ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಜೋರು

Team Udayavani, Nov 9, 2019, 10:40 AM IST

huballi-tdy-1

ಕುಂದಗೋಳ: ಪಟ್ಟಣದ ಪಂಚಾಯ್ತಿ ಚುನಾವಣೆ ಅಂಗಳ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಅಭ್ಯರ್ಥಿಗಳ ಪ್ರಚಾರಕ್ಕೆ ಸಂಜೆ ಮಳೆಯು ಅಡಚಣೆ ಉಂಟು ಮಾಡುತ್ತಿದ್ದರಿಂದ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ ಕೋರುತ್ತಿರುವುದು ವಿಶೇಷವಾಗಿ ಕಂಡುಬರುತ್ತಿದೆ.

ಪ್ರಸಕ್ತ ಚುನಾವಣೆಯಲ್ಲಿ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಕಣದಲ್ಲಿರುವುದು ವಿಶೇಷವಾಗಿದೆ. 9ನೇ ವಾರ್ಡ್‌ನ ಅಭ್ಯರ್ಥಿ 25 ವರ್ಷದ ಶಿವರಾಜ ಕನೋಜ ಅತೀ ಕಿರಿಯ ವಯಸ್ಸಿನವರಾದರೆ, ಅತೀ ಹಿರಿಯ 65 ವಯಸ್ಸಿನ ಶಿದ್ದಪ್ಪ ಚುರಿಯವರಾಗಿದ್ದಾರೆ.ಹೆಚ್ಚಿನದಾಗಿ 30ರಿಂದ 45 ವರ್ಷದ ಒಳಗಿನ ಅಭ್ಯರ್ಥಿಗಳು ಕಣದಲ್ಲಿರುವುದರಿಂದ ಯುವಕರ ಪಡೆ ಸೇರಿಕೊಂಡು ತಮ್ಮ ಪರವಾಗಿ ಮತ ಯಾಚಿಸುವುದು ಕಂಡುಬರುತ್ತಿದೆ.

ಇಬ್ಬರಿಗಷ್ಟೇ ಮರು ಆಯ್ಕೆ ಅವಕಾಶ: ಕಳೆದ ಅವಧಿಯಲ್ಲಿದ್ದ 15 ಚುನಾಯಿತ ಪ್ರತಿನಿಧಿಗಳಲ್ಲಿ ಕೇವಲ ಇಬ್ಬರು ಮರು ಆಯ್ಕೆಗೆ ಕಣಕ್ಕಿಳಿದಿದ್ದಾರೆ. ಅದರಲ್ಲೂ ವಿಶೇಷವೆಂದರೆ ಅವರಿಬ್ಬರೂ ಸಹ ಅಧ್ಯಕ್ಷ ಸ್ಥಾನದ ಗಾದಿ ಏರಿದವರೇ ಆಗಿದ್ದಾರೆ! ಕಳೆದ ಎರಡು ಬಾರಿ  ಸತತವಾಗಿ ಆಯ್ಕೆಗೊಂಡಿದ್ದ ಮಲ್ಲಿಕಾರ್ಜುನ ಕಿರೇಸೂರ ಅವರು 3ನೇ ಬಾರಿಗೆ ಸ್ಪರ್ಧೆಗಿಳಿದಿದ್ದಾರೆ. 16ನೇ ವಾರ್ಡ್‌ನಿಂದ ಎರಡನೇ ಬಾರಿಗೆ ಯಲ್ಲವ್ವ ಭಜಂತ್ರಿಯವರು ಕಣದಲ್ಲಿದ್ದಾರೆ. ಇವರಿಬ್ಬರೂ ಬಿಜೆಪಿಯಿಂದ ಸ್ಪರ್ಧಿಸಿದ್ದು, ಕಳೆದ ಅವಧಿಯಲ್ಲಿ ಅಧ್ಯಕ್ಷರಾಗಿದ್ದರು. ಇನ್ನು ನಾಡಗೇರ ವಾಡೆ ಧಣಿಯರಾದ ಶ್ಯಾಮಸುಂದರ ದೇಸಾಯಿಯವರು ಬಿಜೆಪಿಯಿಂದ 12ನೇ ವಾರ್ಡ್‌ನಲ್ಲಿ ಸ್ಪರ್ಧೆಗೆ ಇಳಿದ್ದಾರೆ.

ಜಿದ್ದಾಜಿದ್ದಿನ ಹಣಾಹಣಿ: ಕಳೆದ ಅವಧಿಯಲ್ಲಿ ಅಜೀಜ ಕ್ಯಾಲಕೊಂಡ ಅಧ್ಯಕ್ಷರಾಗಿದ್ದು, ಈ ಬಾರಿ ಅವರ ಸಹೋದರ ಮಹ್ಮದ್‌ ಸಲೀಂ ಕ್ಯಾಲಕೊಂಡ ಅವರು 5ನೇ ವಾರ್ಡ್‌ ನಿಂದ ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಿರೇಸೂರ ವಿರುದ್ಧ ಸ್ಪರ್ಧೆಗೆ ಇಳಿದಿದ್ದಾರೆ. ಈ ವಾರ್ಡ್‌ ಎಲ್ಲರ ಗಮನ ಸೆಳೆಯುತ್ತಿದೆ. ಇವರಿಬ್ಬರ ಮಧ್ಯ ನೇರ ಹಣಾಹಣಿ ಇದ್ದರೂ ಜೆಡಿಎಸ್‌ ಅಭ್ಯರ್ಥಿ ಹುಸೇನಸಾಬ ಆಶಮ್ಮನವರ ಇರುವುದರಿಂದ ತೀವ್ರ ಪೈಪೋಟಿ ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಬಿಜೆಪಿ ಹಾಗೂ ಕಾಂಗ್ರೆಸ್‌ ಎಲ್ಲ 19 ವಾಡ್‌ ಗಳಿಂದ ಸ್ಪರ್ಧೆಗಿಳಿದಿದ್ದು, ಜೆಡಿಎಸ್‌ ಕೇವಲ 7 ವಾರ್ಡ್‌ಗಳಲ್ಲಿ ಸ್ಪರ್ಧೆಗಿಳಿದಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ ಹೇಗಾದರೂ ಮಾಡಿ ಪಪಂನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ತಂತ್ರ ಹೆಣೆಯುತ್ತಿದ್ದರೆ, ಪ್ರತಿಯಾಗಿ ಜೆಡಿಎಸ್‌ ನವರು ಕಿಂಗ್‌ಮೇಕರ್‌ ಆಗಲು ಪ್ರತಿತಂತ್ರ ರೂಪಿಸುತ್ತಿದ್ದಾರೆ. ಪ್ರತಿ ವಾರ್ಡ್‌ನಲ್ಲೂ ಅಭ್ಯರ್ಥಿಗಳು ಬೆಳಗ್ಗೆಯಿಂದಲೇ ಮನೆ ಮನೆಗೆ ತೆರಳಿ ಪ್ರಚಾರದಲ್ಲಿ ತೊಡಗಿದ್ದಾರೆ.

-ಶೀತಲ್‌ ಮುರಗಿ

ಟಾಪ್ ನ್ಯೂಸ್

MLC Election: ನೈಋತ್ಯ ಕ್ಷೇತ್ರದಲ್ಲಿ ಗೆಲುವು ನಿಶ್ಚಿತ: ಕೋಟ

MLC Election: ನೈಋತ್ಯ ಕ್ಷೇತ್ರದಲ್ಲಿ ಗೆಲುವು ನಿಶ್ಚಿತ: ಕೋಟ

Kambala ಕ್ಷೇತ್ರದವರಿಗೆ ಉಚಿತ ವಿಮೆ ಸೌಲಭ್ಯ

Kambala ಕ್ಷೇತ್ರದವರಿಗೆ ಉಚಿತ ವಿಮೆ ಸೌಲಭ್ಯ

Madhu Bangarappa ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಗೆಲುವು

Madhu Bangarappa ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಗೆಲುವು

Belthangady ಕಾಂಗ್ರೆಸ್‌ನಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಆತಂಕದಲ್ಲಿ: ಕೋಟ

Belthangady ಕಾಂಗ್ರೆಸ್‌ನಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಆತಂಕದಲ್ಲಿ: ಕೋಟ

Belthangady ವಿದ್ಯುತ್‌ ತಂತಿ ಮೇಲೆ ಬಿದ್ದ ಮರ; ವ್ಯಕ್ತಿಗೆ ಗಾಯ

Belthangady ವಿದ್ಯುತ್‌ ತಂತಿ ಮೇಲೆ ಬಿದ್ದ ಮರ; ವ್ಯಕ್ತಿಗೆ ಗಾಯ

Shirva ಮರಳು ಅಕ್ರಮ ಸಾಗಾಟ: ಟಿಪ್ಪರ್‌ ವಶ

Shirva ಮರಳು ಅಕ್ರಮ ಸಾಗಾಟ: ಟಿಪ್ಪರ್‌ ವಶ

1-wewewe

Mangaluru CCB  ಕಾರ್ಯಾಚರಣೆ: ಅಕ್ರಮ ಪಿಸ್ತೂಲ್ ಹೊಂದಿದ್ದ ಇಬ್ಬರ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Parameshwar

CBI ಗೆ ಕೊಡುವ ಅಗತ್ಯವಿಲ್ಲ; ಅಂಜಲಿ ಪ್ರಕರಣ ಕೂಡ ಸಿಐಡಿಗೆ:ಡಾ.ಜಿ.ಪರಮೇಶ್ವರ್

1-qweeqwe

Hubballi; ನೇಹಾ, ಅಂಜಲಿ ನಿವಾಸಗಳಿಗೆ ಡಾ.ಜಿ.ಪರಮೇಶ್ವರ್ ಭೇಟಿ

Hubli; ಅಂಜಲಿ ಕುಟುಂಬಸ್ಥರಿಗೆ ಸರ್ಕಾರ ಪರಿಹಾರ ಘೋಷಿಸಬೇಕು: ಶಂಕರ ಪಾಟೀಲ್ ಮುನೇನಕೊಪ್ಪ

Hubli; ಅಂಜಲಿ ಕುಟುಂಬಸ್ಥರಿಗೆ ಸರ್ಕಾರ ಪರಿಹಾರ ಘೋಷಿಸಬೇಕು: ಶಂಕರ ಪಾಟೀಲ್ ಮುನೇನಕೊಪ್ಪ

Hubli: ರೌಡಿಶೀಟರ್ ಮೇಲೆ ಗ್ಯಾಂಗ್ ನಿಂದ ಹಲ್ಲೆ; ಪೊಲೀಸರಿಗೆ ಅವಾಜ್ ಹಾಕಿದ ರೌಡಿ

Hubli: ರೌಡಿಶೀಟರ್ ಮೇಲೆ ಗ್ಯಾಂಗ್ ನಿಂದ ಹಲ್ಲೆ; ಪೊಲೀಸರಿಗೆ ಅವಾಜ್ ಹಾಕಿದ ರೌಡಿ

1-wqqewqeq

Hubli; ಜನರಲ್ಲಿ ಪೊಲೀಸರ ಬಗ್ಗೆ ನಂಬಿಕೆ ಹೋಗಿದೆ: ಎಡಿಜಿಪಿ ಹಿತೇಂದ್ರ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

MLC Election: ನೈಋತ್ಯ ಕ್ಷೇತ್ರದಲ್ಲಿ ಗೆಲುವು ನಿಶ್ಚಿತ: ಕೋಟ

MLC Election: ನೈಋತ್ಯ ಕ್ಷೇತ್ರದಲ್ಲಿ ಗೆಲುವು ನಿಶ್ಚಿತ: ಕೋಟ

Kambala ಕ್ಷೇತ್ರದವರಿಗೆ ಉಚಿತ ವಿಮೆ ಸೌಲಭ್ಯ

Kambala ಕ್ಷೇತ್ರದವರಿಗೆ ಉಚಿತ ವಿಮೆ ಸೌಲಭ್ಯ

Madhu Bangarappa ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಗೆಲುವು

Madhu Bangarappa ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಗೆಲುವು

ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌; ಅಧಿಕಾರಿಗಳ ಸಭೆ ಪರಿಹಾರ ಕಾಣದೇ ಮುಂದಕ್ಕೆ

ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌; ಅಧಿಕಾರಿಗಳ ಸಭೆ ಪರಿಹಾರ ಕಾಣದೇ ಮುಂದಕ್ಕೆ

Belthangady ಕಾಂಗ್ರೆಸ್‌ನಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಆತಂಕದಲ್ಲಿ: ಕೋಟ

Belthangady ಕಾಂಗ್ರೆಸ್‌ನಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಆತಂಕದಲ್ಲಿ: ಕೋಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.