ದೇಶದಲ್ಲಿ 1.66 ಲಕ್ಷ ಪೋಕ್ಸೋ ಕೇಸು ವಿಚಾರಣೆಗೆ ಬಾಕಿ
ಇತ್ಯರ್ಥಕ್ಕೆ 1,023 ಕೋರ್ಟ್ ಸ್ಥಾಪನೆ
Team Udayavani, Sep 15, 2019, 10:22 PM IST
– ಅ.2ರಿಂದ ಕೋರ್ಟ್ಗಳ ಸ್ಥಾಪನೆಯ ಪ್ರಕ್ರಿಯೆ ಶುರು
– ಪ್ರತಿ 1 ಕೋರ್ಟ್ನಲ್ಲಿ ವಾರ್ಷಿಕ 165 ಪ್ರಕರಣ ಇತ್ಯರ್ಥ ನಿರೀಕ್ಷೆ
ನವದೆಹಲಿ: ದೇಶದ ನಾನಾ ನ್ಯಾಯಾಲಯಗಳಲ್ಲಿ, 1.66 ಲಕ್ಷ ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆ) ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಉಳಿದಿದ್ದು, ಅವುಗಳ ತ್ವರಿತ ವಿಚಾರಣೆಗೆ ದೇಶಾದ್ಯಂತ ಒಟ್ಟು 1,023 ಪೋಕ್ಸೋ ಶೀಘ್ರಗತಿ ವಿಶೇಷ ನ್ಯಾಯಾಲಯಗಳನ್ನು (ಎಫ್ಟಿಎಸ್ಸಿ) ಸ್ಥಾಪಿಸಲಾಗುವುದು ಎಂದು ಕೇಂದ್ರ ಕಾನೂನು ಇಲಾಖೆ ತಿಳಿಸಿದೆ.
ಅ. 2ರಿಂದ ನ್ಯಾಯಾಲಯಗಳ ಸ್ಥಾಪನಾ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದ್ದು, ಈ ನ್ಯಾಯಾಲಯಗಳಿಗೆ ವಾರ್ಷಿಕವಾಗಿ 165 ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಗುರಿ ನೀಡಲಾಗುತ್ತದೆ ಎಂದು ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ದೇಶದ 389 ಜಿಲ್ಲೆಗಳಲ್ಲಿ 100ಕ್ಕೂ ಹೆಚ್ಚು ಪೋಕ್ಸೋ ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಉಳಿದಿವೆ. ಹಾಗಾಗಿ ಸುಪ್ರೀಂ ಕೋರ್ಟ್, ಈ ಜಿಲ್ಲೆಗಳಲ್ಲಿ ಶೀಘ್ರಗತಿಯ ಪೋಕ್ಸೋ ನ್ಯಾಯಾಲಯಗಳನ್ನು ನೀಡುವಂತೆ ಆದೇಶಿಸಿದೆ. ಅದರಂತೆ, ನೂತನವಾಗಿ ಸ್ಥಾಪನೆಗೊಳ್ಳುವ 1,023 ಎಫ್ಟಿಎಸ್ಸಿಗಳಲ್ಲಿ 389 ನ್ಯಾಯಾಲಯಗಳನ್ನು ಈ ಜಿಲ್ಲೆಗಳಿಗಾಗಿಯೇ ನೀಡಲಾಗುತ್ತಿದ್ದು, ಈ ನ್ಯಾಯಾಲಯಗಳಿಗೆ ಪೋಕ್ಸೋ ಪ್ರಕರಣಗಳನ್ನು ಮಾತ್ರ ವಿಚಾರಣೆ ನಡೆಸುವ ಅಧಿಕಾರ ನೀಡಲಾಗುತ್ತದೆ.
ಇದರ ಜತೆಗೆ, ದೇಶದ ಇತರೆಡೆ ಹೆಚ್ಚುವರಿಯಾಗಿ ಸ್ಥಾಪನೆಗೊಳ್ಳಲಿರುವ 634 ಎಫ್ಟಿಎಸ್ಸಿಗಳಲ್ಲಿ ಪೋಕ್ಸೋ ಪ್ರಕರಣಗಳ ಜತೆಗೆ ಅತ್ಯಾಚಾರ ಪ್ರಕರಣಗಳನ್ನೂ ವಿಚಾರಣೆ ನಡೆಸಲು ಅನುಮತಿ ನೀಡಲಾಗುವುದು ಎಂದು ಇಲಾಖೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
Manipal ಹಾಸ್ಪಿಟಲ್ಸ್ ಪಾಲಾದ ಮೆಡಿಕಾ ಸಿನರ್ಜಿ