ಆದಾಯ ತೆರಿಗೆ ಇಳಿಕೆ ಇಲ್ಲ ?
Team Udayavani, Oct 31, 2019, 5:45 AM IST
ಹೊಸದಿಲ್ಲಿ: ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ ಈ ಬಾರಿ ವೈಯಕ್ತಿಕ ಆದಾಯ ತೆರಿಗೆಯನ್ನು ಇಳಿಕೆ ಮಾಡುವ ಸಾಧ್ಯತೆಗಳು ತೀರಾ ಕಡಿಮೆ ಎಂದು ಮೂಲಗಳು ತಿಳಿಸಿವೆ. ಆದಾಯ ತೆರಿಗೆಯನ್ನು ಮತ್ತಷ್ಟು ಇಳಿಸಿದರೆ ಸರಕಾರದ ಖಜಾನೆಗೆ ಹೊಡೆತ ಬೀಳುವ ಸಾಧ್ಯತೆ ಇದೆ. ಈ ಕಾಲಘಟ್ಟದಲ್ಲಿ ಸರಕಾರ ಅಂತಹ ನಿರ್ಧಾರ ಕೈಗೊಳ್ಳುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ.