ಸ್ಥಿರದಿಂದ ಋಣಾತ್ಮಕದತ್ತ ಜಾರಿದ ಭಾರತದ ಆರ್ಥಿಕ ರೇಟಿಂಗ್‌

ಮೂಡಿ ಹೂಡಿಕೆ ಸೇವೆ ಸಂಸ್ಥೆಯಿಂದ ರೇಟಿಂಗ್‌ ; ಮೂಡಿ ಹೇಳಿಕೆಯನ್ನು ಅಲ್ಲಗಳೆದ ಕೇಂದ್ರ ಸರಕಾರ

Team Udayavani, Nov 8, 2019, 5:05 PM IST

economic

ಹೊಸದಿಲ್ಲಿ: ಮಾರುಕಟ್ಟೆ ಕುಸಿತ, ಭಾರತದ ಆರ್ಥಿಕತೆಯ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿರುವಂತೆಯೇ, ಹೂಡಿಕೆ ಕೇಂದ್ರಿತವಾದ ರೇಟಿಂಗ್‌ ಸಂಸ್ಥೆ ಮೂಡಿ ಇನ್‌ವೆಸ್ಟರ್‌ ಸರ್ವೀಸ್‌ ಸಂಸ್ಥೆ ಭಾರತದ ಆರ್ಥಿಕತೆಯನ್ನು “ಸ್ಥಿರ’ದಿಂದ  “ಋಣಾತ್ಮಕ’ಕ್ಕೆ ಜಾರಿದೆ ಎಂದು ಹೇಳಿದೆ.

ಆದರೂ ಅದು ಭಾರತದ ರೇಟಿಂಗ್‌ ಅನ್ನು “ಬಿಎಎ2′ ಮುಂದುವರಿಸಿದೆ.

ಹಿಂದೆ ನಿರೀಕ್ಷಿಸಿದ್ದಕ್ಕಿಂತಲೂ ಕಡಿಮೆ ದರದಲ್ಲಿ ಭಾರತದ ಆರ್ಥಿಕಾಭಿವೃದ್ಧಿ ನಿಂತಿರುವುದು, ಬಹುಕಾಲದ ಆರ್ಥಿಕ ಮತ್ತು ಸಾಂಸ್ಥಿಕ ದುರ್ಬಲತೆಗಳನ್ನು ಪರಿಹರಿಸುವಲ್ಲಿ ಸರಕಾರದ ನೀತಿಗಳು ಹೆಚ್ಚು ಸಫ‌ಲವಾಗದೇ ಇರುವುದು, ಹಿಂದೆ ಅಂದುಕೊಂಡಿರುವುದಕ್ಕಿಂತ ಕಡಿಮೆ ಆರ್ಥಿಕ ಗತಿ ಇರುವುದು ಮೂಡಿ ನಿಲುವಿನಲ್ಲಿ ಬದಲಾಗಲು ಕಾರಣವಾಗಿದೆ ಎಂದು ಅದರ ಪ್ರಕಟನೆ ಹೇಳಿದೆ.

ಮೂಡಿಯ ಹೇಳಿಕೆ ಹೊರಬಿದ್ದ ಕೂಡಲೇ ಸದ್ಯದ ಆರ್ಥಿಕ ಸ್ಥಿತಿಯನ್ನು ಕೇಂದ್ರ ಸರಕಾರ ಸಮರ್ಥಿಸಿಕೊಂಡಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿರುವಂತೆ ಭಾರತದ ಆರ್ಥಿಕತೆ ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದ್ದು ಸದ್ಯದ ವಿದ್ಯಮಾನಗಳು ಭಾರತದ ಆರ್ಥಿಕತೆ ಮೇಲೆ ಯಾವುದೇ ಪರಿಣಾಮ ಬೀರವು ಎಂದು ಅದು ಹೇಳಿದೆ.

ಈ ಮೊದಲು ಐಎಂಎಫ್ ಭಾರತದ ಆರ್ಥಿಕಾಭಿವೃದ್ಧಿ ದರ 2019ರಲ್ಲಿ ಶೇ.6.1ರಷ್ಟು ಇರುವುದಾಗಿ ಮತ್ತು 2020ರಲ್ಲಿ ಶೇ.7ಕ್ಕೇರುವುದಾಗಿ ಹೇಳಿತ್ತು. ಈ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆ ದೃಢವಾಗಿದ್ದು, ಹಣದುಬ್ಬರದಂತಹ ಸಮಸ್ಯೆಗಳ ಮೇಲೆ ನಿಗಾವಹಿಸಲಾಗಿದೆ ಎಂದು ಹೇಳಿದೆ.

ಏನಿದು ಮೂಡಿ ರೇಟಿಂಗ್‌?
ಜಾಗತಿಕ ವಿದ್ಯಮಾನಗಳಿಗೆ ಅನ್ವಯವಾಗಿ, ನಿರ್ದಿಷ್ಟ ದೇಶದ ಆರ್ಥಿಕ ಸ್ಥಿತಿಯ ಬಗ್ಗೆ ಹೂಡಿಕೆದಾರರಿಗೆ ತಿಳಿಸುವುದು ಮೂಡಿ ರೇಟಿಂಗ್‌. ಇದೊಂದು ಸಂಸ್ಥೆಯಾಗಿದ್ದು, ನಿರ್ದಿಷ್ಟ ದೇಶದ ಆರ್ಥಿಕತೆ ಅಳೆದು ರೇಟಿಂಗ್‌ ನೀಡುತ್ತದೆ. “ಎಎಎ’ ಅತ್ಯುನ್ನತ ರೇಟಿಂಗ್‌ ಆಗಿದ್ದು “ಸಿ’ ಕನಿಷ್ಠ ರೇಟಿಂಗ್‌ ಆಗಿದೆ. ಸದ್ಯ ಭಾರತದ ರೇಟಿಂಗ್‌ ಮಧ್ಯಮ ಎಂದು ಪರಿಗಣಿಸಲ್ಪಟ್ಟಿದೆ. ಬಿಎಎ ನಲ್ಲಿ ಬಿಎಎ1 ಬಿಎಎ2 ಬಿಎಎ3 ಎಂದಿದ್ದು ಭಾರತಕಕೆ ಬಿಎಎ2 ಪ್ರಾಪ್ತವಾಗಿದೆ.

ಟಾಪ್ ನ್ಯೂಸ್

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Ramalinga reddy 2

BJP ಒಂದಂಕಿಗೆ ಕುಸಿತ: ಸಚಿವ ರಾಮಲಿಂಗಾ ರೆಡ್ಡಿ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

ನಮ್ಮ ದುಡಿಮೆ ನಿಮ್ಮ ಮಕ್ಕಳಿಗಾಗಿ: ಪ್ರಧಾನಿ ಮೋದಿ

Election Campaign; ನಮ್ಮ ದುಡಿಮೆ ನಿಮ್ಮ ಮಕ್ಕಳಿಗಾಗಿ: ಪ್ರಧಾನಿ ಮೋದಿ

ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.