ರಾಹುಲ್‌, ರೋಹಿತ್‌, ಕೊಹ್ಲಿ ಅಬ್ಬರದ ಬ್ಯಾಟಿಂಗ್‌; ಭಾರತಕ್ಕೆ ಸರಣಿ ಜಯ


Team Udayavani, Dec 11, 2019, 10:46 PM IST

IND-w

ಮುಂಬಯಿ: ಭಾರತದ ಭಾರೀ ಮೊತ್ತಕ್ಕೆ ಜವಾಬು ನೀಡುವಲ್ಲಿ ಎಡವಿದ ಟಿ20 ವಿಶ್ವ ಚಾಂಪಿಯನ್‌ ವೆಸ್ಟ್‌ ಇಂಡೀಸ್‌ ಮುಂಬಯಿಯ 3ನೇ ಹಾಗೂ ಅಂತಿಮ ಪಂದ್ಯವನ್ನು 67 ರನ್ನುಗಳಿಂದ ಸೋತಿದೆ. ಭಾರತ 2-1 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ.

ಮೊದಲು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ ಮೂರೇ ವಿಕೆಟಿಗೆ 240 ರನ್‌ ಪೇರಿಸಿದರೆ, ವೆಸ್ಟ್‌ ಇಂಡೀಸ್‌ 20 ಓವರ್‌ಗಳಲ್ಲಿ 8 ವಿಕೆಟಿಗೆ 173 ರನ್‌ ಮಾಡಿ ಶರಣಾಯಿತು.

ಚೇಸಿಂಗ್‌ ವೇಳೆ ವಿಂಡೀಸ್‌ ತೀವ್ರ ಕುಸಿತಕ್ಕೆ ಸಿಲುಕಿತು. 17 ರನ್‌ ಆಗುವಷ್ಟರಲ್ಲಿ ಸಿಮನ್ಸ್‌, ಕಿಂಗ್‌ ಮತ್ತು ಪೂರನ್‌ ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೆ ಹೆಟ್‌ಮೈರ್‌-ಪೊಲಾರ್ಡ್‌ ಬಿರುಸಿನ ಆಟಕ್ಕಿಳಿದು ತಂಡವನ್ನು ಹೋರಾಟಕ್ಕೆ ಸಜ್ಜುಗೊಳಿಸಿದರು. ಹೆಟ್‌ಮೈರ್‌ 24 ಎಸೆತಗಳಿಂದ 41 ರನ್‌ ಹೊಡೆದರೆ, ಸಿಡಿದು ನಿಂತ ಪೊಲಾರ್ಡ್‌ 39 ಎಸೆತ ಎದುರಿಸಿ 68 ರನ್‌ ಬಾರಿಸಿ ಅಪಾಯಕಾರಿಯಾಗಿ ಗೋಚರಿಸಿದರು (5 ಬೌಂಡರಿ, 6 ಸಿಕ್ಸರ್‌).

ಕಪ್ತಾನ ಪೊಲಾರ್ಡ್‌ ಕ್ರೀಸಿನಲ್ಲಿರುವಷ್ಟು ಹೊತ್ತು ವಿಂಡೀಸಿಗೆ ಗೆಲುವಿನ ಕ್ಷೀಣ ಅವಕಾಶವಿತ್ತು. ಅವರ ನಿರ್ಗಮನದ ಬಳಿಕ ವಿಂಡೀಸ್‌ ಮತ್ತೆ ಒತ್ತಡಕ್ಕೆ ಸಿಲುಕಿತು. ಗೆಲುವಿನ ಆಸೆಯನ್ನು ಕೈಬಿಟ್ಟಿತು.

ಭಾರತದ ಬ್ಯಾಟಿಂಗ್‌ ಆರ್ಭಟ
ರಾಹುಲ್‌, ರೋಹಿತ್‌ ಶರ್ಮ ಮತ್ತು ವಿರಾಟ್‌ ಕೊಹ್ಲಿ ಅವರ ಬ್ಯಾಟಿಂಗ್‌ ಆರ್ಭಟದಿಂದ ಭಾರತ ಟಿ20 ಕ್ರಿಕೆಟ್‌ನಲ್ಲಿ ತನ್ನ 3ನೇ, ವಿಂಡೀಸ್‌ ವಿರುದ್ಧ 2ನೇ ಬೃಹತ್‌ ಮೊತ್ತ ದಾಖಲಿಸಿತು.

ಹಿಂದಿನೆರಡು ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿದ್ದ ರೋಹಿತ್‌ ಶರ್ಮ ತವರಿನ ಅಂಗಳದಲ್ಲಿ ಪ್ರಚಂಡ ಬೀಸುಗೆಗೆ ಮುಂದಾದರು. ಇವರೊಂದಿಗೆ ರಾಹುಲ್‌ ಕೂಡ ಸಿಡಿದು ನಿಂತರು. ಮೊದಲ ವಿಕೆಟಿಗೆ 11.4 ಓವರ್‌ಗಳಿಂದ 135 ರನ್‌ ಹರಿದು ಬಂತು. ಇದು ವಿಂಡೀಸ್‌ ವಿರುದ್ಧ ಮೊದಲ ವಿಕೆಟಿಗೆ ಭಾರತ ಪೇರಿಸಿದ ಅತ್ಯಧಿಕ ಮೊತ್ತವಾಗಿದೆ. ಪವರ್‌ ಪ್ಲೇಯಲ್ಲಿ 72 ರನ್‌ ಪೇರಿಸಿದ ರೋಹಿತ್‌-ರಾಹುಲ್‌, ಮೊದಲ 10 ಓವರ್‌ಗಳಲ್ಲಿ 116 ರನ್‌ ಒಟ್ಟುಗೂಡಿಸಿದರು. ಇದು ಟಿ20ಯಲ್ಲಿ ಇವರಿಬ್ಬರು ಮೊದಲ ವಿಕೆಟಿಗೆ ದಾಖಲಿಸಿದ 3ನೇ ಶತಕದ ಜತೆಯಾಟ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400 ಸಿಕ್ಸರ್‌ ಪೂರೈಸಿ ಮುನ್ನುಗ್ಗಿದ ರೋಹಿತ್‌, 34 ಎಸೆತಗಳಿಂದ 71 ರನ್‌ ಬಾರಿಸಿದರು. ಈ ವೇಳೆ 6 ಬೌಂಡರಿ, 5 ಸಿಕ್ಸರ್‌ ಸಿಡಿಯಲ್ಪಟ್ಟಿತು.

ಶತಕದ ನಿರೀಕ್ಷೆ ಮೂಡಿಸಿದ್ದ ರಾಹುಲ್‌ ವಾಂಖೇಡೆಯಲ್ಲಿ ಅಮೋಘ ಪ್ರದರ್ಶನ ಮುಂದುವರಿಸಿ 91 ರನ್‌ ಸೂರೆಗೈದರು. ಎದುರಿಸಿದ್ದು 56 ಎಸೆತ, ಸಿಡಿಸಿದ್ದು 9 ಬೌಂಡರಿ ಹಾಗೂ 4 ಸಿಕ್ಸರ್‌. ವಾಂಖೇಡೆಯ ಹಿಂದಿನೆರಡು ಟಿ20 ಪಂದ್ಯಗಳಲ್ಲಿ ರಾಹುಲ್‌ 94 ಹಾಗೂ 100 ರನ್‌ ಬಾರಿಸಿದ್ದರು.

ಹಿಂದಿನ ಪಂದ್ಯದಲ್ಲಿ ಶಿವಂ ದುಬೆ ಅವರನ್ನು ವನ್‌ಡೌನ್‌ನಲ್ಲಿ ಕಳಿಸಿ ಯಶಸ್ಸು ಪಡೆದಿದ್ದ ಕೊಹ್ಲಿ, ಇಲ್ಲಿ ರಿಷಭ್‌ ಪಂತ್‌ ಅವರಿಗೆ ಈ ಅವಕಾಶ ನೀಡಿದರು. ಆದರೆ ಪಂತ್‌ ಸೊನ್ನೆ ಸುತ್ತಿ ನಡೆದರು. ಅನಂತರ ಕೊಹ್ಲಿಯ ಆರ್ಭಟ ಮೊದಲ್ಗೊಂಡಿತು. ಆರಂಭಿಕರಿಗಿಂತಲೂ ಸ್ಫೋಟಕ ಆಟವಾಡಿದ ಕೊಹ್ಲಿ ಬರೀ 29 ಎಸೆತಗಳಿಂದ ಅಜೇಯ 70 ರನ್‌ ಸಿಡಿಸಿದರು. 2ನೇ ಪಂದ್ಯದ ಕೊನೆಯ 5 ಓವರ್‌ಗಳಲ್ಲಿ ರನ್‌ ಬರಲಿಲ್ಲ ಎಂದು ಪರಿತಪಿಸಿದ್ದ ಕೊಹ್ಲಿ, ಇಲ್ಲಿ 68 ರನ್‌ ಬಾರಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು.ಭಾರತ-ವೆಸ್ಟ್‌ ಇಂಡೀಸ್‌ ಇನ್ನು 3 ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿವೆ.

ಭಾರತ ತಂಡದಲ್ಲಿ ಶಮಿ, ಕುಲದೀಪ್‌
3ನೇ ಹಾಗೂ ಅಂತಿಮ ಟಿ20 ಪಂದ್ಯಕ್ಕಾಗಿ ಭಾರತ 2 ಬದಲಾವಣೆಗಳೊಂದಿಗೆ ಕಣಕ್ಕಿಳಿಯಿತು. ಆಲ್‌ರೌಂಡರ್‌ ರವೀಂದ್ರ ಜಡೇಜ ಬದಲು ಮೊಹಮ್ಮದ್‌ ಶಮಿ ಬಂದರೆ, ಲೆಗ್‌ಸ್ಪಿನ್ನರ್‌ ಯಜುವೇಂದ್ರ ಚಹಲ್‌ ಬದಲು ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ ಅವರನ್ನು ಸೇರಿಸಿಕೊಳ್ಳಲಾಯಿತು. ಇಬ್ಬರಿಗೂ ಇದು ಸರಣಿಯಲ್ಲಿ ಮೊದಲ ಪಂದ್ಯವಾಗಿದೆ.

ವೆಸ್ಟ್‌ ಇಂಡೀಸ್‌ ತಂಡದಲ್ಲಿ ಯಾವುದೇ ಪರಿವರ್ತನೆ ಆಗಲಿಲ್ಲ. ತಿರುವನಂತಪುರದಲ್ಲಿ ಗೆದ್ದ ಹನ್ನೊಂದರ ಬಳಗವನ್ನೇ ಉಳಿಸಿಕೊಂಡಿತು.

ಸ್ಕೋರ್‌ ಪಟ್ಟಿ
ಭಾರತ
ರೋಹಿತ್‌ ಶರ್ಮ ಸಿ ವಾಲ್ಶ್ ಬಿ ವಿಲಿಯಮ್ಸ್‌ 71
ಕೆ.ಎಲ್‌. ರಾಹುಲ್‌ ಸಿ ಪೂರನ್‌ ಬಿ ಕಾಟ್ರೆಲ್‌ 91
ಪಂತ್‌ ಸಿ ಹೋಲ್ಡರ್‌ ಬಿ ಪೊಲಾರ್ಡ್‌ 0
ವಿರಾಟ್‌ ಕೊಹ್ಲಿ ಔಟಾಗದೆ 70
ಶ್ರೇಯಸ್‌ ಅಯ್ಯರ್‌ ಔಟಾಗದೆ 0
ಇತರ 8
ಒಟ್ಟು (20 ಓವರ್‌ಗಳಲ್ಲಿ 3 ವಿಕೆಟಿಗೆ) 240
ವಿಕೆಟ್‌ ಪತನ: 1-135, 2-138, 3-233.
ಬೌಲಿಂಗ್‌:
ಶೆಲ್ಡನ್‌ ಕಾಟ್ರೆಲ್‌ 4-0-40-1
ಜಾಸನ್‌ ಹೋಲ್ಡರ್‌ 4-0-54-0
ಖಾರಿ ಪಿಯರೆ 4-0-54-0
ಕೆಸ್ರಿಕ್‌ ವಿಲಿಯಮ್ಸ್‌ 2-0-37-1
ಹೇಡನ್‌ ವಾಲ್ಶ್ 4-0-38-0
ಕೈರನ್‌ ಪೊಲಾರ್ಡ್‌ 2-0-33-1
ವೆಸ್ಟ್‌ ಇಂಡೀಸ್‌
ಲೆಂಡ್ಲ್ ಸಿಮನ್ಸ್‌ ಸಿ ಅಯ್ಯರ್‌ ಬಿ ಶಮಿ 7
ಕಿಂಗ್‌ಸಿ ರಾಹುಲ್‌ ಬಿ ಭುವನೇಶ್ವರ್‌ 5
ಹೆಟ್‌ಮೈರ್‌ ಸಿ ರಾಹುಲ್‌ ಬಿ ಕುಲದೀಪ್‌ 41
ನಿಕೋಲಸ್‌ ಪೂರಣ್‌ ಸಿ ದುಬೆ ಬಿ ಚಹರ್‌ 0
ಪೊಲಾರ್ಡ್‌ ಸಿ ಜಡೇಜ ಬಿ ಭುವನೇಶ್ವರ್‌ 68
ಜಾಸನ್‌ ಹೋಲ್ಡರ್‌ ಸಿ ಪಾಂಡೆ ಬಿ ಕುಲದೀಪ್‌ 8
ಹೇಡನ್‌ ವಾಲ್ಶ್ ಬಿ ಶಮಿ 11
ಖಾರಿ ಪಿಯರೆ ಸಿ ಜಡೇಜ ಬಿ ಚಹರ್‌ 6
ಕೆಸ್ರಿಕ್‌ ವಿಲಿಯಮ್ಸ್‌ ಔಟಾಗದೆ 13
ಶೆಲ್ಡನ್‌ ಕಾಟ್ರೆಲ್‌ ಔಟಾಗದೆ 4
ಇತರ 10
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 173
ವಿಕೆಟ್‌ ಪತನ: 1-12, 2-17, 3-17, 4-91, 5-103, 6-141, 7-152, 8-169.
ಬೌಲಿಂಗ್‌:
ದೀಪಕ್‌ ಚಹರ್‌ 4-0-20-2
ಭುವನೇಶ್ವರ್‌ ಕುಮಾರ್‌ 4-0-41-2
ಮೊಹಮ್ಮದ್‌ ಶಮಿ 4-0-25-2
ಶಿವಂ ದುಬೆ 3-0-32-0
ಕುಲದೀಪ್‌ ಯಾದವ್‌ 4-0-45-2
ವಾಷಿಂಗ್ಟನ್‌ ಸುಂದರ್‌ 1-0-5-0

ಟಾಪ್ ನ್ಯೂಸ್

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.