕವಾಗಿ ನಿರ್ಮಾಣವಾಗಿರುತ್ತವೆ. ಹಗುರವಾಗಿದ್ದು ಸಾಗಣೆ ಸುಲಭ. ಹೀಗಾಗಿ ಬೃಹತ್‌ ಗಾತ್ರದ, ವಿಭಿನ್ನ ರೂಪದ ಗಣಪತಿಗಳನ್ನು ಪ್ರತಿಷ್ಠಾಪಿಸಿದ್ದೇವೆ ಎಂಬ ಪ್ರತಿಷ್ಠೆ ಪ್ರದರ್ಶಿಸಲು ಗ್ರಾಮೀಣ ಜನರು ಪಿಒಪಿ ಮೂರ್ತಿ ಖರೀದಿಸುತ್ತಾರೆ. ನಗರ, ಪಟ್ಟಣ ಪ್ರದೇಶ ದಲ್ಲಿ ಪಿಒಪಿ ಗಣೇಶಮೂರ್ತಿ ಮಾರಾಟವಾಗದಿದ್ದರೂ ಬೆಂಗಳೂರು ಮತ್ತಿತರ ಕಡೆಗಳಿಂದ ಗುಟ್ಟಾಗಿ ತಂದು ಮಾರಾಟ ಮಾಡುವ ಜಾಲವೇ ಇದೆ ಎಂದು ಅಭಿಪ್ರಾಯಪಡುತ್ತಾರೆ.

ಅಧಿಕಾರಿಗಳು ಚುರುಕಾಗಬೇಕು: ನಗರಗಳಲ್ಲಿ ಪಿಒಪಿ ತೈಲವರ್ಣದ ಗಣೇಶಮೂರ್ತಿಗಳು ಮಾರಾಟವಾಗುವುದಿಲ್ಲ. ಆದರೆ, ಗ್ರಾಮೀಣ ಪ್ರದೇಶ ಗಳಲ್ಲಿ ಮಾರಾಟವಾಗುತ್ತವೆ. ಕೇಳಿದ ಸ್ಥಳಕ್ಕೆ ತಲು ಪಿಸುವ ಜಾಲವೇ ಇದೆ. ಅಧಿಕಾರಿಗಳು ಇನ್ನಷ್ಟು ಚುರುಕಾಗಿ ಪರಿಶೀಲನೆ ನಡೆಸಬೇಕು. ನಾವು ಪರಿಸರ ಸ್ನೇಹಿ ಬಣ್ಣ ಬಳಸಿ ನಿರ್ಮಿಸಿದ ಮೂರ್ತಿಗಳನ್ನು ಜನ ನೋಡಿ. ದರ ವಿಚಾರಿಸಿ ಹೋಗುತ್ತಾರೆ. ಕೊನೆಗೆ ತೈಲ ವರ್ಣದ ಆಕರ್ಷಕ ಮೂರ್ತಿ ಖರೀದಿಸುತ್ತಾರೆ. ನಿಷೇಧಿತ ವರ್ಣದ ಮೂರ್ತಿ ಮಾರಾಟ ಮಾಡು ವವರ ವಿರುದ್ಧ ಕಠಿಣ ಕ್ರಮ ಕೈಗೊಂಡರೆ ನಮಂತಹ ವೃತ್ತಿಪರರು ಉಳಿಯಲು ಸಾಧ್ಯ ಎನ್ನುತ್ತಾರೆ ಹಾಸನದ ಮಹಾವೀರ ಸರ್ಕಲ್ನಲ್ಲಿ ಗಣೇಶಮೂರ್ತಿ ಮಾರಾಟ ಮಾಡುತ್ತಿರುವ ಶಂಕರ್‌ ಅವರು.

 

● ಎನ್‌. ನಂಜುಂಡೇಗೌಡ

ಟಾಪ್ ನ್ಯೂಸ್

Modi (2)

Interview; ಈಗ ಜಾಗತಿಕ ಗುಣಮಟ್ಟದ ಸಂಪುಟ ಟಿಪ್ಪಣಿ: ಮೋದಿ

Modi 2

TMC ಸನ್ಯಾಸಿಗಳಿಗೆ ಅವಮಾನ ಮಾಡುವಷ್ಟು ಕೀಳುಮಟ್ಟಕ್ಕೆ: ಪ್ರಧಾನಿ ಆಕ್ರೋಶ

Agri

Report; 4 ವರ್ಷಗಳಲ್ಲಿ ದೇಶದ ಕೃಷಿ ಪ್ರದೇಶದ 50 ಲಕ್ಷ ಮರಗಳು ಕಣ್ಮರೆ!

arrested

Bihar; ಮೋದಿಗೆ ಮತ ಹಾಕಬೇಡಿ ಎಂದ ಶಿಕ್ಷಕನ ಬಂಧಿಸಿದ ಪೊಲೀಸರು!

Mangaluru University; ಪದವಿ 3 ವರ್ಷಕ್ಕೆ; ಪಠ್ಯಕ್ರಮ ಬದಲಾವಣೆಗೆ ವಿ.ವಿ. ನಿರ್ಧಾರ

Mangaluru University; ಪದವಿ 3 ವರ್ಷಕ್ಕೆ; ಪಠ್ಯಕ್ರಮ ಬದಲಾವಣೆಗೆ ವಿ.ವಿ. ನಿರ್ಧಾರ

Kharge 2

Congress ವರಿಷ್ಠರ ಸೂಚನೆಯಂತೆ ವರ್ತಿಸಿ: ಎಂಪಿ ಅಧೀರ್‌ಗೆ ಖರ್ಗೆ ತಾಕೀತು

Lok Sabha Elections ಹಂತ-5: ಇಂದು ಮತ; ರಾಹುಲ್‌, ರಾಜನಾಥ್‌,ಸ್ಮೃತಿ ಭವಿಷ್ಯ ನಿರ್ಧಾರ

Lok Sabha Elections ಹಂತ-5: ಇಂದು ಮತ; ರಾಹುಲ್‌, ರಾಜನಾಥ್‌,ಸ್ಮೃತಿ ಭವಿಷ್ಯ ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-14

ಹಬ್ಬದ ಮೂಡ್‌ನ‌ಲ್ಲಿ ಸ್ಯಾಂಡಲ್‌ವುಡ್‌ ತಾರೆಯರು

ಕುಷ್ಟಗಿ: ಹಿಂದೂ- ಮುಸ್ಲಿಂ ಗೆಳೆಯರ ಬಳಗದ ಗಣೇಶೋತ್ಸವಕ್ಕೆ ನಾಲ್ಕು ದಶಕಗಳ ಸಂಭ್ರಮ

ಕುಷ್ಟಗಿ: ಹಿಂದೂ- ಮುಸ್ಲಿಂ ಗೆಳೆಯರ ಬಳಗದ ಗಣೇಶೋತ್ಸವಕ್ಕೆ ನಾಲ್ಕು ದಶಕಗಳ ಸಂಭ್ರಮ

ಗ್ರಾಮೀಣ ಭಾಗದಲ್ಲಿ ಅರ್ಥಪೂರ್ಣ ಗಣೇಶ ಚತುರ್ಥಿ ಆಚರಣೆ

ಗ್ರಾಮೀಣ ಭಾಗದಲ್ಲಿ ಅರ್ಥಪೂರ್ಣ ಗಣೇಶ ಚತುರ್ಥಿ ಆಚರಣೆ

tdy-7

ಗಂಗಾವತಿಯಲ್ಲಿ ಪೊಲೀಸ್ ಬಂದೋಬಸ್ತಿನಲ್ಲಿ ಸಡಗರದ ಗಣೇಶ ಚತುರ್ಥಿ ಆಚರಣೆ

ಅಂಜೂರ ಮರದಿಂದ 32 ಅಡಿ ಗಣೇಶನ ಮೂರ್ತಿ ತಯಾರು

ಅಂಜೂರ ಮರದಿಂದ 32 ಅಡಿ ಗಣೇಶನ ಮೂರ್ತಿ ತಯಾರು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Modi (2)

Interview; ಈಗ ಜಾಗತಿಕ ಗುಣಮಟ್ಟದ ಸಂಪುಟ ಟಿಪ್ಪಣಿ: ಮೋದಿ

rishi-sunak

British ದೊರೆಗಿಂತ ಪಿಎಂ ರಿಷಿ ದಂಪತಿ ಶ್ರೀಮಂತರು!

Modi 2

TMC ಸನ್ಯಾಸಿಗಳಿಗೆ ಅವಮಾನ ಮಾಡುವಷ್ಟು ಕೀಳುಮಟ್ಟಕ್ಕೆ: ಪ್ರಧಾನಿ ಆಕ್ರೋಶ

Agri

Report; 4 ವರ್ಷಗಳಲ್ಲಿ ದೇಶದ ಕೃಷಿ ಪ್ರದೇಶದ 50 ಲಕ್ಷ ಮರಗಳು ಕಣ್ಮರೆ!

arrested

Bihar; ಮೋದಿಗೆ ಮತ ಹಾಕಬೇಡಿ ಎಂದ ಶಿಕ್ಷಕನ ಬಂಧಿಸಿದ ಪೊಲೀಸರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.