ಸಾತ್ವಿಕ್‌-ಅಶ್ವಿ‌ನಿ ಪೊನ್ನಪ್ಪ ಅಮೋಘ ಗೆಲುವು


Team Udayavani, Sep 18, 2019, 5:54 AM IST

ashwini

ಚಾಂಗ್‌ಝು (ಚೀನ): ಭಾರತದ ಮಿಕ್ಸೆಡ್‌ ಡಬಲ್ಸ್‌ ತಾರೆಯರಾದ ಸಾತ್ವಿಕ್‌ಸಾಯಿರಾಜ್‌ ರಾಂಕಿರೆಡ್ಡಿ ಮತ್ತು ಅಶ್ವಿ‌ನಿ ಪೊನ್ನಪ್ಪ ಅವರು ಚೀನ ಓಪನ್‌ ಬ್ಯಾಡ್ಮಿಂಟನ್‌ ಕೂಟದ ಮೊದಲ ಸುತ್ತಿನಲ್ಲಿ ಅಮೋಘವಾಗಿ ಆಟವಾಡಿ ಗೆಲುವು ಸಾಧಿಸಿ ಮುನ್ನಡೆದಿದ್ದಾರೆ.

ವಿಶ್ವದ 26ನೇ ರ್‍ಯಾಂಕಿನ ಸಾತ್ವಿಕ್‌-ಅಶ್ವಿ‌ನಿ ಅವರು ತೀವ್ರ ಪೈಪೋಟಿಯಿದ ಹೋರಾಟದಲ್ಲಿ ವಿಶ್ವದ 7ನೇ ರ್‍ಯಾಂಕಿನ ಇಂಡೋನೇಶ್ಯದ ಪ್ರವೀಣ್‌ ಜೋರ್ಡಾನ್‌ ಮತ್ತು ಮೆಲಟಿ ದಯೀವಾ ಒಕ್ತಾವಿಯಂತಿ ಅವರನ್ನು 22-20, 17-21, 21-17 ಗೇಮ್‌ಗಳಿಂದ ಉರುಳಿಸಲು ಯಶಸ್ವಿಯಾದರು. ಛಲದ ಮತ್ತು ಲೆಕ್ಕಾಚಾರದ ಆಟವಾಡಿದ ಸಾತ್ವಿಕ್‌-ಅಶ್ವಿ‌ನಿ ಅವರು 50 ನಿಮಿಷಗಳಲ್ಲಿ ಈ ಹೋರಾಟದಲ್ಲಿ ಗೆಲುವು ಸಾಧಿಸಿ ದ್ವಿತೀಯ ಸುತ್ತಿಗೇರಿದರು.
2018ರ ಇಂಡಿಯ ಓಪನ್‌ ಸಹಿತ ಜೋರ್ಡಾನ್‌ ಮತ್ತು ಮೆಲಟಿ ಅವರು ಇಷ್ಟರವರೆಗೆ ಐದು ಕೂಟದ ಫೈನಲ್‌ ಹಂತಕ್ಕೇರಿದ ಸಾಧನೆ ಮಾಡಿದ್ದಾರೆ. ಆದರೆ ಅವರಿಂದು ಭಾರತೀಯ ಶಟ್ಲರ್‌ಗಳ ನಿರಂತರ ಒತ್ತಡದ ಆಟಕ್ಕೆ ಮಣಿದು ಶರಣಾದರು. ಮೊದಲ ಗೇಮ್‌ನ ಆರಂಭದಲ್ಲಿ ಭಾರತೀಯ ಜೋಡಿ 4-7ರಿಂದ ಹಿನ್ನಡೆಯಲ್ಲಿತ್ತು. ಆಬಳಿಕ ಸತತ ಐದಂಕ ಗಳಿಸುವ ಮೂಲಕ ತಿರುಗೇಟು ನೀಡಿತು. ಇಲ್ಲಿಂದ ಜೋರ್ಡಾನ್‌-ಮೆಲಟಿ ಭರ್ಜರಿ ಆಟಕ್ಕೆ ಮುಂದಾಗಿ 18-12ಕ್ಕೆ ಮುನ್ನಡೆ ವಿಸ್ತರಿಸಿದರು. ಆದರೂ ಭಾರತೀಯರೂ ಸುಮ್ಮನಿರಲಿಲ್ಲ. ತಾಳ್ಮೆಯ ಆಟವಾಡಿ ಹಿನ್ನಡೆಯನ್ನು ಸರಿಪಡಿಸಿ 20-20 ಸಮಬಲಕ್ಕೆ ತಂದರಲ್ಲದೇ 22-20ರಿಂದ ಗೇಮ್‌ ಗೆದ್ದು ಅಚ್ಚರಿಗೊಳಿಸಿದರು.
ಸಾತ್ವಿಕ್‌-ಅಶ್ವಿ‌ನಿ ಅವರು ದ್ವಿತೀಯ ಸುತ್ತಿನಲ್ಲಿ ಜಪಾನಿನ ಯುಕಿ ಕನೆಕೊ-ಮಿಸಾಕಿ ಮಾಟ್ಸುಟೊಮೊ ಮತ್ತು ಅಯರ್‌ಲ್ಯಾಂಡಿನ ಅಣ್ಣ-ತಂಗಿ ಸ್ಯಾಮ್‌ ಮ್ಯಾಗೀ-ಚೊÉàಯಿ ಮ್ಯಾಗೀ ನಡುವಣ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.

ಇಂದು ಸಿಂಧು ಹೋರಾಟ
ಇತ್ತೀಚೆಗೆ ನಡೆದ ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಚಿನ್ನ ಜಯಿಸಿದ್ದ ಭಾರತದ ಶಟ್ಲರ್‌ ಪಿವಿ ಸಿಂಧು ಅವರು ಬುಧವಾರ ನಡೆಯುವ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನಲ್ಲಿ ಚೀನದ ಲೀ ಕ್ಸುಯಿ ರುಯಿ ಅವರನ್ನು ಎದುರಿಸಲಿದ್ದಾರೆ. ಇದಕ್ಕಿಂತ ಮೊದಲು ಸೈನಾ ನೆಹ್ವಾಲ್‌ ಅವರು ಥಾçಲಂಡಿನ ಬುಸಾನನ್‌ ಆಂಗ್ಬಮುರುಗನ್‌ ಅವರನ್ನು ಎದುರಿಸಲಿದ್ದಾರೆ.

ಪುರುಷರಲ್ಲಿ ಪಾರುಪಳ್ಳಿ ಕಶ್ಯಪ್‌ ಅವರು ಬ್ರೈಸ್‌ ಲೆವರ್‌ಡೆಜ್‌ ಅವರನ್ನು ಎದುರಿಸಲಿದ್ದರೆ ಸಾಯಿ ಪ್ರಣೀತ್‌ ಅವರು ಸುಪ್ಪನ್ಯು ಅವಿಹಿಂಗಾÕನನ್‌ ಅವರ ಸವಾಲನ್ನು ಎದುರಿಸಲಿದ್ದಾರೆ.

ಟಾಪ್ ನ್ಯೂಸ್

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

1-modi

Varanasi; 25000 ಮಹಿಳೆಯರ ಜತೆ ಸ್ವಕ್ಷೇತ್ರದಲ್ಲಿ ಪಿಎಂ ಸಂವಾದ

ನೇತ್ರಾವತಿಯಲ್ಲಿ ಹರಿವು ಏರಿಕೆ; ತುಂಬೆಗೆ ಎಎಂಆರ್‌ ನೀರು

Mangaluru ನೇತ್ರಾವತಿಯಲ್ಲಿ ಹರಿವು ಏರಿಕೆ; ತುಂಬೆಗೆ ಎಎಂಆರ್‌ ನೀರು

MOdi (3)

Odisha ರಾಜ್ಯ ಸರಕಾರವು ಭ್ರಷ್ಟರ ಹಿಡಿತಕ್ಕೆ ಸಿಲುಕಿದೆ: ಪಿಎಂ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rohit SHarma (2)

Star Sports ; ರೋಹಿತ್‌ ಶರ್ಮರ ಖಾಸಗಿ ಮಾತು ಪ್ರಸಾರ ಮಾಡಿಲ್ಲ

1-wewqe

Alexander Zverev ರೋಮನ್‌ ಕಿಂಗ್‌: ಜೆರ್ರಿ ವಿರುದ್ಧ 6-4, 7-5 ಜಯ

1-weqwewq

Para Athletics: ದೀಪ್ತಿ ಜೀವಂಜಿ ವಿಶ್ವದಾಖಲೆ

1-nnn

World ಬೆಂಚ್‌ಪ್ರಸ್‌ ಸ್ಪರ್ಧೆ : ಸತೀಶ್‌ ಕುಮಾರ್‌ ಕುದ್ರೋಳಿ ಕೋಚ್‌

is there any reserve day for ipl qualifiers? what rule says

IPL Playoff ಪಂದ್ಯಗಳಿಗೆ ಮೀಸಲು ದಿನವಿದೆಯೇ? ಮಳೆ ನಿಯಮ ಏನು ಹೇಳುತ್ತದೆ?

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

police USA

China ಶಾಲೆಯಲ್ಲಿ ಚಾಕು ಇರಿತ: 5 ಮಂದಿಗೆ ಗಾಯ

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.