ಕಾಂಗ್ರೆಸ್‌ ಕ್ಷೇತ್ರಗಳಲ್ಲಿಕಾಮಗಾರಿ ಸ್ಥಗಿತ

400 ಕೋಟಿ ವೆಚ್ಚದ ಕಾಮಗಾರಿಗಳಿಗೆ ತಡೆಬಿಜೆಪಿ ಸರ್ಕಾರದಿಂದ ಕೆಟ್ಟ ಚಾಳಿ ಮುಂದುವರಿಕೆ

Team Udayavani, Oct 23, 2019, 11:13 AM IST

23-October-1

ಕಲಬುರಗಿ: ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ರಾಜ್ಯ ಸರ್ಕಾರ ತಾರತಮ್ಯ ಧೋರಣೆ ಮುಂದುವರಿಸಿದ್ದು, ಜಿಲ್ಲೆಯಲ್ಲಿ ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಿಗೆ ನೀಡಿದ್ದ 400 ಕೋಟಿ ರೂ.ವೆಚ್ಚದ ವಿವಿಧ ಕಾಮಗಾರಿಗಳನ್ನು ತಡೆಹಿಡಿಯಲಾಗಿದೆ ಎಂದು ಮಾಜಿ ಸಚಿವ ಮತ್ತು ಶಾಸಕ ಪ್ರಿಯಾಂಕ್‌ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.

ಕಾಂಗ್ರೆಸ್‌ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅ ಧಿಕಾರ ಸ್ವೀಕರಿಸುವಾಗ ಮತ್ತು ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ಯಾವುದೇ ಶಾಸಕರ ಮಧ್ಯೆ ತಾರತಮ್ಯ, ದ್ವೇಷ ರಾಜಕಾರಣ ಮಾಡುವುದಿಲ್ಲ ಎಂದಿದ್ದರು. ಆದರೀಗ ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಲ್ಲಿ ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆದ ಹಾಗೂ ಪ್ರಗತಿಯಲ್ಲಿರುವ ಅಭಿವೃದ್ಧಿ ಕಾಮಗಾರಿಗಳ ತಡೆ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಿತ್ತಾಪುರ, ಅಫಜಲಪುರ, ಜೇವರ್ಗಿ, ಕಲಬುರಗಿ ಉತ್ತರ ಮತ ಕ್ಷೇತ್ರಗಳಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತಿ ರಾಜ್‌ ಇಲಾಖೆಯ 172 ಕೋಟಿ ರೂ., ಸಣ್ಣ ನೀರಾವರಿ ಇಲಾಖೆಯ 150 ಕೋಟಿ ರೂ., ಲೋಕೋಪಯೋಗಿ ಇಲಾಖೆಯಲ್ಲಿ 23 ಕೋಟಿ ರೂ. ವೆಚ್ಚದ ಯೋಜನೆಗಳು ಸೇರಿದಂತೆ ಹಲವು ಇಲಾಖೆಗಳ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ಇವುಗಳನ್ನು ಯಾವ ಆಧಾರದ ಮೇಲೆ ತಡೆ ಹಿಡಿಯಲಾಗಿದೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಇದ್ದಾಗ, ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ಸಂದರ್ಭದಲ್ಲಿ ಎಂದೂ ಕಾಂಗ್ರೆಸ್‌ ಮತ್ತು ಬಿಜೆಪಿ ಶಾಸಕರ ನಡುವೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿಲ್ಲ. ಆದರೆ, ಬಿಜೆಪಿ ಸರ್ಕಾರ ಶಾಸಕರ ಕ್ಷೇತ್ರಗಳಿಗೆ ಹಂಚಿಕೆಯಾದ ಅನುದಾನ ನಿಲ್ಲಿಸುವ ಕೆಟ್ಟ ಚಾಳಿ ಬೆಳೆಸಿಕೊಳ್ಳುತ್ತಿದೆ ಎಂದು ಹರಿಹಾಯ್ದರು.

ಈ ಹಿಂದೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಹಣವನ್ನು ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ವಿವೇಚನಾ ನಿಧಿಯಡಿ ಎಲ್ಲ ಶಾಸಕರಿಗೆ ಅನುದಾನ ಹಂಚಿಕೆ ಮಾಡಲಾಗಿತ್ತು. ನಂತರ ಬಂದ ಬಿಜೆಪಿ ಸರ್ಕಾರ ಕಾಂಗ್ರೆಸ್‌ ಶಾಸಕರಿಗೆ ಹಂಚಿಕೆಯಾದ ಅನುದಾನವನ್ನು ತಮ್ಮ ಶಾಸಕರಿಗೆ ವರ್ಗಾವಣೆ ಮಾಡಿ ಮೋಸ ಮಾಡಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ಮುಂದುವರಿದರೆ ಪ್ರತಿಭಟನೆ ಮಾಡಬೇಕಾಗುತ್ತದೆ. ಜತೆಗೆ ಕಾನೂನು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಕಲಬುರಗಿ ಅನಾಥ: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕ ಮತ್ತು ವಿಭಾಗೀಯ ಕೇಂದ್ರ ಕಲಬುರಗಿ ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸುತ್ತಿದೆ. “ಹೈದ್ರಾಬಾದ ಕರ್ನಾಟಕ’ವನ್ನು “ಕಲ್ಯಾಣ ಕರ್ನಾಟಕ’ ಎಂದು ಕೇವಲ ಹೆಸರು ಬದಲಾಯಿಸಿದರೆ ಸಾಲದು ಎಂದು ಕಿಡಿಕಾರಿದರು.

ನಮ್ಮ ಸರ್ಕಾರ ಇದ್ದಾಗ ಕಲಬುರಗಿ ಜಿಲ್ಲೆಗೆ ಇಬ್ಬರು ಸಚಿವರನ್ನು ಕೇಳುತ್ತಿದ್ದೆವು. ಆದರೆ, ಈಗ ಒಬ್ಬರಿಗೂ ಸಚಿವ ಸ್ಥಾನ ಕೊಟ್ಟಿಲ್ಲ. ಸ್ವಂತ ಕಲಬುರಗಿಯೇ ಸಚಿವರಿಲ್ಲದೇ ಅನಾಥವಾಗಿದೆ. ಜಿಲ್ಲೆಯ ಜನತೆ ಯಾರ ಬಳಿ ಸಮಸ್ಯೆ ಹೇಳಿಕೊಳ್ಳಬೇಕು ಎಂದು ಬೇಸರ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಜಿ.ಪಂ ಸದಸ್ಯ ಅರುಣಕುಮಾರ ಪಾಟೀಲ, ಮುಖಂಡ ವಿಜಯಕುಮಾರ ರಾಮಕೃಷ್ಣ ಇದ್ದರು.

ಟಾಪ್ ನ್ಯೂಸ್

Terror 2

LOC; ದೇಶಕ್ಕೆ ನುಸುಳಲು 70 ಉಗ್ರರು ಸಜ್ಜು: ಕಾಶ್ಮೀರ ಡಿಜಿಪಿ ರಶ್ಮಿ

1-wewq-ewqewq

Hyderabad ಇನ್ನು ಮುಂದೆ ತೆಲಂಗಾಣಕ್ಕಷ್ಟೇ ರಾಜಧಾನಿ

police crime

West Bengal ಬಿಜೆಪಿಯ ಮುಸ್ಲಿಂ ಕಾರ್ಯಕರ್ತನ ಬರ್ಬರ ಹತ್ಯೆ

1-wq-wewqe

T20 World Cup; ಪಪುವಾ ನ್ಯೂ ಗಿನಿಯ ವಿರುದ್ಧ ವಿಂಡೀಸ್‌ ಗೆ 5 ವಿಕೆಟ್ ಗಳ ಜಯ

Udupi: ಐತಿಹಾಸಿಕ ರಂಗು ಪಡೆದ ವಿಧಾನ ಪರಿಷತ್‌ ಚುನಾವಣೆ..

Udupi: ಐತಿಹಾಸಿಕ ರಂಗು ಪಡೆದ ವಿಧಾನ ಪರಿಷತ್‌ ಚುನಾವಣೆ..

Mansoon: ರಾಜ್ಯ ಕರಾವಳಿಗೆ ಪ್ರವೇಶ ಪಡೆದ ಮುಂಗಾರು… 4 ದಿನ “ಎಲ್ಲೋ ಅಲರ್ಟ್‌’

Mansoon: ರಾಜ್ಯ ಕರಾವಳಿಗೆ ಪ್ರವೇಶ ಪಡೆದ ಮುಂಗಾರು… 4 ದಿನ “ಎಲ್ಲೋ ಅಲರ್ಟ್‌’

ಮಡಿಕೇರಿ: ಈ ಬಾರಿಯೂ ಮಳೆ ಕೊರತೆ ಸಾಧ್ಯತೆ: ಪ್ರವಾಹ, ಭೂಕುಸಿತ ಪರಿಸ್ಥಿತಿ ಇಲ್ಲ: ಪ್ರಕಾಶ್‌

ಮಡಿಕೇರಿ: ಈ ಬಾರಿಯೂ ಮಳೆ ಕೊರತೆ ಸಾಧ್ಯತೆ: ಪ್ರವಾಹ, ಭೂಕುಸಿತ ಪರಿಸ್ಥಿತಿ ಇಲ್ಲ: ಪ್ರಕಾಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mansoon: ರಾಜ್ಯ ಕರಾವಳಿಗೆ ಪ್ರವೇಶ ಪಡೆದ ಮುಂಗಾರು… 4 ದಿನ “ಎಲ್ಲೋ ಅಲರ್ಟ್‌’

Mansoon: ರಾಜ್ಯ ಕರಾವಳಿಗೆ ಪ್ರವೇಶ ಪಡೆದ ಮುಂಗಾರು… 4 ದಿನ “ಎಲ್ಲೋ ಅಲರ್ಟ್‌’

Temple: ರಜೆ ಹಿನ್ನಲೆ… ಸುಬ್ರಹ್ಮಣ್ಯ, ಧರ್ಮಸ್ಥಳ ದೇಗುಲಗಳಲ್ಲಿ ಭಕ್ತ ಸಂದಣಿ

Temple: ರಜೆ ಹಿನ್ನಲೆ… ಸುಬ್ರಹ್ಮಣ್ಯ, ಧರ್ಮಸ್ಥಳ ದೇಗುಲಗಳಲ್ಲಿ ಭಕ್ತ ಸಂದಣಿ

Bantwal: ಬರಿಮಾರು ಗ್ರಾಮದ ಗಾಣದಪಾಲು: ನೆರೆಕರೆ ಮನೆಯವರ ಜಗಳ; ಪ್ರತ್ಯೇಕ ಪ್ರಕರಣ ದಾಖಲು

Bantwal: ಬರಿಮಾರು ಗ್ರಾಮದ ಗಾಣದಪಾಲು: ನೆರೆಕರೆ ಮನೆಯವರ ಜಗಳ; ಪ್ರತ್ಯೇಕ ಪ್ರಕರಣ ದಾಖಲು

14-vitla

Vitla: ಅಣ್ಣನ ಹಣ, ಭೂಮಿ ಲಪಟಾಯಿಸಿದ ಸಹೋದರಿ

ಅಲ್ಲಲ್ಲಿ ಇದ್ದ “ಥಿಯೇಟರ್‌’ಗಳು ಈಗ ಅಲ್ಲೊಂದು-ಇಲ್ಲೊಂದು!

ಅಲ್ಲಲ್ಲಿ ಇದ್ದ “ಥಿಯೇಟರ್‌’ಗಳು ಈಗ ಅಲ್ಲೊಂದು-ಇಲ್ಲೊಂದು!

MUST WATCH

udayavani youtube

ಹೆರ್ಗದಲ್ಲಿ 40 ಅಡಿ ಆಳದ ಬಾವಿಗೆ ಬಿದ್ದ ಕರುವಿನ ರಕ್ಷಣೆ

udayavani youtube

ಇಡ್ಲಿ ವಡೆ, ಶಾವಿಗೆ ಬಾತ್ ಗೆ ಹೆಸರುವಾಸಿಯಾದ ಹೋಟೆಲ್

udayavani youtube

ಒಡವೆ ಖರೀದಿಸುವ ನೆಪದಲ್ಲಿ ಮೂರುವರೆ ಲಕ್ಷ ಮೌಲ್ಯದ ಒಡವೆ ಕದ್ದ ಖತರ್ನಾಕ್ ಅಜ್ಜಿ

udayavani youtube

ರಘುಪತಿ ಭಟ್ ಅವರ ಮನದಾಳದ ಮಾತು

udayavani youtube

ರಘುಪತಿ ಭಟ್ ಅವರ ಮನದಾಳದ ಮಾತು

ಹೊಸ ಸೇರ್ಪಡೆ

1-asdasdas

Tamil actor ಕರುಣಾಸ್‌ ಬಳಿ 40 ಬುಲೆಟ್‌ಗಳು ಪತ್ತೆ!

mob

WhatsApp ನಲ್ಲಿ ಶೀಘ್ರ ಚಾಟ್‌ ಫಿಲ್ಟರ್‌ ಅಪ್‌ಡೇಟ್‌?

Vimana 2

Again ವಿಮಾನಕ್ಕೆ ಬಾಂಬ್‌ ಬೆದರಿಕೆ: ವಾರದಲ್ಲಿ 4ನೇ ಘಟನೆ

Terror 2

LOC; ದೇಶಕ್ಕೆ ನುಸುಳಲು 70 ಉಗ್ರರು ಸಜ್ಜು: ಕಾಶ್ಮೀರ ಡಿಜಿಪಿ ರಶ್ಮಿ

1-wewq-ewqewq

Hyderabad ಇನ್ನು ಮುಂದೆ ತೆಲಂಗಾಣಕ್ಕಷ್ಟೇ ರಾಜಧಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.