ಸೋರುತಿಹವು ಸರ್ಕಾರಿ ನೌಕರರ ವಸತಿ ಗೃಹಗಳು

Team Udayavani, Oct 12, 2019, 2:15 PM IST

hv-tdy-1

ಹಾವೇರಿ: ಒಡೆದ ಹೆಂಚುಗಳು, ಬಿರುಕು ಬಿಟ್ಟ ಮನೆ ಗೋಡೆ, ಜರಡಿಯಂತಾದ ಛಾವಣಿಯಿಂದ ಮಳೆ ಬಂದಾಗಲೆಲ್ಲ ನೀರು ಸೋರುವುದು, ಇದನ್ನು ತಪ್ಪಿಸಲು ಮನೆತುಂಬ ಪಾತ್ರೆಗಳನ್ನಿಟ್ಟು ನೀರು ಹಿಡಿಯುವ ಕೆಲಸದಲ್ಲಿ ನಿರತರಾಗುವ ಮನೆ ಮಂದಿ….ಅಷ್ಟಕ್ಕೂ ಇದು ಯಾವುದೋ ಗುಡಿಸಿಲಿನ ದುಸ್ಥಿತಿಯಲ್ಲ; ಸರ್ಕಾರಿ ನೌಕರರ ವಸತಿ ಗೃಹಗಳ ದಯನೀಯ ಸ್ಥಿತಿ.!

ಇದು ಆಶ್ಚರ್ಯ ಎನಿಸಿದರೂ ಕಹಿಸತ್ಯ. ದೀಪದ ಕೆಳಗೆ ಕತ್ತಲೆ ಎನ್ನುವ ಗಾದೆಯಂತೆ ಸ್ಥಳೀಯ ವಿದ್ಯಾ ನಗರದಲ್ಲಿರುವ ಲೋಕೋಪಯೋಗಿ ಇಲಾಖೆ ಸೇರಿದ ವಸತಿ ಗೃಹಗಳು ನಿರ್ವಹಣೆ ಕೊರತೆಯಿಂದ ನೌಕರರು ಇಂಥ ಹಾಳಾದ ಮನೆಗಳಲ್ಲಿಯೇ ಬದುಕು ಸಾಗಿಸುತ್ತಿದ್ದಾರೆ.

ಹೆಂಚು ಒಡೆದಿರುವುದರಿಂದ ಮೇಲೆ ಸ್ವಂತ ಖರ್ಚಿನಲ್ಲಿ ಪ್ಲಾಸ್ಟಿಕ್‌ ಹೊದಿಕೆ ಹಾಕಿಕೊಂಡು, ಸಣ್ಣ ಪುಟ್ಟ ದುರಸ್ತಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹಂಚಿಕೆಯಾಗದ ಮನೆಗಳಂತೂ ಪಾಳುಬಿದ್ದು ಮನೆ ತುಂಬ ಜೇಡರ ಬಲೆ, ಧೂಳು ತುಂಬಿಕೊಂಡಿದೆ. ಮನೆ ಸುತ್ತ ಆಳೆತ್ತರ ಗಿಡ-ಗಂಟಿ, ಪೊದೆ ಬೆಳೆದು ವಿಷಜಂತುಗಳ ಆವಾಸ ಸ್ಥಾನವಾಗಿದೆ. ಇಂಥ ಮನೆಯಗಳ ಪಕ್ಕದವರು ನಿತ್ಯ ವಿಷಜಂತುಗಳು ಕಚ್ಚುವ ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.

ಅಭಿವೃದ್ಧಿಗೆ ಉದಾಸೀನ: ವಸತಿಗೃಹಗಳನ್ನು ನಿರ್ಮಿಸಿ ಸುಮಾರು 50ರಿಂದ 60 ವರ್ಷಗಳಾಗಿದ್ದು, ಹೆಂಚುಗಳು ಒಡೆದು ಹೋಗಿವೆ. ಇದರಿಂದಾಗಿ ಮಳೆಗಾಲದ ಸಂದರ್ಭದಲ್ಲಿ ಮನೆಗಳು ಸೋರುತ್ತಿವೆ. ಈಗಂತೂ ನಿತ್ಯ ಸಂಜೆ ಮಳೆ ಸುರಿಯುತ್ತಿದ್ದು ಮಳೆ ನೀರು ಸೋರುವಲ್ಲಿ ಪಾತ್ರೆಗಳನ್ನು ಇಡುವುದು ಸಾಮಾನ್ಯವಾಗಿದೆ. ವಸತಿ ಗೃಹಗಳಿಗೆ ವಿದ್ಯುದೀಕರಣ ಮಾಡಿ ಸುಮಾರು ವರ್ಷಗಳೇ ಕಳೆದಿದ್ದು, ಅಲ್ಲಲ್ಲಿ ತಂತಿಗಳು ತುಂಡುಗಳಾಗಿವೆ. ಪಿಡಬ್ಲ್ಯೂ ಡಿ ಇಲಾಖೆ ವಸತಿ ನಿಲಯಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡದೇ ಇಲಾಖೆ ದಿವ್ಯ ನಿರ್ಲಕ್ಷ್ಯ ತೋರಿದ್ದು ವಸತಿ ಗೃಹಗಳ ನಿವಾಸಿಗರು ತೊಂದರೆ ಅನುಭವಿಸುವಂತಾಗಿದೆ.

ಅನುದಾನ ದುರ್ಬಳಕೆ: ವಸತಿ ಗೃಹಗಳ ಪ್ರತಿಯೊಂದು ಮನೆಗಳಿಗೆ ಸುಣ್ಣ, ಬಣ್ಣ, ವಿದ್ಯುತ್‌, ಒಡೆದ ಹೆಂಚುಗಳ ನಿರ್ವಹಣೆಗೆ ವರ್ಷಕ್ಕೆ ಇಂತಿಷ್ಟು ಅನುದಾನವನ್ನು ನೀಡಲಾಗುತ್ತದೆ. ಆದರೆ, ಗುತ್ತಿಗೆದಾರರು ಅನುದಾನವನ್ನು ಸಮರ್ಪಕ ಬಳಕೆ ಮಾಡದೇ ಕೆಲವೊಂದು ಮನೆಗಳಿಗೆ ಮಾತ್ರ ಸುಣ್ಣ, ಬಣ್ಣ ಬಳೆದು ಕೈತೊಳೆದುಕೊಳ್ಳುತ್ತಿದ್ದಾರೆ. ಉಳಿದ ವಸತಿ ಗೃಹಗಳ ದುರಸ್ತಿ ಕಾರ್ಯಕ್ಕೆ ಅನುದಾನದ ಕೊರತೆಯಿದ್ದು, ಮುಂದಿನ ವರ್ಷ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು ಎಂಬ ಉತ್ತರ ನೀಡುತ್ತಾರೆ ಎಂಬುದು ವಸತಿ ಗೃಹಗಳ ನಿವಾಸಿಗಳ ಆರೋಪ. ಒಟ್ಟಾರೆ ಸರ್ಕಾರಿ ನೌಕರರಿಗಾಗಿ ಇರುವ ವಸತಿ ಗೃಹಗಳನ್ನು ಸಮರ್ಪಕವಾಗಿ ದುರಸ್ತಿಗೊಳಿಸಿ, ಮೂಲಸೌಲಭ್ಯ ಕಲ್ಪಿಸಿ ಅನುಕೂಲ ಮಾಡಿಕೊಡಬೇಕು ಎಂಬುದು ವಸತಿ ಗೃಹಗಳಲ್ಲಿ ವಾಸವಿರುವ ನೌಕರ, ಸಿಬ್ಬಂದಿಗಳ ಆಗ್ರಹವಾಗಿದೆ.

ಟಾಪ್ ನ್ಯೂಸ್

Gokarna: ಪ್ರವಾಸಿ ಬೋಟ್ ಪಲ್ಟಿ ; 40 ಪ್ರವಾಸಿಗರ ರಕ್ಷಣೆ

Gokarna: ಪ್ರವಾಸಿ ಬೋಟ್ ಪಲ್ಟಿ ; 40 ಪ್ರವಾಸಿಗರ ರಕ್ಷಣೆ

1-qweqwqe

IPL ಅಭಿಷೇಕ್ ಸ್ಫೋಟಕ ಆಟ: ಪಂಜಾಬ್ ವಿರುದ್ಧ ಹೈದರಾಬಾದ್ ಗೆ 4 ವಿಕೆಟ್ ಜಯ

Rain Alert; ಮೇ 21, 22 ರಂದು ಕರಾವಳಿಯಲ್ಲಿ ಬಿರುಸಿನ ಮಳೆ ಸಾಧ್ಯತೆ

Rain Alert; ಮೇ 21, 22 ರಂದು ಕರಾವಳಿಯಲ್ಲಿ ಬಿರುಸಿನ ಮಳೆ ಸಾಧ್ಯತೆ

Dog Attack ಗುಂಡ್ಲುಪೇಟೆ: ನಾಯಿಗಳ ದಾಳಿಗೆ ಬಲಿಯಾದವು 10ಕುರಿಗಳು!

Dog Attack ಗುಂಡ್ಲುಪೇಟೆ: ನಾಯಿಗಳ ದಾಳಿಗೆ 10 ಕುರಿಗಳು ಸಾವು

1-wqewewqe

Iran ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ‘ಹಾರ್ಡ್ ಲ್ಯಾಂಡಿಂಗ್; ರಕ್ಷಣ ಕಾರ್ಯ

Heavy Rain; ವರುಣನ ಅಬ್ಬರಕ್ಕೆ ತಂಬಾಕು, ಶುಂಠಿ ಬೆಳೆ ಜಲಾವೃತ; ರೈತರ ಆತಂಕ

Heavy Rain; ವರುಣನ ಅಬ್ಬರಕ್ಕೆ ತಂಬಾಕು, ಶುಂಠಿ ಬೆಳೆ ಜಲಾವೃತ; ರೈತರ ಆತಂಕ

Rabkavi-Banhatti; ರೋಹಿಣಿ ಮಳೆ ಒಲಿದರೆ ರೈತನ ಬಾಳೇ ಬಂಗಾರ

Rabkavi-Banhatti; ರೋಹಿಣಿ ಮಳೆ ಒಲಿದರೆ ರೈತನ ಬಾಳೇ ಬಂಗಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lokayukta

Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ

ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ: ಚಕ್ರವರ್ತಿ ಸ್ವಾಮೀಜಿ

ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ: ಚಕ್ರವರ್ತಿ ಸ್ವಾಮೀಜಿ

ಅಬ್ಬಾ…ತರಕಾರಿ ಬಲು ದುಬಾರಿ..! ಗ್ರಾಹಕರ ಜೇಬಿಗೆ ಕತ್ತರಿ

ಅಬ್ಬಾ…ತರಕಾರಿ ಬಲು ದುಬಾರಿ..! ಗ್ರಾಹಕರ ಜೇಬಿಗೆ ಕತ್ತರಿ

ಬ್ಯಾಡಗಿ- ಮದುವೆ ಮೂಲ ಅರ್ಥ ಕಳೆದುಕೊಳ್ತಿದೆ: ಸ್ವಾಮೀಜಿ

ಬ್ಯಾಡಗಿ- ಮದುವೆ ಮೂಲ ಅರ್ಥ ಕಳೆದುಕೊಳ್ತಿದೆ: ಸ್ವಾಮೀಜಿ

LS Polls: ಮನೆ ಯಜಮಾನನ್ನು ಕಳೆದುಕೊಂಡ ದುಖ:ದ ನಡುವೆ ಮತ ಚಲಾಯಿಸಿದ ಕುಟುಂಬ ಸದಸ್ಯರು

LS Polls: ಮನೆ ಯಜಮಾನನ್ನು ಕಳೆದುಕೊಂಡ ದುಃಖದ ನಡುವೆ ನಡುವೆ ಮತ ಚಲಾಯಿಸಿದ ಕುಟುಂಬ ಸದಸ್ಯರು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Gokarna: ಪ್ರವಾಸಿ ಬೋಟ್ ಪಲ್ಟಿ ; 40 ಪ್ರವಾಸಿಗರ ರಕ್ಷಣೆ

Gokarna: ಪ್ರವಾಸಿ ಬೋಟ್ ಪಲ್ಟಿ ; 40 ಪ್ರವಾಸಿಗರ ರಕ್ಷಣೆ

1-qweq-eeqw

Ajekar;ಕೆರೆಗೆ ಮೀನು ಹಿಡಿಯಲು ತೆರಳಿದ್ದ ಮಾವ-ಅಳಿಯ ಮುಳುಗಿ ಸಾವು

1-qweqwqe

IPL ಅಭಿಷೇಕ್ ಸ್ಫೋಟಕ ಆಟ: ಪಂಜಾಬ್ ವಿರುದ್ಧ ಹೈದರಾಬಾದ್ ಗೆ 4 ವಿಕೆಟ್ ಜಯ

Rain Alert; ಮೇ 21, 22 ರಂದು ಕರಾವಳಿಯಲ್ಲಿ ಬಿರುಸಿನ ಮಳೆ ಸಾಧ್ಯತೆ

Rain Alert; ಮೇ 21, 22 ರಂದು ಕರಾವಳಿಯಲ್ಲಿ ಬಿರುಸಿನ ಮಳೆ ಸಾಧ್ಯತೆ

Dog Attack ಗುಂಡ್ಲುಪೇಟೆ: ನಾಯಿಗಳ ದಾಳಿಗೆ ಬಲಿಯಾದವು 10ಕುರಿಗಳು!

Dog Attack ಗುಂಡ್ಲುಪೇಟೆ: ನಾಯಿಗಳ ದಾಳಿಗೆ 10 ಕುರಿಗಳು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.