ರಾಜಧಾನಿಯಲ್ಲಿ ಮಕ್ಕಳ ಭಿಕ್ಷಾಟನೆ ಹೆಚ್ಚಳ

Team Udayavani, Nov 14, 2019, 3:08 AM IST

makkala-sama

ಬೆಂಗಳೂರು: ಬೆಂಗಳೂರಿನಲ್ಲಿ ಭಿಕ್ಷಾಟನೆ ಮಾಡುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದ್ದು, ಇದರಲ್ಲಿ ಉತ್ತರ ಭಾರತದ ಬಿಹಾರ, ಒಡಿಶಾ ಹಾಗೂ ಉತ್ತರ ಕರ್ನಾಟಕದ ಕಲಬುರಗಿ ಮತ್ತು ರಾಯಚೂರಿನ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ! ಮೂರು ವರ್ಷದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಮತ್ತು ಯಶವಂತಪುರ ರೈಲು ನಿಲ್ದಾಣ ಎರಡರಲ್ಲೇ 8 ಸಾವಿರಕ್ಕೂ ಅಧಿಕ ರಾಜ್ಯ ಮತ್ತು ಅಂತಾರಾಜ್ಯ ಮಕ್ಕಳನ್ನು ಗುರುತಿಸಿದ್ದು, ಇವರನ್ನು ಮಕ್ಕಳ ಕಲ್ಯಾಣ ಸಮಿತಿ ಮೂಲಕ ಅವರ ಮನೆಗಳಿಗೆ ಕಳುಹಿಸಲಾಗಿದೆ.

ಬೆಂಗಳೂರಿನ ಹೊರವಲಯದ ಕೋರಮಂಗಲ, ಹೆಬ್ಬಾಳ, ಮೈಸೂರು ರಸ್ತೆ ಸೇರಿ ಹಲವೆಡೆ ಬಾಲಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಕೆಲ ಮಕ್ಕಳು ಮೆಜೆಸ್ಟಿಕ್‌, ಬ್ರಿಗೇಡ್‌ ರಸ್ತೆ ಸೇರಿದಂತೆ ವಾಣಿಜ್ಯ ಸ್ಥಳಗಳಲ್ಲಿ ಭಿಕ್ಷಾಟನೆ ಮಾಡುತ್ತಿದ್ದಾರೆ ಎಂದು ಬೆಂಗಳೂರು ಚೈಲ್ಡ್‌ ಲೈನ್‌ ವರದಿಯಲ್ಲಿ ತಿಳಿಸಿದೆ. ಬೆಂಗಳೂರು ಚೈಲ್ಡ್‌ ಲೈನ್‌, ಮಕ್ಕಳ ಕಲ್ಯಾಣ ಇಲಾಖೆ ಮತ್ತು ಕಾರ್ಮಿಕ ಇಲಾಖೆಗೆ ನೀಡಿರುವ ವರದಿ ಪ್ರಕಾರ 2015-16ರಲ್ಲಿ 566, 2016-17ರಲ್ಲಿ 465, 2017-18ರಲ್ಲಿ 481, 2018-19ರಲ್ಲಿ 495 ಹಾಗೂ 2019ರ ಏಪ್ರಿಲ್‌ನಿಂದ ಸೆಪ್ಟಂಬರ್‌ವರೆಗೆ 226 ಬಾಲ ಕಾರ್ಮಿಕರನ್ನು ಗುರುತಿಸಿದೆ. ಇದರಲ್ಲಿ 37ಕ್ಕೂ ಅಧಿಕ ಮಕ್ಕಳು ಜೀತ ಪದ್ಧತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿಸಿದೆ.

2017ರ ಏಪ್ರಿಲ್‌ನಿಂದ 2018ರ ಮಾರ್ಚ್‌ವರೆಗೆ ಭಿಕ್ಷಾಟನೆ ಮಾಡುತ್ತಿದ್ದ 690 ಮಕ್ಕಳನ್ನು ಗುರುತಿಸಿದ್ದು, 2018-19ರಲ್ಲಿ 697, 2019ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ 248 ಪ್ರಕರಣಗಳನ್ನು ಸಮಿತಿ ದಾಖಲಿಸಿಕೊಂಡಿದೆ. ಹದಿನೆಂಟು ವರ್ಷದೊಳಗಿನ ಮಕ್ಕಳನ್ನು ಬೆಂಗಳೂರು ಚೈಲ್ಡ್‌ ಲೈನ್‌ ಗುರುತಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸುತ್ತದೆ. ಈ ಸಮಿತಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಸಾಮಾಜಿಕ ತನಿಖಾ ವರದಿಯನ್ನು ಮಕ್ಕಳ ಕಲ್ಯಾಣ ಇಲಾಖೆಗೆ ನೀಡಿ ಅವರನ್ನು ಊರುಗಳಿಗೆ ಕಳುಹಿಸುವ ಕೆಲಸ ಮಾಡುತ್ತದೆ.

ಪ್ರತಿದಿನ 20 ಕರೆಗಳು: ಚೈಲ್ಡ್‌ ಲೈನ್‌ಗೆ ಪ್ರತಿದಿನ 20ಕ್ಕೂ ಅಧಿಕ ಕರೆಗಳು ಬರುತ್ತಿದ್ದು, ಮಕ್ಕಳ ರಕ್ಷಣೆಗೆ ತೆರಳಿದಾಗ ಕೆಲ ತೊಂದರೆಗಳು ಎದುರಾಗುತ್ತಿವೆ. ಮಕ್ಕಳು ಭಿಕ್ಷಾಟನೆ ಮಾಡುವ ವೇಳೆ ಅವರನ್ನು ಕರೆತಂದು ವಿಚಾರಿಸುವಷ್ಟರಲ್ಲಿ ಪೋಷಕರು ಬಂದು ಕರೆದುಕೊಂಡು ಹೋಗುತ್ತಾರೆ. ಮತ್ತೆ ಭಿಕ್ಷಾಟನೆಗೆ ಬಿಡುತ್ತಿದ್ದಾರೆ. ಇದನ್ನು ತಡೆಯಲು ನಮಗೆ ಹೆಚ್ಚಿನ ಅಧಿಕಾರ ಇಲ್ಲ. ಆದ್ದರಿಂದ ಕೆಲವೆಡೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇನ್ನು ಕೆಲವೆಡೆ ಹಲ್ಲೆ ನಡೆಸುತ್ತಾರೆ ಎಂದು ಬೆಂಗಳೂರು ಚೈಲ್ಡ್‌ ಲೈನ್‌ ಸಿಬ್ಬಂದಿ ಅಳಲು ತೋಡಿಕೊಂಡರು.

ಹಿಂದುಳಿದ ವರ್ಗದವರೇ ಹೆಚ್ಚು: “ಉತ್ತರ ಭಾರತದ ಬಿಹಾರದಿಂದ ಹದಿನೆಂಟು ವರ್ಷದ ಕೆಳಪಟ್ಟ ಹಿಂದುಳಿದ ವರ್ಗಗಳ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ಬರುತ್ತಿದ್ದು, ಇತ್ತೀಚಿಗೆ ಹದಿನೈದುವರೆ ವರ್ಷ ಬಾಲಕಿ ಬಂದಿದ್ದಳು. ತನ್ನ ಪ್ರಿಯಕರನಿಗಾಗಿ ಬೆಂಗಳೂರಿಗೆ ಬಂದಿದ್ದು, ಅವನು ಇವಳನ್ನು ಪ್ರೀತಿಸುವ ನಾಟಕವಾಡಿರುವುದು ಬಹಿರಂಗವಾಯಿತು. ನಂತರ ಬಾಲಕಿಯನ್ನು ಬೆಂಗಳೂರು ನಗರ ಜಿಲ್ಲಾ ಮಕ್ಕಳ ರಕ್ಷಣಾ ಕೇಂದ್ರದಲ್ಲಿ ಇರಿಸಲಾಗಿತ್ತು. ಬಳಿಕ ಪೊಲೀಸರ ಭದ್ರತೆಯೊಂದಿಗೆ ಬಿಹಾರಕ್ಕೆ ಕಳುಹಿಸಲಾಯಿತು ಎಂದು ಬೆಂಗಳೂರು ನಗರದ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಅಂಜಲಿ ರಾಮಣ್ಣ ತಿಳಿಸಿದರು.

ಕಲಬುರಗಿ ರೈಲು ನಿಲ್ದಾಣದಲ್ಲಿ ಮಕ್ಕಳ ರಕ್ಷಣೆ: ಕಲಬುರಗಿಯ ರೈಲ್ವೆ ಚೈಲ್ಡ್‌ ಲೈನ್‌ ವಿಭಾಗ 2018ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ 1058, 2019ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ 339 ಮಕ್ಕಳನ್ನು ಗುರುತಿಸಿದ್ದು, ಈ ಮಕ್ಕಳಲ್ಲಿ ಕೆಲವರನ್ನು ತಮ್ಮ ಊರಿಗೆ ಕಳುಹಿಸಿದೆ. ಅನಾಥ ಮಕ್ಕಳು ಮತ್ತು ಪೋಷಕರೊಡನೆ ಹೋಗದ ಮಕ್ಕಳನ್ನು ಸರ್ಕಾರಿ ಬಾಲಕರ ಬಾಲ ಮಂದಿರದಲ್ಲಿ ಇರಿಸಿ ಶಿಕ್ಷಣ ನೀಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ವಾಡಿ ಜಂಕ್ಷನ್‌ನಲ್ಲಿ ಶೀಘ್ರ ರೈಲ್ವೆ ಚೈಲ್ಡ್‌ ಲೈನ್‌: ಮಕ್ಕಳ ಹಕ್ಕು ರಕ್ಷಣೆಗಾಗಿ ದೇಶಾದ್ಯಂತ 100 ಜಂಕ್ಷನ್‌ಗಳಲ್ಲಿ ಪ್ರತ್ಯೇಕ ರೈಲ್ವೆ ಚೈಲ್ಡ್‌ ಲೈನ್‌ ವಿಭಾಗ ತೆರೆಯಲಾಗಿದ್ದು, ಕರ್ನಾಟಕದಲ್ಲಿ ಈಗಾಗಲೇ ಬೆಂಗಳೂರಿನ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಯಶವಂತಪುರ, ಹುಬ್ಬಳ್ಳಿ ಜಂಕ್ಷನ್‌, ಕಲಬುರಗಿ, ಬೀದರ್‌ ಜಂಕ್ಷನ್‌ನಲ್ಲಿ ರೈಲ್ವೆ ಚೈಲ್ಡ್‌ ಲೈನ್‌ ವಿಭಾಗ ತೆರೆಯಲಾಗಿದೆ. ವಾಡಿಯಲ್ಲಿಯೂ ರೈಲ್ವೆ ಚೈಲ್ಡ್‌ ಲೈನ್‌ ವಿಭಾಗ ತೆರೆಯಲು ರೈಲ್ವೆ ಇಲಾಖೆಯಿಂದ ಅನುಮೋದನೆ ದೊರೆತಿದ್ದು, ಆರಂಭವಾಗಲಿದೆ. ಈ ವಿಭಾಗದಲ್ಲಿ 24 ಗಂಟೆ 12 ಮಂದಿ ಕೆಲಸ ನಿರ್ವಹಿಸಲಿದ್ದಾರೆ.

ರೈಲ್ವೆ ಚೈಲ್ಡ್‌ಲೈನ್‌ ಗುರುತಿಸಿದ ಮಕ್ಕಳ ಸಂಖ್ಯೆ
ವರ್ಷ ಯಶವಂತಪುರ ರೈಲು ನಿಲ್ದಾಣ ಮೆಜೆಸ್ಟಿಕ್‌
2016-17 463 2232
2017-18 393 2227
2018-19 392 1529
2019(ಮೇ.1-ಅ.31) 158 645

ನಗರದಲ್ಲಿ ಬಾಲಕಾರ್ಮಿಕ, ಭಿಕ್ಷಾಟನೆ ಮಾಡುವ ಮಕ್ಕಳ ಸಂಖ್ಯೆ
ವರ್ಷ ಬಾಲಕಾರ್ಮಿಕರು ಭಿಕ್ಷಾಟನೆ
2017-18 481 690
2018-19 495 697
2019 (ಏ.1-ಸೆ30) 226 248

ಶಾಲೆಯಿಂದ ಹೊರಗುಳಿದ, ಭಿಕ್ಷಾಟನೆ ಮಾಡುವ ಮತ್ತು ಬಾಲಕಾರ್ಮಿಕರನ್ನು ಗುರುತಿಸಿ ಹತ್ತಿರದ ಶಾಲೆಗೆ ಸೇರಿಸಲಾಗುತ್ತಿದೆ. ಪ್ರಸಕ್ತ ವರ್ಷ 13 ಸಾವಿರ ಮಕ್ಕಳನ್ನು ಶಾಲೆಗೆ ಸೇರಿಸಲಾಗಿದೆ. ಪ್ರತಿ ತಾಲೂಕಿನಲ್ಲಿಯೂ ಟೆಂಟ್‌ ಶಾಲೆ, ಮನೆಗೆ ಹೋಗಿ ಪಾಠ ಮಾಡುವ ಕೆಲಸ ಮಾಡಲಾಗುತ್ತಿದೆ.
-ಬಿ.ಉಮಾಶಂಕರ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ

ಮಕ್ಕಳ ಕೌನ್ಸೆಲಿಂಗ್‌, ವೈದ್ಯಕೀಯ ತಪಾಸಣೆ ನಡೆಸಿ, ಸಾಮಾಜಿಕ ತನಿಖಾ ವರದಿಯನ್ನು ಸಮಿತಿಯು ಮಕ್ಕಳ ಕಲ್ಯಾಣ ಇಲಾಖೆಗೆ ನೀಡುತ್ತದೆ. ಬಾಲ ನ್ಯಾಯ ಕಾಯ್ದೆ ಪ್ರಕಾರ ಮಕ್ಕಳನ್ನು 4 ತಿಂಗಳಲ್ಲಿ ಅವರ ಮೂಲ ಸ್ಥಳಕ್ಕೆ ಕರೆದೊಯ್ದು ಕುಟುಂಬಕ್ಕೆ ಒಪ್ಪಿಸಬೇಕು. ಆದರೆ, ಪೊಲೀಸ್‌ ಸಿಬ್ಬಂದಿ ಕೊರತೆಯಿಂದ ಈ ಕೆಲಸ ವಿಳಂಬವಾಗುತ್ತಿದೆ. ಈ ಕಾರ್ಯಕ್ಕೆ ಪ್ರತ್ಯೇಕ ಸಿಬ್ಬಂದಿ ನೀಡಲು ಇಲಾಖೆಗೆ ಪತ್ರ ಬರೆಯಲಾಗಿದೆ.
-ಅಂಜಲಿ ರಾಮಣ್ಣ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ

* ಮಂಜುನಾಥ ಗಂಗಾವತಿ

ಟಾಪ್ ನ್ಯೂಸ್

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.