ವನಿತಾ ಟಿ20 ಸರಣಿ: ಬಾಂಗ್ಲಾವನ್ನು ಮಣಿಸಿದ ಪಾಕ್
Team Udayavani, Oct 27, 2019, 5:01 AM IST
ಲಾಹೋರ್: ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಶನಿವಾರ ಇಲ್ಲಿನ “ಗದ್ದಾಫಿ ಸ್ಟೇಡಿಯಂ’ನಲ್ಲಿ ನಡೆದ ಮೊದಲ ವನಿತಾ ಟಿ20 ಪಂದ್ಯವನ್ನು ಪಾಕಿಸ್ಥಾನ 14 ರನ್ನುಗಳಿಂದ ಜಯಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ಥಾನ 7 ವಿಕೆಟಿಗೆ 126 ರನ್ ಗಳಿಸಿದರೆ, ಬಾಂಗ್ಲಾದೇಶ 7 ವಿಕೆಟಿಗೆ 112 ರನ್ ಗಳಿಸಲಷ್ಟೇ ಶಕ್ತವಾಯಿತು.
ಪಾಕಿಸ್ಥಾನ ಸಂಘಟಿತ ದಾಳಿಯ ಮೂಲಕ ಯಶಸ್ಸು ಕಂಡಿತು. ದಾಳಿಗಿಳಿದ ಎಲ್ಲ 6 ಮಂದಿ ಬೌಲರ್ಗಳೂ ವಿಕೆಟ್ ಕಿತ್ತರು. ಅನಾಮ್ ಅಮಿನ್ 13ಕ್ಕೆ 2 ವಿಕೆಟ್ ಉರುಳಿಸಿ ಹೆಚ್ಚಿನ ಯಶಸ್ಸು ಸಾಧಿಸಿದರು. ಬಾಂಗ್ಲಾದ ಮಧ್ಯಮ ಸರದಿಯ ಆಟಗಾರ್ತಿ ರುಮಾನಾ ಅಹ್ಮದ್ 50 ರನ್ ಬಾರಿಸಿ (30 ಎಸೆತ, 6 ಬೌಂಡರಿ, 2 ಸಿಕ್ಸರ್) ದಿಟ್ಟ ಹೋರಾಟ ನಡೆಸಿದರೂ ಉಳಿದವರಿಂದ ಬೆಂಬಲ ಲಭಿಸಲಿಲ್ಲ.
ಪಾಕಿಸ್ಥಾನದ ಬ್ಯಾಟಿಂಗ್ ಸರದಿಯಲ್ಲಿ ಮಿಂಚಿದವರು ನಾಯಕಿ ಬಿಸ್ಮಾ ಮರೂಫ್ (34) ಮತ್ತು ಒಮೈಮಾ ಸೊಹೈಲ್ (33). ಇವರಿಂದ 3ನೇ ವಿಕೆಟಿಗೆ 60 ರನ್ ಒಟ್ಟುಗೂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
DD ಸ್ಪೋರ್ಟ್ಸ್ ನಲ್ಲಿ ಟಿ20 ವಿಶ್ವಕಪ್, ಒಲಿಂಪಿಕ್ಸ್ ನೇರ ಪ್ರಸಾರ
Norway ಚೆಸ್ ಟೂರ್ನಿ: ಪ್ರಜ್ಞಾನಂದ ಪರಾಭವ
Kedar Jadhav; ಎಲ್ಲಾ ಮಾದರಿ ಕ್ರಿಕೆಟ್ ಗೆ ವಿದಾಯ ಹೇಳಿದ ಆಲ್ ರೌಂಡರ್ ಕೇದಾರ್ ಜಾಧವ್
Natasa Stankovic: ಹಾರ್ದಿಕ್ ಪಾಂಡ್ಯ ಜೊತೆಗಿನ ಮದುವೆ ಫೋಟೋಗಳನ್ನು ಮತ್ತೆ ಹಂಚಿಕೊಂಡ ನತಾಶ
T20 World Cup 2024: ವಿಶ್ವಕಪ್ ನ ಪಂದ್ಯಗಳನ್ನು ನಾನು ನೋಡುವುದಿಲ್ಲ..: ರಿಯಾನ್ ಪರಾಗ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.