Mangaluru ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

"ಹಡಗುಗಳಿಗೆ ಕಡಲ ಸಂಕಟ' ಕಾರ್ಯಾಗಾರ

Team Udayavani, May 7, 2024, 1:31 AM IST

ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

ಮಂಗಳೂರು: ದೇಶ- ವಿದೇಶಗಳಿಗೆ ತೆರಳುವ ಯಾವುದೇ ಹಡಗುಗಳು ಕಡ್ಡಾಯವಾಗಿ ಫಿಟ್ನೆಸ್ ಸರ್ಟಿಫಿಕೇಟ್‌ ಹೊಂದಿರಬೇಕು ಹಾಗೂ ಅಂತಾರಾಷ್ಟ್ರೀಯ ವಿಮಾ ಸೌಲಭ್ಯ ಹೊಂದಿರಬೇಕು. ಇಲ್ಲವಾದರೆ ಇಂತಹ ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ ವಹಿಸುವ ಅಗತ್ಯವಿದೆ ಎಂದು ಭಾರತೀಯ ಕರಾವಳಿ ಕಾವಲು ಪಡೆ (ಐಸಿಜಿ) ಹಾಗೂ ಸರಕು ಸಾಗಾಟ ಹಡಗುಗಳ ಏಜೆಂಟರಿಗೆ ನವ ಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ)ದ ಅಧ್ಯಕ್ಷ ಡಾ|ಎ.ವಿ. ರಮಣ ಸಲಹೆ ನೀಡಿದ್ದಾರೆ.

ಎನ್‌ಎಂಪಿಎ ವತಿಯಿಂದ ಮಂಗಳೂರಿನಲ್ಲಿ ಸೋಮವಾರ ನಡೆದ “ಹಡಗುಗಳಿಗೆ ಕಡಲ ಸಂಕಟ’ ಎಂಬ ವಿಷಯದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಫಿಟ್‌ನೆಸ್‌ ಪ್ರಮಾಣ ಪತ್ರ ಹೊಂದಿ ರದ ವಾಣಿಜ್ಯ ಹಡಗುಗಳು ವರ್ಷ ಪೂರ್ತಿ ಕಾರ್ಯಾಚರಣೆ ನಡೆಸುತ್ತವೆ. ಆದರೆ ಪ್ರತಿಕೂಲ ಹವಾಮಾನ, ಚಂಡಮಾರುತ ವೇಳೆ ಸಮಸ್ಯೆಗೆ ಎದುರಾ ದಾಗ ಸ್ಥಳೀಯ ಏಜೆಂಟರ ಮೂಲಕ ಭಾರತೀಯ ಬಂದರು ಪ್ರವೇಶಿಸಲು ಮುನ್ನೆಚ್ಚರಿಕೆ ಸಂದೇಶ ನೀಡುತ್ತಾರೆ. ಇದರಿಂದ ನಮ್ಮ ಬಂದರು ಮತ್ತು ಸರಕಾರಿ ವ್ಯವಸ್ಥೆ ತೊಂದರೆಗೆ ಸಿಲುಕ ಬೇಕಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಅಂತಹ ಹಡಗುಗಳು ಸಮುದ್ರದ ನಡುವೆ ಸಂಚಾರದ ವೇಳೆಯಲ್ಲೇ ಮುಳುಗಡೆ ಯಾಗುತ್ತವೆ. ಇದರಿಂದ ನಮ್ಮ ಬಂದರು ಸಮಸ್ಯೆಯ ಜತೆಗೆ ಸಮುದ್ರ ಮಾಲಿನ್ಯ ಎದುರಿಸ ಬೇಕಾಗುತ್ತದೆ ಎಂದು ಹೇಳಿದರು.

ಭಾರತದಲ್ಲಿ ಡಿಜಿ ಶಿಪ್ಪಿಂಗ್‌ ವತಿ ಯಿಂದ ವಾಣಿಜ್ಯ ಹಡಗುಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್‌ ಒದಗಿಸಲಾಗುತ್ತದೆ. ಆದರೆ ಡಿಜಿ ಶಿಪ್ಪಿಂಗ್‌ನಿಂದಲೇ ವಾಣಿಜ್ಯ ಹಡಗುಗಳು ಈ ಸರ್ಟಿಫಿಕೇಟ್‌ ಪಡೆಯ ಬೇಕೆಂದೇನಿಲ್ಲ. ವೇಗ ವಾಗಿ ಹಾಗೂ ಕಾನೂನುಬಾಹಿರವಾಗಿ ಹಣ ಮಾಡಲುಬಯಸುವವರು ಈ ರೀತಿ ಹೊರ ದೇಶಗಳಿಂದ ಫಿಟ್‌ನೆಸ್‌ ಸರ್ಟಿ ಫಿಕೇಟ್‌ ಪಡೆಯುತ್ತಾರೆ. ಆದರೆ ಹಡಗುಗಳಿಂದ ಸಂಕಷ್ಟದ ನೆರವು ಕೋರಿ ಸಂದೇಶ ಬಂದಾಗ ಅಂತಹ ಹಡಗು ಅಂತಾ ರಾಷ್ಟ್ರೀಯ ವಿಮೆ ಹೊಂದಿರುವುದನ್ನು ಖಾತರಿಪಡಿಸಬೇಕು ಎಂದು ಡಾ| ಎ.ವಿ. ರಮಣ ಅವರು ಸಲಹೆ ನೀಡಿದರು.

ಸ್ಥಳೀಯ ಅಭಿವೃದ್ದಿಗೆ ಎನ್‌ಎಂಪಿಎ ಪೂರಕ: ಜಿಲ್ಲಾಧಿಕಾರಿ
ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಮಾತನಾಡಿ, ನವಮಂಗಳೂರು ಬಂದರಿನ ಅಭಿವೃದ್ಧಿ ಸ್ಥಳೀಯ ಅಭಿವೃದ್ಧಿಗೆ ಪೂರಕ. ರಾಜ್ಯ ರಾಜಧಾನಿ ಯೊಂದಿಗೆ ಮಂಗಳೂರನ್ನು ಸಂಪರ್ಕಿಸುವ ರಾ.ಹೆ. 75ರ ಕಾಮಗಾರಿ ಪೂರ್ಣವಾದಾಗ ಬಂದರು ಸಂಪರ್ಕಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸಲಾಗುವುದು. ಉತ್ತಮ ಸಂಪರ್ಕವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಆದ್ಯತೆ ನೀಡಲಾಗಿದೆ. ಮಂಗಳೂರಿನಲ್ಲಿ ಟ್ರಕ್‌ ಟರ್ಮಿನಲ್‌ ಕಾಮಗಾರಿಯ ಪಾಲುದಾರಿಕೆಗೆ ಎನ್‌ಎಂಪಿಎ ಮುಂದೆ ಬಂದಿದೆ ಎಂದರು.

ಸಂಕಷ್ಟದ ಹಡಗುಗಳಿಗೆ ರಕ್ಷಣೆ; ಎಸ್‌ಒಪಿ ರಚನೆ
ಡಾ| ಎ.ವಿ. ರಮಣ ಮಾತನಾಡಿ, ಸಂಕಷ್ಟದಲ್ಲಿರುವ ಹಡಗುಗಳಿಗೆ ನೆರವಾ ಗುವ ನಿಟ್ಟಿನಲ್ಲಿ ಪ್ರಮಾಣಿತ ಕಾರ್ಯಾಚರಣೆಯ ವಿಧಾನ (ಸ್ಟಾಂಡರ್ಡ್‌ ಅಪರೇಟಿಂಗ್‌ ಪ್ರೊಸೀಜರ್‌ -ಎಸ್‌ಒಪಿ)ವನ್ನು ಹೊರತಂದಿದ್ದು, ಇದನ್ನು ಡೈರೆಕ್ಟರೇಟ್‌ ಜನರಲ್‌ ಆಫ್ ಶಿಪ್ಪಿಂಗ್‌, ಅಡಿಶನಲ್‌ ಸೆಕ್ರಟರಿ ಶಿಪ್ಪಿಂಗ್‌, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಗಮನಕ್ಕೆ ತರಲಾಗಿದೆ. ಈ ಎಸ್‌ಒಪಿಯು ಗೊಂದಲವನ್ನು ಪರಿಹರಿಸುವ ಮತ್ತು ಮಾಲಿನ್ಯವನ್ನು ನಿಯಂತ್ರಿಸಲು ಸಹಕರಿಸಲಿದೆ. ಇದರಿಂದ ಸಂಚಾರ ಯೋಗ್ಯವಲ್ಲದ ಹಡಗುಗಳನ್ನು ತಡೆ ಯಲು ಸಾಧ್ಯವಾಗಲಿದೆ ಎಂದು ಹೇಳಿದರು.

ಮುಂದಿನ ವರ್ಷ ಸುವರ್ಣ ಮಹೋತ್ಸವ
ರಾಷ್ಟ್ರಪತಿ/ ಪ್ರಧಾನಿಯಿಂದ ಉದ್ಘಾಟನೆ
ಮಂಗಳೂರು: ನವಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ಮುಂದಿನ ವರ್ಷ ಸುವರ್ಣ ಮಹೋತ್ಸವ ಆಚರಿಸಲಿದ್ದು ಇದರ ಅಂಗವಾಗಿ ವಿವಿಧ ಮೂಲಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದರ ಉದ್ಘಾಟನೆಯನ್ನು ಮುಂದಿನ ಜನವರಿಯಲ್ಲಿ ಪ್ರಧಾನಮಂತ್ರಿ ಅಥವಾ ರಾಷ್ಟ್ರಪತಿಯವರು ನೆರವೇರಿಸಲಿದ್ದಾರೆ ನವ ಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷ ಡಾ| ಎ.ವಿ. ರಮಣ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಸೋಮವಾರ ನಡೆದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಎನ್‌ಎಂಪಿಎ ವ್ಯಾಪ್ತಿಯ ಕೆ.ಕೆ. ಗೇಟ್‌ನ ಆಧುನೀಕರಣ, ಕೆ.ಕೆ. ಗೇಟ್‌ ಮತ್ತು ರಾಷ್ಟ್ರೀಯ ಹೆದ್ದಾರಿ 66 ಮಧ್ಯೆ ರಸ್ತೆಯ ಚತುಷ್ಪಥ ಯೋಜನೆ ಹಾಗೂ ವಾಹನಗಳನ್ನು ಸ್ಕ್ಯಾನಿಂಗ್‌ ಮಾಡಲು ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್‌ (ಆರ್‌ಎಫ್ಐಡಿ)ನ ಆರಂಭ ಸಹಿತ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ನವ ಮಂಗಳೂರು ಬಂದರು 2023-24ರಲ್ಲಿ 45.71 ಎಂಎಂಟಿ ಸರಕುಗಳನ್ನು ನಿರ್ವಹಿಸಿದ್ದು, 2022-23ರಲ್ಲಿ ಇದು 41.41 ಎಂಎಂಟಿ ಆಗಿತ್ತು. ಕಳೆದ ವರ್ಷಕ್ಕಿಂತ ಸರಕು ನಿರ್ವಹಣೆಯಲ್ಲಿ ಶೇ. 10.36 ಬೆಳವಣಿಗೆ ದಾಖಲಿಸಿದೆ. 2023-24ನೆ ಸಾಲಿನ ಅವಧಿಯಲ್ಲಿ 833 ಕೋಟಿ ರೂ.ಗಳ ಕಾರ್ಯನಿರ್ವಹಣಾ ಆದಾಯ ದಾಖಲಿಸಿದ್ದರೆ, ಕಳೆದ ಅವಧಿಯಲ್ಲಿ ಇದು 743 ಕೋಟಿ ರೂ.ಆಗಿತ್ತು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬಂದರಿನಲ್ಲಿ 277 ಕಂಟೈನರ್‌ ಹಡಗು ಗಳನ್ನು ನಿರ್ವಹಣೆ ಮಾಡಲಾಗಿದೆ. ವಿಲಾಸಿ ಪ್ರವಾಸಿ ಹಡಗುಗಳನ್ನು ಕೂಡ ನವಮಂಗಳೂರು ಬಂದರು ನಿರ್ವಹಣೆ ಮಾಡುತ್ತಿದ್ದು, ಪ್ರತೀ ವರ್ಷ ಸುಮಾರು 8 ಸಾವಿರ ಅಂತಾರಾಷ್ಟ್ರೀಯ ಪ್ರವಾಸಿಗರು ಭೇಟಿ ನೀಡುತ್ತಾರೆ ಎಂದರು.

ಮುಂದಿನ ವರ್ಷ 50 ಎಂಎಂಟಿ ಸರಕು ಸಾಗಾಟ
ರಾಜ್ಯದ ವಿವಿಧ ಭಾಗಗಳಿಗೆ ಸಂಪರ್ಕ ಒದಗಿಸುವ ಪಶ್ಚಿಮ ಘಟ್ಟ ಭಾಗದ ರಸ್ತೆಗಳ ಅಭಿವೃದ್ಧಿ ಕಾರ್ಯ ಮುಂದಿನ ವರ್ಷಕ್ಕೆ ಪೂರ್ಣಗೊಳ್ಳುವುದರೊಂದಿಗೆ ಹೊಸ ನಿರೀಕ್ಷೆ ಆರಂಭವಾಗಿದೆ. ಬಂದರಿನ ಸುವರ್ಣ ಮಹೋತ್ಸವದ ಸಂಭ್ರಮದೊಂದಿಗೆ 2024-25ರಲ್ಲಿ ಎನ್‌ಎಎಂಪಿಎಯಿಂದ ಸರಕು ನಿರ್ವಹಣೆ 50 ಮಿಲಿಯ ಮೆಟ್ರಿಕ್‌ ಟನ್‌ (ಎಂಎಂಟಿ) ದಾಟುವ ಭರವಸೆ ಇದೆ ಹಾಗೂ ಬಂದರಿಗೆ ರಸ್ತೆ ಸಂಪರ್ಕವು ಸರ್ವ ಋತು ರಸ್ತೆಯಾಗಿ ಅಭಿವೃದ್ಧಿ ಹೊಂದಿದಾಗ 60ರಿಂದ 70 ಮಿಲಿಯ (ಈಗ 45.71) ಎಂಎಂಟಿ ಸರಕು ನಿರ್ವಹಣೆಯ ಸಾಮರ್ಥ್ಯ ದೊರೆಯಲಿದೆ ಎಂದು ಡಾ| ರಮಣ ತಿಳಿಸಿದರು.

ಟಾಪ್ ನ್ಯೂಸ್

Kundapura ಎಸ್‌ಐ ವ್ಯತಿರಿಕ್ತ ಹೇಳಿಕೆ; ಚಾಲಕ ನಿರ್ದೋಷಿಯೆಂದ ಕೋರ್ಟ್‌

Kundapura ಎಸ್‌ಐ ವ್ಯತಿರಿಕ್ತ ಹೇಳಿಕೆ; ಚಾಲಕ ನಿರ್ದೋಷಿಯೆಂದ ಕೋರ್ಟ್‌

Mangaluru ರಸ್ತೆಯಲ್ಲಿಯೇ ನಮಾಜ್‌: ವೀಡಿಯೋ ವೈರಲ್‌

Mangaluru ರಸ್ತೆಯಲ್ಲಿಯೇ ನಮಾಜ್‌: ವೀಡಿಯೋ ವೈರಲ್‌

1

Horoscope: ಹೊಸ ಜವಾಬ್ದಾರಿಗಳನ್ನು ಒಪ್ಪಿಕೊಳ್ಳಲು ಹಿಂಜರಿಯದಿರಿ

Pen Drive Case; ಏರ್‌ಪೋರ್ಟ್‌ನಲ್ಲಿ ಪ್ರಜ್ವಲ್‌ಗೆ “ಸ್ವಾಗತಿ’ಸಲು ಎಸ್‌ಐಟಿ ಸಿದ್ದತೆ !

Pen Drive Case; ಏರ್‌ಪೋರ್ಟ್‌ನಲ್ಲಿ ಪ್ರಜ್ವಲ್‌ಗೆ “ಸ್ವಾಗತಿ’ಸಲು ಎಸ್‌ಐಟಿ ಸಿದ್ದತೆ !

ನರೇಗಾದಡಿ ಕಾಲುಸಂಕ ರಚನೆಗೆ ಅವಕಾಶ ಇಲ್ಲ; ಕರಾವಳಿಯಲ್ಲಿ ಅತ್ಯಗತ್ಯ ಕಾಮಗಾರಿಗೆ ಅಡ್ಡಿ

ನರೇಗಾದಡಿ ಕಾಲುಸಂಕ ರಚನೆಗೆ ಅವಕಾಶ ಇಲ್ಲ; ಕರಾವಳಿಯಲ್ಲಿ ಅತ್ಯಗತ್ಯ ಕಾಮಗಾರಿಗೆ ಅಡ್ಡಿ

ಡಿಕೆಶಿ ಬದಲಾವಣೆಗಿದು ಕಾಲವಲ್ಲ; ರಾಜಣ್ಣಗೆ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್‌ ತಿರುಗೇಟು

D. K. Shivakumar ಬದಲಾವಣೆಗಿದು ಕಾಲವಲ್ಲ; ರಾಜಣ್ಣಗೆ ಜಿ.ಸಿ. ಚಂದ್ರಶೇಖರ್‌ ತಿರುಗೇಟು

ಕಾಂಗ್ರೆಸ್‌ನ ಗ್ಯಾರಂಟಿ ಚುನಾವಣಾ ಅಕ್ರಮ ಅಲ್ಲ: ಸುಪ್ರೀಂ ಕೋರ್ಟ್‌

ಕಾಂಗ್ರೆಸ್‌ನ ಗ್ಯಾರಂಟಿ ಚುನಾವಣಾ ಅಕ್ರಮ ಅಲ್ಲ: ಸುಪ್ರೀಂ ಕೋರ್ಟ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru ರಸ್ತೆಯಲ್ಲಿಯೇ ನಮಾಜ್‌: ವೀಡಿಯೋ ವೈರಲ್‌

Mangaluru ರಸ್ತೆಯಲ್ಲಿಯೇ ನಮಾಜ್‌: ವೀಡಿಯೋ ವೈರಲ್‌

ಶಾಸಕರ ಮನೆಗೆ ಮೊದಲು ಮೂರೇ ಸಿಬಂದಿ ಕಳಿಸಿದ್ದೆವು: ಪೊಲೀಸ್‌ ಅಧೀಕ್ಷಕ ರಿಷ್ಯಂತ್‌

ಶಾಸಕರ ಮನೆಗೆ ಮೊದಲು ಮೂರೇ ಸಿಬಂದಿ ಕಳಿಸಿದ್ದೆವು: ಪೊಲೀಸ್‌ ಅಧೀಕ್ಷಕ ರಿಷ್ಯಂತ್‌

bಶಿಕ್ಷಣ ಕ್ಷೇತ್ರ ಹದಗೆಡಿಸಿದ ಕಾಂಗ್ರೆಸ್‌: ಬಿ.ವೈ. ವಿಜಯೇಂದ್ರ

ಶಿಕ್ಷಣ ಕ್ಷೇತ್ರ ಹದಗೆಡಿಸಿದ ಕಾಂಗ್ರೆಸ್‌: ಬಿ.ವೈ. ವಿಜಯೇಂದ್ರ

ISRO ವಿಜ್ಞಾನಿ ಕಾರ್ಯಕ್ರಮ: ಮೌಲ್ಯಾ ವೈ.ಆರ್‌. ಜೈನ್‌ ಭಾಗಿ

ISRO ವಿಜ್ಞಾನಿ ಕಾರ್ಯಕ್ರಮ: ಮೌಲ್ಯಾ ವೈ.ಆರ್‌. ಜೈನ್‌ ಭಾಗಿ

Subramanya ತಂಡದಿಂದ ಹಲ್ಲೆ ಆರೋಪ; ದೂರು

Subramanya ತಂಡದಿಂದ ಹಲ್ಲೆ ಆರೋಪ; ದೂರು

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

Kundapura ಎಸ್‌ಐ ವ್ಯತಿರಿಕ್ತ ಹೇಳಿಕೆ; ಚಾಲಕ ನಿರ್ದೋಷಿಯೆಂದ ಕೋರ್ಟ್‌

Kundapura ಎಸ್‌ಐ ವ್ಯತಿರಿಕ್ತ ಹೇಳಿಕೆ; ಚಾಲಕ ನಿರ್ದೋಷಿಯೆಂದ ಕೋರ್ಟ್‌

Mangaluru ರಸ್ತೆಯಲ್ಲಿಯೇ ನಮಾಜ್‌: ವೀಡಿಯೋ ವೈರಲ್‌

Mangaluru ರಸ್ತೆಯಲ್ಲಿಯೇ ನಮಾಜ್‌: ವೀಡಿಯೋ ವೈರಲ್‌

1

Horoscope: ಹೊಸ ಜವಾಬ್ದಾರಿಗಳನ್ನು ಒಪ್ಪಿಕೊಳ್ಳಲು ಹಿಂಜರಿಯದಿರಿ

Pen Drive Case; ಏರ್‌ಪೋರ್ಟ್‌ನಲ್ಲಿ ಪ್ರಜ್ವಲ್‌ಗೆ “ಸ್ವಾಗತಿ’ಸಲು ಎಸ್‌ಐಟಿ ಸಿದ್ದತೆ !

Pen Drive Case; ಏರ್‌ಪೋರ್ಟ್‌ನಲ್ಲಿ ಪ್ರಜ್ವಲ್‌ಗೆ “ಸ್ವಾಗತಿ’ಸಲು ಎಸ್‌ಐಟಿ ಸಿದ್ದತೆ !

ನರೇಗಾದಡಿ ಕಾಲುಸಂಕ ರಚನೆಗೆ ಅವಕಾಶ ಇಲ್ಲ; ಕರಾವಳಿಯಲ್ಲಿ ಅತ್ಯಗತ್ಯ ಕಾಮಗಾರಿಗೆ ಅಡ್ಡಿ

ನರೇಗಾದಡಿ ಕಾಲುಸಂಕ ರಚನೆಗೆ ಅವಕಾಶ ಇಲ್ಲ; ಕರಾವಳಿಯಲ್ಲಿ ಅತ್ಯಗತ್ಯ ಕಾಮಗಾರಿಗೆ ಅಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.