ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಕಡ್ಡಾಯ
Team Udayavani, Dec 14, 2019, 7:11 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ವಿದ್ಯಾರ್ಥಿಗಳಿಗೆ ಸಂವಿಧಾನದ ಮೂಲ ಆಶಯ ತಿಳಿಸುವ ಮತ್ತು ಸಂವಿಧಾನವನ್ನು ಎಲ್ಲೆಡೆ ಪ್ರಚಾರ ಮಾಡುವ ಉದ್ದೇಶದಿಂದ ಶಾಲೆಗಳಲ್ಲಿರುವ ಮುಖ್ಯ ಶಿಕ್ಷಕರ ಕಚೇರಿ ಅಥವಾ ಮುಖ್ಯಸ್ಥರ ಕಚೇರಿಗಳಲ್ಲಿ ಭಾರತ ಸಂವಿಧಾನದ ಪೀಠಿಕೆಯನ್ನು ತೂಗು ಹಾಕುವುದು ಕಡ್ಡಾಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಮಗ್ರ ಶಿಕ್ಷಣ ವಿಭಾಗ ಆದೇಶ ಹೊರಡಿಸಿದೆ.
ಭಾರತ ಸಂವಿಧಾನ ಪೀಠಿಕೆಯ ವಿನ್ಯಾಸದ ಫೋಟೋಗಳನ್ನು ಶಾಲಾ ಮುಖ್ಯಸ್ಥರು ಅಥವಾ ಮುಖ್ಯ ಶಿಕ್ಷಕರ ಕಚೇರಿಗಳಲ್ಲಿ ಅಳವಡಿಸಲು ನಿರ್ದೇಶಿಸಿದೆ. ಸಂವಿಧಾನ ಪೀಠಿಕೆ ಮಾದರಿಯನ್ನು http://schooleducation.kar.nic.in/ನಲ್ಲಿ ಪ್ರಕಟಿಸಲಾಗಿದೆ. ಅದನ್ನು ಡೌನ್ಲೋಡ್ ಮಾಡಿ ಶಾಲೆಗಳಲ್ಲಿ ತೂಗು ಹಾಕುವಂತೆ ಇಲಾಖೆ ತಿಳಿಸಿದೆ.