ಮನೆ ಸ್ಥಳಾಂತರಕ್ಕೆ 112 ಸಂತ್ರಸ್ತರ ಒಪ್ಪಿಗೆ

ಬೇರೆ ಜಾಗದಲ್ಲಿ ಮನೆ-ಭೂಮಿ ನೀಡಲು 31ಕುಟುಂಬಗಳ ಮನವಿ: ಅಪರ ಡಿಸಿ ಡಾ| ಕುಮಾರ್‌

Team Udayavani, Oct 25, 2019, 3:12 PM IST

Udayavani Kannada Newspaper

ಚಿಕ್ಕಮಗಳೂರು: ಅತಿವೃಷ್ಟಿಯಿಂದ ಹಾನಿಗೊಳಗಾಗಿ ಮನೆ ಕಳೆದುಕೊಂಡಿರುವ 112 ಮಂದಿ ಸ್ಥಳಾಂತರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಡಾ| ಕುಮಾರ್‌ ತಿಳಿಸಿದರು.

“ಉದಯವಾಣಿ’ಯೊಂದಿಗೆ ಮಾತನಾಡಿದ ಅವರು, ಈ ಪೈಕಿ ಮನೆ ಹಾಗೂ ಭೂಮಿ ಕಳೆದುಕೊಂಡಿರುವ 31 ಕುಟುಂಬಗಳು ತಮಗೆ ಬೇರೆ ಜಾಗದಲ್ಲಿ ಮನೆ ಮತ್ತು ಭೂಮಿ ನೀಡಲು ಮನವಿ ಮಾಡಿದ್ದಲ್ಲದೇ, ಮನೆ ಸ್ಥಳಾಂತರಕ್ಕೆ ಒಪ್ಪಿಗೆ ಪತ್ರ ನೀಡಿವೆ ಎಂದು ಹೇಳಿದರು.

ಸಂತ್ರಸ್ತರ ಪುನರ್ವಸತಿಗೆ ಜಿಲ್ಲಾಡಳಿತ ಈಗಾಗಲೇ 257 ಎಕರೆ ಭೂಮಿಯನ್ನು ಮೂಡಿಗೆರೆ ತಾಲೂಕಿನ 15 ಗ್ರಾಮಗಳಲ್ಲಿ ಗುರುತಿಸಿದೆ. ಬಣಕಲ್‌ ಹೋಬಳಿಯಲ್ಲಿ 6 ಗ್ರಾಮ, ಗೋಣಿಬೀಡು ಹೋಬಳಿಯಲ್ಲಿ 1, ಕಸಬಾ ಹೋಬಳಿಯಲ್ಲಿ 2 ಮತ್ತು ಕಳಸಾ ಹೋಬಳಿಯಲ್ಲಿ 8 ಗ್ರಾಮಗಳಲ್ಲಿ ಭೂಮಿ ಗುರುತಿಸಲಾಗಿದೆ ಎಂದರು.

ಭೂಮಿ ಮತ್ತು ಮನೆ ಕಳೆದುಕೊಂಡವರಲ್ಲಿ ಕೆಲವರು ತಾವು ವಾಸಿಸುತ್ತಿದ್ದ ಜಾಗದಲ್ಲೇ ಮತ್ತೆ ವಾಸಿಸಲು ಅವಕಾಶ ನೀಡಿ ಸೌಲಭ್ಯ ಒದಗಿಸಬೇಕೆಂದು ಮನವಿ ಮುಂದಿಟ್ಟಿದ್ದಾರೆ. ಆದರೆ, ಈ ಸ್ಥಳಗಳಲ್ಲಿ ಮತ್ತೆ ಮಳೆ ಬಂದಲ್ಲಿ ಭೂಕುಸಿತ ಉಂಟಾಗುವ ಅಪಾಯವಿರುವುದರಿಂದ ಅಲ್ಲಿ ಅವಕಾಶ ನೀಡಲು ಸಾಧ್ಯವಿಲ್ಲ. ಹಾಗಾಗಿ, ಆ ರೀತಿ ಸೂಕ್ಷ ಪ್ರದೇಶದಲ್ಲಿದ್ದವರು ಬೇರೆ ಕಡೆಗೆ ಸ್ಥಳಾಂತರವಾಗಲೇಬೇಕು. ಅವರು ಹಿಂದೆ ಇದ್ದ ಸ್ಥಳದಲ್ಲೇ ವಾಸಿಸಲು ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬಡಾವಣೆ ನಿರ್ಮಿಸಿ ಸ್ಥಳಾಂತರ ಮಾಡಿದಲ್ಲಿ ಅಲ್ಲಿಗೆ ತೆರಳುವುದಿಲ್ಲ ಎಂದು ಕೆಲವರು ತಿಳಿಸಿದ್ದಾರೆ. ಅಲ್ಲದೇ, ತಮಗಿಷ್ಟವಾದ ಕಡೆ ಮನೆ ನಿರ್ಮಿಸಿಕೊಳ್ಳಲು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದಾರೆ. ಆ ರೀತಿ ಅವರಿಗಿಷ್ಟವಾದ ಕಡೆ ಮನೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲು ಸಾಧ್ಯವಾಗದು ಎಂದು ಹೇಳಿದರು.

ಬಡಾವಣೆ ಸಜ್ಜುಗೊಳಿಸಿದರೆ ಅಲ್ಲಿ ಹೆಚ್ಚು ಜನ ಒಟ್ಟಾಗಿ ವಾಸಿಸುವುದರಿಂದ ಮೂಲಭೂತ ಅವಶ್ಯಕತೆಗಳಾದ ರಸ್ತೆ, ವಿದ್ಯುತ್‌ ಸಂಪರ್ಕ, ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸುಲಭವಾಗುತ್ತದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತ ಕುಟುಂಬಗಳು ಕೇಳುವಂತೆ ಅವರಿಗಿಷ್ಟವಾದ ಕಡೆ ಮನೆ ನಿರ್ಮಾಣಕ್ಕೆ ಸಹಾಯ ಮಾಡಲು ಸಾಧ್ಯವಾಗುವುದಿಲ್ಲ ಎಂದರು.

ಮನೆ ನಿರ್ಮಾಣಕ್ಕಾಗಿ ಸರ್ಕಾರ ಪ್ರತಿ ಸಂತ್ರಸ್ತ ಕುಟುಂಬಕ್ಕೂ 5 ಲಕ್ಷ ರೂ. ಘೋಷಿಸಿದ್ದು, ಅದನ್ನು ನೀಡಲಾಗುವುದು. ಮೊದಲು 1 ಲಕ್ಷ ರೂ. ಮುಂಗಡ ನೀಡಿ ನಂತರ ಮನೆ ನಿರ್ಮಾಣ ಕಾಮಗಾರಿ ಮುಂದುವರಿದಂತೆ ಉಳಿದ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಟಾಪ್ ನ್ಯೂಸ್

1—-wqwqeqwewqeq

India-born ಸುನೀತಾ ವಿಲಿಯಮ್ಸ್‌ ಇಂದು 3ನೇ ಬಾರಿ ನಭಕ್ಕೆ!: ಗಣೇಶನ ವಿಗ್ರಹ ಬಾಹ್ಯಾಕಾಶಕ್ಕೆ!

ಪ್ರಜ್ವಲ್‌ ವೀಡಿಯೋ ಪ್ರಕರಣಕ್ಕೆ ತಿರುವು ಡಿಕೆಶಿ ವಿರುದ್ಧ ಆಡಿಯೋ ಬಾಂಬ್‌

Prajwal Revanna ವೀಡಿಯೋ ಪ್ರಕರಣಕ್ಕೆ ತಿರುವು ಡಿಕೆಶಿ ವಿರುದ್ಧ ಆಡಿಯೋ ಬಾಂಬ್‌

1-wqewqeqwqweqwe

China; ಶಕ್ತಿಶಾಲಿ ನೌಕೆ ಕಾರ್ಯಾಚರಣೆ ಆರಂಭ: ವಿಶೇಷತೆಯೇನು?

Arvind Kejriwal ವಿರುದ್ಧ ಎನ್‌ಐಎ ತನಿಖೆಗೆ ಶಿಫಾರಸು

Arvind Kejriwal ವಿರುದ್ಧ ಎನ್‌ಐಎ ತನಿಖೆಗೆ ಶಿಫಾರಸು

ತಾಪಮಾನದಲ್ಲಿ ಏರಿಕೆ; ಮುಂಜಾಗ್ರತಾ ಕ್ರಮವಾಗಿ ವೆನ್ಲಾಕ್‌ ನಲ್ಲಿ 6 ಬೆಡ್‌ ಮೀಸಲು

D.K ತಾಪಮಾನದಲ್ಲಿ ಏರಿಕೆ; ಮುಂಜಾಗ್ರತಾ ಕ್ರಮವಾಗಿ ವೆನ್ಲಾಕ್‌ ನಲ್ಲಿ 6 ಬೆಡ್‌ ಮೀಸಲು

Exam

NEET; ನೀಟ್‌ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದ!: ಚುನಾವಣಾ ಅಸ್ತ್ರ

D. K. Shivakumar ನನಗೂ ಪ್ರಕರಣಕ್ಕೂ ಸಂಬಂಧವೇ ಇಲ್ಲ

D. K. Shivakumar ನನಗೂ ಪ್ರಕರಣಕ್ಕೂ ಸಂಬಂಧವೇ ಇಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತಾಪಮಾನದಲ್ಲಿ ಏರಿಕೆ; ಮುಂಜಾಗ್ರತಾ ಕ್ರಮವಾಗಿ ವೆನ್ಲಾಕ್‌ ನಲ್ಲಿ 6 ಬೆಡ್‌ ಮೀಸಲು

D.K ತಾಪಮಾನದಲ್ಲಿ ಏರಿಕೆ; ಮುಂಜಾಗ್ರತಾ ಕ್ರಮವಾಗಿ ವೆನ್ಲಾಕ್‌ ನಲ್ಲಿ 6 ಬೆಡ್‌ ಮೀಸಲು

May 9: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಮೊದಲ ತಂಡದಿಂದ ಹಜ್‌ ಯಾತ್ರೆ

May 9: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಮೊದಲ ತಂಡದಿಂದ ಹಜ್‌ ಯಾತ್ರೆ

ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Mangaluru ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

1—-wqwqeqwewqeq

India-born ಸುನೀತಾ ವಿಲಿಯಮ್ಸ್‌ ಇಂದು 3ನೇ ಬಾರಿ ನಭಕ್ಕೆ!: ಗಣೇಶನ ವಿಗ್ರಹ ಬಾಹ್ಯಾಕಾಶಕ್ಕೆ!

ಪ್ರಜ್ವಲ್‌ ವೀಡಿಯೋ ಪ್ರಕರಣಕ್ಕೆ ತಿರುವು ಡಿಕೆಶಿ ವಿರುದ್ಧ ಆಡಿಯೋ ಬಾಂಬ್‌

Prajwal Revanna ವೀಡಿಯೋ ಪ್ರಕರಣಕ್ಕೆ ತಿರುವು ಡಿಕೆಶಿ ವಿರುದ್ಧ ಆಡಿಯೋ ಬಾಂಬ್‌

1-wqewqeqwqweqwe

China; ಶಕ್ತಿಶಾಲಿ ನೌಕೆ ಕಾರ್ಯಾಚರಣೆ ಆರಂಭ: ವಿಶೇಷತೆಯೇನು?

Arvind Kejriwal ವಿರುದ್ಧ ಎನ್‌ಐಎ ತನಿಖೆಗೆ ಶಿಫಾರಸು

Arvind Kejriwal ವಿರುದ್ಧ ಎನ್‌ಐಎ ತನಿಖೆಗೆ ಶಿಫಾರಸು

ತಾಪಮಾನದಲ್ಲಿ ಏರಿಕೆ; ಮುಂಜಾಗ್ರತಾ ಕ್ರಮವಾಗಿ ವೆನ್ಲಾಕ್‌ ನಲ್ಲಿ 6 ಬೆಡ್‌ ಮೀಸಲು

D.K ತಾಪಮಾನದಲ್ಲಿ ಏರಿಕೆ; ಮುಂಜಾಗ್ರತಾ ಕ್ರಮವಾಗಿ ವೆನ್ಲಾಕ್‌ ನಲ್ಲಿ 6 ಬೆಡ್‌ ಮೀಸಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.