ಕಾಲೇಜು ಹಂತದಲ್ಲಿ ದಾರಿ ತಪ್ಪಬೇಡಿ

Team Udayavani, Sep 12, 2019, 3:00 AM IST

colleju-hanta

ಹುಣಸೂರು: ಕಾಲೇಜು ಹಂತದಲ್ಲಿ ವಿದ್ಯಾರ್ಥಿನಿಯರು ದಾರಿ ತಪ್ಪುತ್ತಿರುವ ಹಲವಾರು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ವಯೋಸಹಜ ವಾಂಛೆಗಳನ್ನು ದೂರವಿದ್ದು, ಉಜ್ವಲ ಭವಿಷ್ಯ ರೂಪಿಸಿಕೊಳ್ಳುವುದು ನಿಮ್ಮ ಕರ್ತವ್ಯವಾಗಲಿ ಎಂದು ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶೆ ಜಿ.ದೀಪಾ ಸಲಹೆ ನೀಡಿದರು.

ನಗರದ ದೇವರಾಜ ಅರಸು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ಎನ್‌ಎಸ್‌ಎಸ್‌ ಘಟಕ, ಸಾರ್ವಜನಿಕ ಆಸ್ಪತ್ರೆ, ತಾಲೂಕು ಆರೋಗ್ಯಾ ಧಿಕಾರಿಗಳ ಕಚೇರಿ ಸಹಯೋಗದಲ್ಲಿ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಪೋಷಣ್‌ ಅಭಿಯಾನ ಮತ್ತು ಬೇಟಿ ಬಚಾವ್‌ ಬೇಟಿ ಪಡಾವ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೆಣ್ಣುಮಕ್ಕಳ ರಕ್ಷಣೆಗಾಗಿ ನವಜಾತ ಶಿಶುವಿನ ಹಂತದಿಂದ ಆರಂಭಿಸಿ ವಯೊವೃದ್ಧರಾಗುವವರೆಗೂ ಸರ್ಕಾರದಿಂದ ವಿವಿಧ ಸವಲತ್ತು, ಕಾನೂನು ಇಲಾಖೆಯಿಂದ ಕಾನೂನು ಸೌಲಭ್ಯ ಒದಗಿಸಲಾಗಿದೆ. ಆದರೆ, ಹೆಣ್ಣುಮಕ್ಕಲು ಅವುಗಳ ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಶ್ವಾಸಗಳಿಸಿ: ವಿದ್ಯಾರ್ಥಿನಿಯರು ತಂದೆತಾಯಿ ವಿಶ್ವಾಸ ಗಳಿಸಿ, ಸಮಾಜದಲ್ಲಿ ಉತ್ತಮ ಬಾಂಧವ್ಯ ರೂಪಿಸಿಕೊಂಡು ಮುನ್ನಡೆದಲ್ಲಿ ಮಾತ್ರ ಪರಿಪೂರ್ಣತೆ ಪಡೆಯಲು ಸಾಧ್ಯ. ನಿಮ್ಮನ್ನು ಹೆತ್ತವರು ನಿಮಗಾಗಿ ತಮ್ಮ ಸುಖವನ್ನು ತ್ಯಾಗ ಮಾಡಿರುತ್ತಾರೆ. ಅದು ನಿಮ್ಮ ನೆನಪಿನಲ್ಲಿರಲಿ. ಪೋಷಕರು ಮತ್ತು ಸಮುದಾಯದ ವಿಶ್ವಾಸದೊಂದಿಗೆ ಸರ್ಕಾರದ ವಿವಿಧ ಸವಲತ್ತುಗಳ ಸದುಪಯೋಗಪಡಿಸಿಕೊಂಡು ಮುನ್ನಡೆಯಿರಿ ಎಂದು ಸಲಹೆ ನೀಡಿದರು.

ವಸ್ತು ಪ್ರದರ್ಶನದಲ್ಲಿ ವಿವಿಧ ಸೊಪ್ಪುಗಳು ಹಾಗೂ ಮೊಳಕೆ ಕಾಳುಗಳನ್ನು ಪ್ರದರ್ಶಿಸಲಾಯಿತು. ತಾಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್‌, ಅತ್ಯುತ್ತಮ ಪೌಷ್ಟಿಕಾಂಶ ಹೊಂದಿರುವ ಸೊಪ್ಪುಗಳು ಮತ್ತು ತರಕಾರಿಗಳ ಬಳಕೆ, ಅವುಗಳಿಂದ ಹೆಣ್ಣುಮಕ್ಕಳಿಗೆ ವಿವಿಧ ಹಂತಗಳಲ್ಲಿ ಆಗುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಸಣ್ಣಹನಮಗೌಡ, ವಕೀಲ ವೆಂಕಟೇಶ್‌, ಪ್ರಾಂಶುಪಾಲ ಡಾ.ವೆಂಕಟೇಶಯ್ಯ, ಸರ್ಕಾರಿ ಸರ್ಕಾರಿ ಅಭಿಯೋಜಕ ಎಂ.ನಾರಾಯಣ್‌, ವಕೀಲರ ಸಂಘದ ಅಧ್ಯಕ್ಷ ಜಯರಾಂ, ವಕೀಲ ಶಂಕರೇಗೌಡ, ಎನ್‌ಎಸ್‌ಎಸ್‌ ಸಂಯೋಜನಾಧಿಕಾರಿ ಡಾ.ಕಿರಣ್‌ ಕುಮಾರ್‌, ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ಮಹದೇವ್‌, ಸಿಬ್ಬಂದಿ ದೇವಕಿ, ಸರಸ್ವತಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ವಿದ್ಯಾರ್ಥಿನಿಯರು ಇದ್ದರು.

ಟಾಪ್ ನ್ಯೂಸ್

Amit Shah

NDAಗೆ ಈಗಾಗಲೇ 270 ಕ್ಷೇತ್ರಗಳಲ್ಲಿ ಜಯ ಸಿಕ್ಕಿದೆ: ಅಮಿತ್‌ ಶಾ

Prajwal ಬಂಧನಕ್ಕೆ ರೆಡ್‌ ಕಾರ್ನರ್‌ ಅಸ್ತ್ರ; ಕೇಂದ್ರ ಸರಕಾರಕ್ಕೆ ಪತ್ರ ಬರೆಯುವ ಸಾಧ್ಯತೆ

Prajwal ಬಂಧನಕ್ಕೆ ರೆಡ್‌ ಕಾರ್ನರ್‌ ಅಸ್ತ್ರ; ಕೇಂದ್ರ ಸರಕಾರಕ್ಕೆ ಪತ್ರ ಬರೆಯುವ ಸಾಧ್ಯತೆ

IMD

47.8 degrees; ಉತ್ತರ ಭಾರತದ ಹಲವೆಡೆ ಶಾಖದ ಅಲೆ ಅಲರ್ಟ್‌!

trai

TRAI ವ್ಯಾಪ್ತಿಗೆ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಎಕ್ಸ್‌?

1-wqeewqewq

UP ರ್‍ಯಾಲಿಯಲ್ಲಿ ಗಲಾಟೆ: ಮಾತಾಡದೆ ರಾಹುಲ್‌, ಅಖಿಲೇಶ್‌ ವಾಪಸ್‌!

Modi (2)

Interview; ಈಗ ಜಾಗತಿಕ ಗುಣಮಟ್ಟದ ಸಂಪುಟ ಟಿಪ್ಪಣಿ: ಮೋದಿ

Modi 2

TMC ಸನ್ಯಾಸಿಗಳಿಗೆ ಅವಮಾನ ಮಾಡುವಷ್ಟು ಕೀಳುಮಟ್ಟಕ್ಕೆ: ಪ್ರಧಾನಿ ಆಕ್ರೋಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Heavy Rain; ವರುಣನ ಅಬ್ಬರಕ್ಕೆ ತಂಬಾಕು, ಶುಂಠಿ ಬೆಳೆ ಜಲಾವೃತ; ರೈತರ ಆತಂಕ

Heavy Rain; ವರುಣನ ಅಬ್ಬರಕ್ಕೆ ತಂಬಾಕು, ಶುಂಠಿ ಬೆಳೆ ಜಲಾವೃತ; ರೈತರ ಆತಂಕ

2-hunsur

Hunsur: ಹೆದ್ದಾರಿ ಸರ್ವೆ ಕಾರ್ಯ ತಡೆದು ರೈತರ ಆಕ್ರೋಶ

1-sadsadas

Hunsur; ಬೈಕ್‌ಗಳ ಮುಖಾಮುಖಿ: ಓರ್ವ ಸಾವು, ಇಬ್ಬರು ಗಂಭೀರ

Hunasuru: ಸರಣಿ ಅಪಘಾತ; ಬೈಕ್ ಸವಾರ ಮೃತ್ಯು… ಎರಡು ಬಸ್, ಎರಡು ಕಾರು ಜಖಂ

Hunasuru: ಸರಣಿ ಅಪಘಾತ; ಬೈಕ್ ಸವಾರ ಮೃತ್ಯು… ಎರಡು ಬಸ್, ಎರಡು ಕಾರು ಜಖಂ

Srikantheshwara temple: ಶ್ರೀಕಂಠನ ಹುಂಡಿಯಲ್ಲಿ ಡೆತ್‌ನೋಟ್‌ ಪತ್ತೆ!

Srikantheshwara temple: ಶ್ರೀಕಂಠನ ಹುಂಡಿಯಲ್ಲಿ ಡೆತ್‌ನೋಟ್‌ ಪತ್ತೆ!

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Amit Shah

NDAಗೆ ಈಗಾಗಲೇ 270 ಕ್ಷೇತ್ರಗಳಲ್ಲಿ ಜಯ ಸಿಕ್ಕಿದೆ: ಅಮಿತ್‌ ಶಾ

Prajwal ಬಂಧನಕ್ಕೆ ರೆಡ್‌ ಕಾರ್ನರ್‌ ಅಸ್ತ್ರ; ಕೇಂದ್ರ ಸರಕಾರಕ್ಕೆ ಪತ್ರ ಬರೆಯುವ ಸಾಧ್ಯತೆ

Prajwal ಬಂಧನಕ್ಕೆ ರೆಡ್‌ ಕಾರ್ನರ್‌ ಅಸ್ತ್ರ; ಕೇಂದ್ರ ಸರಕಾರಕ್ಕೆ ಪತ್ರ ಬರೆಯುವ ಸಾಧ್ಯತೆ

IMD

47.8 degrees; ಉತ್ತರ ಭಾರತದ ಹಲವೆಡೆ ಶಾಖದ ಅಲೆ ಅಲರ್ಟ್‌!

trai

TRAI ವ್ಯಾಪ್ತಿಗೆ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಎಕ್ಸ್‌?

1-wqeewqewq

UP ರ್‍ಯಾಲಿಯಲ್ಲಿ ಗಲಾಟೆ: ಮಾತಾಡದೆ ರಾಹುಲ್‌, ಅಖಿಲೇಶ್‌ ವಾಪಸ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.