ಎಲೆಕ್ಟ್ರಿಕ್ ವಿಮಾನ ಯಶಸ್ವಿ ಹಾರಾಟ : ವಿಶ್ವದ ಮೊದಲ ವಿದ್ಯುತ್ ಚಾಲಿತ ವಿಮಾನ ಸಂಚಾರ
Team Udayavani, Dec 13, 2019, 1:20 AM IST
ವಾಂಕೂವರ್: ವಿದ್ಯುಚ್ಛಕ್ತಿ ಬಳಸಿ ಹಾರಾಟ ನಡೆಸುವ ವಿಶ್ವದ ಮೊದಲ ವಾಣಿಜ್ಯಿಕ ವಿಮಾನದ ಹಾರಾಟ ಯಶಸ್ವಿಯಾಗಿ ನಡೆದಿದೆ. ಕೆನಡಾದ ವಾಂಕೂವರ್ನಲ್ಲಿ ಹದಿನೈದು ನಿಮಿಷಗಳ ಕಾಲ ವಿಮಾನ ಹಾರಾಟ ನಡೆಸಿದೆ. ವೈಮಾನಿಕ ಇಂಧನದಿಂದ ಉಂಟಾಗುತ್ತಿರುವ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಸಿಯಾಟಲ್ ಮೂಲದ ಮಾಗ್ನಿ ಎಕ್ಸ್ ಹಾರ್ಬರ್ ಏರ್ ಜಂಟಿಯಾಗಿ ಆರು ಸೀಟ್ಗಳು ಇರುವ ವಿಮಾನವನ್ನು ಅಭಿವೃದ್ಧಿಪಡಿಸಿದೆ. ಮಾಗ್ನಿ ಎಕ್ಸ್, ಹಾರ್ಬರ್ ಏರ್ ಜತೆ ಗೂಡಿ ವಿಮಾನದ ಮೋಟರ್ ವಿನ್ಯಾಸ ಮಾಡಿದೆ. ಡಿಎಚ್ಸಿ-2 ಡೆ ಹ್ಯಾಲಿಲ್ಯಾಂಡ್ ಬೇವರ್ ಎಂಬ ಸಮುದ್ರ ವಿಮಾನಕ್ಕೆ ವಿದ್ಯುತ್ನಿಂದ ಚಾಲನೆಗೊಳ್ಳುವ ಮೋಟರ್ ಅಳವಡಿಸಲಾಗಿತ್ತು.
ಹಾರ್ಬರ್ ಏರ್ನ ಸಂಸ್ಥಾಪಕ ಗ್ರೆಗ್ ಮ್ಯಾಕ್ ಡೊಗಾಲ್ ಅದನ್ನು ಹಾರಿಸಿದ್ದಾರೆ. ಅವರ ಜತೆಗೆ ಇನ್ನೂ ಐವರು ಮಂದಿ ಹಾರಾಟ ನಡೆಸಿ, ವಿದ್ಯುತ್ ಚಾಲಿತ ವಿಮಾನದ ಮೊದಲ ಅನುಭವ ಪಡೆದರು. ವಿದ್ಯುಚ್ಛಕ್ತಿಯಿಂದ ವಿಮಾನ ಹಾರಾಟ ನಡೆಸಲು ಸಾಧ್ಯವಾಗುತ್ತದೆಯೋ, ಇಲ್ಲವೋ ಎಂಬುದನ್ನು ಪರೀಕ್ಷಿಸುವುದೇ ಈ ಹಾರಾಟದ ಉದ್ದೇಶವಾಗಿತ್ತು. ಲೀಥಿಯಂ ಬ್ಯಾಟರಿ ಮೂಲಕ 160 ಕಿಮೀ ದೂರ ಹಾರಾಟ ನಡೆಸುವಂತೆ ಇದನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಮಾಗ್ನಿ ಎಕ್ಸ್ ನ ಸಿಇಒ ಮ್ಯಾಕ್ಸಿ ಗರ್ನಾರ್ಕಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ