ರಾಜ್ಯಸಭೆಗೆ 250ರ ಸಂಭ್ರಮ

ಪ್ರಮುಖ ಹೆಜ್ಜೆ ಗುರುತುಗಳು

Team Udayavani, Nov 20, 2019, 5:43 AM IST

parliment

ಅಧಿವೇಶನಗಳು ನಡೆದು ಬಂದ ಹಾದಿ

ಸೋಮವಾರದಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಈ ಅಧಿವೇಶನದ ಮೂಲಕ 67 ವರ್ಷಗಳ ಇತಿಹಾಸವುಳ್ಳ ರಾಜ್ಯಸಭೆ ತನ್ನ 250ನೇ ಅಧಿವೇಶನದ ಸಂಭ್ರಮದಲ್ಲಿದೆ. 1952ರ ಮೇ 13ರಂದು ಅದು ಮೊದಲ ಅಧಿವೇಶನಕ್ಕೆ ಸಾಕ್ಷಿಯಾಗಿತ್ತು. ಈ ಕುರಿತಂತೆ ಮೇಲ್ಮನೆಯ ಇತಿಹಾಸ ಮತ್ತು ಪ್ರಮುಖ ಘಟನೆಗಳನ್ನು ಸಾರುವ ಕೈಪಿಡಿಯನ್ನು ಉಪ ರಾಷ್ಟ್ರಪತಿಗಳು ಬಿಡುಗಡೆ ಮಾಡಿದ್ದಾರೆ. ಅದರಲ್ಲಿರುವ ಕೆಲವು ಅಂಶಗಳನ್ನು ಉಲ್ಲೇಖೀಸಲಾಗಿದೆ. 7ನೇ ಅವಧಿಗೆ ಸೇವೆ ಸಲ್ಲಿಸುತ್ತಿರುವ ಬಿಜೆಪಿಯ ಮಹೇಂದ್ರ ಪ್ರಸಾದ್‌ ಅವರು ರಾಜ್ಯಸಭೆಯಲ್ಲಿ ಅತಿ ದೀರ್ಘ‌ಕಾಲ ಸೇವೆ ಸಲ್ಲಿಸಿದ ಸದಸ್ಯರಾಗಿದ್ದಾರೆ. ಅನಂತರದ ಸ್ಥಾನದಲ್ಲಿ ಡಾ| ಮನಮೋಹನ್‌ ಸಿಂಗ್‌ ಅವರಿದ್ದು, 6 ಅವಧಿಗಳ ಕಾಲ ಸೇವೆ ಸಲ್ಲಿಸಿದ್ದಾರೆ.

1 ಟೈ: 1991ರಲ್ಲಿ ಅಪರಾಧ ಪ್ರಕ್ರಿಯೆಯ ತಿದ್ದುಪಡಿ ಅಧ್ಯಾದೇಶಕ್ಕೆ ಒಪ್ಪಿಗೆ ಪಡೆಯಲಾಗುತ್ತಿತ್ತು. ಇದನ್ನು ಮತಕ್ಕೆ ಹಾಕಿದಾಗ ಪರ- ವಿರುದ್ಧ ತಲಾ 39 ಮತಗಳು ಬಂದಿದ್ದವು. ಆಗ ಸಭಾಪತಿ ಪೀಠದಲ್ಲಿದ್ದ ಸಿಪಿಎಂ ಸದಸ್ಯ ಎಂ.ಎ. ಬೇಬಿ ಅವರು ನಿರ್ಣಯದ ಪರ ಮತ ಚಲಾಯಿಸಿದ್ದರು. ಇದು ಏಕೈಕ ಉದಾಹರಣೆಯಾಗಿದೆ.

120 ತಿದ್ದುಪಡಿ
ಲೋಕಪಾಲ ಮತ್ತು ಲೋಕಾಯುಕ್ತ ಮಸೂದೆಗಳು ಸೇರಿದಂತೆ ಲೋಕ ಸಭೆಯು ಅಂಗೀಕರಿಸಿದ್ದ ಒಟ್ಟು 120 ಮಸೂದೆ ಗಳಿಗೆ ರಾಜ್ಯಸಭೆ ಅನುಮೋದನೆ ನೀಡಿದೆ.

ಅಪರೂಪದ ದಾಖಲೆ
ರಾಜ್ಯಸಭೆಯು 2 ಬಾರಿ ಬೇರೆ ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆಗೆ ಅನುಮತಿ ನೀಡಿತ್ತು. ಸಂವಿಧಾನದ ವಿಧಿ 356(3)ರ ಅಡಿ ಲೋಕಸಭೆಯನ್ನು ವಿರ್ಜಿಸಿದ್ದ ಸಂದರ್ಭದಲ್ಲಿ ರಾಜ್ಯಸಭೆಯು ಈ ಕೆಲಸ ಮಾಡಿತ್ತು.
· 1977ರಲ್ಲಿ ಮೊದಲಬಾರಿಗೆ ತಮಿಳುನಾಡು ಮತ್ತು
ನಾಗಾಲ್ಯಾಂಡ್‌.
· 1991ರಲ್ಲಿ ಹರಿಯಾಣದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು.

9 ಮಧ್ಯರಾತ್ರಿ ಕಲಾಪ
ಒಂಬತ್ತು ಬಾರಿ ಮಧ್ಯರಾತ್ರಿಯ ವರೆಗೂ ಕಲಾಪ ನಡೆಸಿದ ದಾಖಲೆಯನ್ನು ರಾಜ್ಯಸಭೆ ಹೊಂದಿದೆ. 1981ರ ಡಿ. 17ರಂದು ನಡೆದ ಚರ್ಚೆಯು ಮರುದಿನ ಮುಂಜಾನೆ 4.43ರ ವರೆಗೆ ಏರ್ಪಟ್ಟಿತ್ತು. ಇದು ಅತಿ ಸುದೀರ್ಘ‌ ಕಲಾಪವಾಗಿದೆ. 1986ರ ಡಿ.29ರಂದು ಬೊಫೋರ್ಸ್‌ ಗನ್‌ ಖರೀದಿಗಾಗಿ ನಡೆದ ಚರ್ಚೆ ಮರುದಿನ ಮುಂಜಾನೆ‌ 3.22ರ ವರೆಗೆ ನಡೆದಿತ್ತು.

ಸುದೀರ್ಘ‌ ಚರ್ಚೆಗಳು
· 12.04 ಗಂಟೆ- 1991ರ ಜೂನ್‌ 4ರಂದು ರಾಜೀವ್‌ ಗಾಂಧಿ ಅವರಿಗೆ ಭದ್ರತೆ ಒದಗಿಸುವಲ್ಲಿ ಆಗಿರುವ ವೈಫ‌ಲ್ಯದ ಬಗ್ಗೆ ನಡೆದ ಚರ್ಚೆಯ ಅವಧಿ.
· 11.37 ಗಂಟೆ- 1992ರ ಡಿ. 18 ಮತ್ತು 21ರಲ್ಲಿ ಬಾಬರಿ ಮಸೀದಿ ಕೆಡವಿದ ವಿಚಾರವಾಗಿ ನಡೆದ ಚರ್ಚೆಯ ಅವಧಿ.
· 10.06 ಗಂಟೆ- 2007ರ ಡಿ. 4, 12ರಂದು ಭಾರತ- ಅಮೆರಿಕ ಅಣುಒಪ್ಪಂದ ಕುರಿತ ಚರ್ಚೆಯ ಅವಧಿ.

ಉಚ್ಚಾಟನೆಗೊಂಡವರು
1976 – ತುರ್ತು ಪರಿಸ್ಥಿತಿ ಸಂದರ್ಭ ಸುಬ್ರಹ್ಮಣ್ಯನ್‌ ಸ್ವಾಮಿ ಅವರ ನಡವಳಿಕೆಗಳು ಸದನಕ್ಕೆ ಅಗೌರವ ತರುವಂತಿದ್ದವು ಎಂಬ ಕಾರಣಕ್ಕೆ
2005 – ಛತ್ರಪಾಲ್‌ ಸಿಂಗ್‌ ಲೋಧ ಅವರು ರಾಜ್ಯಸಭೆಯಲ್ಲಿ ಪ್ರಶ್ನೆ ಕೇಳಲು ಹಣ ಕೊಡುವಂತೆ ಬೇಡಿಕೆ ಮಂಡಿಸಿದ ವಿಚಾರದಲ್ಲಿ
2006 – ಸಾಕ್ಷಿ ಮಹಾರಾಜ್‌ ಅವರ ಮೇಲಿದ್ದ ಸಂಸದರ ಕ್ಷೇತ್ರಾಭಿವೃದ್ಧಿಗಾಗಿ ಸರಕಾರ ಕೊಡುವ ನಿಧಿ ದುರ್ಬಳಕೆ ಆರೋಪದನ್ವಯ

ಮೇಲ್ಮನೆಯ ಅಂಕಿ ಅಂಶಗಳು
· 3,924 ಮೇಲ್ಮನೆ ಅಂಗೀಕರಿಸಿದ ಮಸೂದೆಗಳು.
· 3 ತಿರಸ್ಕರಿಸಿದ ಸಂವಿಧಾನ ತಿದ್ದುಪಡಿ ಮಸೂದೆಗಳು.
· 3 ರಾಜ್ಯಸಭೆಯಿಂದ ಉಚ್ಚಾಟನೆಗೊಂಡಿರುವ ಸದಸ್ಯರು.
· 1 ವಾಗ್ಧಂಡನೆ ಪ್ರಕ್ರಿಯೆ.
· 5 ಲೋಕಸಭೆಯಲ್ಲಿ ಅಂಗೀಕೃತವಾಗಿ ಬಳಿಕ ರಾಜ್ಯಸಭೆ. ತಿರಸ್ಕರಿಸಿದ ಮಸೂದೆಗಳ ಒಟ್ಟು ಸಂಖ್ಯೆ.

5466 ರಾಜ್ಯಸಭೆಯಲ್ಲಿ ನಡೆದ ಕಾರ್ಯ ಕಲಾಪಗಳು
944 ಮಂಡಿಸಲಾದ ಬಿಲ್‌ಗ‌ಳು
104 ಹಿಂದಕ್ಕೆ ಪಡೆದ ಬಿಲ್‌ಗ‌ಳು
38 ಬಾಕಿ ಉಳಿದಿರುವ ಬಿಲ್‌ಗ‌ಳು
3817 ರಾಜ್ಯಸಭೆ ಅನು ಮೋದಿಸಿದ ಬಿಲ್‌ಗ‌ಳು
2282 ರಾಜ್ಯಸಭೆಗೆ ಈ ವರೆಗೆ ಆಯ್ಕೆಯಾದ ಸದಸ್ಯರು
208 ಕಾರ್ಯನಿರ್ವಹಿಸಿದ ಮಹಿಳೆಯರು

ಟಾಪ್ ನ್ಯೂಸ್

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.