ಮೊದಲ ಡೇ ನೈಟ್ ಪಂದ್ಯಕ್ಕೆ ಮಹೇಂದ್ರ ಸಿಂಗ್ ಧೋನಿ ಕಮೆಂಟೇಟರ್ ?
Team Udayavani, Nov 5, 2019, 3:13 PM IST
ಕೋಲ್ಕತ್ತಾ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಕಮೆಂಟೇಟರ್ ಆಗಲಿದ್ದಾರೆಯೇ? ಅದೂ ಕೂಡಾ ಇದೇ ತಿಂಗಳ ಅಂತ್ಯದಲ್ಲಿ ಬಾಂಗ್ಲಾ ವಿರುದ್ಧ ನಡೆಯಲಿರುವ ಡೇ ನೈಟ್ ಪಂದ್ಯಕ್ಕೆ ? ಹೌದು ಎನ್ನುತ್ತಿದೆ ವರದಿ.
ಈಡನ್ ಗಾರ್ಡನ್ ನಲ್ಲಿ ಭಾರತದ ಮೊದಲ ಹಗಲು ರಾತ್ರಿ ಪಂದ್ಯ ನವೆಂಬರ್ 22ರಿಂದ ಆರಂಭವಾಗಲಿದೆ. ಈ ಪಂದ್ಯಕ್ಕೆ ಮಹೇಂದ್ರ ಸಿಂಗ್ ಧೋನಿ ಅವರನ್ನು ಅತಿಥಿ ವೀಕ್ಷಕ ವಿವರಣೆಗಾರರನ್ನಾಗಿ ಕರೆತರಲು ಯೋಜನೆ ಹಾಕಲಾಗಿದೆ ಎಂದು ವರದಿಯಾಗಿದೆ.
ನೇರ ಪ್ರಸಾರದ ಹಕ್ಕು ಪಡೆದಿರುವ ಖಾಸಗಿ ವಾಹಿನಿಯು ಈ ಬಗ್ಗೆ ಬಿಸಿಸಿಐ ಜೊತೆ ಮಾತುಕತೆ ನಡೆಸಿದ್ದು, ಪಂದ್ಯದ ಮೊದಲ ಎರಡು ದಿನ ಧೋನಿಯವರನ್ನು ಕಮೇಂಟೇಟರ್ ಆಗಿ ಮಾಡಲು ಯೋಚಿಸಿದೆ.
ಎಲ್ಲಾ ಅಂದುಕೊಂಡಂತೆ ಆದರೆ ಇದೇ ಮೊದಲ ಬಾರಿಗೆ ಧೋನಿಯ ಕಮೆಂಟ್ರಿ ಜೊತೆಗೆ ಟೆಸ್ಟ್ ಅನುಭವಗಳನ್ನು ಕೇಳುವ ಭಾಗ್ಯ ಅಭಿಮಾನಿಗಳಿಗೆ ಸಿಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ